Don't Miss!
- News
ಶಿವಮೊಗ್ಗ ವಿಮಾನ ನಿಲ್ದಾಣ ವೀಕ್ಷಣೆ ಮಾಡಿದ ಕೆಎಸ್ಐಐಡಿಸಿ ಅಧ್ಯಕ್ಷರು
- Automobiles
ದ್ವಿಚಕ್ರ ವಾಹನ ಖರೀದಿಸುತ್ತಿದ್ದೀರಾ? ಇದೇ ತಿಂಗಳ ಪ್ರಮುಖ ಬಿಡುಗಡೆಗಳನ್ನು ಒಮ್ಮೆ ಪರಿಶೀಲಿಸಿ
- Sports
IND vs NZ 3rd T20: ಸರಣಿ ನಿರ್ಣಾಯಕ 3ನೇ ಪಂದ್ಯದ ಟಾಸ್ ವರದಿ, ಆಡುವ 11ರ ಬಳಗ & ಲೈವ್ ಸ್ಕೋರ್
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Lifestyle
ಬಜೆಟ್ 2023: ಆರೋಗ್ಯ ಕ್ಷೇತ್ರಕ್ಕೆ ಬಂಪರ್ ಕೊಡುಗೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಶ್ರೀರಸ್ತು ಶುಭಮಸ್ತು: ತುಳಸಿ ಮಾಡಿದ ಪುಳಿಯೋಗರೆ ತಿಂದು ಹಳೆ ದಿನಗಳ ಮೆಲುಕು ಹಾಕಿದ ಮಾಧವ
ಸಿರಿ ತುಳಸಿ ಬಳಿ ಬಂದು ಎಲ್ಲಾ ರೆಡಿನಾ ಎಂದು ಕೇಳಿದಾಗ ತುಳಸಿ ಮಾತ್ರ ಆಕೆ ಬರುವ ಮೊದಲೇ ಪುಳಿಯೋಗರೆ ಮಾಡಿ ಇಟ್ಟಿರುತ್ತಾಳೆ. ಸಿರಿ ಅಮ್ಮನ ಬಳಿ ನಾನು ಪುಳಿಯೋಗರೆ ಮಾಡಿಕೊಂಡು ಬನ್ನಿ ಅಂದರೆ ಮೊಸರನ್ನ ಬೇರೆ ಮಾಡಿದ್ದೀರಿ ಅಲ್ವಾ ಎಂದಾಗ ತುಳಸಿ ಪುಳಿಯೋಗರೆ ಜೊತೆ ಮೊಸರನ್ನ ಕೂಡ ಒಳ್ಳೆಯದು ಎಂದು ಹೇಳುತ್ತಾಳೆ. ಇದನ್ನು ಕೇಳಿದ ಸಿರಿ ಸರಿ ಹಾಗಾದರೆ ನಾವು ಹೊರಡೋಣ ಎಂದು ಹೇಳುತ್ತಾಳೆ.
ಯಾಕೆ ಎಲ್ಲಿಗೆ ಎಂದು ಪೂರ್ಣಿಮಾ ಕೇಳಿದರೂ ಸಿರಿ ಏನೂ ಹೇಳದೇ ತುಳಸಿಯನ್ನು ಕರೆದುಕೊಂಡು ಮಾಧವನನ್ನು ಭೇಟಿ ಆಗಲು ಹೋಗುತ್ತಾಳೆ. ಅತ್ತ ಪಾಪಮ್ಮ ಪೂರ್ಣಿಮಾಗೆ ಬಿಸಿ ಬಿಸಿ ಸೂಪ್ ಮಾಡಿ ಕೊಡುತ್ತಾರೆ. ಸೂಪ್ ಕುಡಿಯುತ್ತಾ ಇರುವ ವೇಳೆ ಅಲ್ಲಿಗೆ ಅವಿನಾಶ್ ಬರುತ್ತಾನೆ. ಸದ್ಯ ಪೂರ್ಣಿಮಾ ಸೂಪ್ ಕುಡಿಯುತ್ತಾ ಇದ್ದಾಳೆ ಎಂದು ಖುಷಿ ಪಡುತ್ತಾನೆ. ನೀನು ಹೀಗೆ ಒಳ್ಳೆ ಊಟ ಮಾಡುತ್ತಾ ಇದ್ದರೆ ಬೇಗ ರಿಕವರ್ ಆಗುತ್ತಿಯಾ, ಆ ಬಳಿಕ ನಾವು ಎಲ್ಲಾದರೂ ಹೋಗೀ ಬರೋಣ ಎಂದು ಹೇಳುತ್ತಾನೆ.
