Don't Miss!
- Technology
ನಾಯ್ಸ್ ಬಡ್ಸ್ ಕಾಂಬ್ಯಾಟ್ ಇಯರ್ಬಡ್ಸ್ ಅನಾವರಣ; ದೀರ್ಘ ಬ್ಯಾಟರಿ ಬ್ಯಾಕಪ್!
- Sports
Women's IPL: ಬೆಂಗಳೂರು ತಂಡ ಖರೀದಿಸಿದ ಆರ್ಸಿಬಿ ಫ್ರಾಂಚೈಸಿ: 4669 ಕೋಟಿ ರುಪಾಯಿಗೆ 5 ತಂಡಗಳು ಹರಾಜು
- News
ಮೆಟ್ರೋದಲ್ಲಿ ಕಾಣಿಸಿಕೊಂಡು ಜನರಲ್ಲಿ ಭಯ ಹುಟ್ಟಿಸಿದ 'ನಾಗವಲ್ಲಿ': ವಿಡಿಯೋ
- Lifestyle
ಗರ್ಭಾವಸ್ಥೆಯಲ್ಲಿ ಕಾಡುವ ಮೂತ್ರ ಸೋಂಕುUTI: ತಡೆಗಟ್ಟುವುದು ಹೇಗೆ, ಚಿಕಿತ್ಸೆಯೇನು?
- Finance
Budget 2023 Expectations: ಚುನಾವಣೆಗೂ ಮುನ್ನ ಕೇಂದ್ರ ಬಜೆಟ್ನಿಂದ ಕರ್ನಾಟಕ ಸರ್ಕಾರದ ನಿರೀಕ್ಷೆಗಳಿವು
- Automobiles
ಧೂಳೆಬ್ಬಿಸಲು ಬಿಡುಗಡೆಯಾಯ್ತು ಮಹೀಂದ್ರಾ ಬೊಲೆರೊ ನಿಯೋ ಲಿಮಿಟೆಡ್ ಎಡಿಷನ್: ಬೆಲೆ...
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ದತ್ತನ ಮನೆಗೆ ಆಗಮಿಸಿದ ಮೊಮ್ಮಗಳು; ಸಂಧ್ಯಾ ಮನೆಗೆ ಬಂದಿರುವ ವಿಚಾರ ದತ್ತನ ಗಮನಕ್ಕೆ ಬರುತ್ತಾ?
ಶಾರ್ವರಿ ಅವಿಗೆ ಸಮಾಧಾನ ಮಾಡುತ್ತಾಳೆ. ಪೂರ್ಣಿಮಾಗೆ ಎಷ್ಟು ನೋವು ಆಗಿದೋ ಅಷ್ಟು ನೋವು ನಿಮಗೂ ಆಗಿದೆ, ಆದರೆ ಎಲ್ಲರೂ ಪೂರ್ಣಿಮಾಳನ್ನು ಮಾತ್ರ ಸಮಾಧಾನ ಮಾಡುತ್ತಾ ಇದ್ದಾರೆ, ಆದರೆ ನಿಮ್ಮ ನೋವು ಮಾತ್ರ ಯಾರಿಗೆ ಕೂಡ ಕಾಣಿಸುತ್ತಿಲ್ಲ ಎಂದು ಹೇಳುತ್ತಾಳೆ. ಅವಿ ಕೂಡ ಪೂರ್ಣಿಮಾಳನ್ನು ಹೇಗೆ ಸಮಾಧಾನ ಮಾಡುವುದು ಎಂದು ತಿಳಿಯುತ್ತಾ ಇಲ್ಲ ಎಂದುಕೊಂಡು ಬೇಸರ ಪಟ್ಟುಕೊಳ್ಳುತ್ತಾನೆ.
