ಸತ್ಯ ಮನೆಯಲ್ಲಿ ಕಾರ್ತಿಕ್ ಪಾಡು ಕೆಳೋರೆ ಇಲ್ಲ!
'ಸತ್ಯ' ಧಾರವಾಹಿ ಚೆನ್ನಾಗಿ ಮೂಡಿ ಬರುತ್ತಿದೆ. ಸತ್ಯ ಪಾತ್ರಧಾರಿ ನಟನೆಗೂ ಮೆಚ್ಚುಗೆ ವ್ಯಕ್ತವಾಗಿದೆ. ಇದೀಗ ಅಮೂಲ್ ಬೇಬಿ, ಸತ್ಯಾಳನ್ನು ಇಷ್ಟವಿಲ್ಲದೆ ಮದುವೆ ಆಗಿ ಪೇಚಿಗೆ ಸಿಲುಕಿದ್ದಾರೆ. ಅದೆಷ್ಟೇ ಇಷ್ಟವಿಲ್ಲದಿದ್ದರೂ ಸತ್ಯ ತವರು ಮನೆಗೆ ಕಾರ್ತಿಕ್ ಆಗಮಿಸಿದ್ದಾರೆ.
ಇದರಿಂದ ಸತ್ಯ ತಾಯಿಗೆ ಹಾಗೂ ಗಿರಿಜಮ್ಮ ಗೆ ಬಹಳ ಖುಷಿಯಾಗಿದೆ. ಸತ್ಯಂಗೆ ಪಸ್ಟ್ ನೈಟ್ ಅರೇಂಜ್ ಮೆಂಟ್ ಕೂಡ ಸಖತ್ ಆಗಿ ನಡೆದಿದೆ. ಇದೀಗ ಇದರ ಬಗ್ಗೆ ಸತ್ಯಂಗೆ ಆಗಲಿ ಅಮೂಲ್ ಬೇಬಿಗೆ ಅಷ್ಟಾಗಿ ತಿಳಿದಿರುವುದಿಲ್ಲ. ಅರೇಂಜ್‌ಮೆಂಟ್ಸ್ ನೋಡಿದ ಅಮೂಲ್ ಬೇಬಿ ಇವತ್ತು ಏನೋ ಗ್ರಹಚಾರ ಕಾದಿದೆ ಎಂದುಕೊಂಡಿದ್ದ ಹಾಗೆಯೇ ಆಗಿದರುವುದು ಮಾತ್ರ ವಿಪರ್ಯಾಸ.
ಇದೀಗ ಸತ್ಯ ಹಾಗೂ ಅಮೂಲ್ ಬೇಬಿ ಒಂದೇ ರೂಮ್‌ನಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ. ಸತ್ಯ ಚೆನ್ನಾಗಿ ನಿದ್ದೆ ಮಾಡಿದರೆ ಅಮೂಲ್ ಬೇಬಿ ಮಾತ್ರ ಹೆದರಿ ಕೊಂಚವೂ ನಿದ್ದೆ ಮಾಡದೆ ಪರದಾಡುತ್ತಿದ್ದಾರೆ. ಸತ್ಯಂಗೆ ಮದ್ಯೆ ಮದ್ಯೆ ಎಚ್ಚರವಾದರೂ ಕಾರ್ತಿಕ್ ಗೆ ಮಲಗಲು ಹೇಳಿ ಮಲಗುತ್ತಿದ್ದಳು. ಇನ್ನೂ ಬೆಳಗ್ಗೆ ಇಬ್ಬರು ಎದ್ದು ಹೊರಗೆ ಬರುತ್ತಾರೆ ಕಾರ್ತಿಕ್ ಬಂದಾಗ ಕಾರ್ತಿಕ್ ಅತ್ತೆ, 'ಅಳಿಯಂದಿರೆ ಬನ್ನಿ ತಿಂಡಿ ತಿನ್ನಿ' ಎಂದಾಗ ಕಾರ್ತಿಕ್ ತಿಂಡಿ ತಿನ್ನಲು ಹೋಗುತ್ತಾನೆ. ಇನ್ನೂ ಗಿರಿಜಮ್ಮ ಏನೋ ಯೋಚಿಸುತ್ತಾ ಇರುತ್ತಾಳೆ. ಗಿರಿಜಮ್ಮನನ್ನು ನೋಡುತ್ತಾ ಮುಖದಲ್ಲಿ ಸ್ವಲ್ಪ ನಗು ತರಿಸಿಕೊಂಡು ತಿಂಡಿ ತಿನ್ನುತ್ತಾನೆ ಅಮೂಲ್ ಬೇಬಿ.

