Sri rasthu Shubha Masthu: ಮಾಧವನ ಜೊತೆ ಕ್ಯಾಮರಾ ಫೇಸ್ ಮಾಡುತ್ತಾಳಾ ತುಳಸಿ?

By Poorva

ಒಗ್ಗರಣೆ ಡಬ್ಬಿ ಕಾರ್ಯಕ್ರಮ ನಡೆಸಿಕೊಡಲು ಮಾಧವ ಬರುತ್ತಾರೆ. ಅವರನ್ನು ನೋಡಿ ಡೈರೆಕ್ಟರ್‌ಗೆ ಬಹಳ ಖುಷಿ ಆಗುತ್ತದೆ. ಬರಬೇಕಾದ ಗೆಸ್ಟ್ ಬಾರದೆ ಹೋದಾಗ ಡೈರೆಕ್ಟರ್ ಗೆ ಬಹಳ ಆತಂಕ ಆಗುತ್ತದೆ. ಯಾಕೆ ಇನ್ನೂ ಬರಲಿಲ್ಲ ಎಂದೆಲ್ಲ ಮಾತನಾಡುತ್ತಾ ಇರುತ್ತಾನೆ. ಇದನ್ನೆಲ್ಲ ಕೇಳಿದ ಮಾಧವ ಸಮಾಧಾನ ಮಾಡುತ್ತಾನೆ. ಆದರೆ ಡೈರೆಕ್ಟರ್ ಏನು ಮಾಡುವುದು ಇವತ್ತು ಮೂರು ಕಾರ್ಯಕ್ರಮದ ಶೂಟ್ ಮಾಡುವ ಎಂದು ಅಂದುಕೊಂಡೆವು. ಆದರೆ ಇವತ್ತು ಮಾಡಲು ಆಗುತ್ತಾ ಇಲ್ಲವಲ್ಲ ಎಂದುಕೊಳ್ಳುತ್ತಾನೆ. ಮಾಧವನ ಶೋ ನೋಡಲು ತುಳಸಿ ಹಾಗೂ ಆಕೆಯ ಗೆಳತಿಯರು ಮನೆಯ ಪಕ್ಕಾದವರು ಬರುತ್ತಾರೆ. ಅವರನ್ನು ನೋಡಿದ ಸೆಕ್ಯುರಿಟಿ ಗಾರ್ಡ್ ಅವರನ್ನು ಒಳಗೆ ಬಿಡದೇ ಅಲ್ಲಿಂದ ಹೋಗಲು ಹೇಳುತ್ತಾರೆ. ಆದರೆ ಆ ಕೂಡಲೇ ಅಲ್ಲಿಗೆ ಬಂದ ಮಾಧವ ತುಳಸಿ ಅವರನ್ನು ನೋಡಿ ತುಳಸಿ ಅವರೇ ಬನ್ನಿ ಎಂದು ಹೇಳುತ್ತಾರೆ. ಇದನ್ನು ನೋಡಿದ ಪಕ್ಕದ ಮನೆಯವಳಿಗೆ ತಲೆಕೆಟ್ಟು ಹೋಗುತ್ತದೆ. ನನ್ನ ಮಾಧವ ಸರ್ ಗುರುತಿಸಲಿಲ್ಲ ಆದರೆ ತುಳಸಿಯನ್ನು ನೋಡಿ ಗುರುತು ಹಿಡಿದರು ಎಂದು ಕೆಟ್ಟ ಕೋಪ ಬರುತ್ತದೆ.

