'ಶ್ರೀ ರಸ್ತು ಶುಭ ಮಸ್ತು' ಅಮ್ಮನ ನೋವು ಹೇಳಲು ಬಂದ ಸುಧಾರಾಣಿ
'ಶ್ರೀ ರಸ್ತು ಶುಭ ಮಸ್ತು' ಧಾರಾವಾಹಿಯ ಪ್ರೋಮೋ ಅದ್ಭುತವಾಗಿ ಮೂಡಿಬರುತ್ತಿದೆ. ಪ್ರೊಮೋ ಮೂಲಕವೇ ಜನರ ಮನಸೂರೆಗೊಂಡ ಧಾರವಾಹಿ ವೀಕ್ಷಕರ ಕುತೂಹಲ ಹೆಚ್ಚಿಸಿದೆ. ಅನೇಕ ಜನರು ಯಾವಾಗ ಈ ಧಾರವಾಹಿ ಶುರುವಾಗುತ್ತದೆ ಎಂದು ಕಾದು ಕುಳಿತಿದ್ದಾರೆ. ಅಮ್ಮ ಆದವರು ಮಕ್ಕಳಿಗಾಗಿ ಅದೆಷ್ಟು ಕಷ್ಟ ಪಡುತ್ತಾರೆ. ತನ್ನ ಆಸೆಗಳನ್ನು ಪಕ್ಕಕ್ಕೆ ಸರಿಸಿ ಮನೆಯವರಿಗಾಗಿ ತನ್ನ ಜೀವವನ್ನೇ ತ್ಯಾಗ ಮಾಡುತ್ತಾರೆ ಎಂಬ ಕತೆಯನ್ನು ಧಾರಾವಾಹಿ ಒಳಗೊಂಡಿದೆ.
ಕುಟುಂಬದ ನೋವುಗಳಿಗೆ ಮಿಡಿಯುತ್ತಾಳೆ ತಾಯಿ, ಆದರೆ ತಾಯಿ ನೋವಿಗೆ ಯಾರ ಸ್ಪಂದನೆಯೂ ಇಲ್ಲ. ಆದರೂ ತನ್ನವರ ಒಳಿತಿಗಾಗಿ ಅದೆಷ್ಟೇ ಕಷ್ಟ ಆದರೂ ಅದನ್ನೆಲ್ಲ ಮೆಟ್ಟಿ ನಿಲ್ಲುವಲ್ಲಿ ತಾಯಿ ಹೇಗೆ ಸಫಲ ಆಗುತ್ತಾಳೆ ಎಂಬುದರ ಕತೆಯನ್ನು ಧಾರಾವಾಹಿ ಒಳಗೊಂಡಿದೆ. ಧಾರಾವಾಹಿಯ ಚಿತ್ರೀಕರಣ ಬಹಳ ಅದ್ದೂರಿಯಾಗಿ ನಡೆಯುತ್ತಿದೆ. ನಟಿ ಸುಧಾರಾಣಿ ತಾಯಿ ಪಾತ್ರದಲ್ಲಿ ಕಾಣಿಸುತ್ತಿದ್ದಾರೆ. ಇವರ ಅಭಿನಯ ನೋಡಲು ಜನ ಕಾತರರಾಗಿದ್ದಾರೆ.

ಪ್ರೋಮೋ ಶೂಟಿಂಗ್ ವಿಡಿಯೋ ಬಿಡುಗಡೆ
ಇತ್ತ ಪ್ರೋಮೋ ಶೂಟಿಂಗ್ ಅನ್ನು ಧಾರವಾಹಿ ತಂಡ ರೀವಿಲ್ ಮಾಡಿದ್ದಾರೆ. ಅದನ್ನು ನೋಡಿದ ವೀಕ್ಷಕರಿಗೆ ಧಾರವಾಹಿ ನೋಡುವ ಆಸೆಯಾಗಿದೆ. ಶೂಟಿಂಗ್ ಸೆಟ್ ನಲ್ಲಿ ನಿರ್ಮಾಪಕ, ನಿರ್ದೇಶಕರು, ಶೂಟಿಂಗ್ ನಲ್ಲಿ ನಿರತರಾಗಿರುವವರು ಎಲ್ಲಾರೂ ಬ್ಯುಸಿಯಾಗಿ ಕೆಲಸ ಮಾಡುತ್ತಿದ್ದಾರೆ.

ಸುಧಾರಾಣಿಯನ್ನು ನೋಡಲು ಕಾತರ
'ಶ್ರೀ ರಸ್ತೂ ಶುಭ ಮಸ್ತು' ಧಾರವಾಹಿ ವೀಕ್ಷಕರ ಮನಸೆಳೆಯಲು ಒಂದು ಕಾರಣವಿದೆ. ಅದೇ ಕಥೆ, ಕಥೆಗೆ ತಕ್ಕಂತೆ ಸುಧಾರಾಣಿಯವರ ನಟನೆ ಇದನ್ನೆಲ್ಲ ನೋಡಿ ಜನರಿಗೆ ಕಾತರತೆ ಹೆಚ್ಚಾಗಿದೆ. ಇನ್ನೂ ಈ ಧಾರಾವಾಹಿಯ ಪ್ರೋಮೋ ಶೂಟಿಂಗ್ ವೇಳೆ ಮಾತನಾಡಿರುವ ನಟಿ ಸುಧಾರಾಣಿ, ಪುರಾತನ ಕಾಲದಿಂದ ಮಹಿಳೆಯರು ಹೀಗೆ ಇರಬೇಕು, ಈರೀತಿಯೇ ನಡೆದುಕೊಳ್ಳಬೇಕು, ಒಂದು ಚೌಕಟ್ಟನ್ನು ಹಾಕಿ ನಿಲ್ಲಿಸಿಬಿಟ್ಟಿದ್ದಾರೆ. ಇದನ್ನೆಲ್ಲ ಈ ಕಥೆ ತಿಳಿಸುತ್ತಾ ಹೋಗುತ್ತದೆ. ಇದೇ ಕಾರಣಕ್ಕೆ ನನಗೆ ಕಥೆ ತುಂಬಾ ಇಷ್ಟವಾಯಿತು ಎಂದಿದ್ದಾರೆ.

