ಇಕ್ಕಟ್ಟಿಗೆ ಸಿಲುಕಿದ ಸತ್ಯ: ರಿತು ಮದುವೆ ನಿಲ್ಲಿಸುತ್ತಾಳಾ ಊರ್ಮಿಳಾ?

By Poorva

ಸತ್ಯ ಬಹಳ ಇಕ್ಕಟ್ಟಿಗೆ ಸಿಲುಕಿದ್ದಾಳೆ. ರಿತುಗೆ ಬೇರೆ ಮದುವೆ ಮಾಡಲು ಎಲ್ಲಾ ತಯಾರಿಯನ್ನು ಲಕ್ಷ್ಮಣ ಇದೀಗ ಶುರು ಮಾಡಿಕೊಂಡಿದ್ದಾನೆ. ಅದಕ್ಕೆ ಸೀತಾ ಕೂಡ ಸಪೋರ್ಟ್ ಮಾಡುತ್ತಾ ಇದ್ದಾಳೆ. ರಿತುಗೆ ಮದುವೆ ಮಾಡಿ ಕಳುಹಿಸಿ ಬಿಟ್ಟರೆ ಬೇರೆ ಯಾವ ಕಾರಣಕ್ಕೂ ಸತ್ಯ ಗೆಳೆಯರು ಇಲ್ಲಿಗೆ ಬರಲು ಸಾಧ್ಯ ಇಲ್ಲ. ಎಲ್ಲಾ ಸರಿ ಹೋಗುತ್ತೆ ಅಂದುಕೊಂಡಿದ್ದಾನೆ ಲಕ್ಷ್ಮಣ.

ರಾಕೇಶನಿಗೆ ಮದುವೆ ಮಾಡಿ ಕೊಟ್ಟು ಆ ಹಾಳು ಕೊಂಪೆಗೆ ರಿತುಳನ್ನು ಹೇಗಪ್ಪಾ ಕಳುಹಿಸುವುದು ಎಂದು ಲಕ್ಷ್ಮಣ ಯೋಚನೆ ಮಾಡುತ್ತಿದ್ದಾನೆ. ಮಗಳಿಗಾಗಿ ಒಳ್ಳೆ ಹುಡುಗನನ್ನು ಹುಡುಕಿ ಮದುವೆ ಮಾಡುವ ಲೆಕ್ಕಾಚಾರ ನಡೀತಿದೆ. ಆದರೆ ಸತ್ಯ- ಕಾರ್ತಿಕ್‌ಗೆ ಇದು ಇಷ್ಟವಿಲ್ಲ. ಆದರೆ ರಿತು ತಂದೆಯ ನಿರ್ಧಾರಕ್ಕೆ ಅಡ್ಡ ಹೋಗಲು ಸಾಧ್ಯವಾಗುತ್ತಿಲ್ಲ.

Kannada serial satya written updated on 27th april

ರಿತು ಸ್ಥಿತಿ ಕಂಡು ಕಾರ್ತಿಕ್ ಬೇಸರ

ಇನ್ನು ಕಾರ್ತಿಕ್ ಮಾತ್ರ ಸತ್ಯ ಬಳಿಗೆ ಬಂದು ಏನಿದು ಸತ್ಯ? ರಿತುಗೆ ಮದುವೆ ಅಂತೆ. ಅದು ಇಷ್ಟು ಚಿಕ್ಕ ಪ್ರಾಯದಲ್ಲಿ ಮದುವೆ ಮಾಡಲು ಹೊರಟಿದ್ದಾರೆ. ಇದೆಲ್ಲ ನನಗೆ ಇಷ್ಟ ಆಗುತ್ತಿಲ್ಲ ಎಂದು ಹೇಳಿದಾಗ ಸತ್ಯ ಹೇಳುತ್ತಾಳೆ, ನೀನೇ ಇಷ್ಟು ಒದ್ದಾಡುತ್ತಾ ಇರಬೇಕಾದರೆ ರಿತು ಇನ್ನೆಷ್ಟು ಒದ್ದಾಟ ಮಾಡುವುದಿಲ್ಲ ಎನ್ನುತ್ತಾಳೆ. ಅದಕ್ಕೆ ಕಾರ್ತಿಕ್ ಹಾಗೂ ಸತ್ಯ ಇಬ್ಬರು ರಿತು ಕೋಣೆಗೆ ಹೋಗುತ್ತಾರೆ

ರಿತುಗೆ ಸಮಾಧಾನ ಮಾಡಿದ ಸತ್ಯ

ಅಲ್ಲಿ ರಿತು ಅಳುತ್ತಾ ಇರುತ್ತಾಳೆ. ಕಾರ್ತಿಕ್‌ನನ್ನು ನೋಡಿದ ಕೂಡಲೇ ಅಣ್ಣ ಎಂದು ಅತ್ತು ತಬ್ಬಿಕೊಂಡು ಜೋರಾಗಿ ಅಳುತ್ತಾಳೆ. ಆ ಕೂಡಲೇ ಕಾರ್ತಿಕ್ ಆಕೆಯನ್ನು ಸಮಾಧಾನ ಮಾಡುತ್ತಾನೆ. ಹಾಗೆಯೇ ಸತ್ಯ ಆಕೆಗೆ ಬುದ್ದಿ ಮಾತನ್ನು ಹೇಳುತ್ತ ಇರುತ್ತಾಳೆ. ಮನೆಯಲ್ಲಿ ಇಷ್ಟೆಲ್ಲ ನಡೆಯುತ್ತಾ ಇರಬೇಕಾದರೆ ನೀನು ಈ ರೀತಿ ನಡೆದುಕೊಂಡರೆ ಹೇಗೆ? ಯಾವುದೇ ಕಾರಣಕ್ಕೂ ಇಂತಹ ನಿರ್ಧಾರ ತೆಗೆದುಕೊಳ್ಳುವುದು ಬೇಡ, ನಾನೇನು ನಿಮ್ಮ ಪ್ರೀತಿಯನ್ನು ತ್ಯಾಗ ಮಾಡಿ ಎಂದು ಹೇಳುತ್ತಿಲ್ಲ. ಆದರೆ ಸ್ವಲ್ಪ ದಿನದವರೆಗೆ ತಡೆಯಿರಿ ಎಂದು ಹೇಳುತ್ತಾಳೆ.

