ಬಾರ್‌ನಲ್ಲಿ ಸಿಕ್ಕ ಮೋನಿಕಾಳ ಬಲೆಗೆ ಬಿದ್ದನಾ ಪ್ರೀತು?

By ಪೂರ್ವ

ಪಾರು ಧಾರವಾಹಿ ಚೆನ್ನಾಗಿ ಮೂಡಿಬರುತ್ತಿದೆ. ಜನನಿ ಬದಲಾಗಿರುವ ರೀತಿ ಇದೀಗ ಪ್ರೀತೂಗೆ ಆತಂಕ ತರಿಸಿದೆ. ಪಾರು ಫೋಟೋ ಹರಿದು ಅದನ್ನು ಸುಟ್ಟು ಮಾಡಿದ ರಾದ್ದಾಂತಕ್ಕೆ ಪ್ರೀತೂ ತಲೆಕೆಡಿಸಿಕೊಂಡಿದ್ದಾನೆ. ಇದೀಗ ಪ್ರೀತೂಗೆ ಜನನಿ ಮೇಲೆ ಅನುಮಾನ ಶುರುವಾಗಿದೆ.

ಪಾರು ಮೇಲೆ ಆಸಿಡ್ ಹಾಕಲು ಯಾರು ಸಂಚು ಮಾಡಿದ್ದು ಅನ್ನುವ ಅನುಮಾನ ಕೂಡ ಮೂಡುತ್ತಿದೆ. ಇದನ್ನೆಲ್ಲ ನೋಡಿದ ಪ್ರೀತೂಗೆ ಎನು ಮಾಡಬೇಕು ಎಂದು ಗೊತ್ತಾಗುವುದಿಲ್ಲ ಬಳಿಕ ಬಾರ್ ಗೆ ಹೋಗಿ ಕುಳಿತುಕೊಳ್ಳುತ್ತಾನೆ. ವೆಯ್ಟರ್ ಅನ್ನು ಕರೆದು ಆರ್ಡರ್ ಮಾಡುತ್ತಾನೆ. ಯಾವತ್ತೂ ಕುಡಿಯದ ಪ್ರೀತೂಗೆ ಮೊದ ಮೊದಲು ವಾಸನೆ ನೋಡಿದಾಗ ವಾಕರಿಕೆ ಬರುತ್ತದೆ, ಆದರೂ ಕುಡಿಯುತ್ತಾನೆ.

ಬಳಿಕ ಪ್ರೀತೂ ಬಳಿಗೆ ಒಬ್ಬಾಕೆ ಬರುತ್ತಾಳೆ. ಪ್ರೀತೂವನ್ನು ನೋಡಿ ಮೆತ್ತಗೆ ನಗುತ್ತಾಳೆ. ಹೇ...ಪ್ರೀತೂ ವಾಟ್ಸಪ್ ಎಂದು ಕೇಳುತ್ತಾ ಪ್ರೀತೂವನ್ನು ಬಾಚಿ ತಬ್ಬಿಕೊಳ್ಳುತ್ತಾಳೆ. ಇದನ್ನು ಕಂಡ ಪ್ರೀತೂ ಹಾಯ್ ಮೋನಿಕಾ ಎಂದು ಹೇಳುತ್ತಾನೆ. ಈ ಮೋನಿಕಾ ನಿಜಕ್ಕೂ ಪ್ರೀತೂ ಗೆಳತಿಯ ಅಥವಾ ಪ್ರೀತೂ ಅನ್ನು ಖೆಡ್ಡಾಕ್ಕೆ ಕೆಡವಳು ಬಂದಿದ್ದಾಳಾ ಕಾದು ನೋಡಬೇಕಿದೆ.

