Don't Miss!
- Sports
U-19 Women's World Cup 2023: ಸ್ಕಾಟ್ಲೆಂಡ್ ಮಣಿಸಿ ಸೂಪರ್ ಸಿಕ್ಸ್ ಹಂತಕ್ಕೆ ಪ್ರವೇಶಿಸಿದ ಭಾರತ
- Lifestyle
ಎದೆನೋವು ಮಾತ್ರವಲ್ಲ, ಇವು ಕೂಡ ಹೃದಯಾಘಾತ ಲಕ್ಷಣಗಳು, ನಿರ್ಲಕ್ಷ್ಯ ಮಾಡಿದರೆ ತಪ್ಪಿದ್ದಲ್ಲ ಅಪಾಯ
- News
PM Modi Visit To Kalaburagi: ಕನ್ನಡದಲ್ಲಿ ಮೋದಿ ಟ್ವೀಟ್, ಹಬ್ಬದ ವಾತಾವರಣ!
- Automobiles
ಏರ್ಬ್ಯಾಗ್ ಸಮಸ್ಯೆ, 17 ಸಾವಿರಕ್ಕೂ ಹೆಚ್ಚು ಕಾರುಗಳನ್ನು ಹಿಂಪಡೆಯಲಿದೆ ಮಾರುತಿ ಸುಜುಕಿ
- Finance
ಸಿಇಒ ಜೊತೆ ಒಂದು ಸಭೆ, ಮರುದಿನವೇ 3,000 ಉದ್ಯೋಗಿಗಳ ವಜಾ!
- Technology
ವಾಟ್ಸಾಪ್ನ ಸ್ಟೇಟಸ್ ವಿಭಾಗದಲ್ಲಿ ನೂತನ ಫೀಚರ್ಸ್; ಏನೆಂದು ತಿಳಿಯಿರಿ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Shrirasthu Shubhamasthu Serial : ತಾತನ ಒಪ್ಪಿಗೆ ಇಲ್ಲದೆ ಮದುವೆ ಆಗುತ್ತಾನ ಸಮರ್ಥ್?
ದತ್ತನಿಗೆ ಇದೀಗ ಸೊಸೆ ತುಳಸಿ ಎಲ್ಲಾ ವಿಚಾರವನ್ನು ಹೇಳಿ ಆಗಿದೆ. ತನ್ನ ಮಗ ಬೇರೆ ಒಂದು ಹುಡುಗಿಯನ್ನು ಪ್ರೀತಿ ಮಾಡಿದ್ದಾನೆ ಆದ ಕಾರಣ ದಯಮಾಡಿ ಒಪ್ಪಿಗೆ ಕೊಡಿ ಮಾವ ಎಂದು ಕೇಳಿ ಕೊಳ್ಳುತ್ತಾಳೆ ಇದನ್ನು ಕೇಳಿದ ದತ್ತ ಇನ್ನೂ ನನ್ನ ಚಟ್ಟ ರೆಡಿ ಮಾಡಿ ನಾನು ಸಾಯಲು ನಿರ್ಧಾರ ಮಾಡಿದ್ದೇನೆ ಎಂದು ಹೇಳುತ್ತಾನೆ. ಇದನ್ನು ಕೇಳಿದ ತುಳಸಿಗೆ ಬೇಸರ ಆಗುತ್ತದೆ.
ತುಳಸಿಯ ಮನಗೆ ಬಂದ ಸಂಧ್ಯಾ ರಾದ್ಧಾಂತ ಆರಂಭ ಮಾಡುತ್ತಾಳೆ. ನನ್ನ ಮಾವನನ್ನು ಅವಮಾನ ಮಾಡಿದ್ದಾರೆ ಈ ಮುದುಕ. ಅದಕ್ಕಾಗಿ ನನ್ನ ಮಾವ ನನ್ನನ್ನು ಮನೆ ಬಿಟ್ಟು ಓಡಿಸಿದ್ದಾರೆ ಇದರಿಂದ ನಾನು ಈ ಮನೆಗೆ ಬರಬೇಕಾಯಿತು. ಏನು ಮಾಡಲಿ ನಾನು ಎನು ಮಾಡಲಿ ಎಂದು ಹೇಳಿದಾಗ, ತುಳಸಿ ಹೇಳುತ್ತಾಳೆ ಸಂಧ್ಯಾ ಮರ್ಯಾದೆಯಿಂದ ಮಾತನಾಡು ಎಂದು ಹೇಳಿದಾಗ ನಿನ್ನ ಮಾವನಿಗೆ ಮರ್ಯಾದೆ ಕೊಡಬೇಕು. ನನ್ನ ಮಾವನಿಗೆ ಮರ್ಯಾದೆ ಇಲ್ಲ. ಇದು ಸರಿಯ ನೀನೇ ಹೇಳು ಎಂದು ಕೋಪದಿಂದ ಹೇಳುತ್ತಾಳೆ.

