For Quick Alerts
  ALLOW NOTIFICATIONS  
  For Daily Alerts

  Srirastu Shubhamastu: ಪೂರ್ಣಿಮಾ ಮುಂದೆ ಶಾರ್ವರಿ ಅಸಲಿ ಮುಖ ಬಯಲು ಮಾಡುತ್ತಾಳ ಸಿರಿ?

  By Poorva
  |

  ತುಳಸಿಗೆ ಅಡುಗೆ ಮನೆಯಿಂದ ಘಮ ಘಮ ಎಂದು ಪರಿಮಳ ಬರುತ್ತಾ ಇರುತ್ತದೆ. ಈ ವೇಳೆ ಸಿರಿಗೆ ಬಾಯಲ್ಲಿ ನೀರು ಬರುತ್ತದೆ. ಸಿರಿ ಪೂರ್ಣಿಮಾ ಮನೆಗೆ ಹೊರಟಿರುವುದನ್ನು ಕಂಡು ತುಳಸಿ ಕೈಗೆ ಚಕ್ಕುಲಿಯನ್ನು ಕೊಡುತ್ತಾಳೆ. ಇದನ್ನು ಆಕೆಗೆ ಕೊಡು ಎಂದು ಹೇಳುತ್ತಾಳೆ. ಇದನ್ನು ಕೇಳಿದ ಸಿರಿಗೆ ಬಹಳ ಖುಷಿ ಆಗುತ್ತದೆ. ಸಿರಿ ಹೋದ ಬಳಿಕ ಮತ್ತೆ ಕಾಲಿಂಗ್ ಬೆಲ್ ಸದ್ದಾಗುತ್ತದೆ. ಯಾರಿರಬಹುದು ಎಂದು ನೋಡಲು ತುಳಸಿ ಬಾಗಿಲು ತೆಗೆಯುತ್ತಾಳೆ. ಅಲ್ಲಿ ಪಕ್ಕದ ಮನೆ ಚೋಟು ಇರುತ್ತಾನೆ. ಸನ್ ಗ್ಲಾಸ್ ಹಾಕಿಕೊಂಡು ಬಂದಿರುವುದನ್ನು ನೋಡಿದ ತುಳಸಿಗೆ ಆಶ್ಚರ್ಯ ಆಗುತ್ತದೆ.

  ಇನ್ನೂ ಚೋಟು ಮನೆಯ ಒಳಗೆ ಬರುತ್ತಾನೆ. ಬಂದು ತುಳಸಿ ಬಳಿ ಫ್ರೆಂಡ್ ಬಗ್ಗೆ ವಿಚಾರಣೆ ಮಾಡುತ್ತಾನೆ. ಇನ್ನು ಇದನ್ನೆಲ್ಲ ಕೇಳಿದ ತುಳಸಿ ಚೋಟುಗೆ ಚಕ್ಕುಲಿಯನ್ನು ಕೊಟ್ಟು ಇಬ್ಬರು ಮಾತನಾಡಲು ತೊಡಗುತ್ತಾರೆ. ಚೋಟು ಟಿವಿ ಹಾಕಲು ಹೇಳುತ್ತಾನೆ. ತುಳಸಿ ಫೇವರೇಟ್ ಶೋ ಬರುತ್ತದೆ. ಅದುವೇ ಒಗ್ಗರಣೆ ಡಬ್ಬಿ. ಟಿವಿಯಲ್ಲಿ ಮಾಧವ ಅವರನ್ನು ನೋಡಿ ಚೋಟು ಆಂಟಿ ಇವರು ನಮ್ಮ ಮನೆಗೆ ಎರಡು ಬಾರಿ ಬಂದಿದ್ದರು, ಅವರನ್ನು ಮೀಟ್ ಮಾಡಿಸಬೇಕು ಎಂದುಕೊಂಡಿದ್ದೆ ಆದರೆ ಅಮ್ಮ ಬಿಡಲಿಲ್ಲ ಎಂದು ಹೇಳಿದಾಗ ತುಳಸಿ ಜೋರಾಗಿ ನಗುತ್ತ ಇರುತ್ತಾಳೆ. ತುಳಸಿ ಚೋಟು ಬಳಿ ಅವರನ್ನು ನಾನು ಭೇಟಿ ಆಗಿದ್ದೇನೆ ಎಂದು ಹೇಳುತ್ತಾಳೆ.

