Shrirasthu Shubhamasthu: ಮಾಧವನಿಗೆ ತುಳಸಿ ಮೇಲೆ ಮನಸಾಗಿದೆ: ಮನದ ಬಯಕೆ ಈಡೇರುತ್ತಾ?

By ಪೂರ್ವ

'ಶ್ರೀರಸ್ತು ಶುಭಮಸ್ತು' ಧಾರಾವಾಹಿ ಅದ್ಭುತವಾಗಿ ಮೂಡಿ ಬರುತ್ತಿದೆ. ಇದೀಗ ಮಾಧವಗೆ ತುಳಸಿ ಮೇಲೆ ಕೊಂಚ ಲವ್ ಆಗಿದೆ. ತುಳಸಿ ಏನೇ ಕೆಲಸ ಮಾಡಿದರೂ ತನ್ನ ಮನೆಯಲ್ಲಿ ಕೆಲಸ ಮಾಡಿದ ಹಾಗೆ ಮಾಡುತ್ತಾ ಇರುತ್ತಾರೆ . ಈ ಗುಣ ಮಾಧವಾಗೆ ಬಹಳ ಹಿಡಿಸುತ್ತದೆ. ಇನ್ನು ಮಾಧವ ಹಾಗೂ ತುಳಸಿ ಮಾರುಕಟ್ಟೆಯಲ್ಲಿ ಕೆಫೆಗೆ ಏನೆಲ್ಲ ಬೇಕೋ ಅದೆಲ್ಲವನ್ನೂ ತೆಗೆದುಕೊಂಡಿದ್ದಾರೆ.

ಇದನ್ನು ನೋಡಿದ ಮಂದಿಯೆಲ್ಲ ನೋಡಿ ಗಂಡ ಹೆಂಡತಿ ಎಂದರೆ ಹೀಗೆ ಇರಬೇಕು ಎಂದು ಹೇಳುತ್ತಾರೆ. ಇದನ್ನು ಕೇಳಿಸಿಕೊಂಡ ಮಾಧವಗೆ ಮಾತ್ರ ಹೇಳಿಕೊಳ್ಳಲು ಆಗದಷ್ಟು ಆನಂದ ಆಗುತ್ತದೆ. ಆದರೂ ಅದನ್ನು ತೋರಿಸಿಕೊಳ್ಳದೆ ತುಳಸಿ ಬಳಿ ಮಾತನಾಡುತ್ತಾ ಇರುತ್ತಾರೆ. ಈ ವೇಳೆ ಶಾರ್ವರಿ, ಮಾಧವ ಹಾಗೂ ತುಳಸಿ ತನ್ನ ಫಾಲೋ ಮಾಡಿಕೊಂಡು ಬರುತ್ತಾರೆ.

Kannada serial Shrirasthu Shubhamasthu written update on May 2nd

ತುಳಸಿಯನ್ನು ಮಾರುಕಟ್ಟೆಯಲ್ಲಿ ಹುಡುಕಾಡಿದ ದತ್ತ

ಆದರೆ ತುಳಸಿ ಕಾಣದೆ ಇರುವುದನ್ನು ನೋಡಿದ ಶಾರ್ವರಿ ಮಾತ್ರ ಚಲ ಬಿಡದೆ ಹುಡುಕುತ್ತಾ ಇರುತ್ತಾರೆ. ಇನ್ನು ದತ್ತ ಹಾಗೂ ಶೇಷ ಕೂಡ ಮಾರುಕಟ್ಟೆಯಲ್ಲಿ ತರಕಾರಿ ಕೊಳ್ಳಲು ಬರುತ್ತಾರೆ. ಇಲ್ಲಿ ಮಾಧವ ಹಾಗೂ ತುಳಸಿಯನ್ನು ನೋಡಿದರೆ ಏನಾಗುತ್ತೆ ಅನ್ನೂ ಕುತೂಹಲ ಸೃಷ್ಟಿಯಾಗಿತ್ತು.

ಶೇಷಗೆ ಮಾತ್ರ ಬಹಳ ಅಚ್ಚರಿ ಯಾಕೆಂದರೆ, ದತ್ತ ಯಾವತ್ತೂ ತರಕಾರಿ ಕೊಳ್ಳಲು ಬರುವುದಿಲ್ಲ. ಆದರೂ ಯಾಕೆ ಬಂದ ಅನ್ನೋದನ್ನು ಅವರ ಬಳಿ ಹೇಳಿದಾಗ, ದತ್ತ ಹೇಳುತ್ತಾರೆ "ತರಕಾರಿ ತೆಗೆದುಕೊಳ್ಳುವುದು ಮಾತ್ರ ನನ್ನ ಕೆಲಸ. ಅದನ್ನು ಹೊರಲು ಯಾರು ಬಂದಿದ್ದಾರೆ ನೋಡು ಎಂದು ಸಂಧ್ಯಾಳ ಬಳಿ ಬೆರಳು ತೋರಿಸಿ ಹೇಳುತ್ತಾನೆ.