ಸಂಧ್ಯಾ ಅನ್ನು ಮನೆಗೆ ಸೇರಿಸಲ್ಲ ಎಂದ ದತ್ತ
ಅವರಿಗೆ ಮರ್ಯಾದೆ ಕೊತ್ತಿಲ್ಲ ಎಂದು ನನ್ನ ಓಡಿಸಿದ್ದಾರೆ ನಾನು ಎಲ್ಲಿ ಹೋಗಲಿ ಎಂದು ಹೇಳಿದಾಗ ನಡುವೆ ಬಾಯಿ ಹಾಕಿದ ದತ್ತ ಸುಡುಗಾಡಿಗೆ ಹೋಗು ಎಂದು ಹೇಳುತ್ತಾನೆ. ಬಳಿಕ ಹೇಳುತ್ತಾನೆ ಒಂದು ಮಾತು ಕೇಳು ನೀನು ಎಷ್ಟು ಅತ್ತರು ನಾಟಕ ಮಾಡಿದರು ಮನೆಯ ಒಳಗೆ ಮಾತ್ರ ಸೇರಿಸಲು ಸಾಧ್ಯ ಇಲ್ಲ ಎಂದು ಕಡ್ಡಿ ಮುರಿದ ಹಾಗೆ ಹೇಳುತ್ತಾನೆ. ಬಳಿಕ ಜಿದ್ದಿಗೆ ಬಿದ್ದ ಸಂಧ್ಯಾ ಯಾಕೆ ಆಗಲ್ಲ ಎಂದು ನಾನು ನೋಡುತ್ತೇನೆ ಎಂದು ಮನೆಯ ಒಳಗೆ ಹೋಗಲು ನೋಡುತ್ತಾಳೆ.

ಸಂಧ್ಯಾಳನ್ನು ಮದುವೆಯಾಗಲಾರೆ ಎಂದ ಸಮರ್ಥ್
ಆದರೆ ಆಕೆಯನ್ನು ಸಮರ್ಥ್ ತಡೆದು ಪುನಃ ಆತನ ಮಾವನ ಮನೆಗೆ ಬಿಡಲು ಆತನೇ ಬರುತ್ತಾನೆ ಇದನ್ನು ನೋಡಿದ ಸಂಧ್ಯಾಗೆ ಕೊಂಚ ಸಮಾಧಾನ ಆಗುತ್ತದೆ. ಸಂಧ್ಯಾ ಮನೆ ಒಳಗೆ ಬಂದ ಸಮರ್ಥ್ ನನ್ನು ನೋಡಿದ ಜುಗ್ಗ ಬಹಳ ಖುಷಿಯಿಂದ ಕುಳ್ಳಿರಿಸಿ ಕಾಫಿ ಎಲ್ಲಾ ಕೊಡುತ್ತಾನೆ ಇದನ್ನು ನೋಡಿದ ಸಮರ್ಥ್ ಗೆ ಬಹಳ ಖುಷಿ ಆಗುತ್ತದೆ. ಬಳಿಕ ಜುಗ್ಗ ಬಳಿ ಹೇಳುತ್ತಾನೆ ತಾನು ಒಂದು ಹುಡುಗಿನ ಮೂರು ವರುಷದಿಂದ ಪ್ರೀತಿ ಮಾಡುತ್ತಿದ್ದೇನೆ ಅವಳನ್ನೇ ಮದುವೆ ಆಗಬೇಕು ಅಂದುಕೊಂಡಿದ್ದೇನೆ ಆ ಕಾರಣದಿಂದಾಗಿ ನಿಮ್ಮ ಮಗಳನ್ನು ಮದುವೆ ಆಗಲು ಸಾಧ್ಯವಿಲ್ಲ. ನಮ್ಮನ್ನು ದಯ ಮಾಡಿ ಕ್ಷಮಿಸಿ ಬಿಡಿ ಎಂದು ಹೇಳುತ್ತಾನೆ.

