ಬೆಂಗಳೂರಿಗೆ ಹೋಗಲು ಸಿದ್ದಳಾದ ದಿವ್ಯಾ: ಬಾಲನ ಮುಂದಿನ ನಡೆ ಏನು?
ಉತ್ತಮ ಕಥೆ ಹೊಂದಿರುವ ಧಾರವಾಹಿಗಳು ವೀಕ್ಷಕರ ಮನ ಗೆಲ್ಲುತ್ತದೆ. ಆ ಪಟ್ಟಿಗೆ ಸತ್ಯ ಧಾರವಾಹಿಯೂ ಸೇರ್ಪಡೆಗೊಳ್ಳುತ್ತದೆ. ಸತ್ಯ ಅಭಿನಯಕ್ಕೆ ಅದೆಷ್ಟೋ ಜನ ಫಿದಾ ಆಗಿದ್ದಾರೆ. ರಾಮ ಚಂದ್ರ ರಾಯರ ಮಾತಿಗೆ ಕಟ್ಟು ಬಿದ್ದು ಮದುವೆಯಾದ ಸತ್ಯಗೆ ಅವರ ಮನೆಯಲ್ಲಿ ಸದಾ ನೋವು ಕಾಡುತ್ತಿದೆ. ಅತ್ತೆ ಸೀತಾಗೆ ಇದರ ಯಾವುದು ಪರಿವೆ ಇಲ್ಲದೆ ಇನ್ನಷ್ಟು ಸತ್ಯ ಮನಸ್ಸನ್ನು ನೋಯಿಸುತ್ತಿದ್ದಾಳೆ.
ವಿಚ್ಛೇದನ ಎಂಬ ಹೆಸರನ್ನು ಕೇಳಿದಾಗಿನಿಂದ ಸತ್ಯಗೆ ಏನು ಮಾಡಬೇಕು ಎಂದು ದಿಕ್ಕೇ ತೋಚದಂತಾಗಿದೆ. ಯಾರು ಏನೇ ಹೇಳಿದರೂ ಸತ್ಯಗೆ ಸಮಾಧಾನ ಆಗುತ್ತಿಲ್ಲ. ಎಲ್ಲೋ ಒಂದು ಕಡೆಯಿಂದ ನಾನು ಸೋಲುತ್ತಿದ್ದೇನೆ ಎಂಬ ಭಯವೂ ಸತ್ಯಾಗೆ ಕಾಡುತ್ತಿದೆ. ಸತ್ಯ ಈ ವಿಚಾರವನ್ನು ಯಾರ ಬಳಿಯೂ ಹೇಳಿಕೊಳ್ಳಲು ಆಗದೆ ಒದ್ದಾಡುತ್ತಿದ್ದಾಳೆ. ಇದೇ ಸಮಯಕ್ಕೆ ಆಕೆಯ ತಾಯಿ ಸತ್ಯಗೆ ಕರೆ ಮಾಡುತ್ತಾಳೆ.
ಗಿರಿಜಮ್ಮ ಸತ್ಯಳ ಧ್ವನಿ ಕೇಳುತ್ತಿದ್ದ ಹಾಗೆಯೇ ಆಕೆಯ ತಾಯಿ, ಅಜ್ಜಿಗೆ ಎಲ್ಲಿಲ್ಲದ ಖುಷಿ. ಅಜ್ಜಿಗೆ ಒಂದೇ ಕೊರಗು ತನ್ನ ಮೊಮ್ಮಗಳ ಸಂಸಾರ ಖುಷಿ ಆಗಿ ಇರಲಿ, ಎಲ್ಲರೂ ಒಂದಾಗಿ ಬಾಳಿ ಬದುಕಲಿ ಎಂಬುವುದು ಅವರ ಆಶಯ. ಆದರೆ ಸತ್ಯ ಬದುಕಲ್ಲಿ ಆಕೆಯ ಅತ್ತೆಯೆ ವಿಲನ್ ಎಂಬ ಸತ್ಯವನ್ನು ಹೇಗೆ ಅರಗಿಸಿಕೊಳ್ಳುತ್ತಾಳೆ ಎಂಬುವುದು ಸತ್ಯಗೆ ಭಯ. ಅಮ್ಮ ಹೇಗಿದ್ದೀಯಾ ಸತ್ಯ ಎಂದು ಕೇಳುವಾಗ ದುಃಖವನ್ನೆಲ್ಲ ಅದುಮಿಟ್ಟೂಕೊಂಡು ಮಾತನಾಡುತ್ತಾಳೆ. ಮಗಳ ಧ್ವನಿ ಅಳುಮುಂಜಿ ಹಾಗೆ ಇರುವುದನ್ನು ನೋಡಿದ ಆಕೆಯ ತಾಯಿ ಗಾಬರಿಗೊಂಡು ಯಾಕೆ ಸತ್ಯ ಏನಾಯ್ತು ಆಳುತ್ತಿದ್ದಿಯಾ? ಎಂದು ಕೇಳುತ್ತಾಳೆ.