Kannada serial satya written updated on 27th april

ರಿತುಗೆ ಧೈರ್ಯ ತುಂಬಿದ ಕಾರ್ತಿಕ್

ಕಾರ್ತಿಕ್ ಹಾಗೂ ಸತ್ಯ ರಿತುಗೆ ಧೈರ್ಯ ಹೇಳಿ ತಮ್ಮ ರೂಮಿಗೆ ಬಂದು ಮಾತನಾಡುತ್ತಾ ಇರುತ್ತಾರೆ. ರಿತು ಮದುವೆ ತಡೆಯಲು ಚಿಕ್ಕಮ್ಮನಿಂದ ಮಾತ್ರ ಸಾಧ್ಯ. ನೀನು ಚಿಕ್ಕಮ್ಮ ಬಳಿ ಮಾತನಾಡು ಸತ್ಯ ಎಂದು ಹೇಳುತ್ತಾನೆ ಕಾರ್ತಿಕ್. ಇದನ್ನು ಕೇಳಿದ ಸತ್ಯ ಮಾತ್ರ ಸುಮ್ಮನೆ ಇರುತ್ತಾಳೆ . ಹಾಗೆಯೇ ಕೊಂಚ ಭಯ ಪಟ್ಟುಕೊಂಡು ಇರುತ್ತಾಳೆ. ಏನು ಮಾಡುವುದು ಎಂದು ದಿಕ್ಕು ತೋಚದ ಹಾಗೆ ಆಗುತ್ತದೆ.

ಊರ್ಮಿಳಾಗೆ ಸಮಾಧಾನ ಮಾಡಿದ ಸತ್ಯ

ಇನ್ನು ಸತ್ಯ ಕೊಂಚ ಧೈರ್ಯ ಮಾಡಿ ಊರ್ಮಿಳಾ ಬಳಿ ಹೋಗುತ್ತಾಳೆ. ಊರ್ಮಿಳಾ ಏನೋ ಯೋಚನೆ ಮಾಡುತ್ತಾ ಮಹಡಿ ಮೇಲೆ ನಿಂತುಕೊಂಡು ಇರುತ್ತಾಳೆ. ಸತ್ಯ, ಊರ್ಮಿಳಾ ಬಳಿ ಮಾತನಾಡಿದಾಗ ಆಕೆ ಇದ್ದ ಸಿಟ್ಟನ್ನು ತೋರಿಸಿಕೊಂಡು ಸುಮ್ಮನೆ ಆಗುತ್ತಾಳೆ. ಆ ಬಳಿಕ ಸತ್ಯ ಹೇಳಿದ ಮಾತನ್ನು ಕೇಳಿಸಿಕೊಳ್ಳುತ್ತಾಳೆ. ರಿತು ಬೇರೆ ಯಾರನ್ನೋ ಇಷ್ಟು ಚಿಕ್ಕ ವಯಸ್ಸಲ್ಲಿ ಮದುವೆ ಆದರೆ ಬಹಳ ಕಷ್ಟ ಇದೆ. ಅಥವಾ ಆಕೆಯ ಜೀವಕ್ಕೆ ಹಾನಿ ಆಗಬಹುದು ಎಂದೆಲ್ಲ ಹೇಳಿದಾಗ ಊರ್ಮಿಳಾ ಮಾತ್ರ ತನ್ನ ದುಃಖವನ್ನು ಸತ್ಯ ಬಳಿ ಹೇಳುತ್ತಾಳೆ.

Kannada serial satya written updated on 27th april

ಗಂಡನ ಬಳಿ ಮಾತನಾಡಲು ಹೊರಟ ಊರ್ಮಿಳಾ

ಇನ್ನು ಸತ್ಯ, ಊರ್ಮಿಳಾ ಬಳಿ ಹೇಳುತ್ತಾಳೆ. ಈಗ ಉಳಿದಿರುವುದು ನಿಮ್ಮ ಮಾತಿನಿಂದ. ನಿಮ್ಮ ಕೈಯಿಂದ ಮಾತ್ರ ಅದು ಸಾಧ್ಯ. ನೀವು ಮದುವೆ ನಿಲ್ಲಿಸಬೇಕು. ಅಥವಾ ಮದುವೆಯನ್ನು ಮುಂದಕ್ಕೆ ಹಾಕಬೇಕು ಎಂದು ಹೇಳುತ್ತಾಳೆ. ಇದನ್ನು ಕೇಳಿದ ಊರ್ಮಿಳಾ ಗಂಡನ ಬಳಿ ಮಾತನಾಡಲು ಮುಂದಾಗುತ್ತಾಳೆ. ಮುಂದೇನು ಅನ್ನೋದನ್ನು ಕಾದು ನೋಡಬೇಕಿದೆ.

More from Filmibeat

English summary
Kannada serial satya written updated on 27th April. Here is Detials About Lakshman Planning For daughter Rithu's Marriage. Sathya is trying to stop marriage. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X