Srirasthu Shubhamasthu: ಸೊಸೆ ಟಿವಿಯಲ್ಲಿ ಬಂದಿರುವುದನ್ನು ನೋಡಿ ಖುಷಿಪಟ್ಟ ದತ್ತ?
ತುಳಸಿ ಒಗ್ಗರಣೆ ಡಬ್ಬಿ ಕಾರ್ಯಕ್ರಮದಲ್ಲಿ ಅಡುಗೆ ಮಾಡಿದಳು ಎಂದು ತಿಳಿದ ದತ್ತ ತುಳಸಿ ಮೇಲೆ ಕೋಪ ಮಾಡಿಕೊಂಡು ಮನೆ ಬಿಟ್ಟು ಹೋಗುವುದಾಗಿ ಹೇಳುತ್ತಾನೆ. ಇದನ್ನು ಕೇಳಿದ ತುಳಸಿಗೆ ಅಳು ಬರುತ್ತದೆ. ದತ್ತ ರೂಮ್ ಗೆ ಹೋಗಿ ಕೋಪದಿಂದ ಕುಳಿತುಕೊಂಡಿರುತ್ತಾನೆ. ಇದನ್ನು ನೋಡಿದ ಸಿರಿ ತಾತನಿಗೆ ಹಾಲು ತೆಗೆದುಕೊಂಡು ಹೋಗಿ ಕೊಡುತ್ತಾಳೆ. ಹಾಲು ಕುಡಿದ ಬಳಿಕ ದತ್ತನ ಬಳಿ ಸಿರಿ ತಾತಾ ನಿಮ್ಮ ಬಳಿ ಅಮ್ಮ ಇದನ್ನೆಲ್ಲ ನಿಧಾನವಾಗಿ ಹೇಳುತ್ತ ಇದ್ದರು ಅಷ್ಟರಲ್ಲಿ ನಿಮಗೆ ಈ ವಿಚಾರ ತಿಳಿದೇ ಬಿಟ್ಟಿತು, ಇನ್ನು ನಿಮಗೆ ನೋವು ಆಗಿದೆ ಎಂದು ಅಮ್ಮ ಬಹಳ ಆಳುತ್ತಿದ್ದರು ಎನ್ನುತ್ತಾಳೆ.
ಇದನ್ನೆಲ್ಲ ಕೇಳಿಸಿಕೊಂಡ ದತ್ತ ಮನಸು ಕರಗದೆ ಮಲಗುತ್ತಾನೆ. ಬೆಳಗ್ಗೆ ಎದ್ದ ಕೂಡಲೇ ದತ್ತ ವಾಕಿಂಗ್ ಮಾಡುತ್ತಾ ಇರಬೇಕಾದರೆ ಆತನ ಗೆಳೆಯ ದತ್ತನ ಬಳಿ ಯಾಕೆ ದತ್ತಣ್ಣ ನಿದ್ದೆ ಮಾಡಿಲ್ವ ಎಂದೆಲ್ಲ ಕೇಳಿದಾಗ ಸರಿ ನಿದ್ದೆ ಮಾಡಲು ಆಗಿಲ್ಲ ಎಂದು ಹೇಳುತ್ತಾನೆ. ಇನ್ನು ಎಳೆನೀರು ಕುಡಿಯಲು ದತ್ತ ಹಾಗೂ ಆತನ ಗೆಳೆಯ ಬರುತ್ತಾರೆ. ಆದರೆ ಎಳೆನೀರು ಕೊಡುವಾತ ಮೊದಲು ಕೊಟ್ಟಿದ್ದು ಮಾಧವ ಅವರಿಗೆ.. ಮಾಧವ ಅವರಿಗೆ ತುಳಸಿ ರಾತ್ರಿ ಕರೆ ಮಾಡುತ್ತಾ ಅಳುತ್ತಾ ನನ್ನ ಎಪಿಸೋಡ್ ದಯವಿಟ್ಟು ಟೆಲಿಕಾಸ್ಟ್ ಮಾಡಬೇಡಿ ಎಂದು ಬೇಸರದಿಂದ ಹೇಳುತ್ತಾಳೆ ಇದನ್ನು ಕೇಳಿದ ಮಾಧವಗೆ ತಲೆ ಕೆಡುತ್ತದೆ..
