Don't Miss!
- Sports
IND vs NZ 3rd T20: ಶುಭ್ಮನ್ ಗಿಲ್, ಹಾರ್ದಿಕ್ ಪಾಂಡ್ಯ ಮಿಂಚು; ನ್ಯೂಜಿಲೆಂಡ್ ವಿರುದ್ಧ ಸರಣಿ ಗೆದ್ದ ಭಾರತ
- Lifestyle
ಗರುಡ ಪುರಾಣ ಪ್ರಕಾರ ಈ 9 ಬಗೆಯ ವ್ಯಕ್ತಿಗಳ ಮನೆಯಲ್ಲಿ ಆಹಾರ ತಿನ್ನಲೇಬಾರದು
- News
ತಂಬಾಕು ನಿಯಂತ್ರಣಕ್ಕೆ ಮೈಸೂರು ಜಿಲ್ಲಾಧಿಕಾರಿ ತೆಗೆದುಕೊಂಡ ಕ್ರಮಗಳು, ಇಲ್ಲಿದೆ ವಿವರ
- Automobiles
ಹೊಸ ಇನೋವಾ ಹೈಕ್ರಾಸ್ ಬಲದೊಂದಿಗೆ ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಟೊಯೊಟಾ
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಎದುರು ಬಂದರೂ ಅಭಿಮಾನಿ ತುಳಸಿಯ ಮುಖ ನೋಡದ ಮಾಧವ!
ಮಾಧವ ಪೂರ್ಣಿಮಾ ನನ್ನು ಹಾಸ್ಪಿಟಲ್ ಗೆ ಕರೆದುಕೊಂಡು ಬಂದಿದ್ದಾನೆ. ಈ ವೇಳೆ ತುಳಸಿ ಕೂಡ ರವೀಂದ್ರ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಬರುತ್ತಾಳೆ. ರವೀಂದ್ರ ಬಳಿ ಹೇಳುತ್ತಾಳೆ ತುಳಸಿ ಅಣ್ಣ ನಿಮಗೆ ಇನ್ನೂ ಮರೆವಿನ ಕಾಯಿಲೆ ಮೊದಲ ಸ್ಟೇಜ್ ನಲ್ಲಿ ಇದೆ. ನೀವು ಈಗಿನಿಂದಲೇ ಸರಿಯಾಗಿ ಔಷಧಿ ತೆಗೆದುಕೊಂಡರೆ ಸರಿಯಾಗಿ ಒಂದು ವರುಷದಲ್ಲಿ ಇದು ಕಡಿಮೆ ಆಗಿ ಬಿಡುತ್ತದೆ ಎನ್ನುತ್ತಾಳೆ.
ಅದಕ್ಕೆ ರವೀಂದ್ರ, ನೀವು ಹೀಗೆ ಹೇಳಿದರೆ ನನಗೆ ಸಮಾಧಾನ. ಸರಿ ನಿಮಗೆ ತಡ ಆಗುತ್ತಾ ಇರಬಹುದು ಹೊರಡೋಣ ಎಂದಾಗ ತುಳಸಿ, ಇರಿ ಅಣ್ಣ ಡಾಕ್ಟರ್ ಕೆಲವು ಔಷಧಿಗಳನ್ನು ಕೊಡಲು ಹೇಳಿದ್ದಾರೆ ನಾನು ಹೋಗಿ ತರುತ್ತೇನೆ ನೀವು ಇಲ್ಲಿಯೇ ಕುಳಿತುಕೊಂಡು ಇರಿ ಎಂದಾಗ ರವೀಂದ್ರ ಕೇಳುತ್ತಾನೆ ಏನು ಔಷಧೀಯ ನಾನೇ ತರುತ್ತೇನೆ ಎಂದು ಹೇಳಿದರು ಅದನ್ನು ಕೇಳದ ತುಳಸಿ ನಾನೇ ತರುತ್ತೇನೆ ಎಂದು ಹೇಳಿ ರವೀಂದ್ರ ಅವರನ್ನು ಪಕ್ಕದಲ್ಲಿ ಇರುವ ಸೀಟಿನಲ್ಲಿ ಕುಳ್ಳಿರಿಸುತ್ತಾಳೆ. ಬಳಿಕ ಔಷಧಿ ತರಲು ಹೊರಟಾಗ ರವೀಂದ್ರ ಕಿಸೆಗೆ ಕೈ ಹಾಕಿ ದುಡ್ಡು ಎಂದಾಗ ಅವೆಲ್ಲ ಬೇಡ ಎಂದ ತುಳಸಿ ಆ ಬಳಿಕ ಮೆಡಿಕಲ್‌ಗೆ ಹೋಗುತ್ತಾಳೆ.
