ಮನೆ ಬಿಟ್ಟು ಹೋಗಲು ನಿರ್ಧಾರ ಮಾಡಿದ ದತ್ತ; ಮುಂದೇನು ಮಾಡುತ್ತಾಳೆ ತುಳಸಿ?

By Poorva
Kannada serial sri rastu subha mastu written update on 7th February

ಶ್ರೀ ರಸ್ತು ಶುಭ ಮಸ್ತು ಧಾರವಾಹಿ ಇದೀಗ ಉತ್ತಮವಾಗಿ ಮೂಡಿ ಬರುತ್ತಿದ್ದು ನೋಡುಗರ ಮನ ಸೆಳೆಯುವ ಹಾಗೆ ಮಾಡುತ್ತಿದೆ. ಇದೀಗ ಮಾಧವ ಅದೇಗೋ ತುಳಸಿಯನ್ನು ಒಗ್ಗರಣೆ ಡಬ್ಬಿ ಕಾರ್ಯಕ್ರಮದಲ್ಲಿ ಗೆಸ್ಟ್ ಆಗಿ ಭಾಗವಹಿಸಲು ಕೇಳಿಕೊಂಡಾಗ ಮನಸಿಲ್ಲದ ಮನಸಿನಿಂದ ಒಪ್ಪಿ ಮಾಧವ ಜೊತೆ ಬರುತ್ತಾಳೆ. ಮಾಧವ ರಿಹರ್ಸಲ್ ಮಾಡುವುದಾಗಿ ಹೇಳಿ ತುಳಸಿಯ ಬಳಿ ಒತ್ತಾಯ ಪೂರ್ವಕವಾಗಿ ಹೇಳುತ್ತಾನೆ.

ಇದನ್ನು ಕೇಳಿಸಿಕೊಂಡ ತುಳಸಿಗೆ ಕೊಂಚ ನೆಮ್ಮದಿ ಆಗುತ್ತದೆ. ದೇವರಿಗೆ ಕೈ ಮುಗಿಯುತ್ತಾ ಇರಬೇಕಾದರೆ ಮಾಧವ ಡೈರೆಕ್ಟರ್ ಬಳಿ ನೀವು ಶೂಟ್ ಮಾಡಿ ಎಂದು ಮೆತ್ತಗೆ ಆಜ್ಞಾಪಿಸುತ್ತಾರೆ. ಆದರೆ ತುಳಸಿಗೆ ಈ ವಿಚಾರ ತಿಳಿದಿರುವುದಿಲ್ಲ. ಆದರೆ ತುಳಸಿ ಮಾಧವ ಬಳಿ ಯಾವ ರೀತಿ ಮಾತನಾಡುತ್ತಾ ಇದ್ದಳೋ ಹಾಗೆ ಮಾತನಾಡಿಕೊಂಡು ಮೂರು ಬಗೆಯ ಅಡುಗೆ ಮಾಡುತ್ತಾಳೆ.

ಇದನ್ನು ನೋಡಿದ ಡೈರೆಕ್ಟರ್ ಗೆ ಬಹಳ ಖುಷಿ ಆಗುತ್ತದೆ. ಈ ಕಾರ್ಯಕ್ರಮ ಉತ್ತಮ ಟಿಆರ್ ಪಿ ಬರುತ್ತದೆ ಎಂದು ಅಂದುಕೊಳ್ಳುತ್ತಾರೆ. ಇನ್ನು ಮಾಧವ ತುಳಸಿ ಬಳಿ ತುಳಸಿ ಅವರೇ ನೀವು ಈಗ ಮಾಡಿರುವುದು ರಿಹರ್ಸಲ್ ಅಲ್ಲ, ನಾವು ರೆಕಾರ್ಡಿಂಗ್ ಮಾಡಿಕೊಂಡೆವು ನೀವು ಭಯ ಪಡುತ್ತಾ ಇದ್ದೀರಿ ಎಂದು ತಿಳಿದು ನಾನು ಸುಮ್ಮನೆ ಹೇಳಿದೆ ಎಂದು ಹೇಳುತ್ತಾನೆ. ಇನ್ನು ತುಳಸಿ ಮಾಡಿದ ಅಡುಗೆಯನ್ನು ನೋಡಿ ಎಲ್ಲರೂ ಹೊಗಳುತ್ತಾರೆ. ಬಳಿಕ ಮಾಧವ ಅವರೇ ಕಾರ್ ಅರೇಂಜ್ ಮಾಡಿ ಮನೆಗೆ ಕಳುಹಿಸುತ್ತಾರೆ.

ಅವಿಗೆ ತಂದೆ ಕಂಡರೆ ಸಿಟ್ಟು

ಅವಿಗೆ ತಂದೆ ಕಂಡರೆ ಸಿಟ್ಟು

ಇನ್ನು ಅವಿ ಜೊತೆ ಶಾರ್ವರಿ ಮಾತನಾಡುತ್ತಾ ಅವಿ ನೀನು ನಿನ್ನ ತಂದೆಯೊಂದಿಗೆ ಕ್ಲೋಸ್ ಆಗಿರುವುದು ನನಗೆ ಸಂತಸ ತಂದಿದೆ ಎಂದೆಲ್ಲ ಸುಮ್ಮನೆ ಹೇಳುತ್ತಾಳೆ. ಆದರೆ ಅವಿ ಕೊಂಚ ಸಿಡುಕುತ್ತ ಹಾಗೇನೂ ಇಲ್ಲ ಎಂದೆಲ್ಲ ಹೇಳುತ್ತ ಇರುತ್ತಾನೆ. ಬಳಿಕ ಶಾರ್ವರಿ ತಮ್ಮನ ಮದುವೆ ಮಾಡಲು ಆವಿಗೆ ಹೇಳುತ್ತಾಳೆ. ತಮ್ಮ ಮನೆಗೆ ಬಂದ ಕೂಡಲೇ ಆತನ ಜೊತೆ ಅವಿ ಮಾತುಕತೆ ಮಾಡುತ್ತಾನೆ.

