Shrirasthu Shubhamasthu: ಫ್ಲಾಪ್ ಆಯ್ತು ಕುತಂತ್ರಿ ಶಾರ್ವರಿ ಪ್ಲ್ಯಾನ್

By Poorva

ಅಭಿಗೆ ಮಾಧವ್ ಸರಿಯಾಗಿ ಕ್ಲಾಸ್ ತೆಗೆದುಕೊಂಡು ಇದ್ದಾನೆ. ತುಳಸಿ ಕೈಗೆ ಬಿಸಿ ಕಾಫಿ ಚೆಲ್ಲಿದ ಅಭಿ ಮೇಲೆ ಮಾಧವ ಗರಂ ಆಗಿ ಆತನನ್ನು ಸೇರಿಸಿ ಇಡೀ ಮನೆಯವರಿಗೆ ಬುದ್ದಿ ಹೇಳಿದ್ದಾನೆ. ಇನ್ನೂ ಇದನ್ನೆಲ್ಲ ನೋಡಿ ಶಾರ್ವರಿ ಸೋಫಾದ ಮೇಲೆ ಕುಳಿತುಕೊಂಡು ಯೋಚನೆ ಮಾಡುತ್ತಾ ಇರುವಾಗ ಅವಿ ಆಫೀಸ್‌ನಿಂದ ಮನೆಗೆ ಬರ್ತಾನೆ.

ಅವಿ ಬಂದಿದ್ದು ನೋಡಿ ಶಾರ್ವರಿ ಅಳುವಂತೆ ನಟನೆ ಮಾಡುತ್ತಾಳೆ. ಶಾರ್ವರಿ ಅಳುತ್ತಾ ಇರುವುದನ್ನು ಅವಿ ನೋಡುತ್ತಾನೆ. ಚಿಕ್ಕಮ್ಮ ನೀವು ಏನು ಮಾಡುತ್ತಿದ್ದೀರಿ.. ಅಳುತ್ತಾ ಇದ್ದೀರಾ ಎಂದು ಕೇಳಿದಾಗ ಶಾರ್ವರಿ ನಡೆದ ವಿಚಾರವನ್ನು ಅವಿ ಬಳಿ ಹೇಳುತ್ತಾರೆ.. ಅಭಿ ಈಗಿರುವ ಪರಿಸ್ಥಿತಿಯಲ್ಲಿ ಇದೀಗ ಬಹಳ ನೊಂದುಕೊಂಡು ಇದ್ದಾನೆ. ಇದೀಗ ಭಾವ ಕೂಡ ಬೈದಿರುವುದು ಅವರಿಗೆ ಗಾಯದ ಮೇಲೆ ಬರೆ ಎಳೆದ ಹಾಗಾಗಿದೆ ಎಂದಿದ್ದಾಳೆ.

Kannada serial Shrirasthu Shubhamasthu written updated on 13th September

ಅಪ್ಪನ ಮೇಲೆ ಮುನಿಸಿಕೊಂಡ ಅವಿ

ಶಾರ್ವರಿ ಮಾತು ಕೇಳಿ ಅವಿಗೆ ಬಹಳ ಕೋಪ ಬರುತ್ತದೆ. ಆ ಮನುಷ್ಯನಿಗೆ ನಾನು ಹೇಳಿದ್ದೆ ಅಲ್ವಾ ನನ್ನ ತಮ್ಮನ ವಿಚಾರಕ್ಕೆ ಬರಬಾರದು ಎಂದು ಆದರೂ ಬಂದಿದ್ದಾರೆ, ಎಂದು ಬಹಳ ಕೋಪ ಮಾಡಿಕೊಂಡು ಇರುತ್ತಾರೆ. ಇದನ್ನೆಲ್ಲ ನೋಡಿದ ಶಾರ್ವರಿಗೆ ಕೊಂಚ ಖುಷಿ ಆಗುತ್ತದೆ. ಇನ್ನೂ ಕೋಪಗೊಂಡ ಅವಿ ತಂದೆಯ ಬಳಿ ಇದೆಲ್ಲ ಕೇಳಬೇಕು ಎಂದುಕೊಂಡು ಹೋಗುತ್ತಾ ಇರುವಾಗ ಪೂರ್ಣಿಮಾ ಅಡ್ಡ ಬರುತ್ತಾಳೆ.

ಪೂರ್ಣಿಮಾ ಮಾತಿಗೆ ಮೆತ್ತಗಾದ ಅವಿ

ಆಕೆ ಮೆತ್ತಗೆ ತನ್ನ ಗಂಡನ ಬಳಿ ಹೇಳುತ್ತಾಳೆ. ಅಭಿ, ತುಳಸಿ ಅಮ್ಮನ ಕೈ ಮೇಲೆ ಬಿಸಿ ಕಾಫಿ ಚೆಲ್ಲಿದ ಆ ಕಾರಣಕ್ಕೆ ಮಾವ ಅವನಿಗೆ ಬೈದರು. ಅವರಿಗೆ ಬುದ್ದಿ ಮಾತು ಹೇಳಿದರು, ಇದು ತಪ್ಪು ಎನಿಸಿದರೆ ನೀವು ಹೋಗಿ ಮಾವನ ಬಳಿ ಮಾತನಾಡಬಹುದು ಎಂದು ಹೇಳಿ ಅಲ್ಲಿಂದ ಹೋಗುತ್ತಾಳೆ.