ಆದರೂ ಏನು ಆಗಿಲ್ಲ ಎಂಬಂತೆ ದತ್ತನ ಬಳಿ ಮಾತನಾಡಲು ನಿರ್ಧಾರ ಮಾಡುತ್ತಾನೆ. ಇನ್ನು ಮಾಧವನನ್ನ ನೋಡಿದ ದತ್ತ ಈ ಚಪ್ಪಲಿ ಕಳ್ಳ ಯಾಕೆ ಬಂದಿದ್ದಾನೆ ಎಂದು ನನಗೆ ಗೊತ್ತು ಎಂದಾಗ ಮಾಧವಗೆ ನಗು ಬರುತ್ತದೆ. ಇನ್ನು ಮಾಧವ ಶ್ರಮದ ಬಗ್ಗೆ ದತ್ತ ಮಾತನಾಡುತ್ತಾ ಇರುವುದನ್ನು ಕೇಳಿಸಿಕೊಳ್ಳುತ್ತಾ ಇರುತ್ತಾನೆ.

ದತ್ತನಿಗೆ ತಂಡದ ಶ್ರಮದ ಬಗ್ಗೆ ತಿಳಿ ಹೇಳಿದ ಮಾಧವ
ಇದನ್ನು ಕೇಳಿಸಿಕೊಂಡ ಬಳಿಕ ಮಾಧವ ದತ್ತನ ಬಳಿ ನೀವು ನನ್ನ ನೋಡಿ ಹೇಳಬೇಡಿ ನನ್ನ ತಂಡದ ಶ್ರಮ ನೋಡಿ ಹೇಳಿ ಯಾಕೆ ಎಂದರೆ ತನ್ನ ತಂಡ ಬಹಳ ಕಷ್ಟ ಪಟ್ಟಿದೆ ಬಹಳ ಖರ್ಚು ಮಾಡಿದೆ ಪ್ರೊಡ್ಯೂಸರ್ ಗೆ ಹಣ ಸಿಗಬೇಕು ಎಂದರೆ ಅವರಿಗೆ ಈ ಎಪಿಸೋಡ್ ಟೆಲಿಕಾಸ್ಟ್ ಆಗಬೇಕು, ಆಗ ಅವರ ಶ್ರಮ ಪಟ್ಟಿದ್ದು ಸಾರ್ಥಕ ಆಗುತ್ತದೆ ಎಂದು ಹೇಳುತ್ತಾನೆ. ಇದನ್ನು ಕೇಳಿಸಿಕೊಂಡ ದತ್ತ ಆಯಿತು ಎಂದು ಒಪ್ಪಿಗೆ ನೀಡಿ ತುಳಸಿಗೆ ಈ ವಿಚಾರ ಹೇಳಬಾರದು ಎಂದು ಹೇಳುತ್ತಾನೆ.

