For Quick Alerts
  ALLOW NOTIFICATIONS  
  For Daily Alerts

  Sathya Serial: ಬಾಲನಿಂದ ಮೋಸ ಹೋದ ಜಗದೀಶ; ಕನಸಲ್ಲೂ ಮೋಸದ ಕನವರಿಕೆ

  By Poorva
  |

  ಸತ್ಯ ಧಾರವಾಹಿ ಅದ್ಭುತವಾಗಿ ಮೂಡಿ ಬಂದಿದ್ದು ನೋಡುಗರ ಮನ ತಣಿಸುತ್ತಿದೆ. ಇದೀಗ ಸತ್ಯ ದೊಡ್ಡಪ್ಪ ಮಾತ್ರ ಬಾಲನ ಮೋಸದ ಜಾಲದಲ್ಲಿ ಸಿಲುಕಿ ಹಾಕಿಕೊಂಡು ಎಲ್ಲಾ ಹಣವನ್ನು ಕಳೆದುಕೊಂಡು ಬೀಡಿ ಪಾಲಾಗುವ ಎಲ್ಲಾ ಲಕ್ಷಣ ಗೋಚರ ಆಗುತ್ತಿದೆ. ಮನೆಗೆ ಬಂದ ಬಾವನನ್ನು ನೋಡಿದ ಜಾನಕಿ ಆತನ ಬಳಿ ಇಲ್ಲಸಲ್ಲದ ಪ್ರಶ್ನೆಗಳನ್ನು ಕೇಳುತ್ತಾಳೆ. ಇದನ್ನು ಕೇಳಿದ ಸತ್ಯ ದೊಡ್ಡಪ್ಪಗೆ ಬಹಳ ಕೋಪ ಬರುತ್ತದೆ.

  ನಾನು ಏನು ಬೇಕಾದರೂ ಮಾಡಿಕೊಳ್ಳುತ್ತೇನೆ ಅದನ್ನೆಲ್ಲ ನೀನು ಕೇಳಬಾರದು ನನಗೆ ಅದು ಇಷ್ಟ ಇಲ್ಲ ಎಂದೆಲ್ಲ ಖಡಕ್ ಮಾತು ಆಡುತ್ತಾನೆ. ಆದರೂ ಜಾನಕಿ ಅಲ್ಲ ನನ್ನ ಮಾತು ಸ್ವಲ್ಪ ಅರ್ಥ ಮಾಡಿಕೊಳ್ಳಿ ನಾನು ಏತಕ್ಕೆ ಆ ಮಾತು ಹೇಳಿದೆ ಅಂದರೆ ಈಗಿನ ಕಾಲ ಸರಿ ಇಲ್ಲ, ಎಲ್ಲರೂ ನಮ್ಮನ್ನು ಮೋಸಗೊಳಿಸುವವರೆ ಅದಕ್ಕಾಗಿ ಹೇಳಿದೆ ಎಂದು ಹೇಳುತ್ತಾಳೆಮ ಇದನ್ನು ಕೇಳಿದ ಸತ್ಯ ದೊಡ್ಡಪ್ಪನಿಗೆ ಬಹಳ ಕೋಪ ಬರುತ್ತದೆ ಜಾನಕಿಗೆ ಬಾಯಿಗೆ ಬಂದ ಹಾಗೆ ಬೈದು ರೂಮಿನ ಒಳಗೆ ಹೋಗುತ್ತಾನೆ. ಇನ್ನು ಖುಷಿಯಿಂದ ಮನೆಗೆ ಬಂದ ಕಾರ್ತಿಕ್ ಸತ್ಯಳನ್ನು ಕರೆಯುತ್ತಾನೆ..

