Don't Miss!
- News
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪತ್ರ ನಕಲಿ ಎಂದ ಸಿದ್ದರಾಮಯ್ಯ.! ಆ ಪತ್ರದಲ್ಲಿ ಏನಿದೆ.?
- Sports
IND-W vs SA-W T20 Tri-series Final: ಭಾರತ ವನಿತೆಯರ ವಿರುದ್ಧ ದಕ್ಷಿಣ ಆಫ್ರಿಕಾಗೆ ಜಯ
- Lifestyle
ಮಗುವಿಗೆ ತುಂಬಾ ಜ್ವರ ಇದ್ದಾಗ ಏನು ಮಾಡಬೇಕು?
- Finance
6 ತಿಂಗಳಲ್ಲಿ 2ನೇ ಬಾರಿಗೆ ಉದ್ಯೋಗಿಗಳನ್ನು ವಜಾಗೊಳಿಸಿದ Byju's: ಈ ಬಾರಿ ಎಷ್ಟು ನೌಕರರು?
- Automobiles
ಭಾರತದಲ್ಲಿ ಮಾರುತಿ ಜಿಮ್ನಿ ಎಸ್ಯುವಿಗೆ ಭಾರೀ ಡಿಮ್ಯಾಂಡ್: ಪ್ರತಿಸ್ಪರ್ಧಿಗಳಿಗೆ ಹೆಚ್ಚಿದ ಆತಂಕ
- Technology
ಮಾರುಕಟ್ಟೆಗೆ ಎಂಟ್ರಿ ಕೊಟ್ಟ ವಾಯರ್ಲೆಸ್ ಚಾರ್ಜಿಂಗ್ ಬೆಂಬಲಿಸುವ ಸ್ಮಾರ್ಟ್ವಾಚ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Satya Serial : ಮತ್ತೆ ಸತ್ಯ ಬಗ್ಗೆ ಇಲ್ಲಸಲ್ಲದ ಆರೋಪ ಮಾಡುತ್ತಿರುವ ಕೀರ್ತನಾ
ಕಾರ್ತಿಕ್ ತಂದೆಯ ಎದುರು ಬಂದು ನಿಂತಿದ್ದಾನೆ. ತಂದೆ ರಾಮ ಚಂದ್ರ ರಾಯರು ಕಾರ್ತಿಕ್ ಅನ್ನು ನೋಡಿ ನೀನು ನನಗೆ ಹುಟ್ಟಿದ ಮಗನೇನೋ? ಆರೋಪಿ ಎಂದು ನೋಡಿದಾಗ ಅದೆಲ್ಲವನ್ನೂ ಎದುರಿಸಿ ನಿಂತು ನಾನು ತಪ್ಪು ಮಾಡಿಲ್ಲ ಎಂದು ಸಾಭೀತು ಪಡಿಸಲು ನಿನ್ನ ಕೈ ಯಿಂದ ಸಾಧ್ಯ ಆಗಲಿಲ್ಲ ಯಾಕೆ ಹೀಗೆ ಮಾಡಿದೆ. ಆ ಹೆಂಗಸು ಆರೋಪ ಮಾಡುತ್ತಿದ್ದ ಹಾಗೆ ನೀನು ಮನೆಯವರ ಕೈ ಗೆ ಸಿಗದೆ ಓಡಾಡುತ್ತಾ ಇದ್ದೆ ಹೀಗೆ ಯಾಕೆ ಮಾಡಿದೆ. ಹೀಗೆ ಮಾಡಿದರೆ ಅನುಮಾನ ಜಾಸ್ತಿ ಆಗುತ್ತದೆ ಅಲ್ವಾ ಎಂದೆಲ್ಲ ಕಟುಕವಾಗಿ ನಿಂದಿಸುತ್ತಾರೆ.
ಇದನ್ನು ಕೇಳಿದ ಕಾರ್ತಿಕ್, ನನ್ನ ಮಾತು ನಂಬುವ ಸ್ಥಿತಿಯಲ್ಲಿ ಯಾರು ಇಲ್ಲ. ಏನು ಮಾಡಲಿ ಎಂದು ಯೋಚನೆ ಮಾಡುತ್ತಾ ಇರುತ್ತಾನೆ. ಬಳಿಕ ಅಲ್ಲಿಂದ ಹೊರಡಲು ಕಾರ್ತಿಕ್‌ಗೆ ರಾಮಚಂದ್ರ ರಾಯರು ಹೇಳುತ್ತಾರೆ. ತಂದೆ ಮಾತಿಗೆ ಬೆಲೆ ಕೊಟ್ಟು ಅಲ್ಲಿಂದ ಹೊರ ನಡೆಯುತ್ತಾನೆ. ಬಳಿಕ ರೂಮಿನ ಬಳಿ ಬಂದ ಕಾರ್ತಿಕ್ ಜೋರಾಗಿ ಅಳುತ್ತಿರಬೇಕಾದರೆ ಅಲ್ಲಿಗೆ ಬಂದ ಸತ್ಯ. ಏನಯ್ಯ ಇನ್ನೂ ಅಳುತ್ತಾ ಇದ್ದಿಯಲ್ಲ. ಇಷ್ಟೊಂದು ಧೈರ್ಯದ ಮಾತುಗಳನ್ನು ಹೇಳಿದರು ನಿನಗೆ ಇನ್ನೂ ಧೈರ್ಯ ಬರಲೇ ಇಲ್ವಾ ಎಂದು ಹೇಳುತ್ತಾಳೆ.
