Shrirasthu Shubhamasthu: ಗಂಡನ ಆರೋಗ್ಯದಲ್ಲಿ ಚೇತರಿಕೆ ಕಂಡು ಶಾರ್ವರಿ ಆತಂಕಗೊಂಡಿದ್ದೇಕೆ?

By ಪೂರ್ವ

ತುಳಸಿ ಮಾಧವ ಅವರಿಗೆ ಬಿಸಿ ಬಿಸಿ ಆಗಿ ಅನ್ನ ಮಾಡಿಕೊಂಡು ಬಂದು ಟೇಬಲ್ ಗೆ ತರುತ್ತಾಳೆ. ಅಲ್ಲಿ ಮಾಧವ ಇರದೇ ಇದ್ದಿದ್ದನ್ನು ಕಂಡು ಹೇಳುತ್ತಾಳೆ "ಮಾಧವ ಸರ್ ಜೊತೆ ಊಟ ಮಾಡೋಣ ಎಂದು ಹೇಳಿದೆ. ಆದರೆ, ಅವರೆಲ್ಲಿಗೆ ಹೋದರು?" ಎಂದು ಯೋಚನೆ ಮಾಡುತ್ತಾ ಇರುವಾಗ ಫೋನ್ ರಿಂಗ್ ಆಗುತ್ತದೆ.

ಅದನ್ನು ರಿಸೀವ್ ಮಾಡಿದ ತುಳಸಿ ಹಲೋ ಎಂದು ಹೇಳುವಷ್ಟರಲ್ಲಿ ಅನಾಥಾಶ್ರಮದವರು ಎಲ್ಲವನ್ನೂ ಹೇಳಿ ಬಿಡುತ್ತಾರೆ. ಇದನ್ನು ಕೇಳಿದ ತುಳಸಿ ಹೇಳುತ್ತಾಳೆ "ಮಾಧವ ಸರ್ ಇಲ್ಲಿ ಇಲ್ಲ. ಅವರಿಗೆ ಫೋನ್ ಮಾಡಲು ಹೇಳುತ್ತೇನೆ" ಎಂದು ಕರೆ ಕಟ್ ಮಾಡುತ್ತಾಳೆ.

Kannada serial Shrirasthu Shubhamasthu written update on May 8th

ಸಂಧ್ಯಾ ಮಾತಿಗೆ ಕೋಪಗೊಂಡ ದತ್ತ

ಆ ವೇಳೆ ತುಳಸಿಗೆ ಮಾಧವ ನ ಹುಟ್ಟುಹಬ್ಬದ ದಿನ ಗೊತ್ತಾಗಿ ಬಿಡುತ್ತದೆ. ಮಾಧವ ಅವರ ಹುಟ್ಟುಹಬ್ಬಕ್ಕೆ ಏನಾದರು ಒಂದು ಗಿಫ್ಟ್ ಕೊಡಬೇಕು ಎಂದು ಯೋಚನೆ ಮಾಡುತ್ತಾ ಇರುತ್ತಾಳೆ ತುಳಸಿ. ಇನ್ನು ಸಂಧ್ಯಾ ಮನೆಯಲ್ಲಿ ಬಹಳ ಆರಾಮವಾಗಿ ಧಾರಾವಾಹಿ ನೋಡುತ್ತಾ ಚಿಪ್ಸ್ ತಿನ್ನುತ್ತಾ ಇರುತ್ತಾಳೆ .

ದತ್ತನನ್ನು ನೋಡಿ ಭಯಪಟ್ಟ ಸಂಧ್ಯಾ

ಈ ವೇಳೆ ದತ್ತ ಮೆತ್ತಗೆ ಹಿಂದೆಯಿಂದ ಬರುತ್ತಾರೆ. ಸಂಧ್ಯಾ ಬಳಿಗೆ ಬಂದ ದತ್ತ ಹೇಳುತ್ತಾರೆ. "ಯಾವುದಾದರೂ ಕೆಲಸ ಹುಡುಕು ಎಂದು ಹೇಳಿದ್ದೆ ಅಲ್ವಾ" ಎಂದಾಗ ಸಂಧ್ಯಾ ಚಿಪ್ಸ್ ತಿನ್ನುವುದನ್ನು ಬಿಟ್ಟು ಕೆಲಸ ಮಾಡುತ್ತಾ ಇರುತ್ತಾಳೆ. ಬಳಿಕ ತಾತನ ಬಳಿ ಹೇಳುತ್ತಾಳೆ "ಕೆಲಸ ಇಷ್ಟು ಬೇಗ ಸಿಗುವುದು ಇಲ್ಲ" ಎಂದು ಹೇಳುತ್ತ ಇರುತ್ತಾರೆ.

ಕೆಲಸ ಹುಡುಕುವಂತೆ ಸಂಧ್ಯಾಗೆ ದತ್ತ ತಾಕೀತು

"ಇನ್ನು ಏನು ಕೆಲಸ ಸಿಗದೇ ಹೋದರೆ ನೀನು ಮನೆಯ ಕೆಲಸ ಮಾಡು" ಎಂದು ತಾಕೀತು ಮಾಡುತ್ತಾರೆ. ಆದರೆ "ಸಂಧ್ಯಾ ಮಾತ್ರ ಮನೆಯಲ್ಲಿ ಏನು ಕೆಲಸ ಇಲ್ಲ. ಏನು ಮಾಡಲಿ. ಎಲ್ಲಾ ಅವರೇ ಮಾಡಿದರೆ ನಾನೇನು ಮಾಡಲಿ" ಎಂದು ಕೇಳುತ್ತಾಳೆ.

