Shravani Subramanya ; ಅಣ್ಣನ ಪರಿಸ್ಥಿತಿ ಅರ್ಥ ಮಾಡಿಕೊಳ್ಳದ ತಂಗಿ? ವರಲಕ್ಷ್ಮೀ ಇಷ್ಟೊಂದು ಸ್ವಾರ್ಥಿನಾ?
ಶ್ರಾವಣಿಯ ಜೊತೆ ಸುಬ್ಬು ಒಂದು ದಿನ ಇದ್ದ ಎನ್ನುವ ಕಾರಣಕ್ಕಾಗಿ ಆತನ ಬಗ್ಗೆ ಇಲ್ಲಸಲ್ಲದ ಮಾತುಗಳು ಕೇಳಿ ಬರುತ್ತಿದೆ. ರೌಡಿಗಳಿಂದ ಶ್ರಾವಣಿ ಹಾಗೂ ಸುಬ್ಬು ತಪ್ಪಿಸಿಕೊಂಡು ಬಂದು ಕಾಡಿನಲ್ಲಿ ಅಡಗಿ ಕುಳಿತುಕೊಳ್ಳುತ್ತಾರೆ. ಆದರೆ ಈ ವಿಚಾರ ಯಾರಿಗೂ ಕೂಡ ತಿಳಿದಿರುವುದಿಲ್ಲ. ಆದರೆ ಇದನ್ನೆಲ್ಲಾ ಮಾಡಿರುವುದು ಶ್ರಾವಣಿಯ ಅತ್ತೆ. ಆದರೆ ಆಕೆ ತನಗೇನು ಗೊತ್ತಿಲ್ಲ ಎನ್ನುವ ಹಾಗೆ ಇದ್ದುಬಿಡುತ್ತಾಳೆ. ಶ್ರಾವಣಿ ಮನೆಗೆ ಬಂದಿಲ್ಲ ಎಂದು ಮನೆ ಮಂದಿಯಲ್ಲ ಬಹಳ ಭಯದಲ್ಲಿ ಕಾಲ ಕಳೆಯುತ್ತಿರುತ್ತಾರೆ. ಶ್ರಾವಣಿ ಹಾಗು ಸುಬ್ಬು ಎಲ್ಲಿಗೆ ಹೋಗಿರಬಹುದು ರಾತ್ರಿ ಎಲ್ಲಾ ಮನೆಗೆ ಬಾರದೆ ಇರುವಂತಹ ಪರಿಸ್ಥಿತಿ ಏನಿತ್ತು ಎಂದೆಲ್ಲಾ ಯೋಚನೆ ಮಾಡುತ್ತಿರುತ್ತಾರೆ.
ಇತ್ತ ಸುಬ್ಬು ತಂಗಿ ವರಲಕ್ಷ್ಮೀಗೆ ಎಲ್ಲಿ ತಾನು ಪ್ರೀತಿಸಿದ ಹುಡುಗನ ಕಳೆದುಕೊಂಡು ಬಿಡುತ್ತೇನೆ ಎನ್ನುವ ಭಯ. ಯಾಕೆಂದರೆ ವರಲಕ್ಷ್ಮಿಯ ಪ್ರೀತಿಗೆ ಗಂಡಿನ ಮನೆಯವರೆಲ್ಲರೂ ವಿರೋಧ ಮಾಡುತ್ತಿದ್ದರು. ಇದೀಗ ಅಣ್ಣ ಕೂಡ ಹೀಗೆ ಹೇಳದೆ ಕೇಳದೆ ಶ್ರಾವಣಿ ಜೊತೆ ಕಾಣೆಯಾಗಿದ್ದಾನೆ. ಆದರೆ ವರಲಕ್ಷ್ಮೀ ಹುಡುಗ ಬಹಳ ಚೆನ್ನಾಗಿ ಆಕೆಯನ್ನು ನೋಡಿಕೊಳ್ಳುತ್ತಿದ್ದಾನೆ. ಅವನು ವರಲಕ್ಷ್ಮಿ ನನ್ನ ಜೊತೆ ಇಲ್ಲದಿದ್ದರೆ ನಾನು ಖಂಡಿತವಾಗಿಯೂ ಜೀವಂತವಾಗಿರುವುದಿಲ್ಲ ಹಾಗೆಯೇ ನಾನು ಬೇರೆ ಹುಡುಗಿಯನ್ನ ಮದುವೆಯಾಗುವುದಿಲ್ಲ ಎಂದು ಹೇಳಿರುತ್ತಾನೆ.

