Don't Miss!
- News
ಕಾಂಗ್ರೆಸ್ ಸೇರ್ತಾರಾ ಸುದೀಪ್?; ನಟ ಸುದೀಪ್ ಕಾಂಗ್ರೆಸ್ ಗೆ ಬಂದರೆ ಸ್ವಾಗತ: ಸತೀಶ್ ಜಾರಕಿಹೊಳಿ
- Lifestyle
Horoscope Today 4 Feb 2023: ಶನಿವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Sports
ಅದೇನು ಕಷ್ಟದ ಸಿಕ್ಸರ್ ಅಲ್ಲ: ಹ್ಯಾರಿಸ್ ರೌಫ್ಗೆ ವಿರಾಟ್ ಕೊಹ್ಲಿ ಹೊಡೆದ ಸಿಕ್ಸರ್ ಬಗ್ಗೆ ಮಾಜಿ ಕ್ರಿಕೆಟಿಗನ ಪ್ರತಿಕ್ರಿಯೆ
- Technology
ಒಪ್ಪೋ ರೆನೋ 8T 5G ಫಸ್ಟ್ ಲುಕ್: ಪವರ್ಫುಲ್ ಫೀಚರ್ಸ್ ಜೊತೆಗೆ ಹೊಸ ಲುಕ್!
- Automobiles
ಹೊಸ ನವೀಕರಣಗಳೊಂದಿಗೆ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಜನಪ್ರಿಯ ಕಿಯಾ ಸೆಲ್ಟೋಸ್
- Finance
ಅದಾನಿ ಕಳೆದುಕೊಂಡಿದ್ದು ಎಷ್ಟು ಲಕ್ಷ ಕೋಟಿ? ಕುಸಿಯುತ್ತಿವೆ ಷೇರುಗಳು- ಭಾರತದ ಶ್ರೀಮಂತನಿಗೆ ಮಂದೇನು ಕಾದಿದೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಸಿರಿ ತಂದೆಗಿರುವ ಮರೆವಿನ ಕಾಯಿಲೆ ದತ್ತ ಮುಂದೆ ಬಯಲಾಗುತ್ತಾ?
'ಶ್ರೀ ರಸ್ತು ಶುಭ ಮಸ್ತು' ಧಾರವಾಹಿ ಚೆನ್ನಾಗಿ ಮೂಡಿಬರುತ್ತಿದ್ದು ನೋಡುಗರ ಮನ ಸೆಳೆಯುತ್ತಿದೆ. ಇದೀಗ ಸಿರಿ ತವರು ಮನೆಗೆ ದತ್ತನ ಮನೆಯವರ ಆಗಮನ ಆಗಿದೆ ಸಿರಿ ತಂದೆಗೆ ಇದರಿಂದ ಬಹಳ ಖುಷಿ ಆಗಿದೆ ತನ್ನ ಮಗಳು ಅಳಿಯ ಎಲ್ಲರೂ ಬರುತ್ತಿದ್ದಾರೆ ಎಂದು ಅವರಿಗೆ ಅಡುಗೆ ಮಾಡಲು ಅಣಿಯಾಗುತ್ತಾರೆ.
