For Quick Alerts
  ALLOW NOTIFICATIONS  
  For Daily Alerts

  ಹಣಕ್ಕಾಗಿ ಚಡಪಡಿಸುತ್ತ ಇರುವ ಕಾರ್ತಿಕ್, ಮುಂದೇನು ಮಾಡುತ್ತಾಳೆ ಸತ್ಯ?

  By ಪೂರ್ವ
  |

  ಗೊಗ್ಗಯ್ಯ ದಿವ್ಯಾಗೆ ಸಖತ್ ಆಗಿ ಕಾಟ ಕೊಡುತ್ತಾ ಬಂದಿದ್ದಾನೆ. ಇದನ್ನು ನೋಡಿದ ಗಿರಿಜಮ್ಮ ಇನ್ನೇನಾದರೂ ಈ ಗೊಗ್ಗಯ್ಯ ದಿವ್ಯಾ ಸುದ್ದಿಗೆ ಬಂದರೆ ಆತನಿಗೆ ಒಂದು ಗತಿ ಕಾಣಿಸಬೇಕು ಎಂದು ಗಿರಿಜಮ್ಮ ಪ್ಲಾನ್ ಹಾಕಿಕೊಂಡು ಬಂದಿರುತ್ತಾರೆ. ಇತ್ತ ಗಿರಿಜಮ್ಮನನ್ನು ನೋಡಿದ ಗೊಗ್ಗಯ್ಯ ಫುಲ್ ಪ್ಲಾಟ್ ಆಗಿದ್ದಾರೆ ಇದನ್ನೆಲ್ಲ ನೋಡಿದ ಗಿರಿಜಮ್ಮ ಹೇಳುತ್ತಾರೆ.

  ಏನಯ್ಯ ದೊಡ್ಡ ಮನುಷ್ಯ ನಿನಗೆ ಈ ವಯಸ್ಸಲ್ಲಿ ಇದೆಲ್ಲ ಬೇಕಾ? ಇವತ್ತೂ ನಾಳೆನೋ ಟಿಕೆಟ್ ತೆಗೆದುಕೊಳ್ಳುವ ಹಾಗೆ ಇದೀಯಾ ಆದರೂ ಆಟ ಆಡಿಸ್ತಿಯಾ? ಕಾಲು ಮುರಿದು ಕೈಗೆ ಕೊಡುತ್ತೇನೆ ಇಂತದ್ದನ್ನೆಲ್ಲ ನನ್ನ ಬಳಿ ಇಟ್ಟುಕೊಳ್ಳಬೇಡ ಎಂದು ಖಡಕ್ ಆಗಿ ಹೇಳುತ್ತಾಳೆ. ಇದನ್ನೆಲ್ಲ ಕೇಳಿದ ಗೊಗ್ಗಯ್ಯ,೦ ಯಾಕೆ ಇಷ್ಟು ಬಯ್ಯುತ್ತಾ ಇದ್ದಾನೆ ಈತ ಎಂದೆಲ್ಲ ಯೋಚನೆ ಮಾಡುತ್ತಾ ಇರುತ್ತಾನೆ.

  ಯಾಕೆ ಇಷ್ಟೆಲ್ಲ ಬಯ್ಯುತ್ತಾ ಇದ್ದೀರಾ ಎಂದು ಅರ್ಥ ಆಗದೆ ನೋಡುತ್ತಾನೆ. ಇನ್ನು ಗಿರಿಜಮ್ಮ ಮಾತ್ರ ಪಾಪ ಆ ಮಗೂಗೆ ಎಷ್ಟು ಕಾಟ ಕೊಡುತ್ತಿಯ? ನೀನು ಒಬ್ಬ ಮನುಷ್ಯನಾ ನೋಡು ಒಳ್ಳೆಯ ಮಾತಿನಿಂದ ಹೇಳುತ್ತ ಇದ್ದೀನಿ. ಆ ಮಗೂಗೆ ಕಾಟ ಕೊಡಬಾರದು ಮನೆಯ ಸೊಸೆ ಎಂದರೆ ಗೃಹ ಲಕ್ಷ್ಮಿ ಇದ್ದ ಹಾಗೆ ಅವಳನ್ನು ಗೋಳು ಹೊಯ್ದುಕೊಳ್ಳುತ್ತ ಇದ್ದೀಯಾ ನೀನು ಉದ್ಧಾರ ಆಗಲ್ಲ ಎಂದು ಹೇಳುತ್ತಾಳೆ ಇದನ್ನು ಕೇಳಿದ ಗೊಗ್ಗಯ್ಯ ಹೇಳುತ್ತಾನೆ ಅಂದ್ರೆ ನೀವು ಇಷ್ಟು ಹೊತ್ತು ಮಾತನಾಡಿದ್ದು ದಿವ್ಯಾ ಬಗ್ಗೆ ನಾ? ಎಂದು ಕೇಳುತ್ತಾನೆ.

