Seetha Raama: ಅತ್ತ ದೇಸಾಯಿ ಕುಟುಂಬದಲ್ಲಿ ಬಿರುಕು, ಇತ್ತ ಸೀರೆಯಲ್ಲಿ ಸೀತಾಳನ್ನು ನೋಡಿ ಮೂಕವಿಸ್ಮಿತನಾದ ರಾಮ!

By ಪೂರ್ವ

ಸೀತಾರಾಮ ಧಾರಾವಾಹಿ ಅದ್ಭುತವಾಗಿ ಮೂಡಿ ಬರುತ್ತಿದ್ದು ನೋಡುಗರಿಗೆ ಬಹಳ ಖುಷಿ ನೀಡುತ್ತಿದೆ. ಇದೀಗ ಅಶೋಕ ರಾಮನ ಬಳಿ ಸೀತಾ ಬಗ್ಗೆ ಮಾತಾಡುತ್ತಾನೆ. ಸಿಹಿಯಿಂದಾಗಿ ಸೀತಾ ರಾಮನಿಗೆ ಬಹಳಷ್ಟು ಹತ್ತಿರವಾಗಿರುತ್ತಾಳೆ. ಆದರೆ ರಾಮನಿಗೆ ಸೀತಾ ಮೇಲೆ ಯಾವುದೇ ಭಾವನೆ ಇರುವುದಿಲ್ಲ. ಆದರೆ ಸಿಹಿ ಅಂದರೆ ಪಂಚಪ್ರಾಣ. ಸಿಹಿಗಾಗಿ ರಾಮ ಏನು ಬೇಕಾದರೂ ಮಾಡಲು ತಯಾರಿಸುತ್ತಾನೆ.

ಆದರೆ ಅಶೋಕ ರಾಮನ ಬಳಿ ಸೀತಾ ಮೇಲೆ ನಿನಗೆ ಯಾವ ಫೀಲಿಂಗ್ಸ್ ಇಲ್ವಾ ಸೀತಾ ನಿನಗೆ ಏನು ಆಗಬೇಕಾಗಿಲ್ಲ ಸರಿಯಾಗಿ ಯೋಚನೆ ಮಾಡು, ಸೀತಾ ನಿನಗೆ ಒಳ್ಳೆಯ ಜೀವನ ಸಂಗಾತಿಯಾಗಬಲ್ಲಳು. ಆದಕಾರಣ ಯೋಜನೆ ಮಾಡಿ ನಿರ್ಧಾರ ಮಾಡು ಎಂದು ಅಶೋಕ ಹೇಳುತ್ತಾನೆ. ಅಶೋಕನಿಗೆ ತನ್ನ ಗೆಳೆಯ ರಾಮ ಚೆನ್ನಾಗಿರಬೇಕು ಆತ ಖುಷಿಯಾಗಿ ಇರಬೇಕು ಯಾರ ಷಡ್ಯಂತ್ರಕ್ಕೆ ಆತ ಬಲಿಯಾಗಬಾರದು ಎಂದು ಆಸೆ.

Kannada serial Seetha Raama written update on 26th October

ಚಾಂದಿನಿ ಸಹವಾಸ ಮಾಡಿದ ಬಳಿಕ ಭಾರ್ಗವಿ ಏನೆಲ್ಲಾ ರಾಮನ ಜೀವನದಲ್ಲಿ ಆಟವಾಡಿದಳು ಅದೆಲ್ಲವೂ ಅಶೋಕನಿಗೆ ತಿಳಿದಿರುತ್ತದೆ. ಆದಕಾರಣ ಚಾಂದಿನಿಯನ್ನು ಹೇಗಾದರೂ ರಾಮನ ಮನಸ್ಸಿನಿಂದ ಅಳಿಸಿ ಹಾಕಬೇಕೆಂದು ಯೋಚನೆ ಮಾಡುತ್ತಿರುತ್ತಾನೆ. ಇನ್ನು ಭಾರ್ಗವಿ ತನಗೆ ಎಲ್ಲಾ ಆಸ್ತಿಯೂ ಸಿಗಬೇಕು ಎನ್ನುವ ಆಸೆಯಲ್ಲಿ ಇರುತ್ತಾಳೆ.

