Seetha Raama: ಸೀತಾ ಮೇಲೆ ಭಾರ್ಗವಿ ಕಿಡಿ.. ಸ್ನೇಹಿತನ ಪ್ರಶ್ನೆಗೆ ಉತ್ತರಿಸುತ್ತಾನಾ ರಾಮ..?

By Poorva

ಸೀತಾರಾಮ ಧಾರಾವಾಹಿ ಜನರನ್ನು ಸೆಳೆಯುತ್ತಿದ್ದು, ಸದ್ಯ ಇದೀಗ ಸೀತಾ ಹಾಗೂ ಆಕೆಯ ಗೆಳತಿ ರಾಮನ ಮನೆಗೆ ಬಂದಿದ್ದಾರೆ. ಇದನ್ನು ಭಾರ್ಗವಿ ದೂರದಿಂದ ನೋಡುತ್ತಾಳೆ. ಭಾರ್ಗವಿಗೆ ಸೀತಾಳನ್ನು ಕಂಡರೆ ಅಷ್ಟಕಷ್ಟೆ. ಕೋಪದಿಂದಲೆ ಇರುತ್ತಾಳೆ. ಆದರೆ ರಾಮನಿಗೆ ಸೀತಾ ಎಂದರೆ ಬಹಳ ಗೌರವ. ಸಿಹಿ ಅಂದರೆ ಪಂಚಪ್ರಾಣ. ಭಾರ್ಗವಿ ಮೆತ್ತಗೆ ಮಹಡಿಯಿಂದ ಇಳಿದು ಬಂದು ಸೀತಾಗೆ ಪಾಯಸ ಕೊಡುತ್ತಾಳೆ.

ಪಾಯಸವನ್ನು ನೋಡಿದ ಸೀತಾ, 'ಅಯ್ಯಯ್ಯೋ ಇದೆಲ್ಲವನ್ನೂ ನೀವು ತೆಗೆದುಕೊಂಡು ಬರಬೇಡಿ' ಎಂದು ಹೇಳಿದಾಗ ಭಾರ್ಗವಿ ಕೊಂಕಿನಿಂದ 'ಪರವಾಗಿಲ್ಲ.. ನಮ್ಮ ಮನೆಯಲ್ಲಿ ಭಿಕ್ಷುಕರಿಗೂ ಕೂಡ ಹೀಗೆ ಕೊಡುತ್ತೇವೆ' ಎಂದೆಲ್ಲ ಹೇಳಿದಾಗ ಸೀತಾಗೆ ಅವಮಾನ ಆದರೂ ಅದ್ಯಾವುದನ್ನೂ ಮನದಲ್ಲಿ ಇಟ್ಟುಕೊಳ್ಳದೆ ಬೇಸರದಿಂದ ಹೊರಡುತ್ತಾಳೆ. ಇನ್ನೂ ರಾಮನನ್ನು ನೋಡಿ ಸೀತಾಗೆ ಕೊಂಚ ಶಾಕ್ ಆಗಿದ್ದರು ಅದ್ಯಾವುದನ್ನೂ ಮನದಲ್ಲಿ ಇಟ್ಟುಕೊಳ್ಳದೆ ಸೀತಾ ಮೆತ್ತಗೆ ನೀವು ಎನು ಇಲ್ಲಿಗೆ ಬಂದಿದ್ದೀರಿ ಏನಾದರು ಕೆಲಸ ಇತ್ತಾ ಎಂದೆಲ್ಲ ಹೇಳುತ್ತಾಳೆ.

kannada-serial-seetha-raama

ಆಗ ಇದನ್ನೆಲ್ಲ ಕೇಳಿದ ರಾಮ ಹೌದು ಎಂದು ತಲೆ ಅಲ್ಲಾಡಿಸುತ್ತ ಇರುತ್ತಾನೆ. ಇನ್ನೂ ಸೀತಾ ಮನೆಗೆ ಬಂದು ಹೋದ ಬಳಿಕ ಭಾರ್ಗವಿಗೆ ಬಹಳ ಸಿಟ್ಟು ಬರುತ್ತಾ ಇರುತ್ತದೆ. ಇದಕ್ಕೆ ಕುಮ್ಮಕ್ಕು ನೀಡುತ್ತಾ ಇರುತ್ತಾನೆ ಭಾರ್ಗವಿ ಗಂಡ.