ನಿದ್ದೆ ಮಾಡಿದೆ ಎಂದ ಅಮೂಲ್ ಬೇಬಿ
ಬಳಿಕ ಗಿರಿಜಮ್ಮನ ಬಳಿ ಬಂದು ಸತ್ಯ ತಾಯಿ ಹೇಳುತ್ತಾಳೆ ಅತ್ತೆ ತಿಂಡಿ ತಗೊಳ್ಳಿ ಎಂದಾಗ ಗಿರಿಜಮ್ಮ ತೆಗೆದುಕೊಳ್ಳುತ್ತಾರೆ. ಇದನ್ನು ನೋಡಿದ ಸೊಸೆ ಯಾಕೆ ಅತ್ತೆ ಒಂಥರಾ ಇದ್ದೀರಾ ಎಂದಾಗ ಗಿರಿಜಮ್ಮ ಹೇಳುತ್ತಾರೆ ಅಳಿಯಂದಿರು ಹೇಳಿದ್ರು ರಾತ್ರಿ ಚೆನ್ನಾಗಿ ನಿದ್ರೆ ಮಾಡಿದೆ ಎಂದು. ಹಾಗಾದರೆ ನಾವು ಕೊಟ್ಟ ಕಷಯಾ ಲೇಹ್ಯ ಇದ್ಯಾವುದೂ ಕೆಲಸ ಮಾಡಿಲ್ಲವಾ ಎಂದಾಗ ಸೊಸೆ ಹೇಳುತ್ತಾಳೆ

ಲೇಹ್ಯ ಕೆಲಸ ಮಾಡಲಿಲ್ಲವಾ?
ಅತ್ತೆ ಸ್ವಲ್ಪ ಮೆತ್ತಗೆ ಮಾತನಾಡಿ ಕೇಳಿಕೊಂಡರೆ ಎನು ಅಂದುಕೊಳ್ಳುತ್ತಾರೆ ಅವರು ನೀವು ಮೊದಲು ತಿಂಡಿ ತಿನ್ನಿ ಆಮೇಲೆ ಮಾತನಾಡೋಣ ಅಂತೆ ಎಂದಾಗ ಗಿರಿಜಮ್ಮ ಹೇಳುತ್ತಾರೆ ನಮ್ಮ ಅಜ್ಜಿ ಕಾಲದಿಂದಲೂ ಕೆಲಸ ಮಾಡಿಕೊಂಡು ಬಂದಿರುವ ಲೇಹ್ಯ ಅದು. ನಮ್ಮ ಅಳಿಯಂದಿರು ನೋಡಿದರೆ ಉಲ್ಟಾ ಹೇಳುತ್ತಿದ್ದಾರೆ ಎಂದಾಗ ಸೊಸೆ ಹೇಳುತ್ತಾರೆ ಅತ್ತೆ ನೀವು ಹಂಗೆ ಹೇಳಿದರೆ ಅವರಿಗೆ ಸಂಕೋಚ ಆಗಲ್ವಾ ಅದಿಕ್ಕೆ ಬೇರೆ ಏನಾದ್ರೂ ಹೇಳಿ ಇರುತ್ತಾರೆ. ಅದಕ್ಕೆ ಗಿರಿಜಮ್ಮ ಜೋರಾಗಿ ಹೌದಲ್ವಾ ಎಂದಾಗ ಕಾರ್ತಿಕ್ ಮತ್ತು ಸತ್ಯ ನೋಡುತ್ತಾರೆ.