ಅಲ್ಲಿಗೆ ಬಂದ ತುಳಸಿ ಗೆಳತಿಯರು ಮಾಧವ ಸರ್ ನಿನಗೆ ಅಷ್ಟು ಕ್ಲೋಸ್ ಇದ್ದಾರಾ ಎಂದು ಕೇಳಿದಾಗ ತುಳಸಿಗೆ ಕೊಂಚ ಮುಜುಗರ ಆಗುತ್ತದೆ. ಆದರೆ ಬಳಿಕ ಸುಧಾರಿಸಿಕೊಳ್ಳುತ ಇರುತ್ತಾಳೆ. ಇದನ್ನು ನೋಡಿದ ಮನೆಯ ಪಕ್ಕದವರು ತುಳಸಿ ಅಂತಹ ಒಳ್ಳೆಯ ಮನಸ್ಸಿರುವವರ ಬಳಿ ಯಾರಾದರೂ ಕ್ಲೋಸ್ ಆಗುತ್ತಾರೆ ಎಂದು ಹೇಳುತ್ತಾರೆ. ಇನ್ನು ಮಾಧವ ಬಳಿ ಡೈರೆಕ್ಟರ್ ಬಂದು ಇವತ್ತು ಬರಬೇಕಾದ ಗೆಸ್ಟ್ ಟ್ರಾಫಿಕ್ ನಲ್ಲಿ ಸಿಲುಕಿದ್ದಾರೆ ಅಂತೆ ಅದಕ್ಕಾಗಿ ಏನು ಮಾಡೋಣ ಸರ್ ಮೂರು ಎಪಿಸೋಡ್ ಮಾಡಲು ನಮ್ಮಿಂದ ಸಾಧ್ಯ ಇದೆಯಾ ಎಂದೆಲ್ಲ ಕೇಳುತ್ತಾನೆ.

ಅದಕ್ಕೆ ಮಾಧವ ಯಾಕೆ ಇವತ್ತು ಮಾಡಬಹುದು ಇಲ್ಲಿಯೇ ಕಾರ್ಯಕ್ರಮ ನೋಡಲು ಬಂದವರಲ್ಲಿ ಒಬ್ಬರನ್ನು ನಾವು ಆಯ್ಕೆ ಮಾಡಿಕೊಂಡು ಕಾರ್ಯಕ್ರಮ ಮಾಡೋಣ ಎಂದು ಹೇಳುತ್ತಾನೆ. ತುಳಸಿ ಬಳಿ ಬಂದ ಮಾಧವ ಇವತ್ತು ನಾವು ಇವರಲ್ಲಿ ಒಬ್ಬರನ್ನು ಅಡುಗೆ ಮಾಡಲು ಕರೆಯುತ್ತ ಇದ್ದೇವೆ ನಮಗೆ ತುಳಸಿ ಅವರ ಅಡುಗೆ ಬಹಳ ಇಷ್ಟ ಆಗಿದೆ ಆ ಕಾರಣಕ್ಕೆ ಅವರ ಕೈಯಿಂದ ಎಪಿಸೋಡ್ ಮಾಡಬೇಕು ಅಂದುಕೊಂಡಿದ್ದೇವೆ ಎಂದೆಲ್ಲ ಹೇಳುತ್ತಾನೆ.

ತುಳಸಿ ಬಳಿ ಶೋಗೆ ಭಾಗವಹಿಸಲು ಕೇಳಿಕೊಂಡ ಮಾಧವ

ತುಳಸಿ ಬಳಿ ಶೋಗೆ ಭಾಗವಹಿಸಲು ಕೇಳಿಕೊಂಡ ಮಾಧವ

ಇದರಿಂದ ತುಳಸಿಗೆ ಭಯ ಆಗುತ್ತದೆ ಮಾವನಿಗೆ ಒಂದು ಮಾತು ಹೇಳಲಿಲ್ಲ, ನಾನು ಈ ತರ ಮಾಡಿದರೆ ಮಾವನಿಗೆ ಸಿಟ್ಟು ಬರುತ್ತದೆ ಎಂದೆಲ್ಲ ಹೇಳುತ್ತಾಳೆ. ಇದನ್ನು ಕೇಳಿಸಿಕೊಂಡ ಪಕ್ಕದ ಮನೆಯವಳು ನಾನು ಅವರ ಬಳಿ ಮಾತನಾಡುತ್ತೇನೆ ನೀವು ಹೋಗಿ ಎಂದು ಕಳುಹಿಸುತ್ತಾಳೆ. ಶೂಟಿಂಗ್ ಮಾಡುವ ವೇಳೆ ತುಳಸಿ ಬೆವರುತ್ತಾಳೆ. ಬಳಿಕ ತುಳಸಿ ಶೂಟಿಂಗ್ ಜಾಗದಿಂದ ಓಡಿ ಹೋಗಿ ಹೊರಗೆ ಕುಳಿತುಕೊಳ್ಳುತ್ತಾಳೆ. ಅಲ್ಲಿಗೆ ಬಂದ ಮಾಧವ ತುಳಸಿಗೆ ಸಮಾಧಾನ ಹೇಳುತ್ತಾನೆ. ಇನ್ನು ಸಿರಿ ಹಾಗೂ ಪೂರ್ಣಿಮಾ ಡಾಕ್ಟರ್ ಬಳಿ ಬರುತ್ತಾರೆ . ಪೂರ್ಣಿಮಾ ಸ್ಥಿತಿ ನೋಡಿ ಸಮಾಧಾನ ಮಾಡುತ್ತಾರೆ

