ShravaniSubramanya ; ಮದುವೆಯಾದ ವರದ - ವರಲಕ್ಷ್ಮೀ, ಇಂದ್ರಮ್ಮನ ಮಾತಿಗೆ ತಕ್ಕ ಉತ್ತರ ಕೊಟ್ಟ ಶ್ರಾವಣಿ !

By ಪೂರ್ವ

ವರದ ಹಾಗೂ ವರಲಕ್ಷ್ಮಿಯ ಮದುವೆಯನ್ನು ಹೇಗಾದರೂ ಮಾಡಿ ಮಾಡಬೇಕು ಎಂದು ಶ್ರಾವಣಿ ಅಂದುಕೊಂಡಿರುತ್ತಾಳೆ. ಶ್ರಾವಣಿಗೆ ಇದೊಂದು ಬಹಳ ದೊಡ್ಡ ಸವಾಲ್ ಆಗಿರುತ್ತದೆ. ಮನೆ ಮಂದಿ ಎಲ್ಲಾ ಸುಬ್ಬು ಹಾಗೂ ತನ್ನ ಮದುವೆಯಾಗಿದೆ ಎಂದು ಅಂದುಕೊಂಡಿದ್ದಾರೆ ಆದರೆ ಇದರಿಂದ ಮನೆ ಮಂದಿಗೆ ಬಹಳಷ್ಟು ನೋವಾಗಿದೆ. ನಮ್ಮಿಂದಾಗಿ ವರದ ಹಾಗೂ ವರಲಕ್ಷ್ಮಿಯ ನಡುವೆ ಬಹಳ ದೊಡ್ಡ ಕಂದಕವೆ ಏರ್ಪಟ್ಟಿದೆ, ಇದನ್ನು ಹೇಗಾದರೂ ಮಾಡಿ ಸರಿಪಡಿಸಲೇಬೇಕು ಎಂದು ಶ್ರಾವಣಿ ಅಂದುಕೊಂಡಿರುತ್ತಾಳೆ. ಆ ಪ್ರಕಾರವಾಗಿ ಶ್ರಾವಣಿ ವರದನ ಬಳಿ ವರಲಕ್ಷ್ಮಿಯನ್ನ ಕಿಡ್ನಾಪ್ ಮಾಡಬೇಕಾಗಿ ವಿನಂತಿ ಮಾಡುತ್ತಾಳೆ. ವರದನಿಗೇ ವರಲಕ್ಷ್ಮಿ ಎಂದರೆ ಬಹಳ ಪ್ರೀತಿ.

ಆದರೆ ಆಕೆಯನ್ನು ಮದುವೆಯಾಗಲು ಇಂದ್ರಮ್ಮ ಬಿಡುವುದಿಲ್ಲ ಇದರಿಂದಾಗಿ ವರದ ಬಹಳಷ್ಟು ನೊಂದುಕೊಳ್ಳುತ್ತಾನೆ. ವರಲಕ್ಷ್ಮಿ ತನ್ನ ಪ್ರೀತಿ ತನಗೆ ಸಿಗುತ್ತಿಲ್ಲ ಎನ್ನುವ ನೋವು ಆಕೆಯನ್ನ ಬಹಳಷ್ಟು ಕಾಡುತ್ತದೆ. ಆದರೆ ಅದಕ್ಕೆಲ್ಲ ಶ್ರಾವಣಿ ಫುಲ್ ಸ್ಟಾಪ್ ಇಟ್ಟಿದ್ದಾಳೆ. ಇಂದ್ರಮ್ಮ ಮನೆಯಲ್ಲಿ ವರದ ಕಾಣಿಸದೆ ಇರುವುದನ್ನು ಕಂಡು ಬಹಳಷ್ಟು ಭಯ ಪಡುತ್ತಾಳೆ. ನನ್ನ ಮಗ ಯಾವತ್ತೂ ಕೂಡ ಈ ರೀತಿ ಮಾಡಿದವನಲ್ಲ ಆದರೆ ಈಗ ಯಾಕೆ ಆತ ನನ್ನ ಕಣ್ಣಿಗೆ ಕಾಣಿಸುತ್ತಿಲ್ಲ ಆತ ಎಲ್ಲಿಗೆ ಹೋಗಿರಬಹುದು ವರದ ಎಲ್ಲಿಗಾದರೂ ಹೋಗುವ ಮುನ್ನ ನನ್ನ ಬಳಿ ಹೇಳಿ ಹೋಗುತ್ತಾನಲ್ಲ ಎಂದು ಇಂದ್ರಮ್ಮ ಬಾಯ್ ಬಾಯ್ ಬಡಿದುಕೊಂಡು ಇರುತ್ತಾಳೆ.

kannada serial shravani subramanya written 20th February

ಇಂದ್ರಮ್ಮ ವರದನ ಮದುವೆಯನ್ನು ಹೀಗೆ ಮಾಡಬೇಕು ಹಾಗೆ ಮಾಡಬೇಕು ಎಂದೆಲ್ಲ ಕನಸು ಕಂಡಿರುತ್ತಾಳೆ. ಯಾಕೆಂದರೆ ಸುಬ್ಬು ಜೊತೆ ತನ್ನ ಮಗಳನ್ನು ಮದುವೆ ಮಾಡಲು ಆಕೆಗೆ ಸಾಧ್ಯವಾಗಿರುವುದಿಲ್ಲ. ಆ ದ್ವೇಷದಿಂದಾಗಿ ಇಂದ್ರಮ್ಮ ವರದನ ಮದುವೆಯನ್ನು ಬಹಳ ಅದ್ದೂರಿಯಾಗಿ ಮಾಡಬೇಕು ಎಂದು ಅಂದುಕೊಂಡಿರುತ್ತಾಳೆ. ಆದರೆ ವರದ ಮನೆಯಲ್ಲಿ ಕಾಣಿಸದಿರುವುದನ್ನ ಕಂಡು ಬಹಳ ಗಾಬರಿ ಪಡುತ್ತಾಳೆ. ವರದನನ್ನು ಹುಡುಕಿಕೊಂಡು ಇಂದ್ರಮ್ಮ ನೇರವಾಗಿ ಸುಬ್ಬು ಮನೆಗೆ ಬರುತ್ತಾಳೆ. ವರದ ಬಾ ಮನೆಯಿಂದ ಹೊರಗೆ ಎಂದು ಜೋರಾಗಿ ಕರೆಯುತ್ತಾಳೆ. ಆದರೆ ಇಂದ್ರಮ್ಮನ ಧ್ವನಿ ಕೇಳಿ ಮನೆ ಮಂದಿ ಓಡೋಡಿ ಬರುತ್ತಾರೆ.