ಆಗ ಪೂರ್ಣಿಮಾ ಸೂಪ್ ಕುಡಿದು ತಟ್ಟೆ ಇಡುತ್ತಾಳೆ. ಅದನ್ನು ಪಾಪಮ್ಮ ತೆಗೆದುಕೊಂಡು ಹೋಗಲು ಅನುವಾದಗ ಪೂರ್ಣಿಮಾ ಪಾಪಮ್ಮ ನೀವು ಇಲ್ಲಿಯೇ ಇರಿ, ಅವರು ಹೇಳುತ್ತ ಇದ್ದಾರೆ, ನಾನು ಅವರ ಬಳಿ ನಿನ್ನೆಯೇ ಮಾತನಾಡಿ ಆಗಿದೆ, ಅವರ ಬಳಿ ನನಗೆ ಏನು ಮಾತನಾಡಲು ಇಲ್ಲ ಎಂದಾಗ ಅವಿನಾಶ್ ಗೆ ಕೊಂಚ ಬೇಸರ ಆಗುತ್ತದೆ. ಬಳಿಕ ಅಲ್ಲಿಂದ ಹೋಗುತ್ತಾನೆ. ಆದರೆ ಪಾಪಮ್ಮ ಯಾಕೆ ಹಾಗೆ ಮಾತನಾಡಿದೆ ಪೂರ್ಣಿಮಾ ಚಿಕ್ಕ ಯಜಮಾನರಿಗೆ ಬೇಸರ ಆಯಿತು ಎಂದು ಹೇಳುತ್ತಾಳೆ.

ಸೋಫಾದ ಮೇಲೆ ನಿದ್ದೆ ಹೋದ ದತ್ತ
ಆದರೆ ಪೂರ್ಣಿಮಾ ಏನು ಮಾತನಾಡುವುದಿಲ್ಲ. ಆಕೆಗೆ ಬೇಸರ ಆಗುತ್ತದೆ. ಇನ್ನು ದತ್ತ ಟಿವಿ ಆನ್ ಮಾಡಿ ಸೋಫಾದಲ್ಲಿ ನಿದ್ದೆ ಮಾಡುತ್ತಾ ಇರುತ್ತಾರೆ. ತಾತನಿಗೆ ಹೇಳಿ ಹೋಗೋಣ ಎಂದರೆ ಅವರು ನಿದ್ದೆ ಮಾಡುತ್ತಾ ಇದ್ದಾರೆ, ನಾವು ಬೇಗ ಹೋಗಿ ಬರೋಣ ಎಂದು ಹೇಳಿ ತುಳಸಿ ಸಿರಿ ಹೊರಡುತ್ತಾರೆ. ಆಗ ದತ್ತನಿಗೆ ಎಚ್ಚರ ಆಗುತ್ತದೆ. ಅವರು ನಿದ್ದೆ ಕಣ್ಣಲ್ಲಿಯೆ ನೋಡಿ ಹಾಗೆಯೇ ಮಲಗಿ ಬಿಡುತ್ತಾರೆ.

ಚಿಕ್ಕಪ್ಪನ ಬಳಿ ದುಃಖ ತೋಡಿಕೊಂಡ ಅವಿನಾಶ್
ಅವಿ ಚಿಕ್ಕಪ್ಪನ ಬಳಿ ಬಂದು ತನ್ನ ಮನದ ಮಾತನ್ನು ಹೇಳುತ್ತ ಇರುತ್ತಾನೆ.. ನಿಮ್ಮ ಅಣ್ಣ ನಿಮ್ಮನ್ನು ಈ ಪರಿಸ್ಥಿತಿ ಗೆ ತಂದು ಬಿಟ್ಟರು , ಮೊನ್ನೆ ಪೂರ್ಣಿಮಾಳನ್ನು ಕಾರಲ್ಲಿ ಕರೆದುಕೊಂಡು ಹೋಗಿ ಏನೇನು ಅವಾಂತರ ಮಾಡಿದರುಎಂದೆಲ್ಲ ಹೇಳುವಾಗ ಅಲ್ಲಿಗೆ ಶರ್ವಾರಿ ಬರುತ್ತಾಳೆ. ಶಾರ್ವರಿ ಅವಿ ಬಳಿ ನೈಸ್ ಆಗಿ ಮಾತನಾಡಿ ಆತನ ಎದೆಗೆ ಚೂರಿ ಹಾಕುವ ಕೆಲಸ ಮಾಡುತ್ತಾ ಇರುತ್ತಾಳೆ.