ತಮಾಷೆ ಮಾಡುವ ಗಿರಿಜಮ್ಮ
ಇದನ್ನು ನೋಡಿದ ಗಿರಿಜಮ್ಮ ನಗುತ್ತಾರೆ. ಅದಕ್ಕೆ ಕಾರ್ತಿಕ್ ಕೇಳುತ್ತಾನೆ ಏನಾಯ್ತು ಎಂದು ಅದಕ್ಕೆ ಗಿರಿಜಮ್ಮ ಹೇಳುತ್ತಾರೆ ಅದನ್ನ ನೀವೇ ಹೇಳಬೇಕು ಅಳಿಯಂದಿರೆ ಏನಾಯ್ತು ಅಂತ ಎಂದು ನಗುತ್ತಾ ಹೇಳುತ್ತಾರೆ. ಬಳಿಕ ಹೇಳುತ್ತಾರೆ ಜಾನಕಿ ಅಳಿಯಂದಿರಿಗೆ ಇನ್ನೆರಡು ಪೂರಿ ಹಾಕಮ್ಮ ಅವರು ತಿಂದು ಗಟ್ಟಿಮುಟ್ಟಗಿರಬೇಕು ಎಂದಾಗ ಜಾನಕಿ ಸರಿ ಅತ್ತೆ ಎಂದು ನಗುತ್ತಾ ಹೋಗುತ್ತಾಳೆ. ಅದಕ್ಕೆ ಕಾರ್ತಿಕ್ ಹೇಳುತ್ತಾನೆ ಬೇಡ ಅತ್ತೆ ನನಗೆ ಸಾಕು ನಾನು ಗಟ್ಟಿಮುಟ್ಟಾಗಿ ಇದ್ದೇನೆ ಅದಕ್ಕೆ ಗಿರಿಜಮ್ಮ ಹೇಳುತ್ತಾರೆ ಸತ್ಯ ನಿನ್ನ ಯಜಮಾನರು ಸೂಪರ್ ಕಣೆ ಎಂದಾಗ ಸತ್ಯ ಕಾರ್ತಿಕ್ ಮುಖ ಮುಖ ನೋಡುತ್ತಾರೆ.

ಮೊಮ್ಮಕ್ಕಳು ಕೊಡಿ ಎನ್ನುವ ಗಿರಿಜಮ್ಮ
ಗಿರಿಜಮ್ಮ ಹೇಳುತ್ತಾರೆ ಶುಭಸ್ಯ ಶಿಗ್ರಂ ಎಂಬ ಮಾತಿದೆ ಅಳಿಯಂದಿರೆ ಆದಷ್ಟು ಬೇಗ ನನ್ನ ಕೈಗೆ ರಾಯರ ಕೈಗೆ ಮೊಮ್ಮಕ್ಕಳನ್ನು ಕೊಟ್ಟು ಬಿಡಿ ಎಂದಾಗ ಕಾರ್ತಿಕ್ ಮುಜುಗರಕ್ಕೆ ಸಿಲುಕುತ್ತಾನೆ. ಅದಕ್ಕೆ ಸತ್ಯ ಹೇಳುತ್ತಾಳೆ ಗಿರಿಜಮ್ಮ ಏನೇನೋ ಮಾತನಾಡಬೇಡ ಸುಮ್ನೆ ತಿಂಡಿ ತಿನ್ನು. ಅಮ್ಮಾ, ಗಿರಿಜಮ್ಮ ಗೆ ಪೂರಿ ಹಾಕು ಖಾಲಿ ಬಾಯಲ್ಲಿ ಬೊಂಬಾಯಿ ತೋರಿಸಿ ಬಿಡುತ್ತಾರೆ ಎಂದಾಗ ಗಿರಿಜಮ್ಮ ಹೇಳುತ್ತಾರೆ ಯಾಕಮ್ಮ ಏಷ್ಟು ಕೋಪ ಮಾಡಿಕೊಳ್ಳುತ್ತಿದ್ದಿಯಾ ಮದುವೆ ಆದಮೇಲೆ ಇದನ್ನೆಲ್ಲಾ ಕೇಳೋದು ಸರ್ವೇ ಸಾಮಾನ್ಯ ನೋಡಿದ್ರಾ ಅಳಿಯಂದಿರೆ ನಮ್ಮ ಸತ್ಯನ ಏಷ್ಟು ಸಂಕೋಚ ಪತ್ತುಕೊಳ್ಳುತ್ತಿದ್ದಾಳೆ. ಈ ಸಂಕೋಚ ನಾಚಿಗೆ ಎಲ್ಲಾ ಬರಬೇಕಾದರೆ ನೀನೇ ಅವಳ ಬದುಕಲ್ಲಿ ಬರಬೇಕಾಯಿತು. ಆಹಾ ಇಬ್ಬರು ಒಂದೇ ಸ್ಪೀಡಲ್ಲಿ ಇದ್ದೀರಾ ಎಂದು ಹೇಳುತ್ತಾರೆ ಅದಕ್ಕೆ ಕಾರ್ತಿಕ್ ಮನದಲ್ಲಿ ಓ ದೇವರೇ ಎಂತಹ ಫ್ಯಾಮಿಲಿಗೆ ನನ್ನ ತಗಲಾಕಿದೆಯಪ್ಪ ಎಂದು ಬೈದುಕೊಳ್ಳುತ್ತಾನೆ.


Click it and Unblock the Notifications











