Sathya: ಲವ್ವಲ್ಲಿ ಬಿದ್ದ ಕಾರ್ತಿಕ್: ಆತನ ಮನದರಸಿ ಆಗುತ್ತಾಳ ಸತ್ಯ?

By Poorva

ಸತ್ಯ ಧಾರಾವಾಹಿ ಕಥೆ ಕುತೂಹಲದ ಘಟ್ಟ ತಲುಪಿದೆ. ಕಾರ್ತಿಕ್ ಇದೀಗ ಸತ್ಯ ಪ್ರೀತಿ ಬಲೆಯಲ್ಲಿ ಬಿದ್ದಿದ್ದಾನೆ. ಆತನಿಗೆ ಸತ್ಯ ಅಂದರೆ ಅದೆಷ್ಟು ಇಷ್ಟ ಅಂದರೆ ಅದನ್ನು ಆತ ಸತ್ಯನ ಬಳಿ ಹೇಳಿಕೊಳ್ಳುತ್ತಿಲ್ಲ. ಬದಲಿಗೆ ಮನದಲ್ಲಿ ಮಂಡಿಗೆ ತಿನ್ನುತ್ತಿದ್ದಾನೆ. ಈ ವೇಳೆ ಕಾರ್ತಿಕ್‌ಗೆ ಗೆಳೆಯ ಕರೆ ಮಾಡುತ್ತಾನೆ. ಆಗಲೂ ಇದೇ ಚರ್ಚೆ ಆಗುತ್ತದೆ.

ಕಾರ್ತಿಕ್ ಸ್ನೇಹಿತನ ಬಳಿ ತನ್ನ ಮನದಲ್ಲಿ ನಡೆಯುತ್ತಿರುವ ವೇದನೆಯನ್ನು ಹೇಳಿದಾಗ ಆತ ಹೇಳುತ್ತಾನೆ. ಇದು ಬೇರೇನು ಅಲ್ಲ. ಸತ್ಯ ಮೇಲೆ ನಿನಗೆ ಲವ್ ಆಗಿದೆ ಅಷ್ಟೇ ಬೇರೇನೂ ಇಲ್ಲ ಎಂದಾಗ ಕಾರ್ತಿಕ್ ಮಾತ್ರ ನಾಚುತ್ತಾ ಮಾತನಾಡುತ್ತಾನೆ.

Kannada serial satya written updated on 1st may

ಗೆಳೆಯನ ಮಾತಿಗೆ ನಾಚಿದ ಕಾರ್ತಿಕ್

ಸತ್ಯ ಜೊತೆ ನಾನು ಕ್ಲೋಸ್ ಆಗುತ್ತಾ ಇದ್ದೇನೆ .. ಇತ್ತೀಚಿನ ದಿನಗಳಲ್ಲಿ ಸತ್ಯ ನನಗೆ ಬಹಳ ಹತ್ತಿರ ಎಂದು ಅನ್ನಿಸುತ್ತಾ ಇದೆ ಎಂದಾಗ ಆತನ ಗೆಳೆಯ ಕಾರ್ತಿಕ್ ಕಾಲು ಎಳೆಯುತ್ತಾನೆ. ಇದನ್ನು ನೋಡಿದ ಕಾರ್ತಿಕ್ ಮಾತ್ರ ಮೆತ್ತಗೆ ಫೋನ್ ಇಡುತ್ತಾನೆ. ಇತ್ತ ದಿವ್ಯಾ ಮಾತ್ರ ಬಹಳ ಖುಷಿಯಾಗಿ ಇದ್ದಾಳೆ. ಇನ್ಮೇಲೆ ನಾನು ಅಂದುಕೊಂಡ ಹಾಗೆ ಜೀವನ ನಡೆಯುತ್ತದೆ. ಎಂದೆಲ್ಲ ಕನಸು ಕಾಣುತ್ತಾ ಇರುತ್ತಾಳೆ.

