Shrirasthu Shubhamasthu: ಮಾಧವ, ತುಳಸಿ ಹಿಂದೆ ಬಿದ್ದ ಶಾರ್ವರಿ.. ತುಳಸಿ ಯಾರೆಂದು ಗೊತ್ತಾಯ್ತಾ?

By ಪೂರ್ವ

ಶ್ರೀ ರಸ್ತು ಶುಭ ಮಸ್ತು ಧಾರವಾಹಿ ದಿನದಿಂದ ದಿನಕ್ಕೆ ಕುತೂಹಲ ಕೆರಳಿಸುತ್ತಿದೆ. ಇಂದಿನ ಧಾರಾವಾಹಿಯಲ್ಲಿ ನಡೆದ ಘಟನೆಯನ್ನು ವಿವರವಾಗಿ ಹೇಳುತ್ತೇವೆ. ತುಳಸಿ ಮನೆಗೆ ಬಹಳ ಸುಸ್ತಾಗಿ ಬರುತ್ತಾಳೆ. ಆಗ ಸಂಧ್ಯಾಳನ್ನೂ ನೋಡಿದ ತುಳಸಿ ಕೊಂಚ ಗಾಬರಿ ಆಗುತ್ತದೆ. ಆ ಕೂಡಲೇ ತಾಯಿಯನ್ನು ನೋಡಿ ಸಂಧ್ಯಾ ಜೋರಾಗಿ ಹೇಳುತ್ತಾಳೆ. "ಏನು ಅಮ್ಮ ಈಗ ಮನೆ ಮನೆ ನೆನಪಾಯಿತಾ.. ಇಷ್ಟು ರಾತ್ರಿ ಮಾಡಿಕೊಂಡು ಮನೆಗೆ ಬಂದಿದ್ದೀಯಾ ಅಲ್ವಾ.. ಇದು ಸರಿಯಾ.. ಯಾಕೆ ಹೀಗೆಲ್ಲ ಮಾಡುತ್ತಾ ಇದ್ದೀಯಾ.. ಇಷ್ಟು ರಾತ್ರಿ ಒಬ್ಬಳೇ ಬಂದಿಯ ಎಂದೆಲ್ಲ ಕೇಳುವಾಗ" ಅಲ್ಲಿಗೆ ದತ್ತ ಬರುತ್ತಾರೆ.

ಜೋರಾಗಿ ತುಳಸಿಯನ್ನು ಪ್ರಶ್ನೆ ಮಾಡಿರುವುದನ್ನು ನೋಡಿ ದತ್ತ ಹೇಳುತ್ತಾರೆ. "ಓಡಿ ಹೋದವರಿಗೆ ಈ ಮನೆಯಲ್ಲಿ ಅಷ್ಟಾಗಿ ಗೌರವ ಸಿಗುವುದು ಇಲ್ಲ. ತುಳಸಿಗೆ ಜೋರಾಗಿ ಮಾತನಾಡುವಷ್ಟು ನಾನು ನಿನಗೆ ಅಧಿಕಾರ ಕೊಟ್ಟಿಲ್ಲ. ನಿನ್ನ ಕೆಲಸ ಇಷ್ಟಿದೆ ಅಷ್ಟು ನೋಡು ಹಾಗೆಯೇ ನಿನ್ನ ಗಂಡ ಬರುವವರೆಗೂ ಈ ಮನೆಯಲ್ಲಿ ನಿನಗೆ ಉಳಿಯಲು ಅವಕಾಶ ಇದೆ. ಆ ಮೇಲೆ ಈ ಮನೆಯಿಂದ ಹೋಗುತ್ತಿರಬಹುದು " ಎಂದು ಹೇಳಿದಾಗ ಸಂಧ್ಯಾ ತೆಪ್ಪಗೆ ಆಗುತ್ತಾಳೆ.

Kannada serial Shrirasthu Shubhamasthu written update on 1st may

ತಾಯಿ ಬಗ್ಗೆ ತುಚ್ಛವಾಗಿ ಮಾತನಾಡಿದ ಸಂಧ್ಯಾ

ಆ ಬಳಿಕ ತುಳಸಿ ಊಟ ಮಾಡುತ್ತಾ ಇರುತ್ತಾಳೆ. ಸಂಧ್ಯಾ ರೂಮ್‌ಗೆ ಹೋಗಿ ಏನೇನೋ ಹುಡುಕಾಟ ಮಾಡುತ್ತಾ ಇರುತ್ತಾಳೆ. ತುಳಸಿ ರೂಮ್‌ಗೆ ಬರುವುದನ್ನು ನೋಡಿದ ಸಂಧ್ಯಾ ಸುಮ್ಮನೆ ಆಗುತ್ತಾಳೆ ಆ ಬಳಿಕ ಸಂಧ್ಯಾ ಯೋಗ ಕ್ಷೇಮವನ್ನು ವಿಚಾರಣೆ ಮಾಡುತ್ತಾ ಇರುತ್ತಾಳೆ ಆದರೆ ಸಂಧ್ಯಾ ಮಾತ್ರ ಕೊಂಕಿನ ಮಾತುಗಳಿಂದ ಆಕೆಯ ಬಳಿ ಮಾತನಾಡುತ್ತಾ ಇರುತ್ತಾಳೆ.