  ಇನ್ನು ಮಾಧವ ಕೆಫೆಯಲ್ಲಿ ಬಹಳ ಬ್ಯುಸಿ ಆಗಿರುತ್ತಾನೆ. ಇದನ್ನು ನೋಡಿದ ಸದಾ ಹಾಗೂ ಮ್ಯಾಗಿ ಸರ್ ಇವತ್ತು ಮನೆಗೆ ಬರುತ್ತಾರಾ ಇಲ್ವಾ ಎಂದು ಅಂದುಕೊಂಡಿದ್ದೆ, ಸರ್ ಇವತ್ತು ಬೆಳಗ್ಗೆನೇ ಬಂಡಿದ್ದಾರಲ್ಲ ಎಂದುಕೊಳ್ಳುತ್ತಾರೆ. ಆಗ ಮ್ಯಾಗಿ ಮನೆಯಲ್ಲಿ ಏನಾದರೂ ಆದಾಗ ಅದನ್ನು ಮರೆಯಲು ಸರ್ ಈ ರೀತಿ ಕೆಫೆಗೆ ಬೇಗ ಬರುತ್ತಾರೆ ಎಂದು ಹೇಳುತ್ತಾಳೆ. ಮಾಧವ ಎಷ್ಟೇ ಕೆಫೆಯಲ್ಲೀ ಓಡಾಡಿದರೂ ಪೂರ್ಣಿಮಾ ಹಾಗೂ ಮಹೇಶ ನೆನಪಾಗುತ್ತಾ ಇರುತ್ತಾರೆ.

  ರವೀಂದ್ರ ಶಾಪ್‌ಗೆ ಬಂದ ದತ್ತ

  ರವೀಂದ್ರ ಶಾಪ್‌ಗೆ ಬಂದ ದತ್ತ

  ರವೀಂದ್ರ ಅವರ ಬುಕ್ ಶಾಪ್ ಗೆ ಯಾರೋ ಇಬ್ಬರು ಬಂದು ಗಲಾಟೆ ಮಾಡುತ್ತಾ ಇರುತ್ತಾರೆ. ಯಾವುದೋ ಒಂದು ಬುಕ್ ತರಿಸಿಕೊಡಲು ಅಡ್ವಾನ್ಸ್ ಹಣ ಕೊಟ್ಟಿದ್ದೇನೆ ಆದರೂ ಬುಕ್ ತರಿಸಿಕೊಟ್ಟಿಲ್ಲ ಎಂದೆಲ್ಲ ಹೇಳಿ ರವೀಂದ್ರನಿಗೆ ಬಯ್ಯುತ್ತಾ ಇರುತ್ತಾನೆ. ಆಗ ಅಲ್ಲಿಗೆ ದತ್ತ ಬರುತ್ತಾರೆ ಹಾಗೂ ಏನು ಎಂದು ವಿಚಾರಿಸುತ್ತಾರೆ. ಈ ವೇಳೆ ಆತ ಇವರು ಬುಕ್ ತರಿಸಿಕೊಡುತ್ತೇನೆ ಎಂದು ಅಡ್ವಾನ್ಸ್ ತೆಗೆದುಕೊಂಡು ಈಗ ಬೇರೆ ಇನ್ನೇನೋ ಹೇಳುತ್ತ ಇದ್ದಾರೆ ಎಂದು ರವೀಂದ್ರಗೆ ಬಾಯಿಗೆ ಬಂದ ಹಾಗೆ ಬಯ್ಯುತ್ತಾ ಇರುತ್ತಾರೆ..