  ಸತ್ಯ ಎಂದು ಹೇಳಿದ ಕಾರ್ತಿಕ್ ಸತ್ಯಾಳನ್ನು ಖುಷಿಯಿಂದ ಬಾಚಿ ತಬ್ಬಿಕೊಳ್ಳಲು ಬರುತ್ತಾನೆ. ಆದರೆ ಬಳಿಕ ಏನೋ ನೆನಪಾಗಿ ಸುಮ್ಮನೆ ನಿಂತುಕೊಂಡು ಇರುತ್ತಾನೆ. ಬಳಿಕ ಸತ್ಯ ಬಳಿ ಕಾರ್ತಿಕ್ ಅಲ್ಲ ಸತ್ಯ ಅದು ಎಂದು ಹೇಳುತ್ತಾನೆ ಇದನ್ನು ಕೇಳಿದ ಸತ್ಯ ಮಾತ್ರ ಕಾರ್ತಿಕ್ ನನ್ನು ತಬ್ಬಿಕೊಳ್ಳುತ್ತಾಳೆ ಇದನ್ನು ನೋಡಿದ ಕಾರ್ತಿಕ್ ಗೆ ಬಾಯಿಯಿಂದ ಮಾತೇ ಬರದ ಹಾಗೆ ಆಗುತ್ತದೆ. ಇನ್ನು ಕಾರ್ತಿಕ್ ಮಾತ್ರ ಸತ್ಯ ನೀನು ಇಲ್ಲದೆ ನಾನು ಏನು ಆಗಿ ಬಿಡುತ್ತಿದ್ದೇನೋ, ನನಗೆ ಬಹಳ ಭಯ ಆಗಿ ಹೋಗಿತ್ತು ನಿನ್ನ ಋಣವನ್ನು ನಾನು ಹೇಗೆ ತೀರಿಸಲಿ ಎಂಬುವುದು ನನಗೆ ತಿಳಿಯುತ್ತಾ ಇಲ್ಲ, ನೀನು ನನ್ನ ಎಲ್ಲಾ ಗಂಡಾಂತರಗಳಿಂದ ಕಾಪಾಡಿ ಬಿಟ್ಟೆ ಎಂದು ಹೇಳುತ್ತಾನೆ

  ಇದನ್ನು ಕೇಳಿದ ಸತ್ಯ ಇದು ನನ್ನ ಕರ್ತವ್ಯ ಅದಕ್ಕೆ ಮಾಡಿದೆ ಇನ್ನೂ ಜಾಸ್ತಿ ಬಿಲ್ಡಪ್ ತೆಗೆದುಕೊಳ್ಳಬೇಡ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಕಾರ್ತಿಕ್ ಗೆ ಎನು ಹೇಳಬೇಕು ಎಂದು ತಿಳಿಯದೇ ಏನು ಕರ್ತವ್ಯನ ಎಂದು ಹೇಳುತ್ತಾ ಇರುತ್ತಾನೆ. ಇದನ್ನು ಕೇಳಿದ ಸತ್ಯ ನೀನು ನನ್ನ ಗಂಡ ನಿನ್ನ ಮೇಲೆ ನನಗೆ ಕಾನ್ಫಿಡೆನ್ಸ್ ಇದ್ದಿದ್ದರಿಂದ ಹಾಗೆ ಹೇಳಿದೆ. ಇನ್ನು ಪದೇ ಪದೇ ಸಿಕ್ಕಿ ಹಾಕಿಕೊಳ್ಳಲು ಹೋಗಬೇಡ, ನೀನು ಸತ್ಯನ ಗಂಡ ಸ್ವಲ್ಪನಾದರೂ ಬುದ್ದಿ ಉಪಯೋಗಿಸು ಎಂದು ಹೇಳುತ್ತಾಳೆ. ಇದನ್ನು ಕೇಳಿದ ಕಾರ್ತಿಕ್ ಜೋರಾಗಿ ನಗುತ್ತಾನೆ ಇದನ್ನು ನೋಡಿದ ಸತ್ಯ ಕೂಡ ನಗುತ್ತಾಳೆ.