ಅನ್ನಕ್ಕೆ ಕುಕ್ಕರ್ ಇಡುತ್ತಾರೆ, ಇನ್ನು ತರಕಾರಿಗಳನ್ನು ಕಟ್ ಮಾಡಿ ಕುಕ್ಕರ್ ನಲ್ಲಿ ಇಡುತ್ತಾರೆ. ಈ ವೇಳೆ ದತ್ತನ ಮನೆಯವರೆಲ್ಲರೂ ಸಿರಿ ತವರು ಮನೆಗೆ ಬರುತ್ತಾರೆ. ಈ ವೇಳೆ ಸಿರಿ ತಂದೆ ಅವರನ್ನು ಆದರದಿಂದ ಭರ ಮಾಡಿಕೊಳ್ಳುತ್ತಾರೆ. ಇದನ್ನು ನೋಡಿದ ದತ್ತನಿಗೆ ಖುಷಿ ಆಗುತ್ತದೆ. ಇನ್ನು ಎಲ್ಲರೂ ಕ್ಷೇಮ ಸಮಾಚಾರ ಮಾತನಾಡುತ್ತಾ ಇರಬೇಕಾದರೆ ಊಟ ಮಾಡಿಯೇ ಇಲ್ಲಿಂದ ಹೋಗುವುದು ಎಂದು ದತ್ತ ಹೇಳಿದಾಗ ಅಡುಗೆ ಮನೆಯಲ್ಲಿ ಅನ್ನ ಇಟ್ಟ ನೆನಪಾಗಿ ಸಿರಿ ತಂದೆ ಅಡಿಗೆ ಮನೆಗೆ ಹೋಗುತ್ತಾರೆ. ಈ ವೇಳೆ ಸಿರಿ ಹಾಗೂ ತುಳಸಿ ಕುಕ್ಕರ್ ಮುಚ್ಚಳ ತೆಗೆದು ನೋಡುತ್ತಾನೆ ಅನ್ನ ಎಲ್ಲಾ ಸುಟ್ಟು ಹೋಗಿರುತ್ತದೆ ಹಾಗೆಯೇ ತರಕಾರಿ ಕೂಡ ಹಾಳಾಗಿರುತ್ತದೆ.
ಕಂಠಿಯೇ
ಶ್ರೀ
ಎನ್ನುವುದು
ಸ್ನೇಹಾಗೆ
ಖಾತ್ರಿ!
ಮುಂದೇನು
ಮಾಡ್ತಾಳೆ?
ಅಪ್ಪ ಯಾಕಪ್ಪ ಹೀಗೆ ಮಾಡಿದ್ದೀಯಾ? ಊಟ ಆದರೂ ದಿನ ನಿತ್ಯ ಮಾಡುತ್ತಾ ಇದ್ದೀಯಾ ತಾನೇ? ಈ ರೀತಿ ಮಾಡಿ ತಿಂತಿಯ ಎಂದು ಕೇಳುತ್ತಾಳೆ. ಇದನ್ನು ಕೇಳಿದ ಸಿರಿ ತಂದೆ ಹಾಗೇನಿಲ್ಲ. ಇವತ್ಯಾಕೊ ತುಂಬಾ ಮರೆವು ಎಂದು ಹೇಳುತ್ತಾನೆ. ಇನ್ನು ತುಳಸಿ ಮಾತ್ರ ಅದೆಲ್ಲವನ್ನೂ ನೋಡಿ ಹೆಚ್ಚು ತಲೆ ಕೆಡಿಸಿಕೊಳ್ಳದೆ ಇವತ್ತು ಬಿಸಿ ಬೇಳೆ ಬಾತ್ ಮಾಡೋಣ ಎಂದು ಹೇಳುತ್ತಾರೆ.

ಬಿಸಿಬೇಳೆ ಬಾತ್ ಮಾಡಿದ ತುಳಸಿ
ಇನ್ನು ಇದೆಲ್ಲವನ್ನೂ ನೋಡಿದ ಸಿರಿಗೆ ಆಶ್ಚರ್ಯ ಆಗುವ ಜೊತೆಗೆ ಅತ್ತೆಗೆ ಅಡುಗೆಯಲ್ಲಿ ಎಲ್ಲಾ ರೀತಿಯ ಸಹಾಯ ಮಾಡುತ್ತಾಳೆ ಕೊನೆಗೂ ಬಿಸಿ ಬೇಳೆ ಬಾತ್ ರೆಡಿ ಮಾಡಿಯೇ ಬಿಡುತ್ತಾಳೆ ತುಳಸಿ. ಇನ್ನು ಹಾಲ್‌ನಲ್ಲಿ ಹರಟೆ ಹೊಡೆಯುತ್ತಿದ್ದ ದತ್ತ, ಸಮರ್ಥ್ ಹಾಗೂ ಸಿರಿಯ ತಂದೆಯನ್ನು ಊಟಕ್ಕೆ ಕರೆಯುತ್ತಾಳೆ ತುಳಸಿ. ಬಿಸಿ ಬೇಳೆ ಬಾತ್ ರೆಡಿ ಆಗಿದೆ ಎಲ್ಲರೂ ಊಟಕ್ಕೆ ಬನ್ನಿ ಎಂದು ಹೇಳುತ್ತಾಳೆ. ಈ ವೇಳೆ ದತ್ತನಿಗೆ ಮಾತ್ರ ಕೊಡಲು ಮರೆಯದೆ ಅದನ್ನು ತನ್ನ ಚೀಲದಲ್ಲಿ ಹಾಕಿಕೊಂಡು ಬಂದಿರುತ್ತಾಳೆ. ಇನ್ನು ದತ್ತನಿಗೆ ಮಾತ್ರೆ ಕೊಟ್ಟು ಆದ ಬಳಿಕ ದತ್ತ ಹೇಳುತ್ತಾರೆ ಡೈನಿಂಗ್ ಟೇಬಲ್ ಎಲ್ಲಾ ಬೇಡ ಇಲ್ಲಿಯೇ ಕೊಟ್ಟು ಬಿಡು ಎಂದು ಹೇಳುತ್ತಾರೆ.