ಕಾಲಿಂಗ್ ಬೆಲ್ ಸದ್ದು ಆಗುತ್ತದೆ. ಮನೆಯ ಕೆಲಸದವಳು ಬಂದು ಬಾಗಿಲು ತೆಗೆದು ನೋಡಿದಾಗ ಅಲ್ಲಿ ಮಾಧವ ನಿಂತಿರುತ್ತಾನೆ. ಅದನ್ನು ನೋಡಿದ ಆಕೆ ಬಹಳ ಖುಷಿ ಪಟ್ಟು ಮನೆಯ ಎಲ್ಲರನ್ನೂ ಕರೆಯುತ್ತಾಳೆ. ಮಾಧವ ಮನೆಗೆ ಬಂದಿರುವುದನ್ನು ನೋಡಿದ ಶಾರ್ವರಿಗೆ ಶಾಕ್ ಆಗುತ್ತದೆ. ಏನಪ್ಪಾ ನಾನು ಕೆಫೆಗೆ ಹೋದ ವೇಳೆ ಇವರನ್ನು ಮನೆಗೆ ಬನ್ನಿ ಎಂದು ಕರೆಯಲೆ ಇಲ್ಲ ಆದರೂ ಬಂದಿದ್ದಾರೆ ಎಂದು ಮನದಲ್ಲಿ ಅಂದುಕೊಳ್ಳುತ್ತಾ ಇರುತ್ತಾಳೆ. ಇದನ್ನು ನೋಡಿದ ಅವಿನಾಶ್ ಕೂಡ ಸಿಡುಕುತ್ತಾನೆ.
ಅಲ್ಲಿಗೆ ಬಂದ ಪಾಪಮ್ಮ ಮಾಧವನನ್ನು ನೋಡಿ ಬಹಳ ಖುಷಿ ಪಡುತ್ತಾಳೆ. ಇವತ್ತು ಪೂರ್ಣಿಮಗೆ ಬಹಳ ಖುಷಿಯಾಗುತ್ತದೆ,ಆಕೆ ನಿಮ್ಮನ್ನು ಕೇಳದ ದಿನ ಇಲ್ಲ ಎಂದು ಹೇಳುತ್ತಾಳೆ. ಇನ್ನು ಮಾಧವ ಮನೆಯ ಒಳಗೆ ಹೋಗಬೇಕು ಎಂದುಕೊಂಡಾಗ ಅವಿನಾಶ್ ಬಂದು ತಂದೆಯನ್ನು ತಡೆಯುತ್ತಾನೆ. ನಿಂತುಕೊಳ್ಳಿ ಎಂದಾಗ ಶಾರ್ವರಿ ಮೊಸಳೆ ಕಣ್ಣೀರು ಹಾಕುತ್ತಾ ಅಲ್ಲಿಗೆ ಬರುತ್ತಾಳೆ. ಅವಿನಾಶ್ ಮನೆಗೆ ಬರಬೇಡಿ ಎಂದು ಆವತ್ತು ಏಷ್ಟು ಹೇಳಿದರೂ ವಾಪಸ್ ಮನೆಗೆ ಬಂದ್ರ ಎಂದು ಕೇಳಿ ಚಿಕ್ಕಮ್ಮ ಎಂದು ಹೇಳಿದಾಗ ಶಾರ್ವರಿ ಏನು ಹೇಳುತ್ತಿದ್ದೀಯ ಅವಿ ಅಂದು ಉಟ್ಟ ಬಟ್ಟೆಯಲ್ಲಿ ಮನೆ ಬಿಟ್ಟು ಹೋದರು, ಏನಾದರೂ ತೆಗೆದುಕೊಳ್ಳುವುದಿರುತ್ತೆ ಅದಕ್ಕೆ ಬಂದಿರುತ್ತಾರೆ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಮಾಧವ ಏನನ್ನೂ ತೆಗೆದುಕೊಂಡು ಹೋಗಲು ಬಂದಿಲ್ಲ, ಇಲ್ಲಿ ಇರೋಕೆ ಬಂದಿದ್ದೇನೆ ಎಂದಾಗ ಶಾರ್ವಾರಿಗೆ ಶಾಕ್ ಆಗುತ್ತದೆ. ಅತ್ತ ತುಳಸಿ ಮೇಲೆ ದತ್ತ ಮುನಿಸಿಕೊಂಡಿದ್ದಾನೆ. ತುಳಸಿ ಏನೇ ಮಾತನಾಡಿದರೂ ಆತ ಏನು ಮಾತನಾಡದೆ ಸುಮ್ಮನಿರುತ್ತಾನೆ .ತುಳಸಿ ದತ್ತನ ಬಳಿ ಬಂದು ಮಾವ ಕಷಾಯ ಕುಡಿದ್ರ, ಮಾವ ಕಾಲು ನೋವು ಆಗುತ್ತಾ ಇದೆಯಾ ಎಂದೆಲ್ಲ ವಿಚಾರಣೆ ಮಾಡುತ್ತಾ ಇರುತ್ತಾಳೆ. ಆದರೆ ದತ್ತ ಮಾತ್ರ ಸುಮ್ಮನೆ ಇರುತ್ತಾನೆ.