  ಬಳಿಕ ಸತ್ಯಳನ್ನು ತಬ್ಬಿಕೊಳ್ಳುತ್ತಾನೆ ಕಾರ್ತಿಕ್. ಇನ್ನು ಸತ್ಯ ದೊಡ್ಡಪ್ಪ ಕನಸಲ್ಲಿ ನನ್ನ ಚೆಕ್ ಹೋಗಿ ಬಿಡ್ತು ನನ್ನ ಹಣ ಕೂಡ ಹೋಯಿತು, ಅಯ್ಯೋ ನನ್ನ ಮುಳುಗಿಸಿ ಬಿಟ್ಟ ಎಂದು ಅಳುತ್ತಾ ಇರುತ್ತಾನೆ. ಇದನ್ನು ನೋಡಿದ ಆತನ ಹೆಂಡತಿಗೆ ಭಯ ಆಗುತ್ತದೆ. ನಿದ್ದೆಯಿಂದ ಗಂಡನನ್ನು ಎಬ್ಬಿಸಿ ಏನಾಯಿತು ಯಾಕೆ ಹೀಗೆ ಆಡುತ್ತಾ ಇದ್ದೀರಾ, ಯಾವ ಚೆಕ್ ಯಾವ ಮೋಸ ಎಂದು ಕೇಳಿದಾಗ ಸತ್ಯ ದೊಡ್ಡಪ್ಪ ಹೆಂಡತಿ ಬಳಿ ನೀರು ಕೇಳುತ್ತಾನೆ. ಅಷ್ಟರಲ್ಲಿ ಅಲ್ಲಿಗೆ ಜಾನಕಿ ಕೂಡ ಬರುತ್ತಾಳೆ.

  ಹೆಂಡತಿಯನ್ನು ತರಾಟೆಗೆ ತೆಗೆದುಕೊಂಡ ಜಗದೀಶ

  ಹೆಂಡತಿಯನ್ನು ತರಾಟೆಗೆ ತೆಗೆದುಕೊಂಡ ಜಗದೀಶ

  ಜಗದೀಶನ ಹೆಂಡತಿ ಮಾತ್ರ ಸರಿಯಾಗಿ ಬಯ್ಯುತ್ತಾ ಇರುತ್ತಾಳೆ. ಆ ವೇಳೆ ಸತ್ಯ ದೊಡ್ಡಪ್ಪ ಹೆಂಡತಿಗೆ ಬಯ್ಯುತ್ತಾ ಇರುತ್ತಾರೆ. ಈ ಜಗದೀಶನ ಬಳಿ ಈ ರೀತಿ ಮಾತನಾಡುತ್ತಾ ಇದ್ದೀರಾ ಎಂದಾಗ ಆತನ ಹೆಂಡತಿ ನನಗೆ ಎಲ್ಲಾ ಗೊತ್ತಿದೆ ನೀವು ಈ ರೀತಿ ಮಾತನಾಡುವುದು ಬೇಕಾಗಿಲ್ಲ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಜಗದೀಶ ಕನಸಲ್ಲಿ ಕ್ಲೋಸ್ ಅಪ್ ನಲ್ಲಿ ನಿನ್ನ ಮುಸುಡಿ ಕಂಡೆ ಅದಕ್ಕೆ ಬೆಚ್ಚಿ ಬಿದ್ದೆ ಎಂದು ಹೇಳಿದಾಗ ಹೆಂಡತಿಗೆ ಕೋಪ ಬರುತ್ತದೆ.

  ಜಗದೀಶನಿಗೆ ಪಂಗನಾಮ ಹಾಕಿದ ಬಾಲ

  ಜಗದೀಶನಿಗೆ ಪಂಗನಾಮ ಹಾಕಿದ ಬಾಲ

  ಇದನ್ನೆಲ್ಲ ನೋಡಿದ ಜಾನಕಿಗೆ ಎನು ಹೇಳಬೇಕು ಎಂದು ತಿಳಿಯಲೇ ಇಲ್ಲ. ಜಗದೀಶನಿಗೆ ಮೋಸ ಮಾಡಿದ ಗೋವಿಂದನನ್ನು ನೋಡಿದ ಬಾಲ ಗೋವಿಂದ ಗೆಳೆಯ ಅಂದರೆ ನಿನ್ನ ಹಾಗೆ ಇರಬೇಕು ಕಣಯ್ಯ, ಸರಿಯಾದ ಸಮಯಕ್ಕೆ ಸಹಾಯ ಮಾಡುತ್ತೀಯಾ ಬಳಿಕ ಆ ಸಹಾಯವನ್ನು ಸರಿಯಾದ ಜಾಗಕ್ಕೆ ಕೂಡ ತಲುಪಿಸುತ್ತಿಯಾ ಆಪತ್ಬಾಂಧವ ನೀನು ಎಂದು ಹೇಳುತ್ತಾನೆ. ಆ ವೇಳೆ ಗೋವಿಂದ ಆಪತ್ಬಾಂಧವ ನೀನೇ ಕಣೋ ನೀನು ಇಂತಹ ಕೆಲಸ ಮಾಡು ಅಂದ ಬಳಿಕ ನನಗೆ ಮಾಡದೇ ಇರಲು ಆಗುತ್ತ ಬಾಲ ಎಂದು ಹೇಳುತ್ತಾನೆ.