Kannada serial Shrirasthu Shubhamasthu written update on May 2nd

ಶೇಷನ ತನ್ನ ಪ್ಲ್ಯಾನ್ ಬಿಚ್ಚಿಟ್ಟ ದತ್ತ

ಇದನ್ನು ನೋಡಿದ ಸಂಧ್ಯಾ ಮಾತ್ರ ಅಯ್ಯೋ ನನ್ನಿಂದ ಆಗಲ್ಲ ಎಂದು ಹೇಳಿದರು ದತ್ತ ಮಾತ್ರ ಒತ್ತಾಯದಿಂದ ಕೆಲಸ ಮಾಡಿಸುತ್ತಾರೆ. ಬಳಿಕ ಶೇಷ ಬಳಿ ಹೇಳುತ್ತಾರೆ "ಸಂಧ್ಯಾ ಇನ್ನೂ ಮುಂದೆ ನನ್ನ ಮನೆಗೆ ಬರಲು ಹತ್ತು ಸಲ ಯೋಚನೆ ಮಾಡಬೇಕು ಹಾಗೆ ಕೆಲಸ ಕೊಡುತ್ತೇನೆ . ಮನೆಗೆ ಹೋದರೆ ಸೋಗಲಾಡಿಗೆ ಕೆಲಸ ಕೊಡುತ್ತಾಳೆ. ತುಲಸಿನ ಮನೆಯ ಕೆಲಸದವರ ಹಾಗೆ ನಡೆಸಿಕೊಳ್ಳುತ್ತ ಇರುತ್ತಾಳೆ. ಇದಕ್ಕೆ ಆಕೆಗೆ ಹೀಗೆ ಕೆಲಸ ನೀಡುತ್ತಿದ್ದೇನೆ" ಎಂದು ಶೇಷನ ಬಳಿ ಹೇಳುತ್ತಾರೆ.

ಇನ್ನು ದತ್ತನ ಮನೆಗೆ ಚೋಟು ಜೊತೆ ನಂದಿನಿ ಎಂಟ್ರಿ ನೀಡುತ್ತಾಳೆ . ನಂದಿನಿ ಮಾತ್ರ ಸಿರಿ ಬಳಿ ಚೋಟುವನ್ನು ನೋಡಿಕೋ ನನಗೆ ಕೆಲಸ ಇದೆ. ದಯವಿಟ್ಟು ಎಂದು ಹೇಳುತ್ತಾಳೆ ಆ ಬಳಿಕ ತುಳಸಿ ಅವರ ಬಗ್ಗೆ ವಿಚಾರಣೆ ಮಾಡಿದಾಗ ಸಿರಿ ನಂದಿನಿ ಜೊತೆ ಕೊಂಚ ಕಠೋರವಾಗಿ ನಡೆದುಕೊಂಡು ಇರುತ್ತಾಳೆ. ಇದನ್ನು ನೋಡಿದ ನಂದಿನಿ ಮೆತ್ತಗೆ ಆಗುತ್ತಾಳೆ ಆ ಬಳಿಕ ಚೋಟುವನ್ನು ಅಲ್ಲೇ ಬಿಟ್ಟು ಹೋಗುತ್ತಾಳೆ. ಇನ್ನು ದತ್ತನ ಕಣ್ಣಿಗೆ ಶಾರ್ವರಿ ಬೀಳುತ್ತಾಳೆ.

ಶಾರ್ವರಿ ಬಳಿ ಮಾತನಾಡಲು ಹೊರಟ ದತ್ತ

ಆಕೆಯನ್ನು ಹುಡುಕಿಕೊಂಡು ಹೋಗುತ್ತಾನೆ ಶಾರ್ವರಿ ಹೋದಲೆಲ್ಲಾ ದತ್ತ ಹೋಗುತ್ತಾನೆ. ಆದರೆ ಶಾರ್ವರಿ ದತ್ತನ ಕೈಯಿಂದ ತಪ್ಪಿಸಿಕೊಂಡು ಓಡಾಡುತ್ತಿರುತ್ತಾಳೆ. ಆಗ ಶೇಷ, ದತ್ತನ ಬಳಿ ಓಡಿಕೊಂಡು ಬಂದು ಕೇಳುತ್ತಾನೆ.

"ಯಾಕೆ ಆಕೆಯನ್ನು ಹುಡುಕಿಕೊಂಡು ಬಂದೆ" ಎಂದು ಹೇಳಿದಾಗ, ಆಕೆ ಒಳ್ಳೆಯವಳು ಸುಮ್ಮನೆ ಆಕೆಯ ಮೇಲೆ ಮಕ್ಕಳ ಕಳ್ಳಿ ಎಂದು ಅಪವಾದ ಮಾಡಿದೆ ಅಲ್ವಾ. ಆ ಕಾರಣದಿಂದಾಗಿ ಆಕೆಯ ಬಳಿ ಕ್ಷಮೆ ಕೇಳಬೇಕು ಅನ್ನಿಸಿತು ಎಂದು ಹೇಳಿದರು. ಇನ್ನು ತುಳಸಿ ಮತ್ತು ಮಾಧವ ನಿಧಾನವಾಗಿ ಹತ್ತಿರ ಆಗುತ್ತಾ ಇರುವುದು ಎಲ್ಲರಿಗೂ ಖುಷಿ ನೀಡುತ್ತಾ ಇದೆ.

More from Filmibeat

English summary
Kannada serial Shrirasthu Shubhamasthu written update on May 2nd, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X