ಸಿರಿ ಹಾಗೂ ತುಳಸಿ ಮಧ್ಯೆ ಬೆಳೆಯುತ್ತಿದೆ ಬಾಂಧವ್ಯ!
ಸಿರಿ-ಸಮರ್ಥ್ ಪ್ರೀತಿ ಕಥೆ ಇದೀಗ ತುಳಸಿವರೆಗೂ ಬಂದು ನಿಂತಿದೆ. ಸಿರಿ, ಸಮರ್ಥ್‌ನ ತಾಯಿ ಜೊತೆ ಇದೀಗ ಬಹಳ ಬೆರೆತು ಬಿಟ್ಟಿದ್ದಾಳೆ. ಮೊದಲ ಭೇಟಿಯಲ್ಲಿ ತುಳಸಿ ಮನ ಗೆದ್ದಿದ್ದಾಳೆ ಸಿರಿ. ಇದೀಗ ಸಮರ್ಥ್ ಸಿರಿ ಇಬ್ಬರು ಜಗಳ ಮಾಡಿಕೊಂಡಿದ್ದಾರೆ. ಸಿರಿ ಅಮ್ಮನ ಸ್ಥಾನವನ್ನು ತುಳಸಿಗೆ ನೀಡಿದ ಹಾಗೆ ಕಾಣುತ್ತಿದೆ.
ಅಮ್ಮ ಇಲ್ಲದೆ ತುಳಸಿಗೆ ಮನದ ನೋವನ್ನು ಹೇಳಿಕೊಳ್ಳಲು ಯಾರಾದರೂ ಬೇಕಿತ್ತು. ಇದೀಗ ಸಿರಿ, ತುಳಸಿಗೆ ಕರೆ ಮಾಡುತ್ತಾಳೆ. ಅಮ್ಮ ನಿಮ್ಮ ಬಳಿ ಒಮ್ಮೆ ಮಾತನಾಡಬೇಕಿತ್ತು ಎಂದಾಗ ತುಳಸಿಗೆ ಚಿಂತೆ ಶುರು ಆಗುತ್ತದೆ. ಎಲ್ಲಿ ಸಿರಿಯನ್ನು ಭೇಟಿ ಮಾಡಲಿ ನನಗೆ ಗೊತ್ತಿರುವುದೇ ಒಂದು ಅದು ದಿನಸಿ ಅಂಗಡಿ ಮತ್ತು ಮಾರ್ಕೆಟ್. ಅಲ್ಲಿಯೆಲ್ಲ ಬೇಡ ಎಂದುಕೊಂಡು ಮನೆಗೆ ಬರಲು ಹೇಳುತ್ತಾಳೆ. ಇದನ್ನು ಕೇಳಿದ ಸಿರಿ ತುಳಸಿ ಬಳಿ ಹೇಳುತ್ತಾಳೆ ಇದು ಬಹಳ ಗುಟ್ಟಿನ ವಿಚಾರ ಇದನ್ನೆಲ್ಲ ಹಾಗೆ ಹೇಳಲು ಸಾಧ್ಯವಿಲ್ಲ. ನಿಮ್ಮನ್ನು ಭೇಟಿ ಆಗಿಯೇ ಈ ವಿಚಾರ ತಿಳಿಸಬೇಕು ಎಂದಾಗ ಮಾರ್ಕೆಟ್‌ಗೆ ಬರಲು ಹೇಳುತ್ತಾಳೆ.
ತುಳಸಿ ಹಾಗೂ ಸಿರಿ ಮರುದಿನ ಮಾರುಕಟ್ಟೆ ಬಳಿ ಬರುತ್ತಾಳೆ. ಈ ವೇಳೆ ಅಚಾನಕ್ ಆಗಿ ತುಳಸಿ ಹಾಗೂ ಸಿರಿ ಭೇಟಿ ಆಗುತ್ತದೆ. ಸಿರಿಯನ್ನು ನೋಡಿದ ಖುಷಿಯಲ್ಲಿ ತುಳಸಿಗೆ ಆಶ್ಚರ್ಯ ಹಾಗೂ ಖುಷಿ ಆಗುತ್ತದೆ. ಬಳಿಕ ತುಳಸಿ ಕೋಡುಬಳೆ ಡಬ್ಬವನ್ನು ಆಕೆಯ ಬಳಿ ಕೊಡುವ ವೇಳೆ ಸಿರಿ ಹೇಳುತ್ತಾಳೆ ಯಾಕೆ ಅಮ್ಮ ಇಷ್ಟೆಲ್ಲ ಕಷ್ಟ ತೆಗೆದುಕೊಂಡಿರಿ ಎಂದು ಹೇಳಿದಾಗ ತುಳಸಿ ಹೇಳುತ್ತಾಳೆ ಅಮ್ಮ ಎಂದು ಹೇಳುತ್ತಿಯಾ ಆದರೆ ಅಮ್ಮ ಕೋಡುಬಳೆ ಕೊಟ್ಟಾಗ ಬೇಡ ಅಂತಿಯಾ? ಎಂದು ಕೇಳುತ್ತಾಳೆ.

