Sathya: ರಾಕೇಶ್- ರಿತು ಮೊಂಡಾಟ: ಸತ್ಯಳನ್ನು ತರಾಟೆಗೆ ತೆಗೆದುಕೊಂಡ ಸೀತಾ

By Poorva

ಸತ್ಯ ಧಾರಾವಾಹಿಯಲ್ಲಿ ರಾಕೇಶ್ ಹಾಗೂ ಆತನ ಗ್ಯಾಂಗ್ ರಿತುಳನ್ನ ನೋಡಲು ಬರುತ್ತಾರೆ. ಮೊದಲೇ ಮನೆಯವರ ಕೆಂಗಣ್ಣಿಗೆ ಗುರಿಯಾಗಿದ್ದ ಸತ್ಯ ಮಾತ್ರ ಇನ್ನಷ್ಟು ಸಮಸ್ಯೆಗೆ ಸಿಲುಕಿದ್ದಾಳೆ. ಮತ್ತೆ ಮನೆಯವರಿಂದ ಬೈಗುಳ ಎದುರಿಸುವ ಪರಿಸ್ಥಿತಿ ಒದಗಿ ಬಂದಿದೆ. ಇನ್ನು ರಾಕಿಗೆ ಬೇಡ ಬೇಡ ಸತ್ಯಗೆ ಏನು ಹೇಳದೇ ಎಲ್ಲಿಗೂ ಕೂಡಾ ಹೋಗುವುದು ಬೇಡ ಎಂದು ಸ್ನೇಹಿತರು ಹೇಳುತ್ತಾ ಇರುತ್ತಾರೆ.

ನಾವು ಹೋದರೆ ಸತ್ಯಗೆ ಅಪಾಯ ಆಗುತ್ತದೆ ಎಂಬುವುದು ಆಕೆಯ ಗೆಳೆಯರ ಕಳಕಳಿ ಕೂಡ. ಆದರೆ ರಾಕೇಶ್ ಹಠ ಬಿಡುತ್ತಿಲ್ಲ. ಹಠ ಬಿಡದ ರಾಕೇಶ್, ರಿತುಳನ್ನು ಹೇಗಾದರೂ ಮಾಡಿ ನೋಡಲೇಬೇಕು ಎಂದು ಕಣ್ಣೀರು ಹಾಕಿದ್ದಾನೆ. ಬಳಿಕ ಆತನ ಗೆಳೆಯರು ಸತ್ಯ ಬಳಿ ಹೇಳದೇ ಮನೆ ಬಳಿ ಕರೆದುಕೊಂಡು ಹೋಗುತ್ತಾರೆ. ಇನ್ನೂ ರಿತುಗಾಗಿ ಮನೆಯ ಹಿಂದೆ ಕಾಯುತ್ತಾ ಇರುವಾಗ ರಿತು ಕಿಟಕಿ ಬಳಿ ಬಂದು ನೋಡುತ್ತಾಳೆ. ರಾಕೇಶ್‌ನ ನೋಡಿ ರಿತು ಓಡಿ ಬರುತ್ತಾಳೆ.

Kannada serial satya written updated on 24th april

ಮನೆಯಲ್ಲಿ ಇಷ್ಟೆಲ್ಲ ನಡೆದರೂ ನನ್ನ ಮೇಲೆ ಪ್ರೀತಿ ಕಡಿಮೆ ಆಗಲಿಲ್ಲ ಅಲ್ವಾ? ಎಂದು ರಿತು, ರಾಕೇಶ್ ಬಳಿ ಕೇಳುತ್ತಾಳೆ. ನಿನ್ನ ಮೇಲೆ ಹುಚ್ಚು ಪ್ರೀತಿ ಇವನಿಗೆ. ನಮ್ಮ ಮಾತು ಕೇಳದೇ ನಿನ್ನ ನೋಡಲು ಬಂದಾಗಲೇ ತಿಳಿಯಲಿಲ್ವಾ? ಎಂದು ರಾಕೇಶನ ಸ್ನೇಹಿತರು ಹೇಳುತ್ತಾರೆ. ಇದನ್ನು ಕೇಳಿದ ರಿತುಗೆ ಬಹಳ ಬೇಸರ ಆಗುತ್ತದೆ.

