ಗಣೇಶನ ಹಬ್ಬಕ್ಕೆ ತವರಿಗೆ ಹೋಗುವ ತವಕದಲ್ಲಿ ಸತ್ಯ: ಅತ್ತೆ ಬಿಡ್ತಾರಾ?

By ಪೂರ್ವ

'ಸತ್ಯ' ಧಾರವಾಹಿ ಚೆನ್ನಾಗಿ ಮೂಡಿ ಬರುತ್ತಿದೆ. ಸತ್ಯ ಈಗ ಗೃಹಿಣಿ. ಗಣೇಶ ಹಬ್ಬ ಮಾಡಲು ತವರು ಮನೆಗೆ ಹೋಗುವ ಮನಸಾಗಿದೆ ಆಕೆಗೆ. ತವರು ಮನೆಯಲ್ಲಿ ತನ್ನ ಗೆಳೆಯರೊಂದಿಗೆ ಗಲ್ಲಿಯಲ್ಲಿ ಗಣೇಶನ ಪ್ರತಿಮೆ ಕೂರಿಸಿ ಗಣೇಶ ಹಬ್ಬ ಮಾಡುತ್ತಾರೆ. ತವರು ಮನೆಗೆ ಹೋಗಲು ತನ್ನ ಅತ್ತೆ ಮಾವನ ಒಪ್ಪಿಗೆಯನ್ನು ಕೇಳುತ್ತಾಳೆ ಸತ್ಯ.

ಆದರೆ ಮಾವ ಮಾತ್ರ ಸರಿ ಹೋಗು ಎಂದೆಲ್ಲ ಹೇಳುತ್ತಾರೆ ಆದರೆ ಅತ್ತೆ ಮಾತ್ರ ಯಾಕಾಗಿ ಹೋಗುತ್ತಿದ್ದೀಯಾ ಮನೆಯಲ್ಲಿ ಗಣೇಶ ಹಬ್ಬ ವಿಜ್ರುಂಭಣೆಯಿಂದ ನಡೆಯುತ್ತದೆ. ಇಲ್ಲಿ ಇದ್ದು ಎಲ್ಲಾ ಪೂಜಾ ಕೈಂಕರ್ಯವನ್ನು ನೋಡಿಕೊಳ್ಳಬೇಕು ಎಂದೆಲ್ಲಾ ಹೇಳುತ್ತಾಳೆ. ಹಾಗೆಯೇ ಮನೆಯಿಂದ ಎಲ್ಲೂ ಹೋಗುವ ಅವಶ್ಯಕತೆ ಇಲ್ಲ ಎಂದು ಹೇಳಿ ಅಲ್ಲಿಂದ ಎದ್ದು ಹೋಗುತ್ತಾಳೆ ಇದರಿಂದ ಸತ್ಯಗೆ ಬೇಸರವಾಗುತ್ತದೆ. ಸತ್ಯನ ಬರುವಿಕೆಗೆ ಆಕೆಯ ಅಜ್ಜಿ ಕಾಯುತ್ತಾ ಇರುತ್ತಾರೆ ಸತ್ಯಾಳಿಗೆ ಹಬ್ಬದ ದಿನ ಏನಾದರು ಕೊಡಬೇಕು ಎನ್ನುವುದು ಅವರ ಹಂಬಲ.

ಇದೀಗ ಸತ್ಯ ಗಣೇಶ ಪ್ರತಿಮೆಯನ್ನು ನೋಡಲು ತೆರಳಿದ್ದಾರೆ. ಸತ್ಯ ಗ್ಯಾಂಗ್ ಕೂಡಾ ಗಲ್ಲಿ ಗಣೇಶನನ್ನು ಕೂರಿಸಲು ಸಜ್ಜಾಗಿರುವ ಹಾಗೆ ಕಾಣುತ್ತಿದೆ. ಇದಕ್ಕಾಗಿ ಗಣಪತಿ ಪ್ರತಿಮೆಯನ್ನು ಕೊಂಡುಕೊಳ್ಳಲು ಆಗಮಿಸುತ್ತಾರೆ. ಇನ್ನೂ ಸತ್ಯ ದೊಡ್ಡ ಗಣಪತಿಯನ್ನು ನೋಡುತ್ತಾ ಇಂಥ ಗಣಪತಿಯನ್ನು ತೆಗೆದುಕೊಳ್ಳಬೇಕು ಎಂದೆಲ್ಲಾ ಕಾರ್ತಿಕ್ ಬಳಿ ಹೇಳುತ್ತಾರೆ. ಅದಕ್ಕೆ ಕಾರ್ತಿಕ್ ಅಂತಹ ಗಣಪತಿ ಎಲ್ಲಾ ನಾವು ಕೂರಿಸುವುದಿಲ್ಲ ಎಂದು ಹೇಳುತ್ತಾನೆ.