ತುಳಸಿ ಕೊಟ್ಟ ಕೋಡುಬಳೆ ಅಸ್ವಾದಿಸಿದ ಸಿರಿ
ಅದನ್ನು ಕೇಳಿದ ಸಿರಿ ಕೋಡುಬಳೆ ಡಬ್ಬವನ್ನು ತೆಗೆದುಕೊಂಡು ರುಚಿ ನೋಡುತ್ತಾಳೆ. ಕೋಡುಬಳೆ ರುಚಿ ಆಸ್ವಾದಿಸಿದ ಸಿರಿ ತುಳಸಿಯನ್ನು ಹಾಡಿ ಹೊಗಳುತ್ತಾರೆ. ಆದರೆ ತುಳಸಿಗೆ ಏನೋ ನೆನಪಾಗಿ ಸಿರಿ ನಿನ್ನೆ ರಾತ್ರಿ ಕರೆ ಮಾಡಿ ಏನೋ ಮಾತನಾಡಬೇಕು ಎಂದು ಹೇಳಿದೆ ಅಲ್ವಾ ಏನು ವಿಚಾರ ಎಂದು ಕೇಳುತ್ತಾಳೆ . ಇದನ್ನು ಕೇಳಿದ ಒಡನೆಯೇ ಸಿರಿ ಮುಖ ಚಿಕ್ಕದಾಗುತ್ತಾದೇ. ಬಳಿಕ ಒಂದು ಹೋಟೆಲ್‌ಗೆ ತುಳಸಿಯನ್ನು ಕರೆದುಕೊಂಡು ಹೋಗಿ ನಡೆದ ವಿಚಾರವನ್ನು ಹೇಳುತ್ತಾಳೆ.

ಸಿರಿ ಪ್ರಿಯಕರನ ವಿರುದ್ದ ಕೋಪಗೊಂಡ ತುಳಸಿ
ಇದನ್ನು ಕೇಳಿದ ತುಳಸಿ ಕೋಪದಿಂದ, 'ಅವನಾಗಿ ಅವನೇ ಕಾಡಿ ಬೇಡಿ ಹಿಂದೆ ಬಿದ್ದು ಈಗ ಬಿಟ್ಟುಬಿಡು ಎಂದರೆ ನನಗೆ ಆತನ ಒಂದು ಫೋಟೋ ತೋರಿಸು. ಅವನ ಮುಖ ನೋಡಿದರೆ ಹೇಳುತ್ತೇನೆ ಅವನು ಎಂತವನು' ಎಂದು ಹೇಳುತ್ತಾಳೆ. ಬಳಿಕ ಸಿರಿ ಬಹಳ ಸಮಾಧಾನದಿಂದ ತುಳಸಿ ಬಳಿ ಮಾತನಾಡುತ್ತಾಳೆ, ನಮ್ಮಿಬ್ಬರ ಪ್ರೀತಿ ವಿಚಾರವನ್ನು ಆತ ಇನ್ನೂ ಮನೆಯಲ್ಲಿ ಹೇಳಲಿಲ್ಲ. ಹೋಗಲಿ ನಿಮ್ಮ ಅಮ್ಮನನ್ನಾದರು ಮನೆಗೆ ಕರೆದುಕೊಂಡು ಬಾ ಎಂದರೆ ಪ್ರತಿ ಸಲ ಒಂದು ನೆಪ ಹೇಳುತ್ತಾನೆ. ಎಲ್ಲಾ ತರದ ಪ್ರಯತ್ನ ಮಾಡುತ್ತಾ ಇದ್ದೇನೆ. ಇದೀಗ ನಮ್ಮ ಮಧ್ಯೆ ಜೋರಾಗಿ ಜಗಳ ಬೇರೆ ನಡೆಯಿತು. ಅವನು ಬಹಳ ಟೆನ್ಶನ್ ನಲ್ಲಿ ಇದ್ದ ನಾನು ಬೇರೆ ಸ್ವಲ್ಪ ಕಾಟ ಕೊಟ್ಟೆ. ಅದಕ್ಕೆ ಆತ ಬಿಟ್ಟು ಹೋಗುವ ಮಾತು ಆಡಿ ಬಿಟ್ಟ'' ಎಂದು ಬಹಳ ದುಃಖ ಪಡುತ್ತಾಳೆ.