ಇದನ್ನು ಕೇಳಿದ ಕಾರ್ತಿಕ್, ನೀನು ನನಗೆ ಅಂದು ಸಪೋರ್ಟ್ ಮಾಡದೇ ಹೋಗಿದ್ದರೆ ನಾನು ಇನ್ನೂ ಕುಸಿದು ಹೋಗುತ್ತಿದೆ. ನೀನು ನನ್ನ ಜೊತೆ ಇರುವುದೇ ಧೈರ್ಯ ಎಂದು ಹೇಳಿ ಅಳುತ್ತಾನೆ. ಇದನ್ನೆಲ್ಲ ಕೇಳಿದ ಸತ್ಯಗೆ ಬೇಸರ ಆಗುತ್ತದೆ. ಸತ್ಯ, ಕಾರ್ತಿಕ್ ಪರ ವಹಿಸಿ ಮಾತನಾಡಿದ ಪರಿಯನ್ನು ಸೀತಾ ಮನದಲ್ಲಿ ಯೋಚನೆ ಮಾಡುತ್ತಾ ಇರುವಾಗ ಅಲ್ಲಿಗೆ ಕೀರ್ತನಾ ಹಾಲು ತೆಗೆದುಕೊಂಡು ಬರುತ್ತಾಳೆ. ಇದನ್ನು ನೋಡಿದ ಸೀತಾ, ನಾನು ಹಾಲು ಕುಡಿಯುವುದಿಲ್ಲ ಎಂದು ನಿನಗೆ ಗೊತ್ತಿದೆಯಲ್ಲ ಎಂದು ಸೀತಾ ಹೇಳುತ್ತಾಳೆ.

ಸತ್ಯ ಮೇಲೆ ಮತ್ತೆ ದೂರು ಹೇಳಿದ ಕೀರ್ತನಾ
ಅದಕ್ಕೆ ಕೀರ್ತನಾ, ಹಾಲು ನಿನಗೆ ಅಲ್ಲ ಅಮ್ಮ ಸತ್ಯಗೆ ಹೋಗಿ ಕೊಡು. ಸತ್ಯ ಹಾವು ಇದ್ದ ಹಾಗೆ ಅವಳಿಗೆ ಹಾಲು ಎರಿಯಬೇಕಲ್ಲ ಎಂದು ಹೇಳಿದಾಗ ಕೀರ್ತನಾ ಬಗ್ಗೆ ಸೀತಾ ಸಿಟ್ಟುಗೊಳ್ಳುತ್ತಾಳೆ. ಇನ್ನು ಸೀತಾ ಬಳಿ ಸತ್ಯನ ಮನೆಯಿಂದ ಹೊರಹಾಕಲು ಹೇಳುತ್ತಾಳೆ. ಆರು ತಿಂಗಳ ಎಗ್ರಿಮೆಂಟನ್ನೂ ಹರಿದು ಹಾಕಿ ತಕ್ಷಣ ಆಕೆಯನ್ನು ಮನೆಯಿಂದ ಹೊರ ಹಾಕಿ. ಈಗ ಆಗಿರುವ ಅವಾಂತರ ಸಾಕು ಮತ್ತೊಂದು ಗಂಡಾಂತರ ಅವಳಿಂದ ಕಾರ್ತಿಕ್‌ಗೆ ಬರೋದು ಬೇಡ ಎಂದು ಹೇಳುತ್ತಾಳೆ ಕೀರ್ತನಾ. ಇದನ್ನು ಕೇಳಿದ ಸೀತಾ ಆ ಬಗ್ಗೆ ಯೋಚನೆ ಮಾಡುತ್ತಾಳೆ.