  ಗಂಡನಿಗೆ ಡ್ರೆಸಿಂಗ್ ಪಾಠ ಮಾಡಿದ ಸತ್ಯ

  ಗಂಡನಿಗೆ ಡ್ರೆಸಿಂಗ್ ಪಾಠ ಮಾಡಿದ ಸತ್ಯ

  ಇನ್ನು ಕಾರ್ತಿಕ್ ಆಫೀಸ್ ಗೆ ಹೊರಡಲು ರೆಡಿ ಆಗುತ್ತಾ ಇರುತ್ತಾನೆ. ಆ ವೇಳೆ ಅಲ್ಲಿಗೆ ಸತ್ಯ ಬರುತ್ತಾಳೆ. ಬಳಿಕ ಆತ ಧರಿಸಿದ್ದ ಕೋಟ್ ಚೆನ್ನಾಗಿ ಇಲ್ಲ ಎಂದು ಹೇಳಿ ಸತ್ಯ ಒಂದು ಹೊಸ ಕೊಟ್ ಅನ್ನು ಕೊಡುತ್ತಾಳೆ ಅದನ್ನು ಹಾಕಿಕೊಂಡು ಹೋಗುವಂತೆ ಹೇಳುತ್ತಾಳೆ. ಇನ್ನು ಕಿರ್ತನಗೆ ಮನೆಯಲ್ಲಿ ಎಷ್ಟೆಲ್ಲ ಒಳ್ಳೆಯ ಕೆಲಸಗಳು ನಡೆಯುತ್ತಿವೆ ಎಂದು ಮೈ ಎಲ್ಲ ಉರಿಯುತ್ತ ಇದ್ದರೆ ಆಕೆಯ ಗಂಡ ಯೋಗ ಮಾಡುವುದರಲ್ಲಿ ನಿರತನಾಗಿ ಇರುವುದನ್ನು ಕಂಡು ಕೋಪ ಮಾಡಿಕೊಳ್ಳುತ್ತಾ ಇರುತ್ತಾಳೆ .

  ವಿಶ್ವಾಸ್ ಮೇಲೆ ಮುನಿಸಿಕೊಂಡ ಕೀರ್ತನ

  ವಿಶ್ವಾಸ್ ಮೇಲೆ ಮುನಿಸಿಕೊಂಡ ಕೀರ್ತನ

  ನನಗೆ ಸರಿಯಾಗಿ ಯೋಗ ಮಾಡಲು ಬಿಡುವುದು ಇಲ್ಲ ಎಂದು ಕೋಪ ಮಾಡಿಕೊಂಡು ಇರುತ್ತಾನೆ. ಇದನ್ನು ನೋಡಿದ ವಿಶ್ವಾಸ್ ಕೀರ್ತನ ಈಗ ನಾವು ಸುಮ್ಮನೆ ಇರಲಿಲ್ಲ ಎಂದರೆ ನಾವೇ ತೊಂದರೆಗೆ ಸಿಲುಕಿ ಹಾಕಿಕೊಳ್ಳುವ ಎಲ್ಲಾ ಲಕ್ಷಣ ಕಂಡು ಬರುತ್ತಿದೆ. ಇದಕ್ಕಾಗಿ ನಾವು ಈಗ ಸುಮ್ಮನೆ ಇರಬೇಕಾದ ಪರಿಸ್ಥಿತಿ ಬಂದಿದೆ. ಅದರಿಂದ ನೀನು ಸ್ವಲ್ಪ ಕೋಪ ಬಿಟ್ಟು ಸುಮ್ಮನೆ ಕುಳಿತುಕೊಂಡು ಇರು ಎಂದು ಹೇಳುತ್ತಾನೆ. ಇದನ್ನು ಕೇಳಿದ ಕೀರ್ತನ ಸುಮ್ಮನೆ ಇರುತ್ತಾಳೆ.. ಇನ್ನೂ ಮುಂದೇನು.ಕಾದು ನೋಡಬೇಕಿದೆ.

  English summary
  Kannada serial satya written updated on 2nd January
  Monday, January 2, 2023, 19:58
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X