Shrirastu Shubhamasthu: ಮಾಧವನ ಮೇಲೆ ಸಿಟ್ಟು ಮಾಡಿಕೊಂಡ ಅವಿನಾಶ್
ಶ್ರೀ ರಸ್ತು ಶುಭ ಮಸ್ತು ಧಾರವಾಹಿಯಲ್ಲಿ ತುಳಸಿ ಕೆಲಸಕ್ಕಾಗಿ ಮಾಧವನ ಕೆಫೆಗೆ ಬಂದಿದ್ದಾಳೆ. ಆದರೆ ಮಾಧವ ಶೆಫ್‌ಗಾಗಿ ಹುಡುಕಾಟ ನಡೆಸುತ್ತಾ ಇರುತ್ತಾರೆ. ಆದರೆ ಯಾರು ಕೂಡ ಸೆಟ್ ಆಗುತ್ತಾ ಇರಲಿಲ್ಲ. ಇದನ್ನೆಲ್ಲ ಕಂಡ ತುಳಸಿಗೆ ಏನು ಮಾಡಬೇಕು ಎಂದು ತೋಚದೇ ಅಲ್ಲೇ ನಿಲ್ಲುತ್ತಾಳೆ. ಆ ಬಳಿಕ ಮಾಧವ, ತುಳಸಿ ನಿಂತಿರುವುದನ್ನು ಕಂಡು ಮಾತನಾಡಿಸುತ್ತಾನೆ.
ತುಳಸಿ ಬಂದ ಕಾರಣವನ್ನು ಮಾಧವನ ಬಳಿ ಬಂದು ಹೇಳಿದ್ದಾರೆ. ಇದನ್ನು ಕೇಳಿಸಿಕೊಂಡ ಮಾಧವ ಮಾತ್ರ ಬಹಳ ಖುಷಿ ಪಡುತ್ತಾನೆ. ಮಾಧವ ಎಲ್ಲರಿಗೂ ಸಂದರ್ಶನ ಮಾಡಿದ ಹಾಗೆಯೇ ತುಳಸಿಗೆ ಮಾಡಿದಾಗ ಆಕೆ ಬಹಳ ಭಯ ಪಟ್ಟುಕೊಂಡು ಇರುತ್ತಾಳೆ. ಇದನ್ನು ನೋಡಿದ ಮಾಧವ, ತುಳಸಿಗೆ ಧೈರ್ಯ ಹೇಳುತ್ತಾನೆ. ತುಳಸಿಯನ್ನು ಮೇನ್ ಶೆಫ್ ಆಗಿ ಕೆಲಸಕ್ಕೆ ತೆಗೆದುಕೊಳ್ಳಲು ಬಹಳ ಕಾರಣ ಕೂಡ ಇರುತ್ತದೆ. ಅದನ್ನೆಲ್ಲ ತುಳಸಿ ಬಳಿ ಹೇಳುತ್ತಾನೆ.