  ರವೀಂದ್ರಗೆ ಅವಮಾನ ಆಗುವುದನ್ನು ತಡೆದ ದತ್ತ

  ರವೀಂದ್ರಗೆ ಅವಮಾನ ಆಗುವುದನ್ನು ತಡೆದ ದತ್ತ

  ಇದನ್ನು ಕೇಳಿದ ದತ್ತ ಮಾತ್ರ ಆ ಗ್ರಾಹಕನಿಗೆ ಸರಿಯಾಗಿ ಬಯ್ಯುತ್ತಾರೆ. ಬಳಿಕ ತಾನೇ ಅಡ್ವಾನ್ಸ್ ಕೊಡುತ್ತಾರೆ. ಶಾರ್ವರಿ ಕುಳಿತಿರಬೇಕಾದರೆ ಕೆಲಸದವರು ಕೆಫೆಗೆ ಹೋಗಬೇಕು ಎಂದು ಹೇಳಿ ಹೋಗಲು ಅಲ್ಲಿಗೆ ಬರುತ್ತಾರೆ. ಆಯ್ಯ ಅವರನ್ನು ನೋಡಿಕೊಂಡು ಬರುತ್ತೇವೆ ಎಂದು ಕೆಲಸದವರು ಶಾರ್ವರಿ ಬಳಿ ಬರುತ್ತಾರೆ. ಆಗ ಶಾರ್ವರಿ ಒಪ್ಪಿಗೆ ಕೊಡುತ್ತಾಳೆ. ಅವರೆಲ್ಲ ಹೋದ ಬಳಿಕ ಅಲ್ಲಿಗೆ ಸಿರಿ ಬರುತ್ತಾಳೆ.

  ಸಿರಿಯನ್ನು ನೋಡಿ ಕೋಪಗೊಂಡ ಶಾರ್ವರಿ

  ಸಿರಿಯನ್ನು ನೋಡಿ ಕೋಪಗೊಂಡ ಶಾರ್ವರಿ

  ಸಿರಿಯನ್ನು ನೋಡಿದ ಶಾರ್ವರಿ ಕಿಡಿ ಕಾರುತ್ತ ಇರುತ್ತಾಳೆ.. ಫೋನ್ ಮಾಡಿದ್ದೀಯಾ ಪೂರ್ಣಿಮಾಗೆ ಎಂದು ಕೇಳುತ್ತಾಳೆ. ಇದನ್ನು ಕೇಳಿದ ಸಿರಿ ಕಾಲ್ ಮಾಡಿದ್ದೆ, ಆದರೆ ಆಕೆ ಪಿಕ್ ಮಾಡಲಿಲ್ಲ ಆದ ಕಾರಣ ಅವರನ್ನು ನೋಡಿಕೊಂಡು ಹೋಗೋಣ ಎಂದು ಬಂದೆ ಎಂದು ಹೇಳುತ್ತಾಳೆ.. ಆದರೆ ಶಾರ್ವರಿ ಅದಕ್ಕೆ ಅವಕಾಶ ಕೊಡದೆ ಸುಮ್ಮನೆ ಇಲ್ಲಿಂದ ಹೋಗುವಂತೆ ಹೇಳುತ್ತಾಳೆ. ಆದರೆ ಆ ವೇಳೆಗೆ ಪೂರ್ಣಿಮಾ ಅಲ್ಲಿಗೆ ಬಂದಾಗ ಸಿರಿಯನ್ನು ನೋಡಿ ಬಹಳ ಖುಷಿ ಪಟ್ಟು ಅವಳನ್ನು ಬರಲು ಹೇಳುತ್ತಾಳೆ. ಆದರೆ ಶಾರ್ವರಿ ಸಿರಿ ಕೈಯಿಂದ ಚಕ್ಕುಲಿ ಡಬ್ಬವನ್ನು ತೆಗೆದುಕೊಂಡು ಬೇರೆ ಕಡೆ ಇಡುತ್ತಾಳೆ. ಇನ್ನು ಪೂರ್ಣಿಮಾ ಸಿರಿ ಬಳಿ ಮಾತನಾಡಲು ಹೋದಾಗ ಕೆಳಗೆ ಅಮ್ಮ ಮಗಳು ಇಬ್ಬರು ಮಾತನಾಡುತ್ತಾ ಇರುತ್ತಾರೆ. ಇನ್ನು ಮುಂದೇನು ಕಾದು ನೋಡಬೇಕಿದೆ

  English summary
  Kannada serial Sri rastu subha mastu written update on 17th January
  Wednesday, January 18, 2023, 14:18
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X