ಇನ್ನೂ ಶ್ರಾವಣಿ ಹಾಗೂ ಸುಬ್ರಮಣ್ಯ ಮನೆಗೆ ಬಾರದೆ ಇರುವುದನ್ನ ಕಂಡು ವರಲಕ್ಷ್ಮೀ ಹುಡುಗನ ಮನೆಯವರು ಬಹಳ ಕೆಟ್ಟದಾಗಿ ಮಾತನಾಡುತ್ತಿರುತ್ತಾರೆ. ಇದೆಲ್ಲವನ್ನು ಕಂಡ ವರುಗೆ ಅಣ್ಣನ ಮೇಲೆ ಬಹಳ ಸಿಟ್ಟು ಬರುತ್ತದೆ. ತನ್ನ ಅಣ್ಣನಿಂದಾಗಿ ತಾನು ಪ್ರೀತಿಸಿದ ಹುಡುಗ ನನ್ನನ್ನ ಬಿಟ್ಟು ಹೋಗುತ್ತಾನೆ ಎನ್ನುವ ಭಯ ಆಕೆಗೆ ಶುರುವಾಗಿ ಬಿಟ್ಟಿದೆ. ಇನ್ನು ಶ್ರಾವಣಿಗೆ ಕೂಡ ಸುಬ್ರಮಣ್ಯ ಮೇಲೆ ಪ್ರೀತಿ ಹುಟ್ಟಿದೆ
ರೌಡಿಗಳಿಂದ ತಪ್ಪಿಸಿಕೊಂಡಿದ್ದ ಸುಬ್ಬು ಶ್ರಾವಣಿ
ಶ್ರಾವಣಿ ಆಗಾಗ ಆಕೆಯ ಚಿಕ್ಕಮ್ಮನ ಬಳಿ ಸುಬ್ಬು ಬಗ್ಗೆ ಹೇಳುತ್ತಿರುತ್ತಾಳೆ. ಶ್ರಾವಣಿಯ ಮನಸ್ಸಲ್ಲಿ ಆಗುತ್ತಿರುವ ಬದಲಾವಣೆಯನ್ನು ನೋಡಿದ ಆಕೆಯ ಚಿಕ್ಕಮ್ಮನಿಗೆ ಭಯವಾಗುತ್ತದೆ. ಶ್ರಾವಣಿ ಬದಲಾಗುತ್ತಿದ್ದಾಳೆ ಎನ್ನುವ ಅನುಮಾನ ಕೂಡ ಆಕೆಗೆ ಮೂಡುತ್ತದೆ. ಇದರಿಂದಾಗಿ ಶ್ರಾವಣಿಯ ಚಿಕ್ಕಮ್ಮ ಕೂಡ ಸ್ವಲ್ಪ ಭಯದಲ್ಲಿ ಇರುತ್ತಾಳೆ. ಸುಬ್ರಮಣ್ಯ ಹಾಗೂ ಶ್ರಾವಣಿ ಎಲ್ಲಿಗೆ ಹೋಗಿದ್ದಾರೆ. ಎನ್ನುವ ವಿಚಾರ ಕೂಡ ಆಕೆಗೆ ದೊಡ್ಡ ತಲೆನೋವು ತರಿಸಿದೆ. ಸುಬ್ರಮಣ್ಯ ತನ್ನ ಮನೆಗೆ ಹಾಗೂ ಧಣಿ ಗಳಿಗೆ ಎಲ್ಲ ವಿಚಾರವನ್ನು ಹೇಳಬೇಕು ಎಂದು ಅಂದುಕೊಂಡರು ಆ ಕಾಡಿನ ಮಧ್ಯ ನೆಟ್ವರ್ಕ್ ಬೇರೆ ಇರುವುದಿಲ್ಲ ಇನ್ನು ಹೇಗೋ ಮುಂಜಾನೆ ಶ್ರಾವಣಿ ಹಾಗೂ ಸುಬ್ರಮಣ್ಯ ಮನೆಗೆ ಬರುತ್ತಾರೆ ಆಗ ಮನೆಯವರೆಲ್ಲರೂ ಕೂಡ ಬಹಳ ಜೋರಾಗಿ ಬಯ್ಯುತ್ತಾರೆ
