ತನ್ನ ಪರ ವಹಿಸಿದ ಸತ್ಯ ಮೇಲೆ ಕಾರ್ತಿಕ್ ಗೆ ಲವ್ ಆಗುತ್ತಾ?

By ಪೂರ್ವ

ಕೀರ್ತನಾ ಕಿತಾಪತಿಗೆ ಇದೀಗ ಮನೆಯವರು ಬೆಲೆ ತೆರುವ ಹಾಗೆ ಆಗಿದೆ. ಆದರೆ ಸತ್ಯ ಮಾತ್ರ ತನ್ನ ಗಂಡನನ್ನು ನಂಬುತ್ತಾಳೆ. ತನ್ನ ಗಂಡ ಏನೇ ಮಾಡಿದರೂ ಆತ ಸರಿಯಾದ ಕೆಲಸ ಮಾಡಿ ಇರುತ್ತಾನೆ. ತಪ್ಪು ಹೆಜ್ಜೆ ಎಂದಿಗೂ ಇಡುವುದು ಇಲ್ಲ ಎಂದು ಸತ್ಯ ನಂಬುತ್ತಾಳೆ. ಕಾರ್ತಿಕ್ ಮನೆಗೆ ಬಂದಾಗ ಕಾರ್ತಿಕ್ ತಂದೆ ಒರಟಾಗಿ ಮಾತನಾಡಿದರು ಸತ್ಯ ಮಾತ್ರ ಕಾರ್ತಿಕ್ ತಪ್ಪು ಮಾಡಲು ಸಾಧ್ಯ ಇಲ್ಲ ಯಾಕೆಂದರೆ ಆತ ನಿಮ್ಮ ಮಗ ರಾಯರೇ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಕಾರ್ತಿಕ್ ತಂದೆ ಬಹಳ ಖುಷಿ ಪಡುತ್ತಾರೆ.

ಏನೇ ಆದರೂ ತನ್ನ ಮಗನನ್ನು ಯಾವತ್ತೂ ಸತ್ಯ ಬಿಟ್ಟು ಕೊಡುವುದಿಲ್ಲ ಎಂಬ ನಂಬಿಕೆ ಬರುತ್ತದೆ. ಯಾರೇ ಹೇಳಿದರು ಸತ್ಯ ಮಾತ್ರ ಹೇಳುವುದು ಒಂದೇ ಕಾರ್ತಿಕ್‌ನ ಕೈ ಹಿಡಿದವಳು ನಾನು. ಹೆಂಡತಿ ಆಗಿ ನನಗೆ ಅವರ ಮೇಲೆ ಅನುಮಾನ ಇಲ್ಲ. ಅವರು ತಪ್ಪು ಮಾಡಲ್ಲ ಎಂದು ಹೇಳುತ್ತಾಳೆ ಇದನ್ನು ಕೇಳಿದ ಕಾರ್ತಿಕ್ ಹಾಗೂ ಮನೆಯವರು ಖುಷಿ ಪಡುತ್ತಾರೆ. ಕಾರ್ತಿಕ್ ಹೇಳುತ್ತಾನೆ ಸತ್ಯ ನೀನಾದರೂ ನನ್ನ ಮಾತು ಕೇಳಿದೆಯಲ್ಲ ಎಂದು ಹೇಳುತ್ತಾರೆ. ಆದರೆ ಕಾರ್ತಿಕ್ ಮಾತಿಗೆ ಸತ್ಯ ಹೀಗನ್ನುತ್ತಾರೆ. ನೀವು ತಪ್ಪು ಮಾಡಿಲ್ಲ ನಿಜ ಆದರೆ ಮನೆಗೆ ಬಾರದೆ ಇರುವುದು ದೊಡ್ಡ ತಪ್ಪು. ಅದು ಇನ್ನಷ್ಟು ಅನುಮಾನಗಳಿಗೆ ಎಡೆಮಾಡಿ ಕೊಡುತ್ತದೆ ಕೂಡ. ನೀವು ಇದನ್ನು ಯೋಚನೆ ಮಾಡಬೇಕು ಇತ್ತು ಎಂದಾಗ ಕಾರ್ತಿಕ್ ಸಮಾಜಯಿಷಿ ಕೊಡುತ್ತಾನೆ.

