For Quick Alerts
  ALLOW NOTIFICATIONS  
  For Daily Alerts

  ಪ್ರಸಾದದಲ್ಲಿ ಹಾಕಿದ್ದ ಉಪ್ಪು ಇಲ್ಲವಾಗಿದ್ದು ಹೇಗೆ? ಮ್ಯಾಜಿಕ್ ಮಾಡಿದಳಾ ಸತ್ಯ!

  By ಪೂರ್ವ
  |

  ಸತ್ಯ ಧಾರವಾಹಿ ಚೆನ್ನಾಗಿ ಮೂಡಿಬರುತ್ತಿದೆ. ಈ ಧಾರವಾಹಿ ನೋಡುಗರ ಮನ ಗೆದ್ದಿದೆ. ಸತ್ಯ ವಿರುದ್ದ ಅದೆಷ್ಟೆ ಕುತಂತ್ರ ಮಾಡಿದರು ಅದನ್ನೆಲ್ಲ ಮೆಟ್ಟಿ ನಿಲ್ಲುತ್ತಿದ್ದಾಳೆ. ಇದೀಗ ವರಮಹಾಲಕ್ಷ್ಮೀ ಹಬ್ಬದ ಸಂಭ್ರಮದಲ್ಲಿ ಇದೆ ಸತ್ಯ ಕುಟುಂಬ. ರಾಯರು ಹೇಳಿದ ಹಾಗೆಯೇ ಎಲ್ಲವನ್ನೂ ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದಾರೆ ಸತ್ಯ.

  ಪ್ರಸಾದದ ವಿಚಾರದಲ್ಲಿ ಮಾತ್ರ ಕಾರ್ತಿಕ್ ಅಕ್ಕನಿಂದ ವಿಘ್ನ ಆಗಬಹುದೇನೋ ಎಂಬ ಲೆಕ್ಕಾಚಾರ ಸತ್ಯಗೆ ಇತ್ತು ಎಂದು ಕಾಣಿಸುತ್ತದೆ. ಇನ್ನೂ ಕಾರ್ತಿಕ್ ಅಕ್ಕನ ಬಳಿ ಹೇಳುತ್ತಾಳೆ. ಅಜ್ಜಿ ಬೇರೆ ಪ್ರಸಾದನ ಹೇಳಿಕೊಟ್ಟರು ಅವರು ಹೇಳಿದ ಹಾಗೆಯೇ ಪ್ರಸಾದ ಮಾಡಿದ್ದೀನಿ. ಆದರೆ ಅದರಲ್ಲಿ ಉಪ್ಪಿರಲ್ಲ ಎಂದು ಹೇಳಿದಾಗ ಕಾರ್ತಿಕ್ ಅಕ್ಕನ ಮುಖ ತಗ್ಗಿಸುವಂತೆ ಆಗುತ್ತದೆ.

  ಒಳ್ಳೆಯ ಉದ್ದೇಶ ಇಟ್ಟುಕೊಂಡು ಮಾಡಿದರೆ ಕೆಟ್ಟದಾಗಲ್ಲ ಎಂಬುದು ಈಗಲಾದರೂ ಅರ್ಥಾಯಿತ ನಿಮಗೆ ಎನ್ನುತ್ತಾಳೆ ಸತ್ಯ. ಪ್ರಸಾದ ಕೊಡಿ ಎಲ್ಲರಿಗೆ ಎಂದು ಅರ್ಚಕರು ಹೇಳುತ್ತಾರೆ. ಆಗ ರಾಯರು ಊರ್ಮಿಳಾ ಎಂದು ಹೇಳುತ್ತಾರೆ, ಆ ಕರೆಯನ್ನು ಅರ್ಥ ಮಾಡಿಕೊಂಡ ಊರ್ಮಿಳಾ ಪ್ರಸಾದ ಹಂಚಲು ಹೋಗುತ್ತಾಳೆ.

  ರಾಯರು ಹೇಳುತ್ತಾರೆ ಗುರುಗಳೇ ಪ್ರಸಾದ ಮೊದಲು ನೀವು ಸ್ವೀಕಾರ ಮಾಡಬೇಕು ಯಾಕೆ ಎಂದರೆ ನನ್ನ ಸೊಸೆ ಮಾಡಿದ ಪ್ರಸಾದ ಅದು ನಿಮಗೆ ಇಷ್ಟವಾದರೆ ಆ ದೇವರು ಮೆಚ್ಚಿದ್ದಾರೆ ಎಂದರ್ಥ ಎನ್ನುತ್ತಾಳೆ. ಇನ್ನೂ ಪ್ರಸಾದವನ್ನು ಸ್ವೀಕರಿಸುವ ವೇಳೆ ಉದ್ಗಾರ ದಿಂದ ಆಹಾ ಎನ್ನುತ್ತಾ ಪ್ರಸಾದ ಮೆಲ್ಲುತ್ತಾರೆ ಗುರುಗಳು. ಆಗ ಕಾರ್ತಿಕ್ ಹೇಳುತ್ತಾನೆ , ಹಮ್ ಚಿಕ್ಕಿ ಪ್ರಸಾದ ಚೆನ್ನಾಗಿದೆ. ಸತ್ಯಳ ಚಿಕ್ಕಮಾವನೂ ಸತ್ಯ ಮಾಡಿದ ಪ್ರಸಾದವನ್ನು ಹೊಗಳುತ್ತಾರೆ. ಸತ್ಯ ಮೊದಲನೇ ಬಾರಿ ನೀನು ಮಾಡಿದೆ ಎಂದರೆ ನಂಬೋಕೆ ಆಗುತ್ತಿಲ್ಲ, ಏಷ್ಟು ಚೆನ್ನಾಗಿ ಮಾಡಿದ್ದೀಯಾ ಎಂದು ಹೊಗಳುತ್ತಾರೆ.

  ಸತ್ಯ ಹೇಳುತ್ತಾಳೆ ನಮ್ಮ ಅಜ್ಜೀ ಹೇಳಿಕೊಟ್ಟಿದ್ದು ಹಾಗೆ ಮಾಡಿದೆ ಎನ್ನುತ್ತಾಳೆ. ಸೀತಮ್ಮನಿಗೂ ಪ್ರಸಾದ ಇಷ್ಟವಾಗುತ್ತದೆ. ಪ್ರಸಾದ ಇವಳೆ ಮಾಡಿದ್ದ ಅಥವಾ ಬೇರೆಯವರು ಮಾಡಿದ್ರಾ ಇದರಲ್ಲಿ ಏನೋ ಗಿಮಿಕ್ ಇದಿಯಾ ಎಂದು ಕಾರ್ತಿಕ್ ಯೋಚನೆ ಮಾಡುತ್ತಿರುತ್ತಾನೆ. ಆಗ ಸ್ವಾಮೀಜಿ ಹೇಳುತ್ತಾರೆ ಇಷ್ಟು ಜನರಿಗೆ ಪ್ರಸಾದ ಇಷ್ಟವಾದರೆ ಆ ದೇವರಿಗೆ ಇಷ್ಟವಾದಂತೆ. ಮನೆಯ ಮಹಾಲಕ್ಷ್ಮಿ ಶ್ರದ್ಧೆ ಭಕ್ತಿಯಿಂದ ಕೆಲಸ ಮಾಡಿದರೆ ಆ ದೇವರು ಒಳ್ಳೇದು ಮಾಡುತ್ತಾನೆ ಎಂದು ಹೇಳುತ್ತಾರೆ.

  English summary
  Kannada serial Satya written updated on 8th August. Know more about the episode.
  Tuesday, August 9, 2022, 20:39
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X