ಮೊಮ್ಮಗನ ಬಗ್ಗೆ ದತ್ತಾಗೆ ಮೂಡಿದ ಅನುಮಾನ?

By ಪೂರ್ವ

ಮೊಮ್ಮಗನ ಮದುವೆ ಮಾಡಬೇಕು ಎಂದು ದತ್ತ ಅದೆಷ್ಟು ಪ್ರಯತ್ನ ಮಾಡಿದರು ಸಮರ್ಥ್ ಮಾತ್ರ ಯಾವ ಹುಡುಗಿಯನ್ನು ಕಣ್ಣೆತ್ತಿಯೂ ನೋಡುತ್ತಿಲ್ಲ. ಅದಕ್ಕೆ ಕಾರಣ ಸಿರಿ. ಸಿರಿಯ ಜೊತೆ ಬಹಳ ಕಠೋರವಾಗಿ ನಡೆದುಕೊಂಡದಕ್ಕಾಗಿ ಬಹಳ ಬೇಸರಪಟ್ಟುಕೊಂಡಿದ್ದಾನೆ. ತನ್ನ ಪ್ರೀತಿಯನ್ನು ಮನೆಯಲ್ಲಿ ಹೇಳಲಾಗದೆ ಬಹಳ ತೊಳಲಾಡುತ್ತಾ ಇದ್ದಾನೆ. ಇತ್ತ ದತ್ತ, ಸಮರ್ಥ್ ಬಗ್ಗೆ ವಿಚಾರಣೆ ಮಾಡುತ್ತಿದ್ದಾನೆ.

ಹಾಗೆಯೇ ಯಾರು ಇಲ್ಲದ ಮೇಲೆ ಸಮರ್ಥ್ ರೂಮ್ ಒಳಗೆ ನುಗ್ಗಿ ಹುಡುಗಿ ಫೋಟೋ ಸಿಗುತ್ತದಾ ಎಂದು ಹುಡುಕುತ್ತಾ ಇರುತ್ತಾನೆ. ದತ್ತ ಗೆಳೆಯನ ಬಳಿ ಮಾತನಾಡುತ್ತಾ, 'ನಾನು ಎಂತೆಂಥ ಹುಡುಗಿ ತೋರಿಸಿದರು ಸಮರ್ಥ ಹುಡುಗಿಯರನ್ನು ಒಪ್ಪುತ್ತಿಲ್ಲ, ಖಂಡಿತ ಆತ ಬೇರೆ ಹುಡುಗಿಯ ಪ್ರೀತಿಯಲ್ಲಿ ಬಿದ್ದಿದ್ದಾನೆ ಎನ್ನುವ ಲೆಕ್ಕಾಚಾರ ನಂದು ಅದಕ್ಕೆ ಆತನ ರೂಮ್ ಎಲ್ಲಾ ಹುಡುಕಲು ಹೊರಟಿದ್ದೇನೆ ಎನ್ನುತ್ತಾನೆ.

ಹುಡುಗಿ ಫೋಟೋ ಸಿಕ್ಕರೂ ಸಿಗಬಹುದು ಏನೋ ಎಂದು ಕೊಂಡು ಗೆಳೆಯನ ಜೊತೆ ಸಮರ್ಥನ ರೂಮ್ ಗೆ ತೆರಳಿದ ದತ್ತ ಗೆಳೆಯನ ಮಾತು ಕೇಳುತ್ತಾನೆ. ಆಗ ಗೆಳೆಯ ಹೇಳುತ್ತಾನೆ, ನಾನು ಪುಸ್ತಕದ ಒಳಗೆ ಫೋಟೊಗಳನ್ನು ಇಡುತ್ತಿದೆ, ಹೀಗೆಲ್ಲ ಮಾಡುತ್ತಿದ್ದೆ ಎಂದು ಹಳೆ ಕಾಲದ ವಿಷಯಗಳನ್ನು ಹೇಳುತ್ತಿರುತ್ತಾರೆ. ಅದಕ್ಕೆ ದತ್ತ ಹೇಳುತ್ತಾನೆ ಲೋ ಅದೆಲ್ಲ ಹಿಂದಿನ ಕಾಲದಲ್ಲಿ ಈಗಿನ ಮಕ್ಕಳು ಬಹಳ ಮುಂದುವರೆದಿದ್ದಾರೆ. ಈಗ ಏನೇ ಇದ್ದರೂ ಫೇಸ್ ಬುಕ್ ವಾಟ್ಸಾಪ್ ಎಂದು ಹೇಳುತ್ತಾರೆ.