ಸತ್ಯ ಗೆಳೆಯನ ಮೇಲೆ ಕಾರ್ತಿಕ್ ತಂಗಿ ಕಣ್ಣು

ಸತ್ಯ ಗೆಳೆಯನ ಮೇಲೆ ಕಾರ್ತಿಕ್ ತಂಗಿ ಕಣ್ಣು

ಈ ವೇಳೆ ಬಂದ ಕಾರ್ತಿಕ್ ತಾಯಿ ಸತ್ಯಳಿಗೆ ಗಣಪತಿ ಹಬ್ಬವನ್ನು ಹೇಗೆ ಆಚರಣೆ ಮಾಡುವುದು ನಮ್ಮ ಸಂಪ್ರದಾಯ ಎಂಥದ್ದು ಎಂದೆಲ್ಲ ಹೇಳುತ್ತಾಳೆ. ಇನ್ನೂ ಕಾರ್ತಿಕ್ ತಂಗಿ ಮಾತ್ರ ಸತ್ಯ ಗೆಳೆಯನನ್ನು ಮೆಚ್ಚಿಕೊಂಡಿದ್ದಾಳೆ ಆತನನ್ನು ಕದ್ದು ಮುಚ್ಚಿ ನೋಡುತ್ತಾಳೆ. ಆತ ಗೆಳೆಯರೊಂದಿಗೆ ಗಣೇಶನ ಪ್ರತಿಮೆ ಖರೀದಿ ಮಾಡುವತ್ತ ಆತನ ಚಿತ್ತ ಹರಿದಿರುತ್ತದೆ. ಇತ್ತ ಕಾರ್ತಿಕ್ ತಂಗಿ ಮನದಲ್ಲಿ ಮಂಡಿಗೆ ತಿನ್ನುತ್ತಾ ಇರುತ್ತಾಳೆ.

ಗೆಳೆಯರಲ್ಲಿ ಮೂಡಿದ ಬೇಸರ

ಗೆಳೆಯರಲ್ಲಿ ಮೂಡಿದ ಬೇಸರ

ಬಳಿಕ ಗಲ್ಲಿ ಗ್ಯಾಂಗ್ ಗ್ರೂಪಿನ ಕಣ್ಣಿಗೆ ಸತ್ಯ ಕಾಣಿಸುತ್ತಾಳೆ. ಆಕೆಯನ್ನು ನೋಡಿ ಸ್ನೇಹಿತರು ಖುಷಿ ಆಗುತ್ತಾರೆ. ಬಳಿಕ ಸತ್ಯ ಹೇಳುತ್ತಾಳೆ. ಈ ಬಾರಿಯ ಗಣಪತಿ ಹಬ್ಬಕ್ಕೆ ಬರಲು ಸಾಧ್ಯವಿಲ್ಲ ಕಣ್ರೋ ಮನೆಯಲ್ಲೂ ಹಬ್ಬ ಇದೆಯಂತೆ ಎಂದು ಹೇಳಿದಾಗ ಗೆಳೆಯರು ಮಾತ್ರ ಇದಕ್ಕೆ ಒಪ್ಪುವುದಿಲ್ಲ. ಸತ್ಯ ಬರಲೇ ಬೇಕು ನೀನು ಎಂದು ಹಠ ಹಿಡಿಯುತ್ತಾರೆ. ಇನ್ನೂ ಗಲ್ಲಿ ಗಣೇಶನ ಪೂಜೆ ಮಾಡಲು ಸತ್ಯ ತೆರಳುತ್ತಾಳೆಯೆ ಎಂಬುವುದನ್ನು ಕಾದು ನೋಡಬೇಕಿದೆ.

