Sathya serial: ರೌಡಿಗಳ ವಿರುದ್ದ ರೊಚ್ಚಿಗೆದ್ದ ಕಾರ್ತಿಕ್; ಸತ್ಯಗೆ ಶಾಕ್!

By Poorva

ಕಾರ್ತಿಕ್ ಸತ್ಯಳನ್ನು ದೇವಾಲಯಕ್ಕೆ ಕರೆದುಕೊಂಡು ಬರುತ್ತಾನೆ. ಇದನ್ನು ಕಂಡ ಸತ್ಯಗೆ ಆಶ್ಚರ್ಯ ಆಗುತ್ತದೆ. ಏನು ಇವತ್ತು ದೇವಸ್ಥಾನಕ್ಕೆ ಕರೆದುಕೊಂಡು ಬಂದಿದ್ದೀರಾ ಎಂದು ಕಾರ್ತಿಕ್ ಬಳಿ ಸತ್ಯ ಕೇಳಿದಾಗ ಯಾಕೆ ದೇವಾಲಯಕ್ಕೆ ಕರೆದುಕೊಂಡು ಬರಬಾರದ ಎಂದು ಕೇಳುತ್ತಾನೆ. ಅದಕ್ಕೆ ಸತ್ಯ ಏನು ದೇವರಿಗೆ ಸ್ಪೆಷಲ್ ಅಪ್ಲಿಕೇಶನ್ ಏನಾದರು ಇದೆಯಾ ಎಂದು ಹೇಳಿದಾಗ ಕಾರ್ತಿಕ್ ಕೊಂಚ ಗಲಿಬಿಲಿಗೊಳ್ಳುತ್ತಾ ಇರುತ್ತಾನೆ.

ಇನ್ನು ಅಪ್ಲಿಕೇಶನ್ ಹಾಕುತ್ತೇನೆ ಎಂದು ಹೇಳಿದೆ ಅಲ್ಲ ಏನದು ಎಂದು ಕೇಳಿದಾಗ ಕಾರ್ತಿಕ್ ಅದಾವುದನ್ನು ಹೇಳುವುದಿಲ್ಲ. ಎಲ್ಲ ನಿನಗೆ ತಿಳಿದಿದೆ, ಆದರೆ ನೀನು ಯಾಕೆ ಅರಳಿಕಟ್ಟೆ ಮೇಲೆ ಕುಳಿತುಕೊಳ್ಳಬಾರದು ಎಂದು ರೇಗಿಸುತ್ತಾನೆ. ಇದನ್ನು ಕೇಳಿದ ಸತ್ಯಗೆ ಕೊಂಚ ಕೋಪ ಬರುತ್ತದೆ. ಕಾರ್ತಿಕ್ ಸತ್ಯ ಬಳಿ ಏನು ಹೇಳಲು ಬಂದರೂ ಅದಕ್ಕೆ ನಗು ಮಾತ್ರ ಉತ್ತರ. ಕಾರ್ತಿಕ್ ಎಷ್ಟೇ ರೌಡಿಗಳು ಬಂದರು ಅವರನ್ನು ನಾನು ಎದುರಿಸುತ್ತೇನೆ ಎಂದು ಹೇಳಿದಾಗ ಸತ್ಯ ನಗುತ್ತಾ ಇರುತ್ತಾಳೆ