ಸತ್ಯಳನ್ನು ಸಂತೈಸಿದ ಅಜ್ಜಿ
ಈ ಮಾತನ್ನು ಕೇಳಿ ಗಿರಿಜಮ್ಮ ಕೂಡ ಭಯಗೊಳ್ಳುತ್ತಾಳೆ. ಸತ್ಯಗೆ ಯಾರಾದ್ರೂ ಏನಾದರು ಅಂದರ ಎಂಬ ಭಯ ಗಿರಿಜಮ್ಮನಿಗೆ ಕಾಡುತ್ತದೆ. ಆದರೆ ಸತ್ಯ ಹೇಳುತ್ತಾಳೆ ಅಮ್ಮ ನಿನ್ನ ಧ್ವನಿ ಕೇಳಿ ಅಳು ಬಂತು ಎಂದು ಹೇಳಿದಾಗ ಅಮ್ಮ ಹಾಗೂ ಗಿರಿಜಮ್ಮನ ಮನಸ್ಸು ಹಗುರವಾಗುತ್ತದೆ. ಬಳಿಕ ಗಿರಿಜಮ್ಮನ ಬಳಿ ಮಾತನಾಡುತ್ತಾಳೆ ಸತ್ಯ. ಗಿರಿಜಮ್ಮ ನಾನು ಸೋಲುತ್ತಿದ್ದೇನೆ ನಿನ್ನ ಮಾತು ಉಳಿಸಿಕೊಳ್ಳಲು ಆಗುತ್ತಿಲ್ಲ ಎಂದು ದುಃಖ ಭರಿತವಾಗಿ ಮಾತುಗಳನ್ನು ಆಡುತ್ತಾಳೆ. ಇದನ್ನು ಕೇಳಿದ ಗಿರಿಜಮ್ಮ ಸ್ಫೂರ್ತಿ ತುಂಬುವ ಮಾತುಗಳನ್ನು ಆಡುತ್ತಾಳೆ. ಯಾಕಮ್ಮ ಹೀಗೆ ಹೇಳುತ್ತಿದ್ದಿಯಾ. ಸತ್ಯಗೆ ಸೋಲಾ ಖಂಡಿತ ಇಲ್ಲ. ಸತ್ಯಾಗೆ ಯಾವತ್ತೂ ಸೋಲು ಇಲ್ಲ. ಆಕೆಗೆ ಯಾವತ್ತೂ ಗೆದ್ದೆ ಅಭ್ಯಾಸ ಎಂದೆಲ್ಲ ಸ್ಫೂರ್ತಿ ತುಂಬುವ ಮಾತುಗಳನ್ನು ಆಡುತ್ತಾಳೆ.

ಗಿರಿಜಮ್ಮನ ಮಾತು ಸತ್ಯಗೆ ಸ್ಫೂರ್ತಿ ಆಗುತ್ತದಾ?
ಆದರೆ ಸತ್ಯಗೆ ಇತ್ತೀಚಿಗೆ ಗೆಲುವು ಅನ್ನೋದು ಮರೆತು ಹೋದಂತೆ ಕಾಣುತ್ತಿದೆ. ಸತತವಾಗಿ ಸೋಲು ನೋವು ಅನುಭವಿಸುತ್ತಿರುವ ಸತ್ಯಗೆ ಗೆಲುವು ಮರೆತು ಹೋಗಿದೆ ಹಾಗೆಯೇ ತನ್ನನ್ನು ತಾನು ಮರೆತೇ ಬಿಟ್ಟಿದ್ದಾಳೆ. ಇದನ್ನೆಲ್ಲ ಗಮನಿಸಿದ ಗಿರಿಜಮ್ಮ, ಸತ್ಯಾಗೆ ಸಮಾಧಾನದ ಮಾತುಗಳನ್ನು ಹೇಳುತ್ತಾಳೆ. ಇತ್ತಕಡೆ ದಿವ್ಯಾಗೆ ಬಾಲ ತನ್ನನ್ನು ಮೋಸಗೊಳಿಸುತ್ತಿರುವ ವಿಚಾರ ಅರಿವಿಗೆ ಬಾರದ ಹಾಗೆ ಬಾಲ ನೋಡಿಕೊಳ್ಳುತ್ತಿದ್ದಾರೆ.

