Sathya Serial: ಸತ್ಯ-ಕಾರ್ತಿಕ್ ನಡುವೆ ಜಗಳ
ಸತ್ಯ ಧಾರವಾಹಿ ಅದ್ಭುತವಾಗಿ ಮೂಡಿ ಬರುತ್ತಿದ್ದು ನೋಡುಗರ ಮನ ಗೆಲ್ಲುವ ಹಾಗೆ ಮಾಡುತ್ತಿದೆ. ಇದೀಗ ಸತ್ಯ ಹುಟ್ಟುಹಬ್ಬಕ್ಕೆ ಕಾರ್ತಿಕ್ ಸರ್ಪ್ರೈಸ್ ನೀಡಿದ್ದಾನೆ. ಇದರಿಂದ ಸತ್ಯ ಬಹಳ ಖುಷಿ ಪಡುತ್ತಾಳೆ. ಎಲ್ಲರೂ ನನ್ನ ಬರ್ತಡೇ ಗೆ ವಿಶ್ ಮಾಡಿದರು ಆದರೆ ನನ್ನ ಗಂಡ ಇನ್ನೂ ವಿಶ್ ಮಾಡಿಯೇ ಇಲ್ಲ ಎಂದು ಹೇಳಿ ಬೇಸರ ಪಟ್ಟುಕೊಳ್ಳುತ್ತಾ ಇದ್ದಳು ಆದರೆ ಕಾರ್ತಿಕ್ ಮಾತ್ರ ಆಕೆಗೆ ಸರ್ಪ್ರೈಸ್ ಆಗಿ ಬರ್ತ್ ಡೇ ಆಚರಣೆ ಮಾಡುವುದನ್ನು ನೋಡಿ ಕಾರ್ತಿಕ್ ಮೇಲೆ ಸತ್ಯಾಗೆ ಇರುವ ಪ್ರೀತಿ ಇನ್ನೂ ಹೆಚ್ಚಾಗಿದೆ.
ಸತ್ಯ ಕಾರ್ತಿಕ್ ಬಳಿ ಹೇಳುತ್ತಾಳೆ ನನಗೆ ಇವತ್ತು ಬಹಳ ಖುಷಿ ಆಗುತ್ತಿದೆ. ಬೆಳಗ್ಗೆಯಿಂದ ನೀನು ನನಗೆ ವಿಶ್ ಮಾಡಿಲ್ಲ ಎಂದು ಬಹಳ ಕೋಪ ಬರುತ್ತಿತ್ತು ಆದರೆ ನೀನು ನನ್ನ ಬರ್ತ್‌ಡೇ ಆಚರಣೆ ಮಾಡಿದ ವೇಳೆ ನನಗೆ ಎಲ್ಲಾ ಮರೆತು ಹೋಯಿತು ಎಂದು ಹೇಳುತ್ತಾಳೆ ಇದನ್ನು ಕೇಳಿದ ಕಾರ್ತಿಕ್‌ಗೆ ಖುಷಿ ಆಗುತ್ತದೆ. ಬಳಿಕ ಕಾರ್ತಿಕ್‌ಗೆ ಧನ್ಯವಾದ ಹೇಳುತ್ತಾಳೆ. ತಾನು ಎನಿಸದ ಹಾಗೆ ಬರ್ತ್ ಡೇ ಸರ್ಪ್ರೈಸ್ ನೀಡಿರುವುದು ನನಗೆ ಬಹಳ ಸಂತೋಷ ಆಗುತ್ತಿದೆ ಎಂದು ಹೇಳುತ್ತಾಳೆ.