ಆಕೆಗೆ ಕಾರ್ತಿಕ್ ಏನು ಹೇಳಿದರು ಅದು ಕಾಮಿಡಿ ಮಾಡಿದ ಹಾಗೆ ಆಗುತ್ತಿತ್ತು. ಬಾಲ ಗೀತಾ ಬಳಿ ಗೀತಾ ಅವರೇ ನಿನ್ನೆ ದಿವ್ಯ ಬಳಿ ಏನೋ ಚರ್ಚೆ ಮಾಡುತ್ತಾ ಇದ್ದಿರಿ ಎಂದಾಗ ಗೀತಾ ಅದು ಹೆಂಗಸರ ವಿಚಾರ ನಿನಗೆ ಹೇಳಲು ಆಗುವುದಿಲ್ಲ ಎನ್ನುತ್ತಾಳೆ. ಬಾಲ ನಿಮ್ಮನ್ನು ಆಕ್ಟಿಂಗ್ ಮಾಡಲು ಕರೆದುಕೊಂಡು ಬಂದಿದ್ದೆ, ಆದರೆ ಏನು ಹೇಳುತ್ತ ಇಲ್ಲ ನೀವು ಎನ್ನುತ್ತಾನೆ. ನನಗೆ ಏನು ಕೊಟ್ಟಿಲ್ಲ ತಾನೇ ಎಂದಾಗ ಗೀತಾ ಬಾಲನಿಗೆ ವಾರ್ನಿಂಗ್ ಮಾಡುತ್ತಾಳೆ. ಬೇಡ ಬಾಲ ನನ್ನ ಬಳಿ.ಸರಿಯಾಗಿ ಮಾತನಾಡು ಇಲ್ಲ ಅಂದರೆ ಸರಿ ಇರಲ್ಲ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಬಾಲ ನಿಮಗೆ ಗುಟ್ಟಾಗಿ ಮಾತನಾಡಲು ಏನಿದೆ ನಿಮಗೆ ಕೆಲಸ ಮಾಡಿ ಎಂದೆಲ್ಲ ಹೇಳುವಾಗ ಗೀತಾ ಕೊಂಚ ಏರು ಧ್ವನಿಯಲ್ಲಿ ಬಾಲನ ಬಳಿ ಮಾತನಾಡುತ್ತಾಳೆ.

ಗೀತಾ ಮಾತಿಗೆ ಕಕ್ಕಾ ಬಿಕ್ಕಿ ಆದ ಬಾಲ

ಗೀತಾ ಮಾತಿಗೆ ಕಕ್ಕಾ ಬಿಕ್ಕಿ ಆದ ಬಾಲ

ಆಗ ಅಲ್ಲಿಗೆ ಬಂದ ದಿವ್ಯಳನ್ನು ನೋಡಿದ ಬಾಲ ಟ್ರ್ಯಾಕ್ ಚೇಂಜ್ ಮಾಡುತ್ತಾನೆ. ದಿವ್ಯ ಅತ್ತೆ ಬಳಿ ಬಂದು ಮಾವನನ್ನು ಹೇಗಾದರೂ ಮಾಡಿ ಒಪ್ಪಿಸುವಂತೆ ಹೇಳುತ್ತಾಳೆ. ಬಳಿಕ ನೀವು ಇಲ್ಲಿ ಸ್ವಲ್ಪ ದಿನ ಇದ್ದು ಹೋಗಿ ಎನ್ನುತ್ತಾಳೆ . ಈ ಮಾತನ್ನು ಕೇಳಿದ ದಿವ್ಯ ಕೊಂಚ ಶಾಕ್.ಆಗುತ್ತದೆ. ಆ ವೇಳೆ ಎಲ್ಲಾ ವಿವರವಾಗಿ ಬಾಲ ದಿವ್ಯ ಹೇಳುತ್ತಾನೆ.

