Shravani Subramanya ; ಮೊದಲ ರಾತ್ರಿಯಂದೇ ಶ್ರಾವಣಿ ಬದುಕಿನಲ್ಲಿ ಅಲ್ಲೋಲ, ಕಲ್ಲೋಲ. !

By ಪೂರ್ವ

ಶ್ರಾವಣಿ ಮಾಡಿದ ಒಂದೇ ಒಂದು ಕೆಲಸದಿಂದ ಸುಬ್ಬು ಮನೆಯವರ ಮನದಲ್ಲಿ ಬಿರುಗಾಳಿ ಎದ್ದಿದೆ. ಶ್ರಾವಣಿಗೆ ಸುಬ್ಬು ಜೊತೆ ಪ್ರೇಮಾಂಕುರವಾಗಿತ್ತು. ಆದರ ಸಲುವಾಗಿ ಸುಬ್ಬುವನ್ನು ಮದುವೆ ಆಗುತ್ತಾಳೆ. ಆದರೆ ಸುಬ್ಬುಗೆ ಶ್ರಾವಣಿ ಎಂದರೆ ಗೌರವ. ಶ್ರಾವಣಿ ಅಮ್ಮನ ಜೊತೆಗೆ ಬಹಳಷ್ಟು ಕಾಲ ಕಳೆದ ಸುಬ್ಬುಗೆ ಆಕೆಯ ಮೇಲೆ ಕೊಂಚವೂ ಪ್ರೀತಿ ಹುಟ್ಟುವುದಿಲ್ಲ ತನ್ನ ತಂಗಿ ವರಲಕ್ಷ್ಮಿಗಾಗಿ ವರದನ ತಂಗಿಯನ್ನು ಮದುವೆಯಾಗಲು ಸುಬ್ಬು ಮುಂದಾಗಿರುತ್ತಾನೆ.

ಆದರೆ ಇದೀಗ ಶ್ರಾವಣಿಯಿಂದಾಗಿ ಸುಬ್ಬು ಮನೆಯಲ್ಲಿ ಶೋಕ ಮಡುಗಟ್ಟಿದೆ. ಸುಬ್ಬುವಿನ ತಾಯಿ ಸುಬ್ಬುವಿಗೆ ಹೇಳಬಾರದ ಮಾತುಗಳನ್ನೆಲ್ಲ ಹೇಳಿ ಆತನ ಮನಸ್ಸನ್ನೇ ಒಡೆದು ಹಾಕಿದ್ದಾರೆ. ಇತ್ತ ವರಲಕ್ಷ್ಮಿ ವರದನನ್ನು ಮರೆಯಲು ಆಗದೆ ಒದ್ದಾಡುತ್ತಿದ್ದಾಳೆ . ಆದರೆ ಶ್ರಾವಣಿಗೆ ಇದ್ಯಾವುದೂ ಕೂಡ ಕಣ್ಣಿಗೆ ಕಾಣಿಸುವುದೇ ಇಲ್ಲ ಆಕೆಗೆ ತಾನೊಬ್ಬಳೇ ಚೆನ್ನಾಗಿರಬೇಕೆನ್ನುವ ಆಸೆ. ಆದರೆ ಸುಬ್ಬುವಿನ ಒದ್ದಾಟಕ್ಕೆ ಮಾತ್ರ ಶ್ರಾವಣಿ ಮನಸು ಕರಗುವುದೇ ಇಲ್ಲ.

kannada serial shravani subramanya written 4th February

ಸುಬ್ಬು ಹಾಗೂ ಶ್ರಾವಣಿಗೆ ಇದೀಗ ಮೊದಲ ರಾತ್ರಿಯ ಶುಭದಿನ. ಸುಬ್ಬುವಿನ ತಂದೆ ಮಗ ಹಾಗೂ ಸೊಸೆಯ ಮೊದಲನೇ ರಾತ್ರಿ ಗೆ ರೆಡಿ ಮಾಡಿರುತ್ತಾರೆ ಹಾಗೆಯೇ ಮಗ ಸೊಸೆಯನ್ನು ಒಂದೇ ರೂಮ್ ಗೆ ಕಳುಹಿಸುತ್ತಾರೆ. ಈ ವೇಳೆ ಸುಬ್ಬುವಿಗೆ ಶ್ರಾವಣಿ ಮೇಲೆ ಬಹಳಷ್ಟು ಕೋಪ ಬರುತ್ತದೆ. ಶ್ರಾವಣಿ ಒಳಗೆ ಬರುತ್ತಿದ್ದಂತೆಯೇ ಸುಬ್ಬುಗೆ ಮತ್ತಷ್ಟು ಕೋಪ ಬರುತ್ತದೆ. ಶ್ರಾವಣಿ ಮೇಡಂ ಯಾಕೆ ಈ ರೀತಿ ನೀವು ಮಾಡಿದಿರಿ. ನೀವು ಮಾಡಿದ್ದು ನಿಮಗೆ ಸರಿ ಎಂದೆಸುತ್ತಿದೆಯಾ. ನನ್ನ ಜೀವನ ಹಾಳು ಮಾಡಿಬಿಟ್ಟಿದ್ದೀರಾ? ನನ್ನ ತಾಯಿ ನನಗೆ ಅನ್ನಬಾರದು ಮಾತು ಹೇಳಿದರು ಆದರೂ ನಾನು ಯಾಕೆ ನಿಜ ವಿಚಾರ ಹೇಳಿಲ್ಲ ಎಂದರೆ ನಿಮಗೆ ಕೊಟ್ಟ ಮಾತಿನಿಂದಾಗಿ ನಾನು ನಿಜ ಹೇಳಲು ಆಗುತ್ತಿಲ್ಲ ಎಂದು ಜೋರಾಗಿ ಶ್ರಾವಣಿ ಮುಂದೆ ಹೇಳಿದಾಗ ಶ್ರಾವಣಿ ಮೌನಿಯಾಗಿ ಇರುತ್ತಾಳೆ.