ಕೆಫೆಗೆ ಬಂದ ತುಳಸಿ
ಮಾಧವ ಬಳಿ ಮ್ಯಾಗಿ ಸರ್ ನೀವು ಕೆಫೆಯಲ್ಲಿ ಮಲಗುವುದು ನಮಗೆ ಇಷ್ಟ ಆಗುತ್ತಿಲ್ಲ, ನಮ್ಮ ಮನೆಗೆ ಆದರೂ ಬರಬಹುದು ಆಗಿತ್ತು ಎನ್ನುತ್ತಾಳೆ. ಇದನ್ನು ಕೇಳಿದ ಮಾಧವ ನನಗೆ ಇಲ್ಲಿಯೇ ಖುಷಿ ಇದೆ ನಾನಿಲ್ಲಿ ಇರುತ್ತೇನೆ ಎಲ್ಲಾದರೂ ಬರಬೇಕು ಅನ್ನಿಸಿದರೆ ಖಂಡಿತ ಬರುತ್ತೇನೆ ಎಂದು ಹೇಳುತ್ತಾನೆ. ಅಷ್ಟೊತ್ತಿಗೆ ಅಲ್ಲಿಗೆ ತುಳಸಿ ಬರುತ್ತಾಳೆ. ಆ ವೇಳೆ ಅಲ್ಲಿಗೆ ಸಿರಿ ಬಂದಿದ್ದನ್ನು ಕಂಡು ಮಾಧಾವಗೆ ಇನ್ನೂ ಖುಷಿ ಆಗುತ್ತದೆ.

ಮಾವನಿಗೆ ಬೈದ ಪೂಜಾ
ಇನ್ನೂ ಪೂಜಾ ಮನೆಯವರೆಲ್ಲ ಪೂಜಾನ ಗಂಡಿನ ಕಡೆಯವರ ಮನೆ ನೋಡಲು ನಡೆದುಕೊಂಡು ಹೋಗುತ್ತಾರೆ. ಆಗ ಪೂಜಾ ಪ್ರಿಯಾಂಕ ಅವರ ಅಪ್ಪನಿಗೆ ಬೈಯುತ್ತಾಳೆ. ದುಡ್ಡು ಉಳಿಸಲು ಈ ತರ ನಡೆದುಕೊಂಡು ಹೋಗುತ್ತಾ ಇದ್ದೀಯಾ, ಒಂದು ಟ್ಯಾಕ್ಸಿಯಲ್ಲಿ ಆದರೂ ಹೋಗಬಹುದಿತ್ತು ಎಂದಾಗ ಆ ಜುಗ್ಗ ಏನೇನೋ ಹೇಳಿ ಹುಡುಗನ ಮನೆಗೆ ಕರೆದುಕೊಂಡು ಹೋಗುತ್ತಾನೆ. ಇನ್ನು ಮಾಧವನ ಬಳಿ ಸಿರಿ ನೀವು ಹುಡುಕುತ್ತಾ ಇದ್ದ ಫೇಮಸ್ ಪುಳಿಯೋಗರೆ ಮಾಡಿದವರು ಇವರೇ ಎಂದು ಪುಳಿಯೋಗರೆ ಡಬ್ಬ ಮಾಧವನ ಕೈಗೆ ಕೊಡುತ್ತಾಳೆ. ಇದನ್ನು ನೋಡಿದ ಮಾಧವ ಅವರಿಗೆ ಖುಷಿ ಆಗುತ್ತದೆ, ಸರ್ಪ್ರೈಸ್ ಆಗುತ್ತದೆ. ಆಗ ಸಿರಿಗೆ ಒಂದು ಕರೆ ಬರುತ್ತದೆ. ಬಳಿಕ ತರಾತುರಿಯಲ್ಲಿ ಬುಕ್ ಅಂಗಡಿಗೆ ಹೋಗುತ್ತಾಳೆ. ಸಮರ್ಥ್ ಮನೆಗೆ ಬರುವ ವೇಳೆ ತಾತ ಎದ್ದಿರುತ್ತಾರೆ. ಬಳಿಕ ಬಾಗಿಲು ತೆಗೆದು ತುಳಸಿ ನನಗೆ ಕಷಾಯ ಕೊಡಮ್ಮ ಎಂದು ಕೇಳುತ್ತಾರೆ. ಇದನ್ನು ಕೇಳಿದ ಸಮರ್ಥ್ ಅವರು ಮನೆಯಲ್ಲಿ ಇಲ್ಲ ಎಲ್ಲಾ ಹೊರಗೆ ಹೋಗಿದ್ದಾರೆ ಎಂದಾಗ ತಾತ ಕೊಂಚ ಕೋಪ ಮಾಡಿಕೊಳ್ತಾರೆ. ಇನ್ನೂ ಮುಂದೆ ಕಾದು ನೋಡಬೇಕಿದೆ.