ಸಮರ್ಥ್‌ನ ರೂಮ್ ನಲ್ಲಿ ಸರ್ಚ್ ಮಾಡುತ್ತಿರುವ ದತ್ತ

ಸಮರ್ಥ್‌ನ ರೂಮ್ ನಲ್ಲಿ ಸರ್ಚ್ ಮಾಡುತ್ತಿರುವ ದತ್ತ

ಇದನ್ನು ಕೇಳಿದ ದತ್ತನ ಗೆಳೆಯ ಅದೆಲ್ಲ ನಿನಗೆ ಗೊತ್ತಿದ್ದರೂ ಮತ್ತೆ ಯಾಕೆ ನೀನು ಸಮರ್ಥ್‌ನ ರೂಮ್ ನಲ್ಲಿ ಏನು ಮಾಡುತ್ತಿದ್ದೀಯ ಎಂದು ಕೇಳಿದಾಗ ದತ್ತ ತೊದಲುತ್ತಾ ಹೇಳುತ್ತಾನೆ ಲೋ ನಾನು ನಿನ್ನ ಬಾಸ್ ನೀನು ನನ್ನ ಅಸಿಸ್ಟೆಂಟ್ ಅಷ್ಟೇ ಮಾತಾಡಬೇಡ ನಾನು ಹೋಗುವ ದಾರಿಯಲ್ಲಿ ಬಾ ಎಂದು ಸಮರ್ಥ್ ನ ರೂಮ್ ನಲ್ಲಿ ಹುಡುಕಾಟ ಮಾಡುತ್ತಾ ಇರುತ್ತಾನೆ. ಆ ವೇಳೆ ದತ್ತನ ಕೈ ಗೆ ಒಂದು ಫೋಟೋ ಸಿಗುತ್ತದೆ. ಆಗ ದತ್ತ ಹೇಳುತ್ತಾನೆ ಈ ಹುಡುಗಿ ಸಮರ್ಥ್ ನೀಗೆ ಖುಷಿ ಆಗಿರಬೇಕು ಅದಕ್ಕೆ ಮುಂದೇನೆ ಇಟ್ಟಿದ್ದಾನೆ ಎಂದು ಹೇಳುತ್ತಾರೆ

ಜುಗ್ಗನಿಗೆ ಕರೆ ಮಾಡಿ ಸಂಬಂಧ ಓಕೆ ಎನ್ನುವ ದತ್ತ

ಜುಗ್ಗನಿಗೆ ಕರೆ ಮಾಡಿ ಸಂಬಂಧ ಓಕೆ ಎನ್ನುವ ದತ್ತ

ಇದನ್ನು ಕೇಳಿದ ದತ್ತನ ಗೆಳೆಯ ಇಲ್ಲಿಯೂ ಸುಮಾರ್ ಫೋಟೋ ಇದೆ ಎಂದು ಹೇಳುತ್ತಾರೆ. ಇದನ್ನು ಕೇಳಿದ ದತ್ತ ಹೇಳುತ್ತಾನೆ, ಈ ಫೋಟೋ ಅವನಿಗೆ ಬಹಳ ಇಷ್ಟ ಆಗಿರಬೇಕು ಎಂದು ಹೇಳುತ್ತಾರೆ. ಬಳಿಕ ಇದನ್ನು ಕೇಳಿದ ದತ್ತ ಗೆಳೆಯ ಹೇಳುತ್ತಾರೆ ಹಾಗಾದರೆ ಈ ಹುಡುಗಿ ಇಷ್ಟ ಎಂದು ಹೇಳಿ ಬಿಡು ಎನ್ನುತ್ತಾರೆ. ಆಗ ದತ್ತ ಜುಗ್ಗನಿಗೆ ಕರೆ ಮಾಡಿ ನಾನು ದತ್ತ ಮಾತನಾಡುತ್ತಾ ಇದ್ದೇನೆ, ನಿಮ್ಮ ಮಗಳು ನನ್ನ ಮೊಮ್ಮಗನಿಗೆ ಇಷ್ಟ ಆಗಿದ್ದಾಳೆ. ನಿಮಗೆ ಏನು ಅಭ್ಯಂತರ ಇಲ್ಲ ಎಂದರೆ ಜಾತಕ ತೆಗೆದುಕೊಂಡು ಮನೆಗೆ ಬನ್ನಿ ಎಂದು ಹೇಳಿ ಫೋನ್ ಕಟ್ ಮಾಡುತ್ತಾರೆ.