ಅಭಿ ಮನಸ್ಸನ್ನು ಕಲಕಿದ ಶಾರ್ವರಿ
ಇನ್ನು ಅಭಿ ಮನಸು ಮದುವೆ ವಿಚಾರವಾಗಿ ಕದಡಿ ಹೋಗಿರುತ್ತದೆ. ಶಾರ್ವರಿ ಅದರ ಮೇಲೆ ತುಪ್ಪ ಸುರಿಯುತ್ತಾ ಇದ್ದಾಳೆ. ಇದನ್ನೆಲ್ಲ ನೆನೆದು ಕೋಪಗೊಂಡ ಅಭಿ ಯೋಚನೆಯಲ್ಲಿ ಮಗ್ನನಾಗಿರುತ್ತಾನೆ. ಆ ವೇಳೆ ಅಲ್ಲಿಗೆ ಬಂದ ಪೂರ್ಣಿಮಾ ಅಭಿಯನ್ನು ಸಮಾಧಾನ ಮಾಡಲು ಪ್ರಯತ್ನಿಸಿದಾಗ ಬಹಳ ಖಾರವಾಗಿ ನನ್ನ ಮದುವೆಯ ಬಗ್ಗೆ ನೀವು ಯೋಚನೆ ಮಾಡಬೇಡಿ, ಅದನ್ನು ನನಗೆ ಬಿಡಿ ನಾನು ಅದನ್ನೆಲ್ಲ ನೋಡಿಕೊಳ್ಳುತ್ತೇನೆ ಎಂದು ಹೇಳುತ್ತಾನೆ. ಇದನ್ನು ಕೇಳಿಸಿಕೊಂಡ ಪೂರ್ಣಿಮಾಗೆ ಮುಖಕ್ಕೆ ಹೊಡೆದ ಹಾಗೆ ಆಗುತ್ತದೆ.

ತುಳಸಿ ಮನೆಯಲ್ಲಿ ಮನೆ ಮಾಡಿದ ಹಬ್ಬದ ಸಂಭ್ರಮ
ಇನ್ನು ತುಳಸಿ ಮನೆಯಲ್ಲಿ ಹಬ್ಬದ ವಾತಾವರಣ ಸೃಷ್ಟಿ ಆಗಿದೆ. ದತ್ತ ಎಲ್ಲರನ್ನೂ ಕರೆ ಮಾಡಿ ಮನೆಗೆ ಬರಲು ಹೇಳುತ್ತಾರೆ. ಇವತ್ತು ಸರ್ಪ್ರೈಸ್ ಇದೆ ನಾನು ಎಲ್ಲರಿಗೂ ಸರ್ಪ್ರೈಸ್ ನೀಡುತ್ತೇನೆ ಎಂದು ಹೇಳುತ್ತಾರೆ. ಸಮರ್ಥ ಕೂಡ ಆಫೀಸ್ ನಿಂದಾ ಬಹಳ ಬೇಗ ಬರುತ್ತಾನೆ . ಬಳಿಕ ತಾತನ ಬಳಿ ಬರ ಹೇಳಿದ ಕಾರಣ ಕೇಳುತ್ತಾನೆ. ಇನ್ನು ದತ್ತ ಏನೂ ಹೇಳದೆ ಎಲ್ಲರಿಗೂ ಹೇಳುವಾಗ ನಿನಗೂ ಹೇಳುತ್ತೇನೆ ಎಂದು ಹೇಳಿ ಒಗ್ಗರಣೆ ಡಬ್ಬಿ ಕಾರ್ಯಕ್ರಮವನ್ನು ಹಾಕುತ್ತಾರೆ. ಅದರಲ್ಲಿ ತುಳಸಿ ಅಡುಗೆ ಮಾಡುತ್ತಾ ಇರುವುದನ್ನು ನೋಡಿ ಬಹಳ ಖುಷಿ ಪಡುತ್ತಾರೆ. ತುಳಸಿಗೆ ಶಾಕ್ ಆಗುತ್ತದೆ. ಟೆಲಿಕಾಸ್ಟ್ ಮಾಡಬೇಡಿ ಎಂದರೂ ಯಾಕೆ ಇದನ್ನು ಟೆಲಿಕಾಸ್ಟ್ ಮಾಡಿದರು ಗೊತ್ತಾಗಲಿಲ್ಲ ಎಂದು ಹೇಳುತ್ತಾಳೆ. ಆಗ ದತ್ತ ತುಳಸಿಯನ್ನು ಮಾತನಾಡಲು ಬಿಡದೆ ಬಾಯಿ ಮುಚ್ಚಿಸಿ ಬಿಡುತ್ತಾನೆ. ಮುಂದೇನು ಕಾದು ನೋಡಬೇಕಿದೆ.


Click it and Unblock the Notifications