ತಮ್ಮನ ಬಳಿ ಮದುವೆ ಮಾತುಕತೆ ಮಾಡಿದ ಅವಿ

ತಮ್ಮನ ಬಳಿ ಮದುವೆ ಮಾತುಕತೆ ಮಾಡಿದ ಅವಿ

ಯಾವುದಾದರೂ ಲವ್ ಇದೆಯಾ ಎಂದೆಲ್ಲ ಕೇಳುತ್ತಾನೆ. ಇದನ್ನೆಲ್ಲ ಕೇಳಿದ ಆವಿ ತಮ್ಮ ಚಿಕ್ಕಮ್ಮ ಏನಾದರು ಹೇಳಿರಬಹುದ ಎಂದುಕೊಳ್ಳುತ್ತಾನೆ. ಬಳಿಕ ಆತ ಅಣ್ಣನ ಬಳಿ ನನಗೆ ಇಷ್ಟ ಇಲ್ಲ ಮದುವೆ ಇಷ್ಟು ಬೇಗ ಆಗುವುದಿಲ್ಲವೆಂದು ಹೇಳಿದಾಗ ಅವಿ ಸುಮ್ಮನೆ ಆಗುತ್ತಾನೆ. ಮನೆಗೆ ಬಂದ ಸಮರ್ಥ್ ತಾತ ಚೆಸ್ ಆಡುತ್ತಾ ಇರುವುದನ್ನು ನೋಡಿ ಬಹಳ ಖುಷಿ ಪಡುತ್ತಾನೆ .ಚೆಸ್ ಆಡುವ ಸಂದರ್ಭ ಸಮರ್ಥ್ ಏನು ಹೇಳಿದರೂ ದತ್ತನಿಗೆ ತಿಳಿಯುವುದಿಲ್ಲ. ಕೊನೆಗೆ ಸಮರ್ಥ್ ಬಂದಿರುವುದನ್ನು ನೋಡಿ ದಂಡ ಪಿಂಡ ಯಾವಾಗ ಬಂದೆ ಎಂದೆಲ್ಲ ಖುಷಿಯಿಂದ ಕೇಳುತ್ತಾನೆ. ತಾತಾ ಖುಷಿಯಲ್ಲಿ ಇರುವುದನ್ನು ನೋಡಿದ ಸಮರ್ಥ್ ಕೂಡ ಬಹಳ ಖುಷಿ ಪಡುತ್ತಾನೆ .

ದತ್ತನ ಖುಷಿ ಕಂಡು ಸಮರ್ಥ್ ಗೆ ಸಂತಸ

ದತ್ತನ ಖುಷಿ ಕಂಡು ಸಮರ್ಥ್ ಗೆ ಸಂತಸ

ಸಿರಿ ರಾತ್ರಿ ಸಮರ್ಥ್ ಬಳಿ ತನ್ನ ಅನುಮಾನ ವ್ಯಕ್ತ ಪಡಿಸುತ್ತಾ ಇರುತ್ತಾಳೆ ಏನಾಗಿರಬಹುದು ಯಾಕೆ ಪೂರ್ಣಿಮಾ ಗೆ ಹೀಗೆಲ್ಲ ಪ್ರಾಬ್ಲಂ ಆಗುತ್ತಿದೆ ಎಂದೆಲ್ಲ ಯೋಚನೆ ಮಾಡುತ್ತಾ ಇರುತ್ತಾಳೆ. ಆ ಬಳಿಕ ಸಮರ್ಥ್ ಸಿರಿಗೆ ಕೊಂಚ ಸಮಾಧಾನ ಮಾಡುತ್ತಾನೆ. ಸಮರ್ಥ್ ಸಿರಿ ಮಾತನಾಡುತ್ತಾ ಇರುವಾಗ ದತ್ತ ಜೋರಾಗಿ ಮಾತನಾಡುತ್ತಾ ಇರುವುದು ಕೇಳುತ್ತದೆ. ಆ ಕೂಡಲೇ ಸಿರಿ ಹಾಗೂ ಸಮರ್ಥ್ ಅಲ್ಲಿಗೆ ಬರುತ್ತಾರೆ. ತುಳಸಿ ಟಿವಿಗೆ ಪ್ರೋಗ್ರಾಮ್ ಕೊಡಲು ಹೋಗಿರುವ ವಿಚಾರ ದತ್ತಾಗೆ ತಿಳಿದು ಹೋಗಿತ್ತು. ಸಮರ್ಥ್ ತಾತಾಗೆ ಸಮಾಧಾನ ಹೇಳಿ ಅಮ್ಮನ ಪರ ನಿಂತರೂ ದತ್ತ ಮಾತ್ರ ನಾನು ಮನೆ ಬಿಟ್ಟು ಹೋಗುತ್ತೇನೆ ಎಂದೆಲ್ಲ ಹೇಳುತ್ತ ಇರುತ್ತಾನೆ. ಮುಂದೇನು ಕಾದು ನೋಡಬೇಕಿದೆ

More from Filmibeat

English summary
Kannada serial sri rastu shubha mastu written updated on 7th February
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X