ಎಲ್ಲದಕ್ಕೂ ಅಮ್ಮನ ಮೇಲೆ ಡಿಪೆಂಡ್ ಆಗಿರುವ ಪಾತ್ರ
ಸುಧಾರಾಣಿ ಜೊತೆ ದೀಪಕ್ ಗೌಡ ಕೂಡ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಎಲ್ಲದಕ್ಕೂ ಅಮ್ಮನನ್ನೆ ಡಿಪೆಂಡ್ ಆಗಿರುವಂತಹ ಪಾತ್ರ. ಅಮ್ಮನ ನೋವನ್ನು ಮಗ ಅರ್ಥ ಮಾಡಿಕೊಳ್ಳುತ್ತಾನೆ ಎಂಬುವುದು ಗೊತ್ತಿಲ್ಲ. ಧಾರವಾಹಿ ಶುರುವಾದ ಬಳಿಕವಷ್ಟೇ ತಿಳಿಯಬೇಕಿದೆ. ಆದರೆ ಶು ಪಾಲಿಶ್ ಮಾಡಲು ಅಮ್ಮ ಬೇಕು ಹಾಗೆಯೇ ತಿಂಡಿ ತಿನ್ನಲು ಅಮ್ಮಬೇಕು, ನಿದ್ದೆಯಿಂದ ಎದ್ದೆಳುವಾಗ ಅಮ್ಮ ಬೇಕು, ಊಟದ ಡಬ್ಬ ತಯಾರಿಸಲು ಅಮ್ಮ ಬೇಕು ಹೀಗೆ ಎಲ್ಲದಕ್ಕೂ ಅಮ್ಮನನ್ನ ನೆಚ್ಚಿಕೊಂಡಿರುವ ಪಾತ್ರ. ಅದನ್ನು ನೀವು ನೋಡಿ ಎಂಜಾಯ್ ಮಾಡಿ ಎಂದು ದೀಪಕ್ ಹೇಳಿದ್ದಾರೆ.

ಸೊಸೆಯ ಪಾತ್ರವೂ ಭಿನ್ನವಾಗಿದೆ
ಸೊಸೆಯ ಪಾತ್ರ ಬಹಳ ಕ್ಯೂರಿಯಾಸಿಟಿ ಹುಟ್ಟಿಸಿದೆ. ಅತ್ತೆಯ ಎಲ್ಲಾ ಕೆಲಸಗಳನ್ನೂ ಗಮನಿಸುವ ಸೊಸೆ ಆಕೆಗೆ ಸ್ವಾವಲಂಬಿಯಾಗಿ ಇರಲು ಹೇಗೆ ಕಲಿಸುವುದು ಎಂದು ಯೋಚಿಸುತ್ತಿರುತ್ತಾಳೆ. ಗಂಡ ಅಮ್ಮನನ್ನು ಕರೆದಾಗ ತಾನೇ ಹೋಗುವುದು, ಅಮ್ಮಾ ಬೇಡಮ್ಮ ಹೋಗುತ್ತೇನೆ ಎಂದು ಹೇಳಿ ಓಡುವ ದೃಶ್ಯ ನೋಡಿ ಸೋಸೆಗು ಅತ್ತೆಯ ಬಗ್ಗೆ ಮರುಕ ಹುಟ್ಟಿದೆ. ಅಮ್ಮ ನಿಮ್ಮನ್ನು ಹೇಗೆ ಚೇಂಜ್ ಮಾಡುವುದು ಅಂತ ನನಗೆ ತಿಳಿದಿದೆ ಎಂಬ ವ್ಯಕ್ತಿತ್ವ ಸೊಸೆಯದ್ದು, ಸೊಸೆಯ ಪಾತ್ರದಲ್ಲಿ ಚಂದನಾ ರಾಘವೇಂದ್ರ ನಟಿಸಿದ್ದಾರೆ. ''ಜೀ ಕನ್ನಡಕ್ಕೆ ಹೊಸದಾಗಿ ಬಂದ ಫ್ಯಾಮಿಲಿ ಮೆಂಬರ್ ನಾನು. ಸುಧಾರಾಣಿ ಮೇಡಂ ಜೊತೆ ಮೊದಲ ಸಲ ಸ್ಕ್ರೀನ್ ಶೇರ್ ಮಾಡುತ್ತಿದ್ದೇನೆ. ನಾನು ತುಂಬಾ ಎಕ್ಸೈಟ್ ಆಗಿದ್ದೇನೆ ಎಂದಿದ್ದಾರೆ ಚಂದನಾ ರಾಘವೇಂದ್ರ. ಇನ್ನೂ ಶ್ರೀ ರಸ್ತು ಶುಭ ಮಸ್ತು ಜೀ ಕನ್ನಡದಲ್ಲಿ ಸದ್ಯದಲ್ಲೇ ಪ್ರಸಾರವಾಗಲಿದೆ.


Click it and Unblock the Notifications