ಬಿಸಿ ಬೇಳೆ ಬಾತ್ ಸವಿದ ದತ್ತ
ಇನ್ನೂ ದತ್ತ ಹೇಳಿದ ಹಾಗೆಯೇ ಕೇಳುವ ತುಳಸಿ ಎಲ್ಲರಿಗೂ ಹಾಲ್ ನಲ್ಲಿಯೇ ಊಟಕ್ಕೆ ಕೊಡುತ್ತಾಳೆ. ಊಟ ಮಾಡುವಾಗ ದತ್ತ, ಟಿವಿ ಆದರೂ ಹಾಕಿ ಇದ್ದರೆ ಮ್ಯಾಚ್ ನೋಡುತ್ತಾ ನೋಡುತ್ತಾ ಊಟ ಮಾಡಬಹುದಾಗಿತ್ತು ಎನ್ನುತ್ತಾರೆ ಇದನ್ನು ನೋಡಿದ ಸಿರಿ ಬೇಗ ರಿಮೋಟ್ ಕೊಟ್ಟು ಬಿಡುತ್ತಾಳೆ. ಈ ವೇಳೆ ಸಮರ್ಥ್ ಕೂಡ ದತ್ತನಿಗೆ ಹೇಳುತ್ತಾನೆ ತಾತ ಊಟ ಮಾಡುತ್ತಾ ಇರುವಾಗ ಈ ಬಾಕ್ಸಿಂಗ್ ಎಲ್ಲಾ ಬೇಕಾ ಎಂದಾಗ ದತ್ತ, ಬಾಕ್ಸಿಂಗ್ ನೋಡುತ್ತಾ ಊಟ ಮಾಡಿದರೆ ಜಾಸ್ತಿ ಸೇರುತ್ತೆ ಎಂದು ಹೇಳಿದಾಗ ಮನೆ ಮಂದಿ ಮೆತ್ತಗೆ ನಗುತ್ತಾರೆ.