ಬಾರ್‌ ನಲ್ಲಿ ಸಿಕ್ಕುವ ಗೆಳತಿ

ಬಾರ್‌ ನಲ್ಲಿ ಸಿಕ್ಕುವ ಗೆಳತಿ

ಅದಕ್ಕೆ ಮೋನಿಕಾ ಹಾಯ್ ಎಂದು ಹೇಳುತ್ತಾ ನಾವಿಬ್ಬರೂ ಸಿಗದೇ ಏಷ್ಟು ದಿನ ಆಯ್ತು ಬಹಳ ವರುಷ ಆಯ್ತಲ್ಲ ಸಿಕ್ಕಿ ಹೌದು ನಿನೇನಿಲ್ಲಿ ಎಂದು ಕೇಳುತ್ತಾಳೆ ಮೋನಿಕಾ. ಅಲ್ಲಾ ಹೀಗೆ ಕೇಳುತ್ತೇನೆ ಎಂದು ಬೇಜಾರ್ ಮಾಡಿಕೊಳ್ಳಬೇಡ ಸಾಮಾನ್ಯವಾಗಿ ಪಬ್ಬಿಗೆ ಬರೋರು ತುಂಬಾ ಸುಸ್ತಾಗಿರೋರು, ಇಲ್ಲ ಬಹಳ ಸಂತೋಷ ವಾಗಿದ್ದಾಗ ಬರುತ್ತಾರೆ. ಅಥವಾ ಡ್ರಿಂಕ್ಸ್ ಗೆ ಅಡಿಕ್ಟ್ ಆಗಿರೋರು ಬರುತ್ತಾರೆ. ನೀನು ಒಬ್ಬನೇ ಬಂದಿದ್ದೀಯಾ ಅಂದರೆ ಎಲ್ಲಾ ಸರಿಯಾಗಿದೆ ಅಲ್ವಾ ಎಂದು ಮೋನಿಕಾ ಕೇಳುತ್ತಾಳೆ. ಅದಕ್ಕೆ ಪ್ರೀತೂ ತಡವರಿಸುತ್ತಾ ಇರುತ್ತಾನೆ. ಬಳಿಕ ಮೋನಿಕಾ ಹೇಳುತ್ತಾಳೆ ನಿನ್ನ ಮುಖದಲ್ಲಿ ಇರೋ ಬೇಜಾರ್ ನೋಡಿದ್ರೆ ಏನೋ ಆಗಿದೆ ಅನ್ನಿಸುತ್ತಿದೆ ಎನ್ನುತ್ತಾಳೆ.

ಮೋನಿಕಾ ಬಳಿ ಸಮಸ್ಯೆ ಹೇಳಿಕೊಳ್ಳುವ ಪ್ರೀತು

ಮೋನಿಕಾ ಬಳಿ ಸಮಸ್ಯೆ ಹೇಳಿಕೊಳ್ಳುವ ಪ್ರೀತು

ಏನಾಯ್ತು ಪ್ರೀತೂ ಏನಾದರು ಪ್ರಾಬ್ಲಂ ಆಯ್ತಾ ಎಂದು ಕೇಳುತ್ತಾಳೆ. ಅದಕ್ಕೆ ಪ್ರೀತೂ ನಮ್ಮವರು ಎಂದುಕೊಂಡಿರೋರು ನಮಗೆ ತುಂಬಾನೆ ಮೋಸ ಮಾಡುತ್ತಾರೆ. ಆ ನೋವನ್ನ ತಡೆದುಕೊಳ್ಳಲು ಆಗುವುದಿಲ್ಲ ಎನ್ನುತ್ತಾನೆ ಅದಕ್ಕೆ ಮೋನಿಕಾ ಕೇಳುತ್ತಾಳೆ ನಮ್ಮೋರು, ನಂಬ್ದೊರು ಅಂದ್ರೆ ಯಾರು ಪ್ರೀತೂ ಅಪ್ಪನ ಅಮ್ಮನ ಅಣ್ಣನ ಅಥವಾ ಗೆಳೆಯರ ಎಂದು ಕೇಳಿದಾಗ ಪ್ರೀತೂ ಹೇಳುತ್ತಾನೆ ಅವರು ಯಾರು ಅಲ್ಲಾ ಅವರು ಯಾರು ಆ ಥರ ಮಾಡುವುದು ಇಲ್ಲ ಎಂದು ಹೇಳುತ್ತಾನೆ ಅದಕ್ಕೆ ಮೋನಿಕಾ ಕೇಳುತ್ತಾಳೆ.