ಗಿಫ್ಟ್ ಕೊಡದ ಕಾರ್ತಿಕ್, ಸತ್ಯಗೆ ಬೇಸರ
ಇನ್ನೂ ಕಾರ್ತಿಕ್ ಜೊತೆ ಗಿಫ್ಟ್ ಕೇಳುತ್ತಾಳೆ ಸತ್ಯ. ಇಷ್ಟೆಲ್ಲ ಅರೇಂಜ್ ಮೇಂಟ್ ಮಾಡಿರುವುದು ನನಗೆ ಬಹಳ ಖುಷಿನೇ ಆದರೆ ನನ್ನ ಗಿಫ್ಟ್ ಎಲ್ಲಿ ಎಂದು ಕೇಳುತ್ತಾಳೆ. ಆದರೆ ಕಾರ್ತಿಕ್ ಮಾತ್ರ ಏನು ಗಿಫ್ಟ್ ಕೊಡದೇ ಇದ್ದಿದ್ದು ನೋಡಿ ಸತ್ಯ ಬೇಸರ ಪಟ್ಟುಕೊಂಡು ಇದ್ದಾಳೆ ನನಗೆ ಗಿಫ್ಟ್ ಬೇಕೆ ಬೇಕು ಎಂದು ಹಠ ಹಿಡಿಯುತ್ತಾಳೆ. ಬಳಿಕ ನಗುತ್ತಾ ಕಾರ್ತಿಕ್ ನನ್ನು ತಬ್ಬಿಕೊಳ್ಳುತ್ತಾಳೆ ಇದನ್ನು ನೋಡಿದ ಕಾರ್ತಿಕ್ ತಬ್ಬಿಬ್ಬು ಆದರೂ ಸತ್ಯ ಮಾತ್ರ ಕಾರ್ತಿಕ್ ನನ್ನು ತಬ್ಬಿ ನನಗೆ ಗಿಫ್ಟ್ ಬೇಕೆ ಬೇಕು ಎಂದು ಹೇಳುತ್ತಾಳೆ. ಇನ್ನೂ ಈ ವೇಳೆ ಕೂಡ ಸತ್ಯ ಮತ್ತು ಕಾರ್ತಿಕ್ ಜಗಳ ಆಡಿಕೊಂಡು ನೀನು ಗಂಡಸೇ ಅಲ್ಲ ಎಂದು ಸತ್ಯ ಹೇಳುತ್ತಾಳೆ.

ಸತ್ಯ ಮಾತಿನಿಂದ ಕಾರ್ತಿಕ್‌ಗೆ ಸಿಟ್ಟು
ನಾಲ್ಕು ಜನರಿಗೆ ಹೊಡೆಯುವಷ್ಟು ತಾಕತ್ತು ನಿನಗೆ ಇಲ್ಲ ಎಂದು ಹೇಳುತ್ತಾಳೆ ಇದನ್ನು ಕೇಳಿದ ಕಾರ್ತಿಕ್ ಗೆ ಬಹಳ ಕೋಪ ಉಕ್ಕಿ ಬರುತ್ತದೆ. ಕಾರ್ತಿಕ್ ಆತನ ಗೆಳೆಯನಿಗೆ ಕರೆ ಮಾಡಿ ಹೇಳುತ್ತಾನೆ ನಾಳೆ ನಾನು ಸತ್ಯ ದೇವಸ್ಥಾನ ಕ್ಕೆ ಹೋಗುತ್ತಾ ಇದ್ದೇವೆ ನೀನು ಹೇಗಾದರೂ ಮಾಡಿ ನಾಲಕ್ಕು ಬಾಡಿಗೆ ರೌಡಿಗಳನ್ನು ಬಿಡು ನಾನು ಅವರನ್ನು ಹೊಡೆದು ನಾನು ಏನು ಅಂತ ಸತ್ಯಗೆ ಅರ್ಥ ಮಾಡಿಸಬೇಕು ಎಂದು ಹೇಳುತ್ತಾನೆ ಆದರೆ ಕಾರ್ತಿಕ್ ಗೆಳೆಯನಿಗೆ ಎನು ಹೇಳಬೇಕೋ ತಿಳಿಯದೇ ಸುಮ್ಮನೆ ಆಗುತ್ತಾನೆ. ಕೊನೆಗೆ ಆಯಿತು ಎಂದು ಒಪ್ಪಿಕೊಳ್ಳುತ್ತಾನೆ.