  ಗಿರಿಜಾ ಮಾತಿಗೆ ಕಕ್ಕಾ-ಬಿಕ್ಕಿ ಆದ ಗೊಗ್ಗಯ್ಯ

  ಗಿರಿಜಾ ಮಾತಿಗೆ ಕಕ್ಕಾ-ಬಿಕ್ಕಿ ಆದ ಗೊಗ್ಗಯ್ಯ

  ಇದಕ್ಕೆ ಗಿರಿಜಮ್ಮ ಇನ್ಯಾರು ಬಗ್ಗೆ ಮಾತನಾಡಲಿ ಎಂದು ಹೇಳಿದಾಗ ಗೊಗ್ಗಯ್ಯ ಮಾತ್ರ ನುಲಿಯುತ್ತ ಸುಮ್ಮನೆ ಆಗುತ್ತಾನೆ. ಕಾರ್ತಿಕ್‌ಗೆ ಬ್ಲಾಕ್ ಮೇಲ್ ಮಾಡುವಾಕೆ ದುಡ್ಡಿಗೆ ಡಿಮ್ಯಾಂಡ್ ಇಟ್ಟಿದ್ದಾಳೆ. ಐವತ್ತು ಲಕ್ಷ ರೂಪಾಯಿ ದುಡ್ಡು ಕೊಡು ಎಂದು ಹೇಳಿದಾಗ ಕಾರ್ತಿಕ್‌ ಶಾಕ್ ಆಗುತ್ತಾನೆ. ನನಗೆ ನನ್ನ ಹಣ ಐವತ್ತು ಲಕ್ಷ ಬೇಕು ನೀನು ಏನು ಮಾಡುತ್ತೀಯಾ ನನಗೆ ಗೊತ್ತಿಲ್ಲ ಆದರೆ ಹಣ ಮಾತ್ರ ನನಗೆ ಬೇಕು ಅಷ್ಟೆ ಎಂದು ಹೇಳಿದಾಗ ಕಾರ್ತಿಕ್ ಏನು ನಿನ್ನ ದುಡ್ಡ, ನೀನು ಹಣಕ್ಕಾಗಿ ನನ್ನ ಬ್ಲಾಕ್ ಮೇಲ್ ಮಾಡುತ್ತಾ ಇದ್ದೀಯ ನಿನ್ನ ದುಡ್ಡು ನನ್ನ ಬಳಿ ಇಲ್ಲ ಎಂದು ಹೇಳಿದಾಗ ಆಕೆ ಏನೇ ಇರಲಿ ನನಗೆ ಹಣ ಬೇಕು ಎಂದು ಕಡ್ಡಿ ಮುರಿದ ಹಾಗೆ ಹೇಳುತ್ತಾಳೆ.