ಮನೆಯವರ ಮಾತಿಗೆ ನೊಂದ ಸುಬ್ಬು
ಹಾಗೆಯೇ ರಾತ್ರಿ ಎಲ್ಲಾ ನೀನು ಮತ್ತೆ ಶ್ರಾವಣಿ ಎಲ್ಲಿಗೆ ಹೋಗಿದ್ದೀರಿ ನೀವಿಬ್ಬರೂ ನಮಗಿಂತ ಬೇಗ ಬಂದಿರುತ್ತಿರಿ ಎಂದು ಅಂದುಕೊಂಡಿದ್ದೆವು ಆದರೆ ನೀವು ಎಲ್ಲಿಗೆ ಹೋಗಿದ್ದೀರಿ ಹಾಗೆಯೇ ಯಾಕಾಗಿ ಹೋಗಿದ್ದೀರಿ ಎಂದೆಲ್ಲಾ ಪ್ರಶ್ನೆ ಮೇಲೆ ಪ್ರಶ್ನೆ ಕೇಳುತ್ತಾರೆ . ಆಗ ಸುಬ್ರಮಣ್ಯ ನಡೆದ ವಿಚಾರವನ್ನೆಲ್ಲ ತನ್ನ ಧಣಿಗಳ ಬಳಿ ಹೇಳುತ್ತಾನೆ. ಇದನ್ನು ಶ್ರಾವಣಿಯ ತಂದೆ ನಂಬಿದರೂ ಕೂಡ ವಿಜಯಾಂಬಿಕೆ ಮಾತ್ರ ಸುಬ್ಬುವಿನದ್ದೇ ತಪ್ಪು ಎನ್ನುವ ಹಾಗೆ ಮಾತನಾಡುತ್ತಾಳೆ. ಇನ್ನು ಸುಬ್ಬು ಮನೆಗೆ ಬರುತ್ತಾನೆ ಬಂದಾಗ ವರಲಕ್ಷ್ಮಿಯ ಮನಸ್ಥಿತಿ ಬದಲಾಗಿ ಹೋಗಿರುತ್ತದೆ. ಅಣ್ಣ ಬಹಳ ಕಷ್ಟದಲ್ಲಿದ್ದರೂ ಕೂಡ ಆತನ ಬಗ್ಗೆ ಯೋಚನೆ ಮಾಡುವುದಿಲ್ಲ ವರಲಕ್ಷ್ಮಿ .
ಅಣ್ಣನಿಗೆ ನೋವಾಗುವ ಹಾಗೆ ಮಾತಾನಾಡಿದ ವರಲಕ್ಷ್ಮೀ
ತನ್ನ ಅಣ್ಣನಿಂದಾಗಿ ನನ್ನ ಮದುವೆ ಕೂಡ ನಿಂತು ಹೋಗುತ್ತದೆ ಎನ್ನುವ ಭಯದಲ್ಲಿ ಇರುತ್ತಾಳೆ. ಸುಬ್ಬು ಅದೆಷ್ಟೇ ಪ್ರಯತ್ನ ಪಟ್ಟರು ತಂಗಿ ಅರ್ಥ ಮಾಡಿಕೊಳ್ಳಲ್ಲ. ಬದಲಿಗೆ ಆಕೆ ತನ್ನ ಅಣ್ಣನಿಗೆ ಚುಚ್ಚು ಮಾತಿನಿಂದಲೇ ನಿಂದನೆ ಮಾಡುತ್ತಿರುತ್ತಾಳೆ. ಸುಬ್ಬುಗೆ ಬಹಳ ನೋವಾಗುತ್ತದೆ ಆದರೆ ಅದೆಲ್ಲವನ್ನು ಸಹಿಸಿಕೊಂಡು ಸುಮ್ಮನಿರುತ್ತಾನೆ


Click it and Unblock the Notifications