ಪೂರ್ಣಿಮಾಗೆ ವಾಶ್ ರೂಮ್‌ಗೆ ಹೋಗಲೇ ಬೇಕಾದ ಅನಿವಾರ್ಯತೆ ಬಂದು ಒದಗಿದೆ. ಜೊತೆಗೆ ತಲೆ ಸುತ್ತು ಬರುತ್ತದೆ. ಈ ವೇಳೆ ಅಲ್ಲಿಗೆ ಬಂದ ತುಳಸಿ ಬಿದ್ದು ಹೋಗುತ್ತಿರುವ ಪೂರ್ಣಿಮಾಳನ್ನು ಹಿಡಿದುಕೊಂಡು ಕುಡಿಯಲು ನೀರು ಕೊಡುತ್ತಾಳೆ. ಈ ವೇಳೆ ತುಳಸಿ, 'ಯಾರು ಬಂದೀಲ್ವ' ಎಂದು ಕೇಳಿದಾಗ ಮಾವ ಬಂದಿದ್ದಾರೆ. ವಾಶ್ ರೂಮ್‌ಗೆ ಹೋಗಬೇಕು ಎಂದು ಹೇಳಿದೆ ನರ್ಸ್ ಅನ್ನು ಕರೆದುಕೊಂಡು ಬರಲು ಹೋಗಿದ್ದಾರೆ ಎಂದು ಹೇಳಿದಾಗ ತುಳಸಿ ಹೇಳುತ್ತಾಳೆ ಬಾ ನಾನೇ ಕರೆದುಕೊಂಡು ಹೋಗುತ್ತೇನೆ ಎಂದು ಹೇಳುತ್ತಾಳೆ ಇದನ್ನು ಕೇಳಿದ ಪೂರ್ಣಿಮಾ ಬೇಡ ಎಂದರು, ಬಾ ಅಮ್ಮ ಎಂದು ತುಳಸಿ ಕರೆದುಕೊಂಡು ಹೋಗುತ್ತಾಳೆ.

ಭೇಟಿಯಾದ ಮಾಧವ-ತುಳಸಿ, ಆದರೆ ಮುಖ ನೋಡಲಿಲ್ಲ!
ಬಳಿಕ ಮೆಡಿಕಲ್ ಶಾಪ್‌ಗೆ ಹೋಗುತ್ತಾಳೆ. ಇನ್ನೂ ಇದೆ ಸಮಯಕ್ಕೆ ಮಾಧವ ಮೆಡಿಕಲ್ ಸ್ಟೋರ್‌ಗೆ ಬಂದು ಮೆಡಿಸಿನ್ ತೆಗೆದುಕೊಂಡು ಇರುತ್ತಾನೆ. ಅದೇ ಹೊತ್ತಿಗೆ ಮಾಧವನ ಅಭಿಮಾನಿ ಆದ ತೂಳಸಿಯೂ ಅಲ್ಲಿಗೆ ಬರುತ್ತಾಳೆ. ಈ ವೇಳೆ ಎಮರ್ಜೆನ್ಸಿ ಪೇಶೆಂಟ್ ಒಬ್ಬರನ್ನು ಕರೆದುಕೊಂಡು ಬರುತ್ತಾರೆ ಈ ವೇಳೆ ತುಳಸಿಯನ್ನು ಅವರು ತಳ್ಳುತ್ತಾರೆ. ತುಳಸಿ ತಪ್ಪಿ ಮಾಧವನಿಗೆ ಡಿಕ್ಕಿ ಹೊಡೆಯುತ್ತಾಳೆ. ಡಿಕ್ಕಿ ಹೋದ ರಭಸಕ್ಕೆ ಮಾಧವ ಬಳಿ ಇದ್ದ ಮದ್ದಿನ ಬಾಟಲ್ ಮಾತ್ರೆಗಳು ಕೆಳಗೆ ಬೀಳುತ್ತದೆ. ಇದನ್ನು ಮಾಧವ ಬೇಗ ಬೇಗ ಹೆಕ್ಕಿಕೊಳ್ಳುತ್ತಾನೆ.

ಮಾಧವನಿಗೆ ಕ್ಷಮೆ ಕೇಳದ ತುಳಸಿ
ಆದರೆ ತುಳಸಿ ಮಾತ್ರ ತನ್ನಿಂದ ಈ ರೀತಿ ಎಲ್ಲಾ ಆಯಿತಲ್ಲ ಎಂದು ಬೇಸರ ಮಾಡಿಕೊಳ್ಳುತ್ತಾಳೆ. ಬಳಿಕ ಮನದಲ್ಲಿ ಛೇ ಸರಿಯಾಗಿ ಕ್ಷಮೆ ಕೇಳಲು ಆಗಲಿಲ್ಲ ಅವರು ಏನು ಅಂದುಕೊಂಡರೋ ಏನೋ ಎಂದು ಯೋಚನೆ ಮಾಡುತ್ತಾ ಇರುತ್ತಾಳೆ ಬಳಿಕ ಮೆಡಿಸಿನ್ ತೆಗೆದುಕೊಂಡು ರವೀಂದ್ರ ಅವರನ್ನು ಮನೆಗೆ ಕರೆದುಕೊಂಡು ಹೋಗುತ್ತಾಳೆ. ದತ್ತ, ಸಿರಿಗೆ ಪುಸ್ತಕದ ಅಂಗಡಿಗೆ ಹೋಗಲು ಪರ್ಮಿಷನ್ ಕೊಡುತ್ತಾನೆ ಅದರಲ್ಲೂ ಕತ್ತಲಾಗುವ ಮುಂಚೆ ಮನೆಗೆ ಬರಬೇಕು ಎಂದು ಹೇಳುತ್ತಾನೆ.