ಪೂರ್ಣಿಮಾಗೆ ಸಮಾಧಾನ ಮಾಡಿದ ಡಾಕ್ಟರ್

ಪೂರ್ಣಿಮಾಗೆ ಸಮಾಧಾನ ಮಾಡಿದ ಡಾಕ್ಟರ್

ಊಟದಲ್ಲಿ ವೇರಿಯೇಶನ್ ಆಗಿ ಅಥವಾ ಮೆಡಿಸಿನ್ ಹೈ ಡೋಸೇಜ್ ಆಗಿ ಈ ರೀತಿ ಆಗಿದೆ ಎಂದು ಡಾಕ್ಟರ್ ಹೇಳುತ್ತಾರೆ. ಇದನ್ನು ಕೇಳಿಸಿಕೊಂಡ ಸಿರಿಗೆ ಅದೇ ಯೋಚನೆ ಆಗುತ್ತದೆ. ಏನಾಗಿರಬಹುದು ಅಲ್ಲಿ ಎಂದು ಮನದಲ್ಲಿ ಅಂದುಕೊಳ್ಳುತ್ತಾ ಆಸ್ಪತ್ರೆಯಿಂದ ಹೊರಗೆ ಬರುತ್ತಾಳೆ. ಪೂರ್ಣಿಮಾ ಸಿರಿ ಬಳಿ ಮಾತನಾಡುತ್ತಾ ಬರುತ್ತಾಳೆ. ಆದರೆ ಸಿರಿ ಯೋಚನೆ ಮಾಡುತ್ತಲೇ ಇರುತ್ತಾಳೆ. ಇದನ್ನು ಕಂಡ ಪೂರ್ಣಿಮಾ ಸಿರಿ ಬಳಿ ಪ್ರಶ್ನೆ ಮಾಡುತ್ತಾಳೆ.

ಅನುಮಾನಗೊಂಡ ಸಿರಿ

ಅನುಮಾನಗೊಂಡ ಸಿರಿ

ಆದರೆ ಸಿರಿ ಆಕೆಗೆ ಇದ್ದ ಅನುಮಾನವನ್ನು ವ್ಯಕ್ತಪಡಿಸಿದಾಗ ಪೂರ್ಣಿಮಾ ಹಾಗೇನೂ ಇಲ್ಲ ಎಂಬಂತೆ ಹೇಳುತ್ತಾಳೆ. ಸಿರಿಯನ್ನ ಸಮಾಧಾನ ಮಾಡುತ್ತಾಳೆ. ಇನ್ನು ದತ್ತ ಮತ್ತು ಆತನ ಗೆಳೆಯ ಚೆಸ್ ಆಡುತ್ತಾ ಇರುತ್ತಾರೆ. ಚೆಸ್ ಆಡಲು ಬರದುದ್ದಕ್ಕೆ ನನಗೆ ಚಪ್ಪಲಿ ಕಳ್ಳ ಅದನ್ನ ಕೊಟ್ಟಿದ್ದಾನೆ ಎಂದೆಲ್ಲ ಹೇಳುತ್ತಾರೆ. ಇದನ್ನು ಕೇಳಿ ದತ್ತನ ಗೆಳೆಯ ಸಮಾಧಾನಪಡಿಸಿದರೂ ದತ್ತ ಮಾತ್ರ ಚೆಸ್ ಆಡಲು ಬಿಡದೆ ಅದನ್ನು ಕಲಿಯದೆ ಕೋಪಗೊಳ್ಳುತ್ತಾ ಇರುತ್ತಾರೆ.

More from Filmibeat

English summary
Kannada serial sri rastu shubha mastu written update on 6th February
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X