Don't Miss!
- News
ಮಾನ್ವಿ: ಮಂಜೂರಾದ ಬಡವರ ಭೂಮಿಗೆ ಕಣ್ಣು ಹಾಕಿದ ಪ್ರಭಾವಿಗಳು, ಜನಾಕ್ರೋಶ
- Sports
LLC 2023: ಲೆಜೆಂಡ್ಸ್ ಲೀಗ್ನಲ್ಲಿ ಕೈಫ್, ಗೇಲ್, ಗಂಭೀರ್ ಸೇರಿದಂತೆ ಹಲವು ಸ್ಟಾರ್ಗಳು
- Lifestyle
ಆರೋಗ್ಯವಾಗಿರಬೇಕೆ? ಹಾಗಾದರೆ ನೀವು 3 ವಿಷಯಗಳಲ್ಲಿ ನಂಬಿಕೆ ಇಡಲೇಬೇಕು
- Finance
Jio 5G services: ಇಂದಿನಿಂದ ಮತ್ತೆ 34 ನಗರಗಳಲ್ಲಿ ಪ್ರಾರಂಭ- ಮಧ್ಯ ಕರ್ನಾಟಕದ ಯಾವ ನಗರಕ್ಕೆ ಕೊಡುಗೆ? ಮಾಹಿತಿ ಪಡೆಯಿರಿ
- Automobiles
ಪೆಟ್ರೋಲ್ ಬೆಲೆ ಏರಿಕೆ ಚಿಂತೆ ಬಿಡಿ: ರೂ.1 ಲಕ್ಷ ಇದ್ರೆ ಆಕ್ಟಿವಾವನ್ನು ಎಲೆಕ್ಟ್ರಿಕ್ ಸ್ಕೂಟರ್ ಆಗಿ ಪರಿವರ್ತಿಸಬ
- Technology
ಆಂಡ್ರಾಯ್ಡ್ ಬಳಕೆದಾರರಿಗಾಗಿ 'ಕಿಡ್ಸ್ ಮಿಸ್ಟರಿ ಬಾಕ್ಸ್' ಫೀಚರ್ಸ್ ಪರಿಚಯಿಸಿದ ನೆಟ್ಫ್ಲಿಕ್ಸ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಸೊಸೆಯ ಮಾತಿಗೆ ಬೆಲೆ ಕೊಡ್ತಾಳಾ ಶಾರ್ವರಿ? ಬೇಸರ ಮರೆತು ಮನೆಗೆ ಬರುತ್ತಾನ ಮಾಧವ?
ದತ್ತ ತಾತ ಮನೆಗೆ ಬಂದು ಬಹಳ ಬೇಸರ ಮಾಡಿಕೊಂಡು ಕುಳಿತಿರುತ್ತಾರೆ. ಅಲ್ಲಿಗೆ ಬಂದ ತುಳಸಿ ತನ್ನ ಮಾವನ ಬಳಿ.ಮಾತನಾಡುತ್ತಾಳೆ. ಯಾಕೆ ಮಾವ ಏನಾಯಿತು, ನನ್ನ ಯಾಕೆ ನೀವು ಕರೆಯಲೇ ಇಲ್ಲ ಎಂದೆಲ್ಲ ಉಪಚಾರ ಮಾಡುತ್ತಾಳೆ. ಅದನ್ನು ನೋಡಿದ ದತ್ತ ಭೀಗರ ಅಂಗಡಿಗೆ ಹೋಗಿದ್ದೆ, ಅಲ್ಲಿ ನನಗೆ ಅವರ ಪರಿಸ್ಥಿತಿ ನೋಡಿ ಕೊಂಚ ಬೇಸರ ಆಯಿತು ಎಂದು ವಿವರವಾಗಿ ತುಳಸಿ ಬಳಿ ಹೇಳುತ್ತಾರೆ.
ಇನ್ನು ತುಳಸಿ ನಾನು ಡಾಕ್ಟರ್ ಬಳಿ ಮಾತನಾಡಿದೆ ಮಾವ ಸಮಯಕ್ಕೆ ಸರಿಯಾಗಿ ಮಾತ್ರೆ ತೆಗೆದುಕೊಂಡರೆ ವಾಸಿ ಆಗುತ್ತದೆ ಎಂದು ಕೂಡ ಹೇಳಿದ್ದಾರೆ ಇದರಿಂದ ಅವರ ಮರೆವಿನ ಕಾಯಿಲೆ ಬೇಗ ವಾಸಿ ಆಗಬಹುದು ಚಿಂತೆ ಮಾಡಬೇಡಿ ನಾವು ಅವರ ಜೊತೆ ಯಾವತ್ತೂ ಇರಬೇಕು ಎಂದು ಹೇಳುತ್ತಾಳೆ. ಇದನ್ನು ಕೇಳಿದ ದತ್ತನಿಗೆ ಕೂಡ ಕೊಂಚ ತಲೆ ನೋವು ಕಡಿಮೆ ಆಗುತ್ತದೆ, ಪೂರ್ಣಿಮಾ ಸಿರಿ ಭುಜದ ಮೇಲೆ ತಲೆ ಇಟ್ಟು ಜೋರಾಗಿ ಅಳುತ್ತಾ ಇರುತ್ತಾಳೆ.