ಗೀತಾ ಮಾತಿಗೆ ಶಾಕ್ ಆದ ದಿವ್ಯ

ಗೀತಾ ಮಾತಿಗೆ ಶಾಕ್ ಆದ ದಿವ್ಯ

ಇನ್ನು ದಿವ್ಯ ಅಲ್ಲಿಂದ ಹೊರಟು ಹೋಗುತ್ತಾಳೆ. ಕಾರ್ತಿಕ್ ಸತ್ಯ ಜೊತೆ ಇರುವ ವೇಳೆ ಮಂಜ ಕರೆ ಮಾಡುತ್ತಾನೆ. ಕಾರ್ತಿಕ್ ಗೆ ಕಾಲ್ ರಿಸೀವ್ ಮಾಡಿದರೆ ಸತ್ಯ ಎಲ್ಲಾ ಕೇಳಿಸಿಕೊಂಡು ಬಿಡುತ್ತಾಳೆ ಎನ್ನುವ ಭಯ ಅದಕ್ಕೆ ಸುಮ್ಮನೆ ಇರುತ್ತಾನೆ. ಇದನ್ನು ನೋಡಿದ ಸತ್ಯ ಯಾರದ್ದು ಕಾಲ್ ರಿಸೀವ್ ಮಾಡಿ ಎಂದು ಹೇಳಿದಾಗ ಕಾರ್ತಿಕ್ ಸುಮ್ಮನೆ ಆಗುತ್ತಾನೆ. ಬಳಿಕ ಅರ್ಚನೆ ಮಾಡಲು ಹೋಗುತ್ತಾರೆ. ಇನ್ನು ಕಾರ್ತಿಕ್ ದೇವರಿಗೆ ಪೂಜೆ ಮಾಡುತ್ತ ಇರುವಾಗ ಬಲಭಾಗದಲ್ಲಿ ಹೂವು ಬೀಳುತ್ತದೆ. ಅದನ್ನು ಕಾರ್ತಿಕ್ ಗೆ ಕೊಡುತ್ತಾರೆ. ಇನ್ನು ಕೀರ್ತನ ಆಫೀಸ್ ನಲ್ಲಿ ದೊಡ್ಡ ಮಸಲತ್ತೆ ಮಾಡುತ್ತಾ ಇದ್ದಾಳೆ .

ಕಾರ್ತಿಕ್ ವಿರುದ್ದ ಮಸಲತ್ತು ಮಾಡುತ್ತಿರುವ ಕೀರ್ತನ

ಕಾರ್ತಿಕ್ ವಿರುದ್ದ ಮಸಲತ್ತು ಮಾಡುತ್ತಿರುವ ಕೀರ್ತನ

ಕಾರ್ತಿಕ್ ನನ್ನು ಸಿಕ್ಕಿ ಹಾಕಿಸಲು ಈಕೆ ಸರ್ಕಸ್ ಮಾಡುತ್ತಾ ಇದ್ದಾಳೆ. ಇನ್ನು ಕೀರ್ತನ ಏನೇ ಮಾಡಿದರೂ ಕಾರ್ತಿಕ್ ಮಾತ್ರ ಅದೆಲ್ಲವನ್ನೂ ಮೆಟ್ಟಿ ನಿಲ್ಲಲು ಸಜ್ಜಾಗಿದ್ದಾನೆ. ಇನ್ನು ದೇವಾಲಯದಲ್ಲಿ ನಾಲ್ಕು ಮಂದಿ ಪೋಲಿಗಳು ಸತ್ಯಳನ್ನು ಕಂಡು ಏನೇನೋ ಕಾಮೆಂಟ್ಸ್ ಮಾಡುತ್ತಾ ಇರುತ್ತಾರೆ. ಇದನ್ನು ನೋಡಿದ ಸತ್ಯ ರೌಡಿಗಳ ಹತ್ತಿರ ಬಂದು ತರಾಟೆಗೆ ತೆಗೆದುಕೊಳ್ಳುವ ವೇಳೆ ಸತ್ಯ ಹೆಗಲಿಗೆ ಒಬ್ಬಾತ ಬಂದು ಕೈ ಹಾಕುತ್ತಾನೆ. ಇದನ್ನು ನೋಡಿದ ಸತ್ಯ ಸರಿಯಾಗಿ ಪೆಟ್ಟು ಕೊಡಬೇಕು ಎಂದುಕೊಂಡಾಗ ಕಾರ್ತಿಕ್ ಆ ರೌಡಿಗೆ ಸರಿಯಾಗಿ ಹೊಡೆಯುತ್ತಾನೆ. ಇದನ್ನು ನೋಡಿದ ಸತ್ಯ ಮಾತ್ರ ಶಾಕ್ ಆಗುತ್ತಾಳೆ .

More from Filmibeat

English summary
Kannada serial satya written updated on 27th January
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X