ಕನಸು ಕಾಣುತ್ತಿರುವ ಸಿರಿ
ಇದನ್ನು ಕೇಳಿದ ಜುಗ್ಗನ ತಲೆಗೆ ಸಿಡಿಲು ಬಡಿದ ಹಾಗೆ ಆಗುತ್ತದೆ. ಸಂಧ್ಯಾ ಮಾತಿಗೂ ಪ್ರತಿಕ್ರಿಯೆ ನೀಡದೆ ಸಮರ್ಥ್ ತನ್ನ ಪ್ರೀತಿಯನ್ನು ಸಮಾಜಾಯಿಸಿಕೊಳ್ಳುತ್ತಾ ಮದುವೆ ಆದರೆ ಆಕೆಯನ್ನು ಮದುವೆ ಆಗುತ್ತೇನೆ ಎಂದು ಹೇಳುತ್ತಾನೆ. ಇದನ್ನು ಕೇಳಿದ ಸಂಧ್ಯಾ ಕೂಡ ಸುಮ್ಮನಾಗುತ್ತಾಳೆ. ಮನೆಗೆ ಬಂದ ಬಳಿಕ ಸಮರ್ಥ್ ತಾಯಿ ತುಳಸಿಗೆ ಹಾಗೂ ದತ್ತನಿಗೂ ವಿಚಾರ ಹೇಳುತ್ತಾನೆ. ಈ ವೇಳೆ ನನ್ನ ಮದುವೆಗೆ ತಾತಾ ಒಪ್ಪಿದ ಹಾಗೆ ಎಂದುಕೊಂಡು ಸಿರಿ ಮನೆಗೆ ಹೋಗಿ ನಾನು ನಾಳೆಯೇ ಮದುವೆ ಆಗುತ್ತೇನೆ ಎಂದು ಹೇಳಿ ಮರುದಿನ ಸಿರಿಯನ್ನು ದೇವಾಲಯಕ್ಕೆ ಕರೆದುಕೊಂಡು ಹೋಗಿ ತಾಳಿ ಕಟ್ಟಬೇಕು ಎಂದಾಗ ಸಿರಿಗೆ ಆಕೆಯ ಅತ್ತೆಯ ನೆನಪಾಗುತ್ತದೆ.

ಮನೆಗೆ ಬಂದವರಿಗೆ ಮಾಧವನಿಂದ ಸಹಾಯ
ಇನ್ನು ಮಾಧವ ಅಂಗವಿಕಲರಿಗಾಗಿ ಹಾಗೂ ಮಹಿಳೆಯರಿಗೆ ಪ್ರೋತ್ಸಾಹವನ್ನು ನೀಡುತ್ತಾ ಬಂದಿದ್ದಾರೆ. ಹಾಗೆಯೇ ಈ ಬಾರಿಯೂ ಐವರು ಮಹಿಳೆಯರು ಮಾಧವನ್ನನ್ನು ಹುಡುಕಿಕೊಂಡು ಬರುತ್ತಾರೆ. ಈ ವೇಳೆ ಅಲ್ಲಿಗೆ ಬಂದ ಮಾಧವನ ತಮ್ಮನ ಹೆಂಡತಿ ಬಂದು ಅವರನ್ನು ಹೊರಗೆ ಕಳುಹಿಸುವ ಹಾಗೆ ಮಾಡುತ್ತಾಳೆ ಇದನ್ನು ನೋಡಿದ ಮಾಧವ ಅವರನ್ನು ಸೋಫಾದ ಮೇಲೆ ಕುಳ್ಳಿರಿಸಿ ಮಾತನಾಡಿ ಅವರ ಬೇಡಿಕೆಯನ್ನು ಈಡೇರಿಸುವ ಪ್ರಯತ್ನ ಮಾಡುತ್ತಾನೆ. ಬಳಿಕ ಅವರು ತಯಾರಿಸಿದ ಗರಂ ಮಸಾಲೆಗೆಗಳಿಗೆ ಅಂಬಾಸಿಡರ್ ಆಗುತ್ತೇನೆ ಇದರಿಂದ ತುಂಬಾ ಜನರಿಗೆ ಸಹಾಯ ಆಗುತ್ತದೆ ಎಂದು ಹೇಳಿ ಅವರನ್ನು ಅಲ್ಲಿಂದ ಕಳುಹಿಸಿಕೊಡುತ್ತಾನೆ. ಮಾಧವನ ಮಗ ಕೂಡ ಅದೇ ಮಾಡುತ್ತಿದ್ದಾನೆ. ತಂದೆಯ ಮೌಲ್ಯ ತಿಳಿದುಕೊಳ್ಳದೆ ಇರುವ ಮಗ ಬಲವಾದ ಪೆಟ್ಟು ತಿನ್ನುವುದು ಗ್ಯಾರಂಟಿ.