ಸಿರಿ- ಸಮರ್ಥ್ ಕೋಳಿ ಜಗಳ

ಇನ್ನೂ ಸಿರಿ ಹಾಗೂ ಸಮರ್ಥ್ ಮಾತನಾಡುತ್ತಾ ಇರುತ್ತಾರೆ. ನಾವಿಬ್ಬರೂ ಒಂದಾಗಲ್ಲ ನಿಜ, ಆದರೆ ಒಂದಾಗಿ ಇರುವ ಹಾಗೆ ನಟನೆ ಮಾಡೋಣ ಎಂದು ಹೇಳುತ್ತಾರೆ. ಇದಕ್ಕೆ ಸಮರ್ಥ್ ಕೂಡ ಒಪ್ಪಿಕೊಂಡು ಇರುತ್ತಾನೆ. ಸಮರ್ಥ್‌ಗೆ ಸಿರಿ ಮೇಲೆ ಬಹಳ ಪ್ರೀತಿ, ಆದರೆ ಅಮ್ಮ ಮಾಡಿದ ಕೆಲಸಕ್ಕೆ ಅವರಿಗೆ ಸಪೋರ್ಟ್ ಮಾಡಿದ ತಾತ ಹಾಗೂ ಹೆಂಡತಿಯ ಮೇಲೆ ಮುನಿಸಿಕೊಂಡು ಇರುತ್ತಾನೆ ಸಮರ್ಥ್.

Kannada serial Shrirasthu Shubhamasthu written updated on 13th September

ಪೂಜೆ ಮಾಡಲು ತುಳಸಿಗೆ ಅಡ್ಡಿ

ಆ ಕೋಪವನ್ನು ಹೇಗಾದರೂ ಹೋಗಲಾಡಿಸಲೇ ಬೇಕು ಎಂದು ಸಿರಿ ಯೋಚನೆ ಮಾಡುತ್ತಾ ಇರುತ್ತಾಳೆ. ಇನ್ನೂ ಮಾಧವಗೆ ರಾತ್ರಿ ಊಟ ಮಾಡದೇ ಮಧ್ಯ ರಾತ್ರಿ ಬಹಳ ಹಸಿವಾಗಿ ಎದ್ದು ಕುಳಿತುಕೊಂಡು ಇರುತ್ತಾರೆ. ಆ ಬಳಿಕ ಮನೆಯ ಕಿಚನ್‌ನಲ್ಲಿ ತಿನ್ನಲು ಏನಾದರು ಇದೆಯಾ ಎಂದು ತಡಕಾಡುತ್ತ ಇರುತ್ತಾರೆ.

ಮಾಧವಗೆ ಪುಳಿಯೋಗರೆ ಮಾಡಿಕೊಟ್ಟ ತುಳಸಿ

ಆಗ ಅಲ್ಲಿಗೆ ಬಂದ ತುಳಸಿ ಮಾಧವಗೆ ಪುಳಿಯೋಗರೆ ಮಾಡಿ ಕೊಡುತ್ತಾಳೆ. ಆ ಬಳಿಕ ಇಬ್ಬರೂ ಊಟ ಮಾಡುತ್ತಾರೆ. ಇದೆಲ್ಲವನ್ನೂ ನೋಡುತ್ತಿದ್ದ ಶಾರ್ವರಿಗೆ ಮಾತ್ರ ಕೋಪ ಉಕ್ಕಿ ಹರಿಯುತ್ತ ಇರುತ್ತದೆ. ಆಕೆ ಇವರಿಬ್ಬರನ್ನು ನೋಡಿ ಹೊರಟು ಹೋಗುತ್ತಾಳೆ. ಮರುದಿನ ತುಳಸಿ ದೇವರ ಕೊನೆಗೆ ಬಂದು ಪೂಜೆ ಮಾಡಬೇಕು ಎನ್ನುವಷ್ಟರಲ್ಲಿ ಶಾರ್ವರಿ ತಡೆಯುತ್ತಾಳೆ. ಆದರೆ ಪೂರ್ಣಿಮಾ ಮಾತ್ರ ಶಾರ್ವರಿ ಮಾಸ್ಟರ್ ಪ್ಲಾನ್‌ಗೆ ಅಡ್ಡಗಾಲಾಗಿ ನಿಲ್ಲುತ್ತಾಳೆ.

More from Filmibeat

English summary
Shrirasthu Shubhamasthu Kannada serial today Episode
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X