ಕಾರ್ತಿಕ್ ಅನ್ನು ಮನೆಯ ಒಳಗೆ ಕರೆದ ಸತ್ಯ

ಕಾರ್ತಿಕ್ ಅನ್ನು ಮನೆಯ ಒಳಗೆ ಕರೆದ ಸತ್ಯ

ಆದರೆ ಕಾರ್ತಿಕ್ ತಾಯಿ ಸೀತಾ ಮಾತ್ರ ಕಾರ್ತಿಕ್‌ಗೆ ಜೋರಾಗಿಯೇ ಮಾತನಾಡುತ್ತಾರೆ. ಆದರೆ ಸೀತಾಗು ತಿಳಿ ಹೇಳುವ ಎಲ್ಲಾ ಪ್ರಯತ್ನ ಮಾಡುತ್ತಾಳೆ. ಕಾರ್ತಿಕ್‌ಗೆ ಏನು ಮಾಡಬೇಕು ಎಂದು ತೋಚದೇ ಸುಮ್ಮನೆ ನಿಂತುಕೊಂಡು ಇರುತ್ತಾನೆ ಇದನ್ನು ನೋಡಿದ ಸತ್ಯ, ಕಾರ್ತಿಕ್ ಮನೆಯ ಒಳಗೆ ಬನ್ನಿ ಎಂದು ಕರೆದಾಗ ಕಾರ್ತಿಕ್ ಮನೆಯ ಒಳಗೆ ಬರಲು ಹಿಂದೇಟು ಹಾಕುತ್ತಾನೆ. ಆದರೂ ಸತ್ಯ, ಕಾರ್ತಿಕ್‌ನನ್ನು ಮನೆಯ ಒಳಗೆ ಕರೆದುಕೊಂಡು ಬರುತ್ತಾಳೆ. ಇದನ್ನು ನೋಡಿದ ಕೀರ್ತನಾಗೆ ಕೊಂಚ ಮಟ್ಟಿಗೆ ಗಾಬರಿಯಾಗುತ್ತದೆ.

ಬಾಲನ ಮೇಲೆ ಹೆಚ್ಚಾಯ್ತು ದಿವ್ಯಾ ಅನುಮಾನ

ಬಾಲನ ಮೇಲೆ ಹೆಚ್ಚಾಯ್ತು ದಿವ್ಯಾ ಅನುಮಾನ

ದಿವ್ಯಾನ ಪಡೆಯಬೇಕು ಎಂದು ಬಾಲ ಸುಳ್ಳಿನ ಪರದೆ ಮೇಲೆ ಆಟ ಆಡಿಸುತ್ತಾನೆ. ಆದರೆ ಇದೀಗ ಸುಳ್ಳಿನ ಅರಮನೆ ಕಳಚಿ ಬೀಳುವ ಎಲ್ಲಾ ಲಕ್ಷಣ ಕಾಣುತ್ತಿದೆ. ಬಾಲನ ಗೆಳೆಯನ ಜೊತೆ ಪ್ರಶ್ನೆ ಮೇಲೆ ಪ್ರಶ್ನೆ ಕೇಳುತ್ತಾಳೆ ದಿವ್ಯಾ. ಇದನ್ನೆಲ್ಲ ಬಾಲನ ಸ್ನೇಹಿತ ಬಾಲನ ಬಳಿ ಬಂದು ಹೇಳಿದಾಗ ಬಾಲನಿಗೆ ಶಾಕ್ ಆಗುತ್ತದೆ. ಇದನ್ನೆಲ್ಲ ಕೇಳಿದ ಬಾಲ, ನನಗೆ ಒಂದಲ್ಲ ಒಂದು ಪರೀಕ್ಷೆ ಬರುತ್ತಾನೆ ಇದೆ. ಆವತ್ತು ನಮ್ಮನ್ನು ಫಾಲೋ ಮಾಡಿಕೊಂಡು ಬಂದಿದ್ದ ಕಾರು ಯಾವುದು ಎಂದು ಗೊತ್ತಾಯಿತ? ಎಂದು ಬಾಲ ಆತನ ಗೆಳೆಯನ ಬಳಿ ಕೇಳುತ್ತಾನೆ. ಇದನ್ನು ಕೇಳಿದ ಆತನ ಗೆಳೆಯ ಮಾತ್ರ ಅಣ್ಣ, ಅಕ್ಕನಿಗೆ ಅನುಮಾನ ಬಂದಿದೆ ಏನಾದರು ಮಾಡಿಲ್ಲ ಅಂದರೆ ಕಂಡಿತಾ ಸಿಕ್ಕಿ ಹಾಕಿಕೊಳ್ಳುವುದು ಖಚಿತ ಎನ್ನುತ್ತಾನೆ.