ನನ್ನ ಹುಡುಗ ಜಂಟಲ್‌ಮ್ಯಾನ್ ಎಂದ ಸಿರಿ
ಇದನ್ನು ಕಂಡ ತುಳಸಿ ಏನು? ಬಿಟ್ಟು ಹೋಗೋದು ಆತ ನಿನ್ನ ಕಾಡಿ ಬೇಡಿ ಪ್ರೀತಿಸಿ ಈಗ ದೂರ ಆಗೋಣ ಎಂದರೆ ಅವನನ್ನು ಅವನು ಏನು ಅಂದುಕೊಂಡು ಇದ್ದಾನೆ. ಸಿರಿ ತುಳಸಿಗೆ ಹುಡುಗನ ಫೋಟೋ ತೋರಿಸಲು ಬಂದಾಗ ಸಿರಿ ಇನ್ನೇನೋ ಮಾತನಾಡುತ್ತಾಳೆ. ಎಲ್ಲಾ ಹುಡುಗಿಯರು ಹುಡುಗ ಹೇಗೆ ಇರಬೇಕು ಅಂದುಕೊಂಡು ಇದ್ದಾನೋ ಹಾಗೆ ಇದ್ದಾನೆ. ಸ್ವಲ್ಪ ಸೋಮಾರಿ ಅದು ಬಿಟ್ಟರೆ ನನ್ನ ಹುಡುಗ ಬಹಳ ಜಂಟಲ್ ಮ್ಯಾನ್ ಎಂದು ಹೇಳುತ್ತಾಳೆ.

ಸಮರ್ಥ್ ಅನ್ನು ವಹಿಸಿ ಮಾತನಾಡುವ ಸಿರಿ
ಇದನ್ನೆಲ್ಲ ಕೇಳಿದ ತುಳಸಿಗೆ ನಗು ಬರುತ್ತದೆ. ಆ ರೀತಿ ಇದ್ದರೂ ಅವನನ್ನು ವಹಿಸಿಕೊಂಡು ಬರುತ್ತೀಯಾ, ನೀನು ಆತನನ್ನು ಬಹಳ ಪ್ರೀತಿ ಮಾಡುತ್ತಾ ಇದ್ದೀಯಾ ಅದಕ್ಕೆ ಅವನು ಏನೇ ಮಾಡಿದರು ನೀನು ಅವನನ್ನು ವಹಿಸಿಕೊಳ್ಳುತ್ತಾ ಇದ್ದೀಯಾ ಎಂದು ಹೇಳುತ್ತಾಳೆ. ಇದನ್ನು ಕೇಳಿ ಸಿರಿ ಬಹಳ ದುಃಖ ಪಡುತ್ತಾಳೆ ಬಳಿಕ ಹೇಳುತ್ತಾಳೆ ಆತ ನನ್ನ ಬಿಟ್ಟು ಹೋದರೆ ನಾನು ಬದುಕಿ ಇರುವುದಿಲ್ಲ ಎಂದು ಅಳುತ್ತಾಳೆ. ಇದನ್ನು ನೋಡಿ ತುಳಸಿ, ಸಮಾಧಾನ ಮಾಡುತ್ತಾಳೆ. ಬಳಿಕ ತುಳಸಿ ಭುಜಕ್ಕೆ ಒರಗಿ ಜೋರಾಗಿ ಅಳುತ್ತಾಳೆ. ಬಳಿಕ ಸಿರಿಗೆ ಒಂದು ಐಡಿಯಾ ಕೊಡುತ್ತಾಳೆ. ನೀನ್ಯಾಕೆ ಅವರ ಮನೆ ಬಳಿ ಹೋಗಬಾರದು ಎಂದು ಹೇಳುತ್ತಾಳೆ ಸಿರಿಯನ್ನು ಹಾಗೂ ಹೀಗೂ ಸಮಾಧಾನ ಮಾಡುತ್ತಾಳೆ.


Click it and Unblock the Notifications











