Shravani Subramanya ; ಹೆತ್ತ ತಾಯಿಯ ಮೇಲೆ ಕೈಮಾಡಿದ ಮದನ್, ವಿಜಯಂಬಿಕಗೆ ತಕ್ಕ ಪಾಠ ಕಲಿಸಿದ ಮಗ ಎಂದ ಫ್ಯಾನ್ಸ್ !
ಶ್ರಾವಣಿ ಮದನ್ ನನ್ನು ಮದುವೆ ಆಗಿಲ್ಲ ಎನ್ನುವ ಕಾರಣಕ್ಕೆ ಆತನಿಗೆ ಬಹಳಷ್ಟು ಕೋಪ ಬಂದಿರುತ್ತದೆ ಹಾಗೆಯೇ ಬಹಳಷ್ಟು ಡಿಪ್ರೆಶನ್ ಗೆ ಹೋಗುತ್ತಾನೆ. ಶ್ರಾವಣಿಗೆ ಮದನ್ ನನ್ನು ನೋಡಿದರೆ ಆಗುತ್ತಿರಲಿಲ್ಲ. ಆದರೆ ಇದೀಗ ಶ್ರಾವಣಿ ಇಲ್ಲದೆ ಮದನ್ ಇಲ್ಲ ಎನ್ನುವ ಹಾಗಾಗಿದೆ. ವಿಜಾಯಂಬಿಕಗೆ ತನ್ನ ಮಗ ಮದುವೆ ಮುರಿದು ಬಿದ್ದ ಬಳಿಕ ಎಲ್ಲಿಯೂ ಕಾಣಿಸಲಿಲ್ಲ. ಮಗ ಎಲ್ಲಿ ಹೋದ ಏನಾದ ಎಂದು ಬಹಳ ಆತಂಕ ಆಗುತ್ತದೆ. ಆದರೆ ಇದೀಗ ಮದನ್ ಮನೆಗೆ ಬಂದಿದ್ದಾನೆ ವಿಜಯಂಬಿಕ ಮನದಲ್ಲಿ ಕೊಂಚ ಖುಷಿ ಮೂಡುತ್ತದೆ. ಬಹಳಷ್ಟು ಭಯಗೊಂಡಿದ್ದ ವಿಜಯಾಂಬಿಕ ಇದೀಗ ನಿಟ್ಟುಸಿರು ಬಿಟ್ಟಿದ್ದಾಳೆ.
ಆದರೆ ಮದನ್ ಗೆ ತನ್ನ ತಾಯಿಯ ಮೇಲೆ ಬಹಳ ಸಿಟ್ಟು ಬರುತ್ತದೆ. ಚಿಕ್ಕ ವಯಸ್ಸಿನಿಂದಲೂ ಕೊಂಚವೂ ಭಯ ಭಕ್ತಿ ಇಲ್ಲದೆ ಬೆಳೆಸಿದಳು. ಹಾಗೆಯೇ ಶ್ರಾವಣಿ ನಿನ್ನ ಹೆಂಡತಿ ಎನ್ನುವ ಹಾಗೆ ವಿಜಯಂಬಿಕ ಬೆಳೆಸಿರುತ್ತಾಳೆ. ಆದರೆ ಶ್ರಾವಣಿ ಕೊನೆಗೆ ಸುಬ್ಬು ನ ಮದುವೆ ಆದಾಗ ಮದನ್ ಗೆ ಬಹಳ ನೋವು ಆಗುತ್ತದೆ ಹಾಗೆಯೇ ಬಹಳ ಆತಂಕ ಹೆಚ್ಚಾಗುತ್ತದೆ. ಅವಮಾನ ಆಗುತ್ತದೆ. ಏನು ಮಾಡಬೇಕು ಎಂದು ದಿಕ್ಕೇ ತೋಚದ ಹಾಗೆ ಆಗುತ್ತದೆ ಮದನ್ ಕುಡಿತದ ಚಟಕ್ಕೇ ದಾಸನಾಗಿದ್ದಾನೆ.

ವಿಜಯಂಬಿಕ ಗೆ ಮಗನನ್ನು ನೋಡಿ ಬಹಳ ಖುಷಿ ಆಗುತ್ತದೆ ಮದನ್ ನೀನು ಎಲ್ಲಿಗೆ ಹೋಗಿದ್ದೆ. ನಿನ್ನನ್ನು ಹುಡುಕದ ಜಾಗ ಇಲ್ಲ. ಶ್ರಾವಣಿ ಬೇರೆ ಮದುವೆ ಆದರೆ ಏನಂತೆ ಆಕೆ ಯಾವತ್ತಿದ್ದರೂ ನಿನ್ನವಳೇ ಆಕೆ ನಿನಗೆ ಸೇರಿದವಳು. ಹೇಗಾದರೂ ಮಾಡಿ ಆಕೆಯನ್ನು ನಿನಗೆ ಕೊಟ್ಟು ಮದುವೆ ಮಾಡುತ್ತೇನೆ ಎಂದು ಹೇಳಿದಾಗ ಮದನ್ ಗೆ ಬಹಳ ಕೋಪ ಬರುತ್ತದೆ. ಆತ ಅಮ್ಮನ ಕೆನ್ನೆಗೆ ಬಲವಾಗಿ ಹೊಡೆಯುತ್ತಾನೆ. ವಿಜಯೆಂಬಿಕ ಗೆ ಶಾಕ್ ಆಗುತ್ತದೆ. ಜನ್ಮ ನೀಡಿದ ತಾಯಿಗೆ ಯಾವ ಮಗನೂ ಹೊಡೆಯುವುದಿಲ್ಲ. ಆದರೆ ಇದೀಗ ಮದನ್ ತನ್ನ ತಾಯಿಯ ಮೇಲೆ ಬಹಳ ಕೋಪಗೊಂಡಿದ್ದಾನೆ.