ಮಾಧವ ತುಳಸಿ ಬಗ್ಗೆ ಯೋಚನೆ ಮಾಡುತ್ತಾ ಇರುವ ವೇಳೆ ಅಲ್ಲಿಗೆ ಪೂರ್ಣಿಮ ಬರುತ್ತಾಳೆ . ಆಗ ಪೂರ್ಣಿಮಾ ಬಳಿ ಇವತ್ತು ತುಳಸಿ ಅವರನ್ನು ವೆಲ್ ಕಮ್ ಮಾಡಲು ಆಗಲಿಲ್ಲ ಎಂದೆಲ್ಲ ಹೇಳಿದಾಗ ಆಕೆ ಮಾತ್ರ ಮಾವನ ಕಾಲು ಎಳೆಯಲು ಒಂದೆರಡು ಮಾತುಗಳನ್ನು ಹೇಳುತ್ತಾಳೆ. ಇನ್ನು ಮಾಧವ ಮಾರ್ಕೆಟ್ ಹೋಗಲು ತುಳಸಿ ಅವರಿಗೆ ಮೆಸೇಜ್ ಮಾಡುತ್ತಾನೆ. ನಾಳೆ ಮಾರ್ಕೆಟ್ ನಲ್ಲಿ ಸಿಗುವ ತರಕಾರಿ ಕೆಫೆಗೆ ಬೇಕಿದೆ ಎಂದು ಮೆಸೇಜ್ ಮುಖೇನ ಹೇಳುತ್ತಾನೆ

ಮಾಧವನ ಮೆಸೇಜ್ ಕಂಡು ಕಿಡಿ ಕಾರಿದ ಸಂಧ್ಯಾ

ಇನ್ನೂ ಮಾಧವ ಅವರ ಮೆಸೇಜ್ ನೋಡಿದ ಸಂಧ್ಯಾ ಮೆತ್ತಗೆ ಹೇಳುತ್ತಾಳೆ. ನಿಮಗೆ ಮಾಧವ ಅವರು ಮೆಸೇಜ್ ಮಾಡುವಷ್ಟು ಕ್ಲೋಸ್‌ ಎಂದು ಹೇಳಿದಾಗ ತುಳಸಿ ಸುಮ್ಮನೆ ಆಗುತ್ತಾಳೆ. ಮರುದಿನ ಬೇಗ ಎದ್ದು ಅಡುಗೆ ಮಾಡಿ ಸಿದ್ದಲಾಗುತ್ತಾಳೆ. ಆದಾಗಲೇ ತುಳಸಿ ಮಾವ ಡೈನಿಂಗ್ ಟೇಬಲ್ ಮೇಲೆ ಕುಳಿತು ಇರುತ್ತಾರೆ.

ತುಳಸಿ ಮಾವನ ಎದುರು ತಿಂಡಿ ತಿನ್ನಲು ಭಯ ಆದರೂ ನಿಂತು ತಿಂಡಿ ಮಾಡಬೇಕು ಎನ್ನುವಷ್ಟರಲ್ಲಿ ದತ್ತ ತನ್ನ ಜೊತೆಯೇ ತಿಂಡಿಗೆ ಕುಳಿತುಕೊಳ್ಳಲು ಹೇಳುತ್ತಾರೆ. ಆ ಬಳಿಕ ಸಂಧ್ಯಾ ಬಗ್ಗೆ ಕೇಳಿದಾಗ ಆಕೆ ಎದ್ದಿರದ ವಿಚಾರ ಗೊತ್ತಾಗುತ್ತದೆ. ತುಳಸಿ ಹೋದ ಬಳಿಕ ಸಂಧ್ಯಾ ಎದ್ದೆಳುತ್ತಾಳೆ. ಆಗ ದತ್ತ ಆಕೆಗೆ ತಿಂಡಿನು ಕೊಡದೇ ಕೆಲಸ ಇದೆ ಎಂದು ಹೇಳಿದಾಗ ಸಂಧ್ಯಾಗೆ ಎನು ಹೇಳಬೇಕು ಎಂದು ತಿಳಿಯದೇ ಸುಮ್ಮನೆ ಆಗುತ್ತಾಳೆ.

Kannada serial Shrirasthu Shubhamasthu written update on 1st may

ಮಾಧವ ಹಾಗೂ ಪೂರ್ಣಿಮ ಮಾತನಾಡುತ್ತಾ ಇರುವುದನ್ನು ಶಾರ್ವರಿ ಕದ್ದು ಕೇಳಿಸಿಕೊಂಡು ಇರುತ್ತಾಳೆ ಇನ್ನೂ ಮಾಧವ ಮಾರ್ಕೆಟ್ ನತ್ತ ಹೊರಡುತ್ತಾರೆ. ಆಗ ಅಲ್ಲಿಗೆ ತುಳಸಿ ಕೂಡಾ ಬರುತ್ತಾಳೆ ಇಬ್ಬರು ತರಕಾರಿ ತೆಗೆದುಕೊಂಡು ಹೋಗುತ್ತಾ ಇರಬೇಕಾದರೆ ಶಾರ್ವರಿ ಆಕೆಯನ್ನು ಫಾಲೋ ಮಾಡುತ್ತಾಳೆ.

More from Filmibeat

English summary
Kannada serial Shrirasthu Shubhamasthu written update on 1st May. Here is the details,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X