ಮಾಧವನ ಅಡುಗೆ ಕಾರ್ಯಕ್ರಮ ಮಿಸ್ ಮಾಡಿಕೊಂಡ ತುಳಸಿ
ತಾತನ ಮಾತು ಕೇಳಿ ಸಮರ್ಥ್ ಗೋಣಗಿಕೊಳ್ಳುತ್ತಾನೆ. ಇದನ್ನು ಪ್ರಶ್ನೆ ಮಾಡಿದ ದತ್ತ, ಏನೋ ಎಂದಾಗ ಸಮರ್ಥ್ ಮಾತು ಮರೆಸಿ ಖಾರ ಬೂಂದಿ ಹಾಕಿಕೊಳ್ಳಿ ಚೆನ್ನಾಗಿ ಇರುತ್ತೆ ಎಂದಾಗ ತಾತ ಮಾತ್ರ ಸಮರ್ಥ್ ನನ್ನು ಸರಿಯಾಗಿ ತರಾಟೆಗೆ ತೆಗೆದುಕೊಳ್ಳುತ್ತಾರೆ. ಆ ವೇಳೆ ತುಳಸಿಗೆ ಸಿರಿ ತಂದೆ ಧನ್ಯವಾದ ಹೇಳುತ್ತಾರೆ. ಊಟದ ಸಮಯಕ್ಕೆ ಸರಿಯಾಗಿ ನಮಗೆ ಊಟ ತಯಾರಿಸಿದ್ದಿರಾ ಬಹಳ ಧನ್ಯವಾದ ಎಂದಾಗ ತುಳಸಿ, ಏಷ್ಟು ಬೇಗ ಮದ್ಯಾಹ್ನ ಆಗಿ ಹೋಯಿತಾ ಎಂದು ಒಳಗೆ ಹೋದಾಗ ಸಿರಿ ಕೂಡ ಅತ್ತೆಯ ಜೊತೆ ಹೋಗುತ್ತಾಳೆ. ಇನ್ನು ಮಾಧವ ಸರ್ ಪ್ರೋಗ್ರಾಂ ಅನ್ನು ಮಿಸ್ ಮಾಡಿಕೊಂಡ ತುಳಸಿಗೆ ಸಿರಿ ಸಾಂತ್ವನ ಹೇಳುತ್ತಾಳೆ. ರಿಮೋಟ್ ಹಿಡಿದು ಚಾನೆಲ್ ಚೇಂಜ್ ಮಾಡಲು ಹೋದರೆ ದತ್ತ ಮಾತ್ರ ಯಾರು ಡಿಸ್ಟರ್ಬ್ ಮಾಡಬೇಡಿ ಎಂದು ಹೇಳುತ್ತಾರೆ.

ಎಲ್ಲ ಮರೆತು ಹೋದ ಸಿರಿ ತಂದೆ, ದತ್ತನಿಗೆ ಅನುಮಾನ
ಊಟ ಎಲ್ಲಾ ಮುಗಿದ ಮೇಲೆ ದತ್ತ ಹಾಗೂ ಸಿರಿ ತಂದೆ ವೀಳ್ಯದೆಲೆ ಹಾಕಿಕೊಳ್ಳುತ್ತಾರೆ. ಇನ್ನು ಸಿರಿ ತಂದೆ ಹಾಗೂ ದತ್ತ ಕುಶಲೋಪರಿ ಮಾತನಾಡುತ್ತಾ ಇರಬೇಕಾದರೆ ಸಿರಿ ತಂದೆಗೆ ಇದ್ದಕ್ಕಿದ್ದ ಹಾಗೆ ತಲೆ ಸಿಡಿದ ಹಾಗೆ ಆಗಿ ದತ್ತನ ಬಳಿ ಏನೆಲ್ಲಾ ಮಾತನಾಡಿಸುತ್ತಾರೆ. ಇದನ್ನು ಕಂಡ ದತ್ತ ಏನ್ರೀ ಹೀಗೆಲ್ಲ ಮಾತನಾಡುತ್ತಾ ಇದ್ದೀರಿ ಏನಾಗಿದೆ ನಿಮಗೆ ಎಂದು ಹೇಳುತ್ತಾನೆ ಇದನ್ನು ಕೇಳಿದ ಸಿರಿ ತಂದೆ ಮಾತ್ರ ದತ್ತನ ಗುರುತೇ ಇಲ್ಲದ ಹಾಗೆ ಮಾತನಾಡುತ್ತಾರೆ. ಇದನ್ನು ನೋಡಿದ ತುಳಸಿ ದತ್ತನನ್ನು ಹೇಗಾದರೂ ಸಾಗಹಾಕಬೇಕು ಎಂದೆಲ್ಲ ಯೋಚನೆ ಮಾಡುತ್ತಾ ಇರುತ್ತಾರೆ. ಬಳಿಕ ದತ್ತನ ಬಳಿ ಏನೋ ಒಂದು ನೆಪ ಹೇಳಿ ಹೊರಗೆ ಕಳುಹಿಸುತ್ತಾರೆ. ಕೊನೆಗೆ ಸಿರಿ ತಂದೆಗೆ ತುಳಸಿ ಮಾತ್ರೆ ಕೊಟ್ಟು ಮಲಗಿಸಿ ಬಿಡುತ್ತಾರೆ ಮುಂದೇನು ಕಾದು ನೋಡಬೇಕಿದೆ.