  ಹಣಕ್ಕಾಗಿ ಕಾರ್ತಿಕ್‌ ಅನ್ನು ಪೀಡಿಸುತ್ತಿರುವ ಮಹಿಳೆ

  ಹಣಕ್ಕಾಗಿ ಕಾರ್ತಿಕ್‌ ಅನ್ನು ಪೀಡಿಸುತ್ತಿರುವ ಮಹಿಳೆ

  ಇನ್ನು ಸತ್ಯ ಮಾತ್ರ ಬಹಳ ಬೇಸರದಲ್ಲಿ ಇರುತ್ತಾಳೆ. ಬಳಿಕ ಕಾರ್ತಿಕ್ ಹೇಳುತ್ತಾನೆ ನನ್ನ ಕೈಯಲ್ಲಿ ಐವತ್ತು ಲಕ್ಷ ಹಣ ಒಟ್ಟಿಗೆ ಕೊಡಲು ಆಗುವುದು ಇಲ್ಲ. ಈಗ ಹತ್ತು ಲಕ್ಷ ಅರೇಂಜ್ ಆಗಿದೆ ಅಷ್ಟು ಕೊಡುತ್ತೇನೆ ಎಂದು ಹೇಳಿದರು ಇದನ್ನು ಒಪ್ಪದ ಆಕೆ ಐವತ್ತು ಲಕ್ಷ ಬೇಕೇ ಬೇಕು ಎಂದು ಹೇಳಿ ಕರೆ ಕಟ್ ಮಾಡುತ್ತಾಳೆ. ಇದನ್ನು ಕೇಳಿ ಮನೆಯ ಹೊರಗೆ ಕುಳಿತಿದ್ದ ಕಾರ್ತಿಕ್ ಬಳಿ ಬಂದ ಆತನ ಅಕ್ಕ ಬಾವ ಜೋರಾಗಿ ಮಾತನಾಡುತ್ತಾರೆ. ಇಪ್ಪತ್ತು ಲಕ್ಷ ಬೀರುವಲ್ಲಿ ಇದೆ ತಾನೇ ಅದನ್ನು ಭದ್ರವಾಗಿ ತೆಗೆದು ಇಡಿ ಸುಹಾಸ್ ಎಂದು ಹೇಳುತ್ತಾಳೆ. ಇದನ್ನು ಕೇಳಿಸಿಕೊಂಡ ಕಾರ್ತಿಕ್ ಮಾತ್ರ ಏನು ಮಾಡುವುದು ಎಂದು ಯೋಚನೆ ಮಾಡುತ್ತಾ ಇರುತ್ತಾನೆ.

  ಟೆನ್ಶನ್‌ನಲ್ಲಿ ಕಾರ್ತಿಕ್

  ಟೆನ್ಶನ್‌ನಲ್ಲಿ ಕಾರ್ತಿಕ್

  ಇತ್ತ ಸತ್ಯ ಬಹಳ ಚಡಪಡಿಸುತ್ತಾ ಇರುತ್ತಾಳೆ. ಕಾರ್ತಿಕ್ ಬಳಿ ಏನಾಯಿತು ಕಾರ್ತಿಕ್ ಯಾಕೆ ಇಷ್ಟು ಬೇಸರ ಮಾಡಿಕೊಂಡು ಇದ್ದೀರಿ ಯೋಚನೆ ಮಾಡಬೇಡಿ ಎಂದೆಲ್ಲ ಹೇಳುತ್ತಾಳೆ ಇದನ್ನು ಕೇಳಿದ ಕಾರ್ತಿಕ್ ಮಾತ್ರ ಏನು ಮಾಡಬೇಕು ಎಂದು ಯೋಚನೆ ಮಾಡುತ್ತಾ ಇರುತ್ತಾನೆ. ಸತ್ಯ ಬಳಿ ಹಾಗೇನೂ ಇಲ್ಲ ಸತ್ಯ ನೀನೇನು ತಲೆ ಕೆಡಿಸಿಕೊಳ್ಳಬೇಡ ಎಂದು ಹೇಳುತ್ತಾನೆ. ಆದರೆ ಸತ್ಯ ಮಾತ್ರ ಕಾರ್ತಿಕ್ ಏನೋ ವಿಚಾರ ಮುಚ್ಚಿ ಇಡುತ್ತಾ ಇದ್ದಾನೆ ಎಂದು ತಿಳಿದು ಬೇಸರ ಪಟ್ಟುಕೊಂಡಿರುತ್ತಾಳೆ. ಇನ್ನು ಸತ್ಯ ಆಕೆಯ ಗೆಳೆಯನ ಬಳಿ ಬಂದು, ಏನೋ ಆಗಿದೆ ಅನ್ನಿಸುತ್ತದೆ ಕಣೋ ಕಾರ್ತಿಕ್ ಬಹಳ ಟೆನ್ಶನ್ ಮಾಡಿಕೊಂಡು ಇದ್ದಾನೆ ಏನು ಮಾಡುವುದು ತಿಳಿಯುತ್ತಿಲ್ಲ ಎಂದು ಹೇಳುತ್ತಾಳೆ. ಮುಂದೇನು ಕಾದು ನೋಡಬೇಕಿದೆ.

  English summary
  Kannada serial Satya written updated on 19th November episode. Know more about it.
  Tuesday, December 20, 2022, 18:28
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X