ಗಂಡ ಅಳುವುದು ನೋಡಿ ನಕ್ಕ ಸತ್ಯ
ಇನ್ನು ಕಾರ್ತಿಕ್ ಮಾತ್ರ ಅದೇ ನೋವಲ್ಲಿ ಇದ್ದಾನೆ. ಖಾಲಿ ಹಲಗೆಯ ಮೇಲೆ ಮೊಳೆ ಹೊಡೆದು ವಾಪಸ್ ಅದನ್ನು ತೆಗೆದರೆ ಅದರ ಗುರುತು ಹಾಗೆ ಇರುತ್ತಲ್ವ ಎಂದು ಯೋಚನೆ ಮಾಡುತ್ತಾ ಇರುತ್ತಾನೆ. ಸತ್ಯ ಬಳಿ ತನ್ನ ಮನದ ವೇದನೆಯನ್ನು ತೋಡಿಕೊಂಡು ಇರುತ್ತಾನೆ ಏನು ಮಾಡಬೇಕು ಎಂದು ಯೋಚನೆ ಮಾಡಿ ಅಳುತ್ತಾ ಇರುತ್ತಾನೆ ಇದನ್ನೆಲ್ಲ ನೋಡಿದ ಸತ್ಯ ಜೋರಾಗಿ ನಗುತ್ತಾಳೆ ಇದನ್ನು ನೋಡಿದ ಕಾರ್ತಿಕ್‌ಗೆ ಶಾಕ್ ಆಗುತ್ತದೆ. ನಾನು ಇಷ್ಟೆಲ್ಲ ಕೊರಗುತ್ತಾ ಇದ್ದೇನೆ ಆದರೆ ಸತ್ಯ ಮಾತ್ರ ಇದಕ್ಕೂ ನನಗೂ ಸಂಬಂಧ ಇಲ್ಲದ ಹಾಗೆ ಇದ್ದಾಳಲ್ಲ ಎಂದು ಯೋಚನೆ ಮಾಡುತ್ತಾರೆ.

ಗಂಡನಿಗೆ ಧೈರ್ಯ ತುಂಬಿದ ಸತ್ಯ
ಬಾಲ, ದಿವ್ಯಾ ಬರುವುದನ್ನೇ ಕಾಯುತ್ತಾ ಕುಳಿತು ನಾಟಕವಾಡುತ್ತಾನೆ. ಬಾಲ ನಿನಗೆ ಈ ಜೀವನ ಸಾಕು. ಜೀವನ ಮುಗಿಸಿಬಿಡು ಎಂದು ಹೇಳಿ ಸಾಯಲು ಹೋಗುತ್ತಾನೆ ಇದನ್ನು ನೋಡಿದ ದಿವ್ಯಾ ಶಾಕ್ ಆಗುತ್ತಾಳೆ ಆ ವೇಳೆ ದಿವ್ಯಾ ಬಾಲನ ಬಳಿ ಗಾಬರಿಯಿಂದ ಏನಾಯಿತು ಎಂದು ಕೇಳುತ್ತಾಳೆ. ಆದರೆ ಬಾಲ ಮಾತ್ರ ನಾಟಕ ಇನ್ನೂ ಮುಂದುವರಿಸುತ್ತಾ ಇದ್ದಾನೆ. ಇನ್ನು ಸತ್ಯ ಮಾತ್ರ ತನ್ನ ಗಂಡನನ್ನು ಸಮಾಧನಿಸುವುದೆ ದೊಡ್ಡ ಕೆಲಸ ಆಗಿದೆ. ಆತನಿಗೆ ಸಮಾಜ ಹೇಗೆ ನಮ್ಮನ್ನು ನೋಡುತ್ತೆ. ನಾವು ಏನು ಕೆಲಸ ಮಾಡಿದರೆ ಸಮಾಜದಲ್ಲಿ ತಲೆ ಎತ್ತಬಹುದು ಎಂಬುವುದನ್ನೇಲ್ಲ ಹೇಳುತ್ತಾಳೆ. ಆಡಿಕೊಳ್ಳುವವರು ಎನು ಬೇಕಾದರೂ ಆಡಿಕೊಳ್ಳಲಿ ಅದಕ್ಕೆ ಹೆದರಿ ಬದುಕಬಾರದು ಎನ್ನುತ್ತಾಳೆ.

ಮುಂದೇನು ಕಾದು ನೋಡಬೇಕಿದೆ
ಸತ್ಯ ಹೇಳುತ್ತಿರುವಾಗ ಕಾರ್ತಿಕ್ ಮೊಗದಲ್ಲಿ ಮಂದ ಹಾಸ ಮೂಡುತ್ತದೆ. ಸತ್ಯ ನೀನೆಷ್ಟು ಗಟ್ಟಿಗಿತ್ತಿ ನೀನು ಎಷ್ಟೆಲ್ಲ ಯೋಚನೆ ಮಾಡುತ್ತೀಯಾ ಎಂದು ಹೇಳುತ್ತಾನೆ. ಇನ್ನು ಚಂದ್ರಶೇಖರ ರಾಯರು ಮಗನ ಬಗ್ಗೆ ಯೋಚನೆ ಮಾಡುತ್ತಾ ಇರುತ್ತಾರೆ. ಈ ವೇಳೆ ಅಲ್ಲಿಗೆ ಬಂದ ಸೀತಾ ಏನು ಯೋಚನೆ ಮಾಡುತ್ತಾ ಇದ್ದೀರಿ ಏನಾಯಿತು ಎಂದೆಲ್ಲ ಕೇಳಿದಾಗ ಮನದ ಬೇಸರವನ್ನು ಹೊರ ಹಾಕುತ್ತಾರೆ. ಮುಂದೇನು ಕಾದು ನೋಡಬೇಕಿದೆ.