ಮನೆಗೆ ಬಂದ ಸಂಧ್ಯಾ
ಬಳಿಕ ತುಳಸಿ ಮಾವನ ಬಳಿ ಕ್ಷಮೆ ಕೇಳುತ್ತಲೇ ಇರುತ್ತಾಳೆ. ಆದರೆ ದತ್ತ ನೀನು ವಯಸ್ಸಿಗೆ ಬಂದಾಗ ನಿನ್ನ ಮಕ್ಕಳು ನಿನ್ನ ಮಾತು ಕೇಳುವುದು ಇಲ್ಲ ಅಲ್ವಾ, ಆಗ ನಿನಗೆ ಅರ್ಥ ಆಗುತ್ತದೆ ಅದರ ನೋವು ಎಂದು ಹೇಳುತ್ತಾನೆ. ಆಗ ಮನೆಯ ಕಾಲಿಂಗ್ ಬೆಲ್ ಸದ್ದಾಗುತ್ತದೆ. ದತ್ತ ನಿನ್ನ ಸೊಸೆ ಬಂದಳು ಎಂದು ಕಾಣುತ್ತದೆ ಒಟ್ಟಿಗೆ ಊಟ ಮಾಡಿ ಮಲಗಿಕೊಳ್ಳಿ ಎಂದು ಹೇಳುತ್ತಾನೆ.

ಸಂಧ್ಯಾಳನ್ನು ನೋಡಿ ಶಾಕ್ ಆದ ತುಳಸಿ
ಇನ್ನು ಅವಸರವಸರವಾಗಿ ಬಂದು ಬಾಗಿಲು ತೆಗೆದು ನೋಡಿದಾಗ ಸಂದ್ಯ ಹಾಗೂ ಸಿರಿ ನಿಂತಿರುತ್ತಾಳೆ. ಸಂಧ್ಯಾಳನ್ನ ನೋಡಿ ತುಳಸಿಗೆ ಶಾಕ್ ಆಗುತ್ತದೆ. ಅವಿ ಅಪ್ಪನನ್ನು ಒಳಹೋಗಲು ಬಿಡದೆ ಬಾಯಿಗೆ ಬಂದ ಹಾಗೆ ಹೇಳುತ್ತಾನೆ. ಆಗ ಮಾಧವ ನಾನು ಯಾರ ನೆಮ್ಮದಿ ಕೆಡಿಸಲು ಬಂದಿಲ್ಲ, ನನಗಾಗಿ ಮಿಡಿಯುವ ಜೀವಗಳು ಇಲ್ಲಿವೆ, ಅದಕ್ಕೆ ಬಂದಿದ್ದೇನೆ ಎಂದು ಹೇಳುತ್ತಾನೆ. ಇದನ್ನು ಕೇಳಿದ ಅವಿನಾಶ್ ಮನೆಯಲ್ಲಿ ಇರಲು ಒಪ್ಪಿಗೆ ನೀಡುತ್ತಾನೆ.

