Seetha Raama Serial: ಕಿರುತೆರೆಯಲ್ಲಿ ಮೋಡಿ ಮಾಡಿದ ಪ್ರಮೋದ್ ಮರವಂತೆ; ಸೀತಾ ರಾಮ ಧಾರವಾಹಿ ಟೈಟಲ್ ಟ್ರ್ಯಾಕ್‌ಗೆ ಫಿದಾ ಆದ ಅಭಿಮಾ
ಪ್ರಮೋದ್ ಮರವಂತೆ ಬಹಳ ಒಳ್ಳೆಯ ಬರಹಗಾರ. ಬರವಣಿಗೆಯಲ್ಲಿ ಬಹಳ ಚಾಕ ಚಕ್ಯತೆಯನ್ನು ಹೊಂದಿದವರು. ಕಾಂತಾರ ಸಿನಿಮಾದ ಸಿಂಗಾರ ಸಿರಿಯೇ ಎಂಬ ಹಾಡಿಗೆ ಅದ್ಭುತವಾಗಿ ಸಾಲುಗಳನ್ನು ಬರೆದು ಜನ ಮನ ಗೆದ್ದಿದ್ದಾರೆ. ಇದೀಗ ಸೀತಾ ರಾಮ ಸೀರಿಯಲ್ ಹಾಡಿಗೆ ಕೂಡ ಅದ್ಭುತವಾದ ಸಾಲುಗಳನ್ನು ಬರೆದು ಜನರ ಮನಸ್ಸನ್ನು ಕದ್ದಿದ್ದಾರೆ ಎಂದರೆ ತಪ್ಪಾಗದು.
ಕಾಂತಾರ ಹಾಡುಗಳು ಇದೀಗ ಎಲ್ಲರ ಮನಸನ್ನು ಗೆದ್ದಿದೆ. ಈಗಲೂ ಕೂಡ ಜನರ ಮನಸ್ಸು ಕದ್ದು ಮೋದಿ ಮಾಡುತ್ತಾ ಇದೆ. ಇದೀಗ ಸೀತಾ ರಾಮ ಧಾರಾವಾಹಿ ಹಾಡು ಎಲ್ಲರ ಮನ ಗೆಲ್ಲುತ್ತಿದೆ. ಸೀತಾ ರಾಮ ಧಾರಾವಾಹಿ ಪ್ರಸಾರ ಆಗುವುದು ಕೊಂಚ ಮಟ್ಟಿಗೆ ತಡವಾಗಿದೆ. ಅಭಿಮಾನಿಗಳು ಪ್ರೋಮೋ ಪ್ರಸಾರ ಆದ ಕೂಡಲೇ ಧಾರವಾಹಿ ಯಾವಾಗ ಪ್ರಸಾರ ಆಗುತ್ತೆ ಎಂದು ಕಾದು ಕುಳಿತುಕೊಳ್ಳುವ ಹಾಗೆ ಆಗಿದೆ.

ಇದೀಗ ಧಾರವಾಹಿ ತಂಡ ಅಧಿಕೃತವಾಗಿ ಸೀತಾ ರಾಮ ಧಾರಾವಾಹಿ ಪ್ರಸಾರ ಆಗುವುದು ಯಾವಾಗ ಎಂದು ಹೇಳಿದ್ದಾರೆ. ಹೌದು ಜುಲೈ 17ರಂದು ಈ ಧಾರಾವಾಹಿ ಪ್ರಸಾರ ಆಗಲಿದೆ. ಈಗಾಗಲೇ ಧಾರವಾಹಿ ತಂಡ ಹಾಡನ್ನು ಬಿಡುಗಡೆ ಮಾಡಿದೆ. ಕಾಂತಾರ ಚಿತ್ರ ಪ್ರಸಾರ ಆಗುತ್ತಾ ಇರುವಾಗಲೇ ಆ ಚಿತ್ರದ ಹಾಡು ಸಖತ್ ಫೇಮಸ್ ಆಯಿತು.