ಸೀತಾ ಮನಸನ್ನು ನೋಯಿಸಿದ ಭಾರ್ಗವಿ

ರಾಮ ಹಾಗೂ ಸೀತಾ ಒಂದಾದರೆ ಎಷ್ಟು ಚೆಂದ, ಸೀತಾ ಬಂದ ಮೇಲೆ ರಾಮ ತುಂಬಾ ಬದಲಾಗಿದ್ದಾನೆ ಎಂದು ಮಾತನಾಡುತ್ತಾ ಇರುವಾಗ ಭಾರ್ಗವಿ ಮಾತ್ರ ಕೊಂಚ ಕೋಪಾಗೊಳ್ಳುತ್ತ ಇರುತ್ತಾಳೆ. ಹೇಗಾದರೂ ಮಾಡಿ ಸೀತಾಳನ್ನು ಆಫೀಸ್‌ನಿಂದ ಹೊರ ಹಾಕಬೇಕು ಎಂದು ಭಾರ್ಗವಿ ಯೋಚನೆ ಮಾಡುತ್ತಾ ಇರುತ್ತಾಳೆ.. ಇದನ್ನು ಆಕೆಯ ಗಂಡನ ಬಳಿ ಹೇಳುತ್ತಾಳೆ.

kannada-serial-seetha-raama

ಆಫೀಸ್‌ನಿಂದ ಸೀತಾಳನ್ನು ಹೊರಹಾಕಲು ಭಾರ್ಗವಿ ಸಂಚು

ಹೇಗಾದರೂ ಮಾಡಿ ಸೀತಾಳನ್ನು ಮನೆಯಿಂದ ಹೊರ ಹಾಕಬೇಕು ಎಂದು ಹೇಳುತ್ತ ಇರುತ್ತಾರೆ. ರಾಮನಿಗೆ ಆ ಸೀತಾ ಸಿಗಬಾರದು ಹಾಗೆ ಮಾಡುತ್ತೇನೆ ಹಾಗೆಯೇ ಆಫೀಸ್‌ನಿಂದ ಕೂಡ ಸೀತಾಳನ್ನು ಹೊರಗೆ ಹಾಕಬೇಕು. ರಾಮ ಎಲ್ಲಿ ಇರುತ್ತಾನೋ ಅಲ್ಲಿ ಸೀತಾ ಇರಬಾರದು ಎಂದು ಜೋರಾಗಿ ಮಾತನಾಡುತ್ತಾ ಇರುತ್ತಾಳೆ. ಇದನ್ನು ಕೇಳಿಸಿಕೊಂಡ ಭಾರ್ಗವಿ ಗಂಡ ಸುಮ್ಮನೆ ಆಗುತ್ತಾನೆ.

ರಾಮನಿಗೆ ಸೀತಾ ಮೇಲಿನ ಪ್ರೀತಿಯನ್ನು ಹೊರ ಹಾಕಲು ಹೇಳಿದ ಅಶೋಕ

ಇನ್ನೂ ಅಶೋಕ ಮಾತ್ರ ಆಗಾಗ ರಾಮ್ ಬಳಿ ಸೀತಾ ಬಗ್ಗೆ ಕೇಳುತ್ತಾ ಇರುತ್ತಾನೆ. 'ನಿನಗೆ ಸೀತಾ ಮೇಲೆ ಲವ್ ಇಲ್ವಾ..? ನನಗೆ ಮುಚ್ಚಿಟ್ಟು ಮಾತನಾಡಲು ಬರುವುದು ಇಲ್ಲ. ನೀನು ಸೀತಾ ಅವರನ್ನು ಪ್ರೀತಿ ಮಾಡುತ್ತಾ ಇದ್ದೀಯಾ ಅಥವಾ ಇಲ್ವಾ.. ಅದನ್ನು ನನ್ನ ಬಳಿ ಹೇಳು ಎಂದು ಜೋರಾಗಿ ರಾಮನ ಬಳಿ ಪ್ರಶ್ನೆ ಮಾಡುತ್ತಾನೆ. ಇನ್ನೂ ರಾಮ ಸಿಹಿ ಜೊತೆ ಸ್ನೇಹ ಮಾಡಿ ಸೀತಾಗೆ ಮತ್ತಷ್ಟು ಹತ್ತಿರ ಆಗಿದ್ದಾನೆ.

More from Filmibeat

English summary
Seetha Raama serial October 25th details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X