ಅವಿ ಮಾತು ಕೇಳಿ ಬೆಚ್ಚಿದ ಶಾರ್ವರಿ
ಇದನ್ನು ನೋಡಿದ ಶಾರ್ವರಿಗೆ ನುಂಗಲಾಗದ ಬಿಸಿ ತುಪ್ಪದ ಹಾಗೆ ಅನಿಸುತ್ತದೆ. ಪೂರ್ಣಿಮಾ ಮನಸ್ಸಿಗೆ ಖುಷಿ ಆಗುತ್ತದೆ ಎಂದುಕೊಂಡು ಅವಿ ಮಾಧವನನ್ನು ಮನೆಯಲ್ಲಿ ಇರಲು ಹೇಳುತ್ತಾನೆ. ಬಳಿಕ ಕಂಡೀಷನ್ ಬೇರೆ ಹಾಕುತ್ತಾನೆ. ನೀವು ಈ ಮನೆಯಲ್ಲಿ ಇರಬಹುದು ಪೂರ್ಣಿಮಾ ಬಳಿ.ಮಾತನಾಡದಬಾರದು ಎಂದು ಹೇಳುತ್ತಾನೆ. ಇದನ್ನು ಕೇಳಿದ ಮಾಧವಗೆ ನೋವಾಗುತ್ತದೆ. ಮಾಧವ ಬಂದು ಮಲಗಿರುವ ಪೂರ್ಣಿಮಾ ಮುಖ ನೋಡಿ ಅಲ್ಲಿಂದ ಹೋಗುತ್ತಾನೆ. ಇನ್ನು ಜುಗ್ಗ ಮನೆಯಲ್ಲಿ ನೆಮ್ಮದಿಯಿಂದ ಕಾಫಿ ಕುಡಿಯುತ್ತಾ ಇರುತ್ತಾನೆ. ಪ್ರಸಾದ್ ಮನೆಯಲ್ಲಿ ಅತ್ತಿಂದ ಇತ್ತ ಓಡಾಡುತ್ತಾ ಇರುತ್ತಾನೆ. ಜುಗ್ಗ ಸಂದ್ಯಾಳನ್ನು ಎಲ್ಲೆಂದರಲ್ಲಿ ಬಿಟ್ಟು ಬಂದಿರುತ್ತಾನೆ. ಬಳಿಕ ಮನೆಯಲ್ಲಿ ಆತನ ಮಗ ಅಪ್ಪ ಮಾಡಿರುವುದು ತಪ್ಪು ಎಂದು ಹೇಳಿ ಏನು ಮಾಡಬೇಕು ಎಂದು ತಿಳಿಯದೇ ಪರದಾಡುತ್ತಾನೆ.

ಮಹೇಶನ ಬಳಿ ಬಂದು ಮಾತನಾಡಿದ ಮಾಧವ
ಮಾಧವ ಮಹೇಶನ ಬಳಿ ಬಂದು ತನ್ನ ತಪ್ಪಾಯಿತು ಎಂದು ಕೇಳಿಕೊಳ್ಳುತ್ತ ಇರುತ್ತಾನೆ. ಇದನ್ನು ನೋಡಿದ ಪಾಪಮ್ಮಗೆ ಕೂಡ ಬಹಳ ನೋವಾಗುತ್ತದೆ. ಶಾರ್ವಾರಿ ತನ್ನ ಗಂಡನ ಬಳಿ ಮಾಧವನ ಬಗ್ಗೆ ದ್ವೇಷದಿಂದ ಮಾತನಾಡುತ್ತಾ ಇರುತ್ತಾಳೆ. ಇದನ್ನು ನೋಡಿದ ಮಹೇಶ ಸುಮ್ಮನೆ ಇರುತ್ತಾನೆ .ಆದರೆ ಅಣ್ಣನ ಬಗ್ಗೆ ಹೆಂಡತಿ ಆಡಿದ ಮಾತು ಕೇಳಿದ ಮಹೇಶ ಕೊಮಾದಿಂದ ಹೊರ ಬರುತ್ತಾನ ಎಂದು ಕಾದು ನೋಡಬೇಕಿದೆ.