Sathya: ಮಾವನ ಭೇಟಿಗೆ ಹೊರಟ ದಿವ್ಯಾ: ವಿಷಯ ತಿಳಿಯದೇ ಕಂಗಾಲಾದ ಬಾಲ

By Poorva

ಸತ್ಯ ಧಾರವಾಹಿ ಅದ್ಭುತವಾಗಿ ಮೂಡಿ ಬರುತ್ತಾ ಇದ್ದು ನೋಡುಗರ ಮನ ಗೆಲ್ಲುತ್ತಿದೆ. ಇದೀಗ ಸತ್ಯ ಬಗ್ಗೆ ಕೀರ್ತನ ಇಲ್ಲಸಲ್ಲದ ಮಾತುಗಳನ್ನು ಆಡುತ್ತಾ ಇರುತ್ತಾಳೆ. ಆದರೆ ಇದನ್ನೆಲ್ಲ ಕೇಳಿಸಿಕೊಂಡ ಸತ್ಯ, ಕೀರ್ತನಾಳ ಗ್ರಹಚಾರ ಬಿಡಿಸಿದ್ದಾಳೆ. ಕೀರ್ತನಾ ಬಳಿ ಸತ್ಯ ಮಾತನಾಡುತ್ತಾ ಇರುವಾಗ ಲಕ್ಷ್ಮಣನಿಗೆ ಬಹಳ ಕಿರಿ ಕಿರಿ ಆಗುತ್ತದೆ. ಆತ ಇಬ್ಬರ ಗಲಾಟೆ ಬಿಡಿಸಲು ಪರದಾಡುವಂತಾಗಿದೆ.

ಸತ್ಯ- ಕೀರ್ತನಾ ಮಾತಿಗೆ ಮಾತು ಬೆಳೆಯುತ್ತಾ ಇರುತ್ತದೆ. ಕೀರ್ತನಾ ಯಾವುದೋ ಮಾತನ್ನು ಯಾವುದಕ್ಕೂ ತಿರುಗಿಸಿ ಮಾತನಾಡುತ್ತಾ ಇರುವುದನ್ನು ನೋಡಿದ ಸತ್ಯ ಮಾತ್ರ ಕೆರಳುತ್ತಾಳೆ. ತಲೆಯಲ್ಲಿ ಎರಡಕ್ಷರ ಇಲ್ಲ, ಏನು ಓದಿಲ್ಲದ ದಡ್ಡಿ ಅಂತೆಲ್ಲಾ ಕೀರ್ತನಾ ಮಾತನಾಡಿದ್ದು ಕೇಳಿ ಸತ್ಯ ತಾಳ್ಮೆ ಕಳೆದುಕೊಳ್ಳುತ್ತಾಳೆ. ಲಕ್ಷ್ಮಣ ಹಾಗೂ ಸೀತಮ್ಮ ಮುಂದೆಯೇ ತಿರುಗೇಟು ನೀಡುತ್ತಾಳೆ.

Kannada serial satya written updated on 2nd may

ವಿದ್ಯೆ ಬಗ್ಗೆ ತುಚ್ಛವಾಗಿ ಮಾತನಾಡಿದ ಕೀರ್ತನ

ನಾನು ವಿದ್ಯೆ ಅಷ್ಟಾಗಿ ಕಲಿತಿಲ್ಲ. ಅದಕ್ಕಾಗಿ ನಾನು ಪ್ರಯತ್ನ ಪಟ್ಟಿದ್ದೇನೆ ಆದರೆ ನನಗೆ ವಿದ್ಯೆ ಕಲಿಯಲು ಆಗಲಿಲ್ಲ. ಯಾಕೆಂದರೆ ನನಗೆ ಬಹಳ ಬಡತನ ಇತ್ತು ಆ ಕಾರಣದಿಂದ ಆಗಿ ನಾನು ವಿದ್ಯೆ ಕಲಿಯಲು ಆಗಿಲ್ಲ. ಆದರೆ ನೀನು ಮಾತ್ರ ವಿದ್ಯೆ ಕಲಿಯದೇ ಮೈಯೆಲ್ಲ ಸೊಕ್ಕು ತುಂಬಿಕೊಂಡು ಇದ್ದೀಯಾ ಎಂದು ಸತ್ಯ ಹೇಳುತ್ತಾಳೆ. ಇದಕ್ಕೆ ಕೀರ್ತನಾ ಗರಂ ಆಗುತ್ತಾಳೆ.

ಕೀರ್ತನಾ ಮಾತಿಗೆ ಕೆರಳಿದ ಲಕ್ಷ್ಮಣ

ವಿದ್ಯೆ ಅಂತೆ ವಿದ್ಯೆ. ಬುಲ್ ಶಿಟ್ ಎಂದಾಗ ಮಾತ್ರ ಲಕ್ಷ್ಮಣ ಜೋರಾಗಿ ಮಾತನಾಡುತ್ತಾನೆ. ಯಾವತ್ತೂ ವಿದ್ಯೆಗೆ ಅವಮಾನ ಮಾಡಬೇಡ. ಅದು ನಮ್ಮ ಸಂಸ್ಕಾರ ಅಲ್ಲ. ವಿದ್ಯೆಗೆ ವಿನಯ ಭೂಷಣ ಎಂದು ಹೇಳುತ್ತಾನೆ. ಆದರೆ ಎಂದು ಮಾತು ನಿಲ್ಲಿಸುತ್ತಾರೆ. ಆಗ ಸೀತಾ ಕೂಡ ಅದೇ ಮಾತು ಹೇಳುತ್ತಾಳೆ.