ಸಿರಿಗೆ ಧೈರ್ಯ ಹೇಳಿದ ತುಳಸಿ

ಸಿರಿಗೆ ಧೈರ್ಯ ಹೇಳಿದ ತುಳಸಿ

ಇದನ್ನು ಕೇಳಿದ ಜುಗ್ಗನಿಗೆ ಖುಷಿ ಆಗುತ್ತದೆ. ಇನ್ನು ತುಳಸಿ ಹಾಗೂ ಸಿರಿ ಮಾತನಾಡುತ್ತಾ ಇರುವಾಗ ತುಳಸಿ ಸಿರಿಗೆ ಒಂದು ಮಾತು ಹೇಳುತ್ತಾಳೆ. ಸಿರಿ ನೀನ್ಯಾಕೆ ನಿನ್ನ ಹುಡುಗನ ಮನೆಗೆ ಹೋಗಿ ಪ್ರೀತಿ ವಿಚಾರ ಹೇಳಬಾರದು ಎಂದಾಗ ಗಾಬರಿ ಬಿದ್ದ ಸಿರಿಯನ್ನು ಕಂಡು ತುಳಸಿ ಸಮಾಧಾನ ಮಾಡುತ್ತಾಳೆ. ಯಾಕೆ ನೀನು ಇಷ್ಟೊಂದು ಗಾಬರಿ ಬೀಳುತ್ತಿಯಾ ನೀನು ಬಹಳ ಧೈರ್ಯ ವಂತೆ ಹೀಗೆಲ್ಲ ಗಾಬರಿ ಬೀಳಬಾರದು ಅವರ ಅಮ್ಮನಿಗೆ ಮೊದಲು ಶಾಕ್ ಆದರೂ ತನಗಿಂತ ಉತ್ತಮವಾಗಿ ನೋಡಿಕೊಳ್ಳುವ ಹೆಂಡತಿ ಬಂದರೆ ಅವರಿಗೆ ಇನ್ನೂ ಖುಷಿ ಆಗುತ್ತದೆ ಎನ್ನುತ್ತಾಳೆ.

ತುಳಸಿಯನ್ನು ನೋಡಿದ ಮಾಧವ

ತುಳಸಿಯನ್ನು ನೋಡಿದ ಮಾಧವ

ಮೂರನೇಯವರು ಈ ಮಾತನ್ನು ಹೇಳುವುದಕ್ಕಿಂತ ನೀನು ಹೇಳಿದರೆ ಒಳ್ಳೆಯದು ಎಂದು ಹೇಳುತ್ತಾಳೆ. ಬಳಿಕ ಧೈರ್ಯ ಮಾಡಿ ಮನೆಯತ್ತ ಹೋಗುತ್ತಾರೆ. ಈ ವೇಳೆ ಸಿರಿ ಹಾಗೂ ತುಳಸಿ ಮಾರುಕಟ್ಟೆಗೆ ತೆರಳುತ್ತಾರೆ. ಹೂ ಹಣ್ಣುಗಳನ್ನೂ ಕೊಂಡುಕೊಳ್ಳುತ್ತಾರೆ. ಅಲ್ಲಿ ಸಿರಿಯನ್ನು ಕಂಡ ಮಾಧವ ಮನದಲ್ಲಿ ಅಂದುಕೊಳ್ಳುತ್ತಾರೆ. ಸಿರಿ ಹೇಳುತ್ತಿದ್ದಿದ್ದು ಇವರೇ ಇರಬೇಕು. ಅವರನ್ನು ಭೇಟಿಯಾಗಬೇಕು ಎಂದುಕೊಳ್ಳುತ್ತಾರೆ. ಮುಂದೆ ಏನು ಎಂಬುವುದನ್ನು ಕಾದು ನೋಡಬೇಕಿದೆ.

More from Filmibeat

English summary
Kannada serial Sri Rastu Shubha Mastu written updated on 14th November episode. Know more about it.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X