ದಿವ್ಯ ಮಾತಿಗೆ ಕಕ್ಕಾಬಿಕ್ಕಿ ಆದ ಬಾಲ

ಆದರೆ ದಿವ್ಯ ಹೇಗೆ ಏನು ಎಂಬುವುದನ್ನು ತಿಳಿದರೂ ಬಾಲ ಮಾತ್ರ ಎಲ್ಲೋ ಏನೋ ಮಿಸ್ ಹೊಡೆಯುತ್ತಿದೆ ಎಂದು ಗೊಗ್ಗಯ್ಯ ನ ಬಳಿ ಹೇಳುತ್ತಾನೆ. ಅದಕ್ಕೆ ಗೊಗ್ಗಯ್ಯ ಮಾತ್ರ ಬಾಲನಿಗೆ ಸಮಾಧಾನ ಮಾಡುತ್ತಾನೆ. ಇನ್ನು ದಿವ್ಯಾ ತನ್ನ ತಾಯಿಗೆ ಹಾಗು ಅಜ್ಜಿಗೆ ಕರೆ ಮಾಡಿ ಹಳ್ಳಿಗೆ ಬರಲು ಹೇಳುತ್ತಾಳೆ. ಆದರೆ ಜಾನಕಿ ಮಾತ್ರ ದಿವ್ಯಾ ಮನೆಗೆ ಹೋಗಲು ಹಿಂದೇಟು ಹಾಕುತ್ತಾರೆ. ಆದರೆ ಗಿರಿಜಾ ಮಾತ್ರ ಸರಿ ಎನ್ನುತ್ತಾಳೆ.

Kannada serial satya written updated on 1st may

ತಾಯಿ ಅಜ್ಜಿಯನ್ನು ಹಳ್ಳಿಗೆ ಕರೆದ ದಿವ್ಯ

ಫೋನ್ ಇಟ್ಟು ಬಿಡುತ್ತಾಳೆ. ಆ ಬಳಿಕ ಜಾನಕಿಯನ್ನೂ ದಿವ್ಯ ಮನೆಗೆ ಹೋಗಲು ಒಪ್ಪಿಸುತ್ತಾರೆ ಇಬ್ಬರು ದಿವ್ಯ ಮನೆಗೆ ಹೋಗುತ್ತಾರೆ. ಇನ್ನು ಊರ್ಮಿಳಾ, ಲಕ್ಷ್ಮಣ ನ ಮನವೊಲಿಸಲು ಬರುತ್ತಾಳೆ. ರಿತುಗೆ ಬೇಗ ಮದುವೆ ಮಾಡುವುದು ಬೇಡ. ಆಕೆಗೆ ಬಹಳ ಕಷ್ಟ ಆದೀತು. ಆಕೆಯ ಮನಸ್ಸು ಬಹಳ ಸೂಕ್ಷ್ಮ. ಎಂದೆಲ್ಲ ಹೇಳುತ್ತಾಳೆ.

ಊರ್ಮಿಳಾ ಮಾತಿಗೆ ಸಿಗದ ಮನ್ನಣೆ

ಇದನ್ನೆಲ್ಲ ಕೇಳಿದ ಲಕ್ಷ್ಮಣ ನನ್ನ ಮಗಳು ನನಗೂ ಬಹಳ ಇಷ್ಟ. ಹಾಗಂತ ನಾವು ಆಕೆಗೆ ಕೆಟ್ಟದು ಆಗಲಿ ಎಂದು ಯಾವತ್ತೂ ಬೇಡಿಕೊಳ್ಳುವುದು ಇಲ್ಲ. ಆಕೆ ಖುಷಿಯಾಗಿ ಇರಬೇಕು. ಮುಂದಿನ ದಿನಗಳಲ್ಲಿ ಆಕೆ ಅಳಬಾರದು ಎಂದೆಲ್ಲ ಹೇಳುತ್ತಾನೆ. ಇದನ್ನು ಕೇಳಿದ ಊರ್ಮಿಳಾ ಮದುವೆ ಮುಂದಕ್ಕೆ ಹಾಕುವಂತೆ ಕೂಡ ಮನವಿ ಮಾಡುತ್ತಾಳೆ.