Kannada serial satya written updated on 2nd may

ಸತ್ಯ ಮಾತಿಗೆ ಕೋಪಗೊಂಡ ಸೀತಾ

ಇದನ್ನು ಕೇಳಿದ ಕೀರ್ತನಾ ಮಾತ್ರ ಕೋಪಗೊಳ್ಳುತ್ತಾ ಇರುತ್ತಾಳೆ. ಆಗ ಸತ್ಯ ಹೇಳುತ್ತಾಳೆ, ಕೋಟೆ ಮನೆಯವರಿಗೆ ಯಾವುದಕ್ಕೂ ಅವಮಾನ ಮಾಡಿ ಅಭ್ಯಾಸ ಇಲ್ಲ. ಯಾರನ್ನು ಕೀಳಾಗಿ ಕಾಣುವುದು ಇಲ್ಲ. ಅಂತದ್ದರಲ್ಲಿ ಈ ಕೀರ್ತನಾ ಬುದ್ದಿ ಯಾಕೆ ಹೀಗೆ ಆಯಿತು ಎಂದೆಲ್ಲ ಹೇಳುತ್ತಾಳೆ. ಇದನ್ನು ಕೇಳಿದ ಕೀರ್ತನಾ ಮಾತ್ರ ಸತ್ಯ ನನ್ನ ಕೆಣಕ ಬೇಡ ಎಂದಾಗ ಲಕ್ಷ್ಮಣ ಮಾತ್ರ ಜೋರಾಗಿ ಹೇಳುತ್ತಾನೆ. ಈಗ ಯಾಕೆ ಏನೇನೋ ಮಾತನಾಡುತ್ತಾ ಇದ್ದೀರಾ ಇದನ್ನೆಲ್ಲ ನನಗೆ ನೋಡಲು ಸಾಧ್ಯ ಇಲ್ಲ ಎಂದು ಎದ್ದು ಹೋಗುತ್ತಾನೆ. ಇದನ್ನು ಕೇಳಿದ ಕೀರ್ತನಾ ನಕ್ಕರೆ ಸೀತಾ ಕೋಪ ಮಾಡಿಕೊಂಡು ಇರುತ್ತಾಳೆ.

ಬಳಿಕ ಸತ್ಯ ಳಮುಖ ನೋಡಿ ಹೇಳುತ್ತಾಳೆ, ಕೀರ್ತನಾ ಇಂತವರ ಜೊತೆ ಮಾತನಾಡಬಾರದು ಎಂದು ನಿನಗೆ ಬಹಳ ಸಲ ಹೇಳಿದ್ದೆ ಅಲ್ವಾ ಆದರೂ ಮಾತನಾಡುತ್ತಿದ್ದಿಯ ಎಂದೆಲ್ಲ ಸೀತಾ ಹೇಳುತ್ತಾಳೆ. ಆ ಬಳಿಕ ಅಲ್ಲಿಂದ ಹೋಗುತ್ತಾಳೆ. ಇನ್ನು ಇತ್ತ ದಿವ್ಯಾ ಮಾತ್ರ ತನ್ನ ಮಾವನನ್ನು ಭೇಟಿ ಆಗಲು ಮಾಸ್ಟರ್ ಪ್ಲಾನ್ ಮಾಡಿಕೊಂಡು ಇದ್ದಾಳೆ.

Kannada serial satya written updated on 2nd may

ದಿವ್ಯಾ ಪ್ಲಾನ್ ಬಾಲಗೆ ತಿಳಿಯುತ್ತಿಲ್ಲ

ಆದರೆ ಗಿರಿಜಾ ಮಾತ್ರ ಬಾಲನ ಬಳಿ ಏನು ಎಂದು ಕಣ್ಣು ಸನ್ನೆಯಲ್ಲಿ ಕೇಳಿದಾಗ ನನಗೆ ಗೊತ್ತಿಲ್ಲ ಎನ್ನುವ ಹಾಗೆ ಹೇಳುತ್ತಾನೆ. ಇನ್ನೂ ಹೊಸ ಬಾಡಿಗೆ ಕಾರನ್ನು ತಂದು ತನ್ನ ಮಾವನನ್ನು ಭೇಟಿ ಆಗಲು ಹೋಗುತ್ತಾಳೆ. ಆದರೆ ಬಾಲ ಮಾತ್ರ ಗೋಗ್ಗಯ್ಯ ಕಾಣದೆ ಕಂಗಾಲಾಗಿ ಹೋಗಿದ್ದಾನೆ.

More from Filmibeat

English summary
Kannada serial satya written updated on 2nd may. here is detials about sathya and keerthana talk fight infront of lakshmana and seethamma. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X