ಬಾಟಲಿಗೆ ಮದ್ಯ ಸುರಿವ ಮೋನಿಕಾ

ಬಾಟಲಿಗೆ ಮದ್ಯ ಸುರಿವ ಮೋನಿಕಾ

ಮತ್ತೆ ಮತ್ಯಾರಿಂದ ಮೋಸ ಆಯ್ತು ಎಂದು ಕೇಳಿದಾಗ ಪ್ರೀತೂ ಹೇಳುತ್ತಾನೆ ಬೇರೆ ಯಾರು ಅಲ್ಲಾ ನಾನು ಇಷ್ಟ ಪಟ್ಟು ಮದುವೆಯಾದ ಹೆಂಡತಿಯಿಂದ ಎಂದಾಗ ಮೋನಿಕಾ ಓ ಗಾಡ್ ನಿನ್ನ ಹೆಂಡತಿನಾ ಎಂದು ಹೇಳುತ್ತಾಳೆ. ಆಗ ಪ್ರೀತೂ ತಲೆಯಾಡಿಸುತ್ತಾನೆ. ಬಳಿಕ ಆಕೆ ಹೇಳುತ್ತಾಳೆ ಏನ್ ಮಾಡಿದಳು ನಿನ್ನ ಹೆಂಡತಿ ಪ್ರೀತೂ. ನಿನ್ನ ಹೆಂಡತಿ ಅಷ್ಟು ಕೆಟ್ಟೊಳಾ ಎಂದು ಹೇಳಿ ಗ್ಲಾಸ್ ಗೆ ಅಲ್ಲಿದ್ದ ಮದ್ಯದ ಬಾಟಲಿಯಿಂದ ಇನ್ನೊಂದು ಗ್ಲಾಸ್ ಗೆ ಮದ್ಯ ಹಾಕಿ ಬಳಿಕ ಅದಿಕ್ಕೆ ನೀರು ಹಾಕಿ ಪ್ರೀತೂ ಮುಂದೆ ಇಡುತ್ತಾಳೆ.

ಅಪಾಯಕ್ಕೆ ಸಿಲುಕುತ್ತಾನಾ ಪ್ರೀತು?

ಅಪಾಯಕ್ಕೆ ಸಿಲುಕುತ್ತಾನಾ ಪ್ರೀತು?

ಬಳಿಕ ಹೇಳುತ್ತಾಳೆ ತಗೋ ಪ್ರೀತೂ ಇರಲಿ ಬಿಡು ತಗೋ ಪ್ರೀತೂ ಎಂದು ಪ್ರೀತೂ ಕೈಗೆ ಗ್ಲಾಸ್ ಕೊಟ್ಟು ಚಿಯರ್ಸ್ ಎಂದು ಹೇಳುತ್ತಾಳೆ. ಗಂಡನ ಈ ಸ್ಥಿತಿಗೆ ಜನನಿಯೇ ಕಾರಣ ಎಂದು ಅಖಿಲಾಂಡೆಶ್ವರಿಗೆ ಗೊತ್ತಾದರೆ ಎನು ಮಾಡುತ್ತಾಳೆ? ರಾಣಾ ನ ಕುಂತಂತ್ರದಿಂದ ಪ್ರೀತೂ ಅಪಾಯಕ್ಕೆ ಸಿಲುಕುತ್ತಾನಾ, ಕಾದುನೋಡಬೇಕಿದೆ.

More from Filmibeat

English summary
Kannada serial Satya Written Updated on 22th July. Know more about the episode.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X