ವರಲಕ್ಷ್ಮೀ ಮನೆಯಲ್ಲಿ ಇಲ್ಲದ್ದನ್ನು ಕಂಡು ಗಾಬರಿಯಾದ ಸುಬ್ಬು

ಸುಬ್ಬು ಮನೆಯಲ್ಲಿ ವರಲಕ್ಷ್ಮಿ ಕಾಣಿಸದಿರುವುದನ್ನ ಕಂಡು ಇನ್ನೇನೋ ಪಿತೂರಿ ನಡೆದಿದೆ ಎನ್ನುವ ಹಾಗೆ ಇಂದ್ರಮ್ಮ ಬಹಳ ಜೋರಾಗಿ ಮಾತನಾಡುತ್ತಾಳೆ. ಇಂದ್ರಮ್ಮ ನ ಮಾತು ಕೇಳಿದ ಸುಬ್ಬು ಮನೆಯವರು ಬಹಳ ನೋವು ಪಡುತ್ತಾರೆ. ಹಾಗೆಯೇ ವರದ ಎಲ್ಲಾದರೂ ಸಿಗದೇ ಇದ್ದರೆ ನೀವೆಲ್ಲರೂ ಈ ಮನೆಯಿಂದ ಆಚೆ ಹೋಗಬೇಕು ಹಾಗೆ ಮಾಡುತ್ತೇನೆ ಎಂದು ಇಂದ್ರಮ್ಮ ವಾರ್ನಿಂಗ್ ಮಾಡುತ್ತಾಳೆ. ಆ ವೇಳೆ ಅಲ್ಲಿಗೆ ಕಾರು ಬಂದು ನಿಲ್ಲುತ್ತದೆ. ಕಾರಿನಿಂದ ವರಲಕ್ಷ್ಮೀ ಹಾಗೆಯೇ ವರದ ಇಬ್ಬರು ಇಳಿಯುತ್ತಾರೆ.

ವರಲಕ್ಷ್ಮೀಯನ್ನು ಕಂಡು ಕೋಪಗೊಂಡ ಇಂದ್ರಮ್ಮ

ವರಲಕ್ಷ್ಮೀ ಕುತ್ತಿಗೆಯಲ್ಲಿ ವರದ ಕಟ್ಟಿರುವ ತಾಳಿ ಇರುವುದನ್ನು ಗಮನಿಸಿದ ಅಲ್ಲಿಯವರು ಬಹಳಷ್ಟು ಗಾಬರಿ ವ್ಯಕ್ತಪಡಿಸುತ್ತಾರೆ. ಇಂದ್ರಮ್ಮಗೆ ವರಲಕ್ಷ್ಮಿ ಹಾಗೂ ವರದನನ್ನು ನೋಡಿ ಬಹಳಷ್ಟು ಕೋಪ ಬರುತ್ತದೆ. ಹೀಗೆಲ್ಲಾ ಯಾಕಾಯಿತು ಎನ್ನುವ ಆಲೋಚನೆ ಆಕೆಗೆ ಮೂಡುತ್ತದೆ. ಇತ್ತ ವರದನ್ನು ನೋಡಿದ ಇಂದ್ರಮ್ಮ ಯಾಕೆ ಹೀಗೆ ನಮಗೆಲ್ಲ ಮೋಸ ಮಾಡಿದೆ ನೀನು ಎಂದು ಹೊಡೆಯುತ್ತಾಳೆ . ಹಾಗೆಯೇ ವರಲಕ್ಷ್ಮೀ ಬಳಿ ಬಂದು ಅಂತೂ ಇಂತೂ ನನ್ನ ಮಗಳನ್ನು ಮದುವೆ ಆದೆಯಲ್ಲೇ ಎಂದು ಹೇಳಿ ಕೆನ್ನೆಗೆ ಹೊಡೆಯಲು ಕೈ ಎತ್ತುತ್ತಾಳೆ. ಆ ಕ್ಷಣದಲ್ಲಿ ಶ್ರಾವಣಿ ಕಾರಿನ ಒಳಗಿನಿಂದಲೇ ಇಂದ್ರಮ್ಮ ಎಂದು ಜೋರಾಗಿ ಕರೆಯುತ್ತಾಳೆ. ಶ್ರಾವಣಿಯ ಧ್ವನಿ ಕೇಳಿಸಿಕೊಂಡ ಇಂದ್ರಮ್ಮ ಹಾಗೆಯೇ ಸ್ತಬ್ಧರಾಗಿ ಬಿಡುತ್ತಾರೆ. ಶ್ರಾವಣಿ ಕಾರಿನಿಂದ ಇಳಿದು ಬಂದು ಇಂದ್ರಮ್ಮ ಕೈ ಕೆಳಗಿಳಿಸುತ್ತಾಳೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X