ಮಗನ ಉಗ್ರ ರೂಪ ಕಂಡು ಭಯಪಟ್ಟ ವಿಜಯಾಂಬಿಕಾ
ವಿಜಯಂಬಿಕ ಬಹಳಷ್ಟು ಶಾಕ್ ನಲ್ಲಿ ಇರುತ್ತಾಳೆ. ಆಕೆಗೆ ಮಗ ಹೊಡೆಯುತ್ತಾನೆ ಅಂದುಕೊಂಡಿರಲಿಲ್ಲ. ಇತ್ತ ವರಲಕ್ಷ್ಮೀ ಜೊತೆ ವರದ ಮದುವೆ ಕೂಡ ಮುರಿದು ಬಿದ್ದಿದೆ. ವರಲಕ್ಷ್ಮೀ ಗೆ ವರದ ಎಂದರೆ ಬಹಳಷ್ಟು ಪ್ರೀತಿ. ಆತನ ಜೊತೆ ಮದುವೆ ಆಗಬೇಕೆಂಬುವುದು ಹಲವು ವರುಷಗಳ ಬಯಕೆ. ಹೇಗಾದರು ಮದುವೆ ಆಗಬೇಕು ಎಂದು ಅಂದುಕೊಂಡು ಇರುತ್ತಾಳೆ. ಸುಬ್ಬು ಜೊತೆ ವರದನ ತಂಗಿ ಮದುವೆ ಮಾಡಿದರೆ ನನ್ನದು ವರದ ನ ಮದುವೆಗೆ ಯಾವ ಅಡ್ಡಿಯೂ ಇರುವುದಿಲ್ಲ ಎಂದುಕೊಂಡಿರುತ್ತಾಳೆ. ಆದರೆ ಆಕೆ ಎನಿಸಿಕೊಂಡಿದ್ದು ಒಂದು ಅಲ್ಲಿ ಆದದ್ದು ಇನ್ನೊಂದು.
ವರದ ಗೆ ಮದುವೆ ಮಾಡಲು ಹೊರಟ ತಾಯಿ
ವರದಗೆ ಇನ್ನೊಂದು ಮದುವೆ ಮಾಡಲು ಆತನ ತಾಯಿ ಪ್ಲಾನ್ ಮಾಡುತ್ತಿದ್ದಾಳೆ. ವರದ ತಾಯಿ ಮಾತಿಗೆ ಎನು ಉತ್ತರಿಸದೆ ಸುಮ್ಮನಿರುತ್ತಾನೆ. ಇತ್ತ ಸುಬ್ಬು ಗೆ ವರ ಲಕ್ಷ್ಮೀ ನೋವು ಕಾಣಿಸುತ್ತಿದ್ದರು ಎನು ಮಾಡದ ಸ್ಥಿತಿಯಲ್ಲಿದ್ದಾನೆ. ಆತನಿಗೆ ವರಲಕ್ಷ್ಮೀ ಎಂದರೆ ಬಹಳ ಪ್ರೀತಿ ತಂಗಿ ಮದುವೆ ಮಾಡುವ ಸಂದರ್ಭದಲ್ಲಿ ಶ್ರಾವಣಿ ನಡೆದುಕೊಂಡ ರೀತಿ ಎಲ್ಲರ ಮನಸ್ಸಿಗೆ ಘಾಸಿ ಮಾಡಿದೆ. ಆದರೆ ಸುಬ್ಬುಗೆ ತಾನು ಶ್ರಾವಣಿಯನ್ನು ಮದುವೆ ಆಗಿಲ್ಲ ಎನ್ನುವುದು ತಿಳಿದಿರುತ್ತದೆ. ಆದರೆ ಮನೆಯವರ ಮುಂದೆ ನಿಜ ವಿಚಾರ ಹೇಳಲಾಗದೆ ತೋಳಲಾಡುತ್ತಾನೆ. ಹೇಳಿದರೆ ಶ್ರಾವಣಿ ಗೆ ಕೊಟ್ಟ ಮಾತು ಮುಗಿದ ಹಾಗೆ ಆಗುತ್ತದೆ ಎನ್ನುವ ಕಾರಣಕ್ಕೆ ಸುಮ್ಮನಿದ್ದಾನೆ. ಶ್ರಾವಣಿ ಗೆ ಸುಬ್ಬು ಎಂದರೆ ಬಹಳ ಪ್ರೀತಿ. ಆ ಪ್ರೀತಿಯೇ ಸುಬ್ಬು ಗೆ ಸಂಕಷ್ಟ ತಂದೊಡ್ಡಿದೆ.


Click it and Unblock the Notifications