ಸಿರಿಗೆ ಧೈರ್ಯ ಹೇಳಿದ ದತ್ತ
ಇತ್ತ ಸಿರಿ ಮಾತ್ರ ಬಹಳ ಬೇಸರದಿಂದ ಇರುತ್ತಾಳೆ. ಸಮರ್ಥ್‌ಗೆ ನಂದಿನಿ ಏನು ಅಂತ ಅರ್ಥ ಮಾಡಿಸಬೇಕಾಗುತ್ತದೆ. ಆಕೆ ಸರಿ ಇಲ್ಲ. ಈತನ ಬಳಿಯಿಂದ ಹಣ ತೆಗೆದುಕೊಂಡು ಅಥವಾ ಡ್ರಾಪ್ ತೆಗೆದುಕೊಂಡು ಅಡ್ವಾಂಟೇಜ್ ತೆಗೆದುಕೊಳ್ಳುತ್ತ ಇದ್ದಾಳೆ ಎಂದು ಬೇಸರ ಮಾಡಿಕೊಂಡಿದ್ದಾಳೆ. ದತ್ತ ತಾತಾ ಬಂದು ಸಿರಿಯನ್ನು ಸಮಾಧಾನ ಮಾಡುತ್ತಾನೆ. ಬಳಿಕ ಕೆಲವೊಂದು ತಪ್ಪನ್ನು ಸರಿ ಪಡಿಸುತ್ತಾನೆ..
ಶೇಷನ ಮಾತು ಕೇಳಿ ದತ್ತ ಶಾಕ್
ಇನ್ನೂ ಶೇಷ ಬಂದು ಮಾತನಾಡುತ್ತಾ ಇರುತ್ತಾನೆ. ಈ ವೇಳೆ ದತ್ತನಿಗೆ ಇಪ್ಪತ್ತು ಸಾವಿರ ಎಲ್ಲರಿಗೂ ಬಂದಿದೆ ಎಂಬ ವಿಚಾರ ತಿಳಿದು ಕೊಂಚ ಕೋಪಗೊಂಡು ಇರುತ್ತಾನೆ. ಯಾಕೆ ಎಂದರೆ ಈ ವಿಚಾರವನ್ನು ತುಳಸಿ ಆಗಲಿ ಸಿರಿ ಆಗಲಿ ಹೇಳಲಿಲ್ಲ. ಇನ್ನೂ ಬೇರೆಯವರಿಂದ ಈ ವಿಚಾರ ತಿಳಿದರೆ ದತ್ತಗೆ ಹೇಗಾಗಬೇಡ. ಅವಿನಾಶ್, ಮಾಧವನ ಕೆಫೆಗೆ ಬರುತ್ತಾನೆ. ಆತ ನಿಧಿಗಾಗಿ ಒಂದು ಕಾಲೇಜ್‌ನಲ್ಲಿ ಸೀಟ್ ರಿಸರ್ವ್ ಮಾಡಿದ್ದನ್ನು ಕೊಡಲು ಹೇಳುತ್ತಾನೆ. ಆದರೆ ಮಾಧವ ಏನು ಮಾಡಲಾಗದ ಸ್ಥಿತಿಯಲ್ಲಿ ಇರುತ್ತಾನೆ.
ಮಗನನ್ನು ನೋಡಿ ಖುಷಿ ಪಟ್ಟ ಮಾಧವ
ಮಾಧವ, ಕೇಶವಾಗೆ ಮಾತು ಕೊಟ್ಟು ಆಗಿರುತ್ತದೆ. ಆ ಕಾರಣಕ್ಕೆ ಆತ ಸೀಟ್ ಬಿಟ್ಟು ಕೊಡಲು ಆಗುವುದಿಲ್ಲ. ಅದನ್ನು ಆ ಹುಡುಗನಿಗೆ ಕೊಡಲು ಇಟ್ಟಿದ್ದು ಎಂದು ಹೇಳುತ್ತಾನೆ. ಆಗ ಅವಿನಾಶ್ ಬಹಳ ಕೋಪದಿಂದ ತನ್ನ ತಂದೆಗೆ ಬೈಯುತ್ತಾನೆ. ನಿನಗೆ ಕುಟುಂಬದವರಿಗಿಂತ ಬೇರೆಯವರು ಹೆಚ್ಚಾದರೂ ಇನ್ನೂ ಮೇಲೆ ನನ್ನ ಹತ್ತಿರ ಸುಳಿದಾಡಲೇ ಬೇಡಿ ಎಂದು ಕಠೋರವಾಗಿ ಹೇಳಿ ಹೋಗುತ್ತಾನೆ.

ಮಗನ ಮಾತಿಗೆ ನೊಂದ ಮಾಧವ
ಮಗನ ಮಾತು ಕೇಳಿಸಿಕೊಂಡ ಮಾಧವಗೆ ಬಹಳ ನೋವಾಗುತ್ತದೆ. ತುಳಸಿ ಕೊಬ್ಬರಿ ಮಿಠಾಯಿ ಕೊಡಲು ಪುನಃ ಕೆಫೆಗೆ ಬಂದ ವೇಳೆ ಮ್ಯಾಗಿ ಮಾತನಾಡಿಸಿ ಅಲ್ಲಿ ನಡೆದ ವಿಚಾರ ತಿಳಿಸಿದಾಗ ಮರುಕಗೊಳ್ಳುತ್ತಾಳೆ. ತುಳಸಿ, ಮಾಧವ ಅವರನ್ನು ಸಮಾಧಾನ ಮಾಡಲು ಹೋಗುತ್ತಾಳೆ. ಆದರೆ ಮ್ಯಾಗಿ ಆಕೆಯನ್ನು ತಡೆಯುತ್ತಾರೆ. ಇನ್ನು ತುಳಸಿ ಆಕೆಯ ಮನೆಯತ್ತ ಹೊರಡುತ್ತಾಳೆ. ಅಷ್ಟರಲ್ಲಿ ಅಲ್ಲಿಗೆ ಶಾರ್ವರಿ ಬರುತ್ತಾರೆ.
ತುಳಸಿ -ಶಾರ್ವರಿ ಮುಖಾಮುಖಿ
ತುಳಸಿ ಹಾಗೂ ಶಾರ್ವರಿ ಇಬ್ಬರು ಒಟ್ಟಿಗೆ ಬರುತ್ತಾರೆ. ತುಳಸಿ, ಶಾರ್ವರಿಯತ್ತ ತನ್ನು ನೋಡಿದರೆ ಶಾರ್ವರಿ ಮಾತ್ರ ಯಾರ ಮುಖವನ್ನು ನೋಡದೆ ನೇರ ಕೆಫೆ ಬಳಿ ಹೋಗುತ್ತಾಳೆ. ಅಲ್ಲಿ ಅವಿನಾಶ್‌ನ ನೋಡಿ ಶಾಕ್ ಆಗುತ್ತಾಳೆ.


Click it and Unblock the Notifications