Kannada serial Shrirasthu Shubhamasthu written update on May 8th

ಆಸ್ಪತ್ರೆಗೆ ತೆರಳಿದ ಶಾರ್ವರಿ

ಇದನ್ನು ಕೇಳಿದ ಸಂಧ್ಯಾ ಮಾತ್ರ ಮೆತ್ತಗೆ ಎಲ್ಲಾ ಕೆಲಸ ಮಾಡಲು ಮುಂದೆ ಬರುತ್ತಾರೆ . ಆಗ ದತ್ತ ಮಾತ್ರ ಇದ್ದ ಬದ್ದ ಕೆಲಸ ಸಂಧ್ಯಾಗೆ ಹೇಳಿ ಸಂದ್ಯಾಳ ಸೊಕ್ಕನ್ನು ಮುರಿಯುತ್ತಾರೆ. ಇನ್ನು ಶಾರ್ವರಿ ತನ್ನ ಗಂಡನನ್ನು ಕರೆದುಕೊಂಡು ಆಸ್ಪತ್ರೆಗೆ ಹೋಗುತ್ತಾಳೆ. ತನ್ನ ಗಂಡ ಹುಷಾರು ಆಗುತ್ತಾ ಇದ್ದಾರೆ ಎಂಬ ವಿಚಾರ ತಿಳಿಯುತ್ತಾ ಇರುವ ವೇಳೆ ಶಾರ್ವರಿಗೆ ಶಾಕ್ ಆಗುತ್ತದೆ.

ಶಾರ್ವರಿ ಗಂಡನ ಆರೋಗ್ಯದಲ್ಲಿ ಚೇತರಿಕೆ

"ಈ ವಿಚಾರ ಬಾವನ ಕಿವಿಗೆ ಬಿದ್ದರೆ ಬಹಳ ಕಷ್ಟವಾಗುತ್ತದೆ. ನೀವು ಹೀಗೆ ಇದ್ದರೆ ನನಗೆ ಒಂದು ಸ್ಥಾನ ಮಾನ ಸಿಗುತ್ತದೆ. ಆದರೆ ನೀವು ಸರಿ ಹೋದರೆ, ನನಗೆ ಏನೂ ಸಿಗುವುದಿಲ್ಲ" ಎಂದು ಯೋಚನೆ ಮಾಡಿ ಡಾಕ್ಟರ್ ಬಳಿ ಹೇಳುತ್ತಾಳೆ. ಈ ವಿಚಾರವನ್ನು ನಮ್ಮ ಮನೆಯವರ ಬಳಿ ಹೇಳಬೇಡಿ. ಎಷ್ಟೋ ಸಲ ಅವರು ಸರಿ ಆಗುತ್ತಾರೆ ಎಂದು ಖುಷಿ ಪಟ್ಟಿದ್ದಾರೆ. ಈಗಲೂ ಹಾಗೇ ಆಗುತ್ತದೆ. ಏನೋ ಎಂದು ಹೇಳಿ ಎಂದು ಡಾಕ್ಟರ್ ಬಳಿ ನಾಟಕ ಆಡುತ್ತಾಳೆ. ಇನ್ನೂ ಡಾಕ್ಟರ್ ಸರಿ ನಿಮ್ಮಿಷ್ಟ ಎಂದು ಹೇಳಿ ಸುಮ್ಮನೆ ಆಗುತ್ತಾರೆ.

ಮಾಧವನ ಕೆಫೆಗೆ ಬಂದ ಕಪಲ್ಸ್

ಇನ್ನು ಮಾಧವ ಮಾತ್ರ ಕೆಫೆಗೆ ಬಂದ ಇಬ್ಬರು ಕಪಲ್‌ಗಳ ಬಳಿ ಮಾತನಾಡುತ್ತಾ ಇರುತ್ತಾರೆ. ಅವರಿಬ್ಬರ ದಾಂಪತ್ಯ ಹಾಗೂ ಪ್ರೀತಿಯನ್ನು ನೋಡಿ ಮಾಧವಗೆ ಮಾತ್ರ ತುಳಸಿ ನೆನಪು ಬರುತ್ತಾರೆ. ಹಾಗೆ ವೇದಾಂತ ಹೇಳಿದ ಮಾತು ಅರ್ಥ ಆಗುತ್ತದೆ. ಇನ್ನು ಕೆಫೆಗೆ ಪೂರ್ಣಿಮಾ ಬರುತ್ತಾಳೆ. ಮಾಧವ ಅವರ ಮಾಧವ ಅವರ ಹಳೆಯ ಫೋಟೊಗಳನ್ನು ನೋಡುತ್ತಾ ಮೆಲುಕು ಹಾಕುತ್ತ ಇರುತ್ತಾರೆ.

More from Filmibeat

English summary
Kannada serial Shrirasthu Shubhamasthu written update on May 8th, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X