ನನ್ನ ತಂದೆಗೆ ನಮ್ಮಿಬ್ಬರ ಪ್ರೀತಿ ನೋಡಿ ಸಹಿಸಲು ಆಗುತ್ತಿಲ್ಲ. ಹಾಗಿದ್ದ ಮೇಲೂ ನಮ್ಮ ಇಬ್ಬರ ಜೋಡಿ ನೋಡಲು ಯಾರಿಂದ ಕೂಡ ಸಾಧ್ಯ ಆಗುತ್ತಿಲ್ಲ ಎಂದಾಗ ರಾಕೇಶ್ ಸಮಾಧಾನದ ಮಾತು ಆಡುತ್ತಾನೆ . ಇನ್ನು ರಿತು ಹಾಗೂ ರಾಕೇಶ್ ಮಾತನಾಡುತ್ತಾ ಇರುವುದನ್ನು ನೋಡಿದ ಸೀತಾ ಕಿಡಿ ಕಾರುತ್ತಾಳೆ. ಆ ಕೂಡಲೇ ರಾಕೇಶ್ ಹಾಗೂ ಆಕೆಯ ಗೆಳೆಯರು ಅಲ್ಲಿಂದ ಓಡಿ ಹೋಗುತ್ತಾರೆ.

ಸೀತಾ ನೋಡಿ ರಾಕೇಶ್ ಸ್ನೇಹಿತರು ಎಸ್ಕೇಪ್

ಇನ್ನು ರಿತುನ ಕರೆದುಕೊಂಡು ಬಂದ ಸೀತಾ ಮನೆ ಮಂದಿಯನ್ನು ಎಲ್ಲರನ್ನೂ ಕರೆಯುತ್ತಾಳೆ. ಆಗ ರಿತುಗೆ ಬಹಳ ಭಯ ಆಗುತ್ತದೆ. ನನ್ನ ಎಲ್ಲಾ ವಿಚಾರ ತಂದೆಗೆ ಹೇಳಿ ಎಲ್ಲಿ ತನಗೆ ಬೈಯ್ಯುವಂತೆ ಮಾಡಿ ಬಿಡುತ್ತಾರೋ ಎಂದು ಯೋಚನೆ ಮಾಡುತ್ತಾಳೆ. ಇನ್ನು ಲಕ್ಷ್ಮಣ ಮಾತ್ರ ರಿತು ನಮ್ಮ ಕುಟುಂಬದ ಮರ್ಯಾದೆ ತೆಗೆದು ಹಾಕುತ್ತಾಳೆ ಎಂದೆಲ್ಲ ಹೇಳುತ್ತ ಇದ್ದಾರೆ.

Kannada serial satya written updated on 24th april

ಸತ್ಯಳನ್ನು ಕಟುವಾಗಿ ನಿಂದಿಸಿದ ರಾಕೇಶ್

ಸತ್ಯ ತನ್ನ ಗಂಡನ ಮುಖ ನೋಡುತ್ತಲೇ ಇರುತ್ತಾಳೆ. ಆಗ ಸೀತಾ ಚೆನ್ನಾಗಿ ಬೈಯ್ಯುತ್ತಾಳೆ. ಈ ಹುಡುಗಿಯಿಂದ ಎಲ್ಲಾ ಆಗಿದ್ದು ಸತ್ಯ ಬೆಂಬಲ ಇಲ್ಲದೇ ಏನು ನಡೆಯುವುದಿಲ್ಲ. ಅದಕ್ಕಾಗಿಯೇ ಆ ಹುಡುಗರು ಬಂದು ಇಲ್ಲಿ ರಿತು ಬಳಿ ಮಾತನಾಡಿದ್ದಾರೆ, ಎಂದಾಗ ಲಕ್ಷ್ಮಣ ದುರುಗುಟ್ಟಿಕೊಂಡು ಸತ್ಯ ಮುಖ ನೋಡುತ್ತಾನೆ.

ರಾಕೇಶ್‌ಗೆ ತಿಳಿ ಹೇಳಿದ ಸತ್ಯ

ಇನ್ನೂ ಸತ್ಯ, ರಾಕೇಶ್‌ಗೆ ಕರೆ ಮಾಡಿ ಆತ ಮತ್ತೆ ಬಂದಿರುವುದರ ಬಗ್ಗೆ ಸಮಾಧಾನವಾಗಿ ಪ್ರಶ್ನೆ ಮಾಡುತ್ತಾಳೆ. ಬಳಿಕ ಆಕೆ ರಾಕೇಶ್‌ಗೆ ಬುದ್ದಿ ಮಾತನ್ನು ಹೇಳಿದಾಗ ರಾಕೇಶ್ ತನ್ನ ತಪ್ಪಿನ ಅರಿವಾಗಿ ಸುಮ್ಮನೆ ಕ್ಷಮೆ ಕೇಳುತ್ತಾನೆ. ಇನ್ನು ಸತ್ಯ ಅಷ್ಟು ಸಮಾಧಾನದಿಂದ ಮಾತನಾಡಿರುವುದನ್ನು ಯಾರು ಕೇಳಿಯೇ ಇರಲಿಲ್ಲ. ಮುಂದೇನು ಕಾದು ನೋಡಬೇಕಿದೆ.

More from Filmibeat

English summary
Kannada serial satya written updated on 24th april. here is detials about Rakesh once again came to meet rithu. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X