ಸುಬ್ಬು ಮಾತಿಗೆ ಕಣ್ಣೀರಿಟ್ಟ ಶ್ರಾವಣಿ

ಸುಬ್ಬುಗೆ ತನ್ನ ಯಜಮಾನರ ನಂಬಿಕೆಯನ್ನು ಕಳೆದುಕೊಂಡಿದ್ದೇನೆ ಎನ್ನುವ ಭಯ ಕಾಡುತ್ತಿರುತ್ತದೆ. ಆದರೆ ಶ್ರಾವಣಿಗೆ ಇದೆಲ್ಲ ಯಾವುದು ಅರ್ಥ ಆಗುತ್ತಿಲ್ಲ. ಸುಬ್ಬು ಮಾತು ಮುಗಿದ ಬಳಿಕ ಶ್ರಾವಣಿ, ಸುಬ್ಬು ನೀನು ನನ್ನ ಗಂಡನಾಗಿ ನನ್ನ ಜೊತೆಯಿರು ಎಂದು ನಾನು ಹೇಳಿಲ್ಲ ಎಂದು ಸುಬ್ಬು ಮೈ ಮುಟ್ಟಲು ಬರುತ್ತಾಳೆ. ಆಗ ಕೋಪದಿಂದ ಶ್ರಾವಣಿಯನ್ನು ಸುಬ್ಬು ದೂರ ತಳ್ಳುತ್ತಾನೆ. ಸುಬ್ಬು ಗೆ ತನ್ನ ಮೇಲೆ ಬಹಳಷ್ಟು ಕೋಪ ಇದೆ ಎನ್ನುವುದು ಶ್ರಾವಣಿಗೆ ಮನವರಿಕೆಯಾಗುತ್ತೆ. ಇತ್ತ ಸುಬ್ಬು ನ ಮದುವೆ ಆಗಬೇಕಿದ್ದ ವರದನ ತಂಗಿ ಸುಬ್ಬು, ಶ್ರಾವಣಿ ಮೇಲೆ ಹಲ್ಲು ಮಸೆಯುತ್ತಾಳೆ.

ವರದನಿಗೆ ಮದುವೆ ಮಾಡಲು ಮುಂದಾದ ತಾಯಿ

ಅದು ಹೇಗೆ ನೀವು ಸುಖವಾಗಿ ಜೀವನ ಸಾಗಿಸುತ್ತೀರಿ ಎನ್ನುವುದನ್ನು ನಾನು ನೋಡುತ್ತೇನೆ ಎಂದು ಖಡಕ್ ಆಗಿ ಹೇಳುತ್ತಾಳೆ. ಇತ್ತ ವರದನ ತಾಯಿ ಆತನಿಗೆ ಇನ್ನೊಂದು ಮದುವೆ ಮಾಡಲು ಮುಂದಾಗಿದ್ದಾರೆ. ಒಂದೇ ವಾರದಲ್ಲಿ ನನ್ನ ಮನೆಗೆ ಸೊಸೆ ಬರಬೇಕು ಎಂದು ವರದನ ತಾಯಿ ಖಡಕ್ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ . ವರಲಕ್ಷ್ಮಿ ಗೆ ವರದ ಎಂದರೆ ಬಹಳಷ್ಟು ಪ್ರೀತಿ. ಆದರೆ ಸುಬ್ಬುವಿನಿಂದಾಗಿ ತಾನು ತನ್ನ ಪ್ರೀತಿಯನ್ನು ಪಡೆದುಕೊಳ್ಳಲು ಆಗುತ್ತಿಲ್ಲವಲ್ಲ ಎಂದು ಬಹಳಷ್ಟು ಬೇಸರ ಪಡುತ್ತಾಳೆ. ಇತ್ತ ಸುಬ್ಬು ತನ್ನ ಮನೆಯವರಿಗೆ ನಾನು ನೋವು ಕೊಟ್ಟುಬಿಟ್ಟೆನಲ್ಲ ಎನ್ನುವ ಬೇಸರದಲ್ಲಿ ಕಾಲ ಕಳೆಯುತ್ತಿದ್ದಾನೆ.

ಸುಬ್ಬು ಮೇಲೆ ಕಿಡಿಕಾರಿದ ಶ್ರಾವಣಿ ತಂದೆ

ಶ್ರಾವಣಿ ತಂದೆ ಮಾತ್ರ ಸುಬ್ಬು ಮೇಲೆ ಹಲ್ಲು ಮಸೆಯುತ್ತಿದ್ದಾರೆ. ತನ್ನ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದಾತ ಇದೀಗ ಮನೆಯ ಅಳಿಯ. ನಾನು ಯಾವತ್ತೂ ಯಾರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಬಹಳ ಖಡಕ್ ಆಗಿ ಹೇಳುತ್ತಾನೆ. ಸುಬ್ಬು ಹಾಗೂ ಶ್ರಾವಣಿ ತಂದೆಯ ನಡುವೆ ಉತ್ತಮ ಬಾಂಧವ್ಯ ಇತ್ತು ಆದರೆ ಇದೀಗ ಆ ಬಾಂಧವ್ಯ ಒಡೆದು ಛಿದ್ರ ಆಗಿರುವುದು ಮಾತ್ರ ಸತ್ಯ

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X