ಉಲ್ಟಾ ಹೊಡೆದ ಭಾರ್ಗವಿಯ ಪ್ಲ್ಯಾನ್

ರಾಮನನ್ನು ಕೆಡ್ಡಕ್ಕೆ ತಳ್ಳಿದರೆ ಆಸ್ತಿಯೆಲ್ಲವೂ ನನಗೆ ಸಿಗುತ್ತದೆ ಎನ್ನುವ ಭಾವನೆ ಭಾರ್ಗವಿಯದು .ಇನ್ನು ಆ ಕಾರಣಕ್ಕೆ ಸೀತಾಳನ್ನು ರಾಮನ ಬದುಕಿನಲ್ಲಿ ಬರಲು ಅಡ್ಡಗಾಲು ಹಾಕುತ್ತಾಳೆ ಭಾರ್ಗವಿ. ಇನ್ನು ದಸರಾ ಸಂಭ್ರಮದಲ್ಲಿ ಸೀತಾ ಸಂಸಾರವಿರುತ್ತದೆ ಸುಂದರವಾದ ಸೀರೆಯುಟು ದಸರಾ ಹಬ್ಬವನ್ನು ಸೀತಾ ಅದ್ದೂರಿಯಾಗಿ ಆಚರಣೆ ಮಾಡುತ್ತಾಳೆ.

Kannada serial Seetha Raama written update on 26th October

ಸೀರೆಯುಟ್ಟು ಆಫೀಸ್‌ಗೆ ಬಂದ ಸೀತಾ

ದಸರಾ ಸಂಭ್ರಮದ ಕಾರಣ ಸೀತಾ ಸೀರೆಯುಟ್ಟು ಆಫೀಸ್‌ಗೆ ಬರುತ್ತಾಳೆ ಆ ಕೂಡಲೇ ಸೀತಾಳನ್ನು ನೋಡಿದ ರಾಮ ಮೈ ಮರೆತು ಹೋಗುತ್ತಾನೆ. ಹಾಗೆ ಅಶೋಕ ಹೇಳಿದ ಮಾತುಗಳು ರಾಮನ ಮನಸ್ಸಲ್ಲಿ ಬಂದು ಹೋಗುತ್ತದೆ. ಸೀತಾ ಸೀರೆ ಉಟ್ಟು ಬಹಳ ಅದ್ಭುತವಾಗಿ ಕಾಣಿಸುತ್ತಿರುತ್ತಾಳೆ.

ಗಂಡನ ವರ್ತನೆ ಕಂಡು ಕೋಪಗೊಂಡ ಭಾರ್ಗವಿ

ಇನ್ನು ರಾಮನ ಮನೆಯಲ್ಲಿ ಆಸ್ತಿಗಾಗಿ ಬಿರುಕು ಮೂಡಿದೆ. ರಾಮನ ಚಿಕ್ಕಪ್ಪ ನನಗೆ ಆಸ್ತಿ ಬೇಕೇ ಬೇಕು ನಾನು ನಿಮ್ಮ ಮಗನ ಅಲ್ವಾ ಎಂದು ರಾಮನ ತಾತನ ಬಳಿ ಹೇಳುತ್ತಿರುತ್ತಾನೆ. ರಾಮನಿಗೆ ಆಗ ಏನು ಅರ್ಥವಾಗುವುದಿಲ್ಲ ಕೊನೆಗೆ ಚಿಕ್ಕಪ್ಪನ ಬಳಿ ಏನು ಚಿಕ್ಕಪ್ಪ ಎಂದು ಕೇಳಿದಾಗ ನನಗೆ ಆಸ್ತಿಯಲ್ಲಿ ಭಾಗಬೇಕು ಎಂದು ಹೇಳುತ್ತಾನೆ. ಇದನ್ನು ಕೇಳಿದ ರಾಮನಿಗೆ ಶಾಕ್ ಆಗುತ್ತದೆ, ಭಾರ್ಗವಿಯ ಸಂಚು ಎಲ್ಲಾ ಉಲ್ಟಾ ಆಗುವ ಲಕ್ಷಣ ಕಾಣುತ್ತಿದೆ. ಎಲ್ಲಾ ಆಸ್ತಿಯು ತನ್ನ ಪಾಲು ಆಗಬೇಕೆಂದು ಯೋಚನೆ ಮಾಡುತ್ತಿದ್ದ ಭಾರ್ಗವಿಗೆ ತನ್ನ ಗಂಡನಿಂದಲೇ ಹಿನ್ನಡೆಯಾಗುವ ಎಲ್ಲಾ ಸಂಭವ ಕಾಣುತ್ತಿದೆ.

More from Filmibeat

English summary
Seetha Raama serial October 26th update.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X