ಬಾಲನ ಸುಳ್ಳಿನ ಕಂತೆ ತಿಳಿದರೆ ಎನು ಮಾಡುತ್ತಾಳೆ ದಿವ್ಯಾ
ಇತ್ತ ಬಾಲನ ತಾತನ ಪಾತ್ರ ಮಾಡುವ ಗೊಗ್ಗಯ್ಯ ಏನೇನೆಲ್ಲಾ ಹೇಳಿ ದಿವ್ಯಾ ತಲೆಯನ್ನು ಕೆಡಿಸಿ ಬಿಟ್ಟಿದ್ದಾನೆ, ಭಯಗೊಳಿಸಿದ್ದಾವೆ. ಆದರೆ ಇದೆಲ್ಲವನ್ನೂ ನೋಡಿದ ದಿವ್ಯಾಗೆ ಬಾಲನ ಮೇಲೆ ಡೌಟ್ ಬಾರದೆ ಇರದು. ಬಾಲನ ಬಳಿ ಇಲ್ಲ ಸಲ್ಲದನ್ನು ಕೇಳಿದಾಗ ಬಾಲ ಮಾತ್ರ ತಡಬಡಿಸಿಕೊಂಡರು ಸ್ವಲ್ಪ ಸುಧಾರಿಸಿಕೊಂಡು ದಿವ್ಯಾಳನ್ನು ಸಮಾಧಾನಿಸುವತ್ತ ಚಿತ್ತ ಹರಿಸುತ್ತಾನೆ. ಹಳ್ಳಿಯಲ್ಲಿ ಪಡಬಾರದ ಕಷ್ಟ ಪಡುತ್ತಿರುವ ದಿವ್ಯಾ ಬಾಲನ ಬಳಿ ತನ್ನ ಕಷ್ಟ ತೋಡಿಕೊಳ್ಳುತ್ತಾಳೆ. ಬಾಲನ ಮನೆ ನೋಡಿ ತಲೆ ಕೆಡಿಸಿಕೊಂಡಿದ್ದಾಳೆ ದಿವ್ಯಾ.

ಜೀವನ ನಡೆಸಲು ಇಂಥ ಮನೇಲಿ ಸಾದ್ಯವಿಲ್ಲ ಎಂದ ದಿವ್ಯಾ
''ಇದು ಒಂದು ಮನೆನಾ ಒಳ್ಳೆ ಗುಬ್ಬಿ ಗೂಡು ಥರ ಇದೆ. ಇಲ್ಲಿ ಜೀವನ ನಡೆಸೋದು ಹೇಗೆ ಎಂದೆಲ್ಲಾ ಹೇಳುತ್ತಾಳೆ. ಇದೀಗ ಬಾಲನಿಗೆ ಏನು ಮಾಡುವುದು ತಿಳಿಯದಾಗುತ್ತದೆ. ಇದೀಗ ದಿವ್ಯಾ ಬೆಂಗಳೂರಿಗೆ ಹೊರಟು ನಿಂತಿದ್ದಾಳೆ. ನಾನು ಬೇಕಿದ್ದರೆ ನೀನು ಬಾ ಬೆಂಗಳೂರಿಗೆ ಬಾ ಎಂದು ಹೇಳುತ್ತಾಳೆ. ಬಾಲನಿಗೆ ಆಕಾಶವೇ ಕಳಚಿ ಬಿದ್ದಂತೆ ಭಾಸವಾಗುತ್ತದೆ. ದಿವ್ಯಾಳನ್ನು ಉಳಿಸಿಕೊಳ್ಳಲು ಬಾಲಾ ಮುಂದೇನು ಮಾಡುತ್ತಾನೆ ಕಾದು ನೋಡಬೇಕಿದೆ.


Click it and Unblock the Notifications