ಸತ್ಯ ಅಳಲನ್ನು ಕೆಳುತ್ತಾರ ಚಿಕ್ಕತ್ತೆ

ಸತ್ಯ ಅಳಲನ್ನು ಕೆಳುತ್ತಾರ ಚಿಕ್ಕತ್ತೆ

ಇನ್ನೂ ಸತ್ಯ ತನ್ನ ಅಳಲನ್ನು ಚಿಕ್ಕ ಅತ್ತೆಯ ಬಳಿ ತೋಡಿಕೊಳ್ಳುತ್ತಾರೆ. ಚಿಕ್ಕ ಅತ್ತೆಯ ಬಳಿ ಸೀತಾ ಅತ್ತೆಯ ಬಳಿ ನಾವು ತವರಿಗೆ ಹೋಗುವುದಾಗಿ ಹೇಳಿ ಚಿಕ್ಕತ್ತೆ ಎಂದೆಲ್ಲ ಹೇಳಿದರು ಚಿಕ್ಕತ್ತೆ ಮಾತ್ರ ಅಕ್ಕನಿಗೆ ಹೆದರಿ ಹೀಗೆಲ್ಲ ಮಾಡಲು ಸಾದ್ಯ ಇಲ್ಲ ಎಂದು ಹೇಳುತ್ತಾಳೆ. ಬಳಿಕ ನಿನ್ನ ತವರು ಮನೆಯವರು ಕರೆ ಮಾಡಿದ್ದರು ಅವರ ಬಳಿ ತವರು ಮನೆಗೆ ಕಳುಹಿಸಿ ಕೊಡುವುದಿಲ್ಲ ಎಂದು ಹೇಳಿದರು ಅಕ್ಕ ಎಂದು ಹೇಳಿದಾಗ ಸತ್ಯಗೆ ಇನ್ನಷ್ಟು ಬೇಸರವಾಗುತ್ತದೆ.

ಕಾರ್ತಿಕ್ ನ ಕೊಂಕು ಮಾತಿನಿಂದ ನೊಂದ ಸತ್ಯ

ಕಾರ್ತಿಕ್ ನ ಕೊಂಕು ಮಾತಿನಿಂದ ನೊಂದ ಸತ್ಯ

ಬಳಿಕ ಅಲ್ಲಿಗೆ ಬಂದ ಕಾರ್ತಿಕ್ ಹೇಳುತ್ತಾನೆ ಇದೀಗ ನೀನು ಮದುವೆ ಆಗಿದ್ದೀಯಾ. ಗಲ್ಲೀಲಿ ಗಣೇಶನ ಕೂರಿಸುವುದು ಆಗ ಈಗ ಅಲ್ಲ. ಈಗ ದೊಡ್ಡ ಕುಟುಂಬದ ಸೊಸೆ ಇಲ್ಲಿಯೂ ಗಣೇಶ ಹಬ್ಬ ಮಾಡುತ್ತಿದ್ದೇವೆ. ಅಮ್ಮನ ಮಾತು ಕೇಳು ಎಂದು ಹೇಳುತ್ತಾನೆ. ಮುಂದೇನು ಮಾಡುತ್ತಾಳೆ ಸತ್ಯ ನೋಡಬೇಕಿದೆ. ಇನ್ನು ಇತ್ತಕಡೆ, ಬಾಲನ ಪ್ರೀತಿಗೆ ಮಾರು ಹೋಗಿ ಕೈ ಗೆ ಬಂದ ತುತ್ತನ್ನು ಬಾಯಿಗೆ ಇಡುವ ವೇಳೆ ದೂರ ತಳ್ಳಿದ ತಪ್ಪಿಗೆ ಇದೀಗ ಮುಸುರೆ ತಿಕ್ಕುವ ಕೆಲಸವನ್ನು ಮಾಡಿ ಆಗಿದೆ ದಿವ್ಯಾ. ಇದೀಗ ಇಡೀ ದೇವಾಲಯದ ಪ್ರಾಂಗಣವನ್ನು ಸ್ವಚ್ಚ ಮಾಡುವ ಕೆಲಸವನ್ನು ಬೇರೆ ಶುರು ಹಚ್ಚಿಕೊಂಡಿದ್ದಾಳೆ. ಇದಕ್ಕೆ ಮನೆ ಪಕ್ಕಾದವರ ಆರ್ಡರ್ ಬೇರೆ. ದೇವಾಲಯದ ಪ್ರಾಂಗಣವನ್ನು ಒಬ್ಬಳೇ ಸ್ವಚ್ಚ ಗೊಳಿಸುತ್ತಾಳೆ. ಗಣೇಶನ ಮೇಲೆ ಮುನಿಸಿಕೊಂಡ ದಿವ್ಯಾ ಮನೆಯಲ್ಲಿ ಏನು ಕೆಲಸ ಮಾಡುತ್ತಿರಲಿಲ್ಲ ಇದೀಗ ಈ ಬಾಲನ ಸಹವಾಸ ಮಾಡಿ ನಾನು ಕೆಟ್ಟು ಹೋದೆ ಎಂದು ನೊಂದುಕೊಳ್ಳುತ್ತಾಳೆ. ಬಾಲನ ಮದುವೆ ಆಗಿ ಇನ್ನೂ ಏನೇನೆಲ್ಲಾ ಮಾಡುತ್ತಾಳೆ ಎಂಬುವುದನ್ನು ಕಾದು ನೋಡಬೇಕಿದೆ.

More from Filmibeat

English summary
Kannada serial satya written updated on 31th August. Know more about the episode.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X