ದಿವ್ಯಾಗೆ ತಪ್ಪದ ಕಿರಿಕಿರಿ
ಇನ್ನು ದಿವ್ಯಾಗೆ ಮಾತ್ರ ಇದೀಗ ಅತ್ತೆ ಕಾಟ. ಬಾಲ ಮತ್ತು ನಿನ್ನ ನಡುವೆ ಎನು ಸರಿ ಇಲ್ಲ.. ಇದ್ದಿದ್ದರೆ ಈಗ ನನಗೆ ಏನಾದರು ಶುಭ ಸಮಾಚಾರ ಬರುತ್ತಿತ್ತು. ಎಂದೆಲ್ಲ ಹೇಳಿದಾಗ ದಿವ್ಯ ಗೆ ಅರ್ಥ ಆಗುವುದು ಇಲ್ಲ. ದಿವ್ಯ ಅತ್ತೆಯ ಬಳಿ ಏನದು ಎಂದು ಕೇಳುತ್ತಾಳೆ ಆಗ ದಿವ್ಯ ಅತ್ತೆ ಹೇಳುತ್ತಾಳೆ. ನೀವು ನಮ್ಮನ್ನು ಅಜ್ಜಿ ತಾತ ಮಾಡಿದರೆ ನಿಮ್ಮ ಮಾವನ ಮನಸ್ಸು ಬೇಗ ಕರಗಿ ಹೋಗುತ್ತದೆ ನೀವು ಅದಕ್ಕೂ ಮೀನ ಮೇಷ ಎಣಿಸುತ್ತಾ ಇದ್ದೀರಾ ಎಂದಾಗ ದಿವ್ಯ ಹೇಳುತ್ತಾಳೆ. ನಾವು ಹೀಗೆ ಇದ್ದೇವೆ ಇನ್ನೂ ಮಕ್ಕಳು ಆದರೆ ಈ ಕೊಂಪೆಯಲ್ಲಿ ಹೇಗೆ ಮಗು ಸಾಕಿಕೊಂಡು ಇರುವುದು. ಮಗು ಹುಟ್ಟಿಸಿದ ಬಳಿಕ ಅದಿಕ್ಕೆ ಒಳ್ಳೆಯ ಎಜುಕೇಶನ್ ಇದನ್ನೆಲ್ಲ ಕ್ಕೊಡಿಸಬೇಕು ಎಂದು ಹೇಳಿದಾಗ ಮಕ್ಕಳು ಹುಟ್ಟಲಿ ಆಮೇಲೆ ನೋಡು ಹೇಗೆ ಎಲ್ಲಾ ಚೇಂಜ್ ಆಗುತ್ತದೆ ಎಂದು ಆಮಿಷ ಒಡ್ಡುತ್ತಾಳೆ. ಇನ್ನು ರಿತು ಸತ್ಯ ಬಳಿ ಬಂದು ಹೇಳುತ್ತಾಳೆ ಅತ್ತಿಗೆ ನಾನು ಇನ್ನೂ ಕೆಲಸ ಮಾಡಿ ಓದುತ್ತೇನೆ ಎಂದು ಹೇಳುತ್ತಾಳೆ ಇದನ್ನು ಕೇಳಿ ಸತ್ಯ ಗೆ ಒಮ್ಮೆ ಶಾಕ್ ಆದರೂ ಬಳಿಕ ರಿತು ಬಳಿ ಯಾಕೆ ಎಂದು ಕೇಳುತ್ತಾಳೆ.

ರಿತು ಕೆಲಸಕ್ಕೆ ಹೋಗಲು ಸತ್ಯ ಒಪ್ಪಿಗೆ ಕೊಡುತ್ತಾಳ?
ಆದರೆ ರಿತು ಮಾತ್ರ ನಾನು ಕೆಲಸ ಮಾಡುತ್ತಾ ಓದಬೇಕು ಅಂದುಕೊಂಡು ಇದ್ದೇನೆ ಅತ್ತಿಗೆ ಮನೆಗೆ ನಿಮ್ಮ ಸಪೋರ್ಟ್ ಮೇಕು ಎಂದು ಹೇಳುತ್ತಾಳೆ. ಬಳಿಕ ಹೇಳುತ್ತಾಳೆ ನಾನು ನಮ್ಮ ಆಫೀಸ್ ನಲ್ಲಿ ಕೆಲಸ ಮಾಡುವುದು ಇಲ್ಲ. ಬೇರೆ ಆಫೀಸ್‌ನಲ್ಲಿ ಕೆಲಸ ಮಾಡಬೇಕು ಅಂದುಕೊಂಡು ಇದ್ದೇನೆ ನನಗೆ ನೋವು ಸಪೋರ್ಟ್ ಮಾಡಿ ಅತ್ತಿಗೆ. ಬೇರೆ ಯಾರ ಬಳಿ ನಾನು ಈ ವಿಚಾರ ಪ್ರಸ್ತಾಪ ಮಾಡುತ್ತಿಲ್ಲ ಎಂದು ಹೇಳುತ್ತಾಳೆ. ಆದರೆ ಇದಕ್ಕೆ ಸತ್ಯ ಮಾತ್ರ ಏನು ಹೇಳದೆ ಮೌನ ವಹಿಸುತ್ತ ಇರುತ್ತಾಳೆ.


Click it and Unblock the Notifications