ಬಾಲನ ಬಳಿ ಬಂದ ಸತ್ಯನ ಗೆಳೆಯ

ಬಾಲನ ಬಳಿ ಬಂದ ಸತ್ಯನ ಗೆಳೆಯ

ಇನ್ನೂ ಅಲ್ಲಿಗೆ ಸತ್ಯ ನ ಗೆಳೆಯ ಬಾಲನ ಬಳಿ ಬರುತ್ತಾರೆ. ಬಾಲನ ಬಳಿ ಬಂದು ಬಾಡಿಗೆ ರೂಮ್ ಬಗ್ಗೆ ಮಾತನಾಡುತ್ತಾ ಇರುತ್ತಾನೆ. ಆದರೆ ಬಾಲನಿಗೆ ಆತನ ಬಗ್ಗೆ ಕೊಂಚ ಡೌಟ್ ಬರುತ್ತದೆ. ಬಳಿಕ ಹೇಳುತ್ತಾನೆ ನಿನ್ನ ಧ್ವನಿ ಎಲ್ಲೋ ಕೇಳಿದೆನಲ್ಲಾ ಎಂದು ಹೇಳುತ್ತಾನೆ ಇದನ್ನು ಕೇಳಿದ ಸತ್ಯ ಗೆಳೆಯನಿಗೆ ಶಾಕ್ ಆಗುತ್ತದೆ. ಆ ವೇಳೆ ಬಾಲ ಮಾಸ್ಕ್ ತೆಗೆಯಲು ಹೇಳುತ್ತಾನೆ ಇದನ್ನು ಕೇಳಿದ ಸತ್ಯ ಗೆಳೆಯ ಏನೇನೋ ಸಬೂಬು ಹೇಳುತ್ತಾನೆ. ಬಳಿಕ ಬಾಲ ನ ಕೈ ಯಿಂದ ತಪ್ಪಿಸಿಕೊಳ್ಳುತ್ತಾರೆ. ಆದರೆ ಕಾರ್ತಿಕ್ ಹಾಗೂ ಸತ್ಯ ನಡುವೆ ಹೊಸ ಲವ್ ಸ್ಟೋರಿ ಶುರು ಆಗಿದೆ. ಮುಂದೇನು ಕಾದು ನೋಡಬೇಕಿದೆ.

ಸತ್ಯ ಗೆ ಧನ್ಯವಾದ ಹೇಳಿದ ಕಾರ್ತಿಕ್

ಸತ್ಯ ಗೆ ಧನ್ಯವಾದ ಹೇಳಿದ ಕಾರ್ತಿಕ್

ಇನ್ನು ಸತ್ಯ ಬಳಿ ಬಂದ ಕಾರ್ತಿಕ್ ಸತ್ಯ ಧನ್ಯವಾದಗಳು ಎಂದು ಹೇಳಿ ಸತ್ಯಾಳನ್ನು ತಬ್ಬಿ ಹಿಡಿದುಕೊಳ್ಳುತ್ತಾನೆ. ಅಪ್ಪ ಹೇಳಿದ್ದನ್ನೆಲ್ಲ ನೆನೆದುಕೊಂಡು ಜೋರಾಗಿ ಅಳುತ್ತಾನೆ ಕಾರ್ತಿಕ್. ಆದರೆ ಸತ್ಯ ಮಾತ್ರ ತನ್ನ ಪರ ನಿಂತುಬಿಟ್ಟಳು ಎಂದು ಖುಷಿ ಪಡುತ್ತಾನೆ. ಆದರೆ ಹುಸಿ ಮುನಿಸು ಮಾಡಿಕೊಂಡು ಮನೆಗೆ ಯಾಕೆ ಬರಲಿಲ್ಲ. ನನಗೆ ಇದರಿಂದ ಬಹಳ ಬೇಸರ ಆಗಿದೆ ಎಂದೆಲ್ಲ ಪ್ರಶ್ನೆ ಕೇಳುತ್ತಾಳೆ. ಈ ವೇಳೆ ಕಾರ್ತಿಕ್ ತನ್ನ ಮನದ ಬೇಸರ ಸರಿ ಬಳಿ ತೋಡಿಕೊಳ್ಳುತ್ತಾರೆ. ಇದನ್ನು ಕೇಳಿದ ಸತ್ಯ ಸುಮ್ಮನಾಗುತ್ತಾನೆ. ಇನ್ನು ಸತ್ಯನ ಗೆಳೆಯ ಬಾಲನ ಬಳಿ ಬಂದು ನಿಲ್ಲುತ್ತಾನೆ. ಬಾಲ ಆತನ ಹಿನ್ನೆಲೆ ಎಲ್ಲಾ ಕೇಳುತ್ತಾನೆ ಆದರೆ ಆತ ಮಾತ್ರ ತೊದಲುತ್ತಾ ಉತ್ತರಿಸುತ್ತಾನೆ.

More from Filmibeat

English summary
Kannada serial Satya written updated on 7th December episode. Know more about it.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X