ಇನ್ನು ಸಿಂಗಾರ ಸಿರಿಯೇ ಹಾಡು ಮಾತ್ರ ಇನ್ನಷ್ಟು ಫೇಮಸ್ ಆಯಿತು. ಇದೀಗ ಆ ಹಾಡನ್ನು ಬರೆದ ಪ್ರಮೋದ್ ಕಿರುತೆರೆಗೆ ಕಾಲಿಟ್ಟಿದ್ದಾರೆ. ಹೌದು ಇದೀಗ ಪುಟ್ಟ ಪರದೆಯ ಮೇಲೂ ಮೋಡಿ ಮಾಡಲು ಬಂದಿದ್ದಾರೆ. ಇದೀಗ ಸೀತಾರಾಮ ಸೀರಿಯಲ್‌ಗೆ ಪ್ರಮೋದ್ ಟೈಟಲ್ ಟ್ರ್ಯಾಕ್ ಬರೆದಿದ್ದಾರೆ. ಈ ಹಾಡು ಕೇಳಿದರೆ ನಿಮಗೆ ಸರಳ ಸಾಲುಗಳ ಸರಳ ಭಾವನೆ ಮೂಡುವುದಂತೂ ಸತ್ಯ.
ಇದೀಗ ಧಾರವಾಹಿ ಪ್ರಸಾರವಾಗುವ ದಿನಾಂಕ ಟೈಟಲ್ ಟ್ರ್ಯಾಕ್‌ನಿಂದ ತಿಳಿದು ಬಂದಿದೆ. ಈ ಧಾರಾವಾಹಿಯಲ್ಲಿ ರಾಮ ಹಾಗೂ ಸೀತೆಯ ಕಥೆ ಇದೆ ಎಂದು ಅನ್ನಿಸುತ್ತದೆ. ವೈಷ್ಣವಿ ಗೌಡ ಅಂತೂ ಈ ಧಾರಾವಾಹಿಯಲ್ಲಿ ಎಲ್ಲರ ಮನ ಗೆದ್ದಿದ್ದಾರೆ. ಗಾಯಕ ಶಶಾಂಕ್ ಶೇಷಗಿರಿ ಸಂಯೋಜನೆಯ ಈ ಹಾಡನ್ನು ಕಾಂತಾರ ಚಿತ್ರದ ಸಿಂಗಾರಿ ಸಿರಿಯೇ ಖ್ಯಾತಿಯ ಲಿರಿಕ್ ರೈಟರ್ ಪ್ರಮೋದ್ ಮರವಂತೆ ಬರೆದಿದ್ದಾರೆ.
ಪ್ರಮೋದ್ ಬರೆದ ಈ ಸಾಲುಗಳನ್ನು ಅಷ್ಟೇ ಅದ್ಭುತವಾಗಿಯೇ ಗಾಯಕ ಕಲ್ಯಾಣ್ ಮಂಜುನಾಥ್ ಹಾಡಿದ್ದಾರೆ. ನಟ ಗಗನ್ ಚಿನ್ನಪ್ಪ ಹೀರೋ ಪಾತ್ರದಲ್ಲಿ ಮಿಂಚಿದ್ದಾರೆ. ವೈಷ್ಣವಿ ಗೌಡ ಅವರಿಗೆ ಸಾಥ್ ನೀಡಿದ್ದಾರೆ. ಹಾಗೆಯೇ ರಾಮ-ಸೀತೆ ಜೊತೆಗೆ ಬಾಲ ನಟಿ ರಿತು ಸಿಂಗ್ ಕೂಡ ಅಭಿನಯಿಸಿದ್ದಾಳೆ. ಟೈಟಲ್ ಟ್ರ್ಯಾಕ್ ಅಂತೂ ಬಹಳ ಸಖತ್ ಆಗಿ ಮೂಡಿ ಬಂದಿದೆ.


Click it and Unblock the Notifications