ಸಿರಿ ಪೂರ್ಣಿಮಾಗೆ ಕರೆ ಮಾಡಿದ ವಿಚಾರ ಹೇಳುತ್ತಾಳೆ. ಹಾಗೆಯೇ ಈ ವಿಚಾರ ನನಗೆ ತಿಳಿದಿರಲಿಲ್ಲ ಎಂದು ಹೇಳಿದಾಗ ಪೂರ್ಣಿಮಾ ತನ್ನ ಮಗು ಮತ್ತು ತನ್ನ ಭಾಂದವ್ಯ ತುಂಬಾ ಚೆನ್ನಾಗಿ ಇತ್ತು, ನಾನು ಮಗುವನ್ನು ನೋಡಿರಲಿಲ್ಲ, ಆದರೂ ನನಗೂ ಆ ಮಗುಗೂ ಉತ್ತಮ ಬಾಂಧವ್ಯ ಇತ್ತು ಎಂದು ಹೇಳಿ ಜೋರಾಗಿ ಅಳುತ್ತಾಳೆ. ಆ ವೇಳೆ ಸಿರಿ ಪೂರ್ಣಿಮಾ ಬಳಿ ಜೋರಾಗಿ ಅತ್ತು ಬಿಡಲು ಹೇಳುತ್ತಾಳೆ. ಇದನ್ನು ಕೇಳಿದ ಪೂರ್ಣಿಮಾ ನೀನು ಬಂದ ಬಳಿಕ ನನ್ನ ಮನಸ್ಸು ಬಹಳ ಹಗುರವಾಯಿತು, ನನ್ನ ಗಂಡನ ಬಳಿ ಕೂಡ ಹೇಳದೆ ಸುಮ್ಮನೆ ಇದ್ದೆ, ಯಾಕೆಂದರೆ ಅವರಿಗೂ ಬೇಸರ ಆಗುತ್ತದೆ, ಮಾವನಿಗೆ ಹೇಳಿ ಬಿಡೋಣ ಎಂದರೆ ಮಾವ ಸಹ ಮನೆಯಲ್ಲಿ ಇಲ್ಲ ಎಂದು ಹೇಳುತ್ತಾಳೆ.

ಮಾಧವನನ್ನು ಭೇಟಿ ಆಗಲು ಬಂದ ಪಾಪಮ್ಮಾ
ಮಾಧವ ಲ್ಯಾಪ್ ಟಾಪ್ ನಲ್ಲಿ ಕೆಲಸ ಮಾಡುತ್ತಾ ಇರುವಾಗ ಅಲ್ಲಿಗೆ ಬಂದ ಮ್ಯಾಗಿ ಅವರನ್ನು ಹೊರಗಡೆ ಬರಲು ಹೇಳುತ್ತಾಳೆ. ಹೊರಗಡೆ ಬಂದಾಗ ಪಾಪಮ್ಮಾ ಹಾಗೂ ಇನ್ನಿತರ ಕೆಲಸಗಾರರನ್ನು ನೋಡಿದ ಮಾಧವ ಬಹಳ ಖುಷಿ ಪಡುತ್ತಾನೆ. ಹಾಗೂ ದುಃಖವೂ ಆಗುತ್ತದೆ. ಪಾಪಮ್ಮ ಮಾದವನನ್ನು ಮನೆಗೆ ಕರೆದುಕೊಂಡು ಹೋಗಲು ಬಂದ ಹಾಗೆ ಅನ್ನಿಸುತ್ತಾ ಇತ್ತು. ಮಾಧವ ಬಳಿ ಪಾಪಮ್ಮ ನೀವು ಇಲ್ಲದ ಮನೆಯಲ್ಲಿ ನಮಗೆ ಇರಲು ಸಾಧ್ಯ ಆಗುತ್ತಿಲ್ಲ ಎನ್ನುತ್ತಾಳೆ.