Kannada serial satya written updated on 1st may

ಊರ್ಮಿಳಾ ಮಾತು ಕೇಳದ ಲಕ್ಷ್ಮಣ

ಆದರೆ ಲಕ್ಷ್ಮಣನ ಮನಸ್ಸು ಮಾತ್ರ ಅದ್ಯಾವುದನ್ನು ಒಪ್ಪಲು ಸಿದ್ಧ ಇಲ್ಲ. ಹೆಂಡತಿಗೆ ಆದಷ್ಟು ಬುದ್ದಿ ಮಾತುಗಳನ್ನು ಹೇಳುತ್ತಾನೆ. ಬಳಿಕ ಅಲ್ಲಿಂದ ಎದ್ದು ಹೋಗುತ್ತಾನೆ . ಇನ್ನು ಸೀತಾ, ಲಕ್ಷ್ಮಣ ಕುಳಿತುಕೊಂಡು ಇರಬೇಕಾದರೆ ಅಲ್ಲಿಗೆ ಬಂದ ಕಾರ್ತಿಕ್ ಅಕ್ಕ ಸತ್ಯ ಬಗ್ಗೆ ಇಲ್ಲಸಲ್ಲದ ಆರೋಪವನ್ನು ಮಾಡುತ್ತಾ ಇರುತ್ತಾರೆ. ಅದನ್ನು ಕೇಳಿಸಿಕೊಂಡ ಲಕ್ಷ್ಮಣ ಬಹಳ ಉದಾಸೀನವಾಗಿ ಮಾತನಾಡುತ್ತಾ ಇರುತ್ತಾನೆ.

ಸೀತಾ ಮಾತಿಗೆ ಸುಮ್ಮನಾದ ಲಕ್ಷ್ಮಣ

ಆಗ ಸೀತಾ ಮಾತ್ರ ಮೆತ್ತಗೆ ಹೇಳುತ್ತಾಳೆ. ನಾವು ಯಾವುದನ್ನು ಸುಲಭವಾಗಿ ತೆಗೆದುಕೊಳ್ಳುವುದು ಬೇಡ ಲಕ್ಷ್ಮಣ, ಎಲ್ಲರ ಮೇಲೂ ಒಂದು ಕಣ್ಣು ಇಡಬೇಕು ಎನ್ನುತ್ತಾಳೆ. ಇದನ್ನು ಕೇಳಿದ ಲಕ್ಷ್ಮಣ ಆಯಿತು ಎಂದು ಹೇಳುತ್ತಾನೆ. ಇನ್ನು ಜಾನಕಿ- ಗಿರಿಜಾ, ದಿವ್ಯಾ ಮನೆಗೆ ಹೋಗುತ್ತಾರೆ. ಜಾನಕಿಗೆ ದಿವ್ಯಾ ಅಂತಹ ಮನೆಯಲ್ಲಿರುವುದು ಬಹಳ ಆಶ್ಚರ್ಯ ಆಗುತ್ತದೆ. ಆಕೆ ಬಂಗಲೆ ಎಲ್ಲಾ ಇದೆ ಅಂತಿದ್ದಳು. ಆದರೆ ಈ ಗುಡಿಸಲಿನಲ್ಲಿ ಇರುವುದಾ ಎಂದೆಲ್ಲ ಹೇಳುತ್ತಾಳೆ. ಆಗ ಅಲ್ಲಿಗೆ ದಿವ್ಯಾ ಬಂದು ಅಮ್ಮ, ಅಜ್ಜಿಯ ಕ್ಷೇಮ ವಿಚಾರಿಸುತ್ತಾಳೆ.

More from Filmibeat

English summary
Kannada serial satya written updated on 1st may. here is Details About Karthik Loves Sathya. Laxman not ready to stop his daughter Rithu's marriage. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X