ನಡೆದ ವಿಚಾರ ತಿಳಿದು ಬೇಸರಗೊಂಡ ಸಿರಿ
ಇನ್ನು ಪೂರ್ಣಿಮಾ ಸಿರಿ ಬಳಿ ನಡೆದ ಎಲ್ಲಾ ವಿಚಾರವನ್ನು ಬಿಡಿ ಬಿಡಿಯಾಗಿ ಹೇಳುತ್ತಾಳೆ. ಇದರಿಂದ ಶಾಕ್ ಆದ ಸಿರಿ ಇದೆಲ್ಲ ಹೇಗೆ ಆಯಿತು ಪೂರ್ಣಿ ಎಂದಾಗ ಪೂರ್ಣಿಮಾ ನಡೆದ ವಿಚಾರ ತಿಳಿಸುತ್ತಾಳೆ. ಮಗು ಇಲ್ಲ, ಮಗು ಇದ್ದಿದ್ದರೆ ಅವರಿಬ್ಬರೂ ಒಂದಾಗಿ ಬಿಡುತ್ತಾ ಇದ್ದರು, ಆದರೆ ಮಗು ಇಲ್ಲದೇ ಇವರಿಬ್ಬರೂ ಹೀಗೆ ಕಿತ್ತಾಡುವ ಹಾಗೆ ಆಯಿತು ಎಂದು ಹೇಳುತ್ತಾಳೆ, ಇದನ್ನು ಕೇಳಿದ ಸಿರಿಗೆ ಏನು ಹೇಳಬೇಕು ತಿಳಿಯದೇ ಸುಮ್ಮನೆ ಇರುತ್ತಾಳೆ. ಪೂರ್ಣಿಮಾಗೆ ಸಮಾಧಾನ ಮಾಡಿ ಇನ್ನೇನು ಹೊರಡೋಣ ಎಂದಾಗ ಶಾರ್ವರಿ ಮಗಳು ಚಕ್ಕುಲಿಯನ್ನು ಡಸ್ಟ್ ಬಿನ್ ಗೆ ಹಾಕುವುದನ್ನು ಸಿರಿ ನೋಡುತ್ತಾಳೆ. ಇದನ್ನು ನೋಡಿದ ಸಿರಿ ಆಕೆಯನ್ನು ಚೆನ್ನಾಗಿ ಬಯ್ಯುತ್ತಾ ಇರುತ್ತಾಳೆ. ಬಳಿಕ ಡಬ್ಬಿಯನ್ನು ಒರೆಸಿ ತೆಗೆದುಕೊಂಡು ಹೋಗುತ್ತಾಳೆ. ಎಲ್ಲರೂ ಒಟ್ಟಾಗಿ ದತ್ತನ ಮನೆಯಲ್ಲಿ ಊಟ ಮಾಡುತ್ತಾ ಇರುತ್ತಾರೆ. ಈ ವೇಳೆ ದತ್ತ ತನ್ನ ಸೊಸೆಗೆ ಬಯ್ಯುತ್ತಾ ಇರುತ್ತಾರೆ.

ತಾತ ಬುಕ್ ಸ್ಟೋರ್‌ಗೆ ಹೋಗಿದ್ದನ್ನು ತಿಳಿದು ಖುಷಿಯಾದ ಸಿರಿ
ಇನ್ನು ಸಿರಿ ತಾತ ಬುಕ್ ಸ್ಟೋರ್ ಗೆ ಹೋದ ವಿಚಾರವನ್ನು ಪ್ರಸ್ತಾಪ ಮಾಡುತ್ತಾಳೆ. ತಾತನ ಬಳಿ ನೀವು ಹೀಗೆ ಬುಕ್ ಸ್ಟಾಲ್ ಗೆ ಹೋಗುತ್ತಾ ಇದ್ದರೆ ಅಪ್ಪಾಗೆ ಖುಷಿ ಆಗುತ್ತದೆ ಎಂದು ಸಿರಿ ಹೇಳುತ್ತಾಳೆ. ಇದನ್ನು ಕೇಳಿದ ದತ್ತ ಏನು ಮಾತನಾಡದೇ ಹೋಗುತ್ತಾರೆ. ತಾತ ಹಾಗೆ ಹೋಗಿದ್ದನ್ನು ನೋಡಿದ ಸಿರಿ ಅತ್ತೆಯ ಬಳಿ ಹೇಳುತ್ತಾಳೆ. ಆದರೆ ಅತ್ತೆ ಅದೇನೋ ಸಬೂಬು ಹೇಳಿ ಅಲ್ಲಿಂದ ಹೋಗುತ್ತಾಳೆ. ಇನ್ನು ಸಿರಿ ಸಮರ್ಥ್ ಕಷ್ಟ ಅರ್ಥ ಮಾಡಿಕೊಂಡು ಸಮರ್ಥ್‌ಗೆ ಕೂಡ ಸಮಾಧಾನ ಮಾಡುತ್ತಾಳೆ.