ಸಿರಿಗೆ ಸಪೋರ್ಟ್ ಮಾಡಿದ ತುಳಸಿ
ಇನ್ನೂ ತುಳಸಿ ಕೂಡ ಮಾವ ಅವಳು ಮನೆಯಲ್ಲಿ ಕುಳಿತು ಏನು ಮಾಡುತ್ತಾಳೆ ಪುಸ್ತಕದ ಅಂಗಡಿಗೆ ಹೋಗಲಿ ಅವಳ ಅಪ್ಪನಿಗೆ ಕೂಡ ಸಹಾಯ ಆಗುತ್ತದೆ ಎಂದು ಹೇಳಿದ್ದಕ್ಕಾಗಿ ದತ್ತ ಹೋಗಲು ಅನುಮತಿ ನೀಡುತ್ತಾನೆ. ಇನ್ನು ಪುಸ್ತಕದ ಮಳಿಗೆಯಲ್ಲಿ ಸಿರಿ ಕುಳಿತಿರಬೇಕಾದರೆ ಅಲ್ಲಿಗೆ ಬಂದ ಸಂಧ್ಯಾಳನ್ನು ನೋಡಿ, ಸಿರಿ ಖುಷಿ ಪಡುತ್ತಾಳೆ. ಬಳಿಕ ಸಂಧ್ಯಾ ಬಳಿ ಮಾತನಾಡಿದಾಗ ನಿನಗೆ ಹೇಗೆ ಗೊತ್ತಾಯಿತು ಸಂಧ್ಯಾ ನಾನು ಪುಸ್ತಕದ ಮಳಿಗೆಗೆ ಬಂದಿದ್ದೇನೆ ಎಂದು ಕೇಳುತ್ತಾಳೆ.

ಸಿರಿ ನೋಡಲು ಬಂದ ಸಂಧ್ಯಾ
ಅದಕ್ಕೆ ಮನದಲ್ಲಿ ಯೋಚನೆ ಮಾಡಿದ ಸಂಧ್ಯಾ, ನನಗೆ ನಮ್ಮ ಮನೆಯಲ್ಲಿ ಒಂದು ಕೂದಲು ಆ ಕಡೆ ಈ ಕಡೆ ಆದರೂ ನಂದಿನಿ ನನಗೆ ಎಲ್ಲಾ ಹೇಳುತ್ತಾಳೆ ಎಂದು ಹೇಳಕ್ಕಾಗತ್ತ ಎಂದು ಮನದಲ್ಲಿ ಯೋಚನೆ ಮಾಡುತ್ತಾ ಸಿರಿ ಬಳಿ, 'ಅಣ್ಣ ಯಾವತ್ತೂ ಹೇಳ್ತಿದ್ದ ಅದಕ್ಕೆ ಬಂದೆ ಎಂದು ಹೇಳುತ್ತಾಳೆ ಬಳಿಕ ಮಾತು ಮುಂದುವರಿಸಿದ ಸಂಧ್ಯಾ, ಮದುವೆ ಆಗಿ ಕೆಲಸಕ್ಕೆ ಬಂದಿಯಲ್ಲ ನೀನು. ನನ್ನ ತರ ತಪ್ಪು ಮಾಡಲಿಲ್ಲ ನೀನು ಎಂದಾಗ ಸಿರಿ, ಸಮರ್ಥ್, ತಾತಾ ಅತ್ತೆ ಯಾರು ಏನು ಅಂದಿಲ್ಲ ಅದಕ್ಕೆ ಬಂದೆ ಎಂದಾಗ ಸ್ವಲ್ಪ ಹೊಟ್ಟೆ ಉರಿದುಕೊಂಡ ಸಂಧ್ಯಾ ಹೇಳುತ್ತಾಳೆ ಹಾಗಾದರೆ ನೀನು ನಮ್ಮ ಮನೆಯಲ್ಲಿ ಚೆನ್ನಾಗಿ ಇದ್ದೀಯಾ. ಅಣ್ಣ ಅಮ್ಮ ಆದರೆ ಓಕೆ ಆದರೆ ಆ ಮುದುಕನ ಕಾಟ ಇದ್ದೆ ಇರುತ್ತದೆ. ಹೋಗುತ್ತಾ ಹೋಗುತ್ತಾ ನಿನಗೆ ಗೊತ್ತಾಗತ್ತೆ ಎಂದಾಗಲೂ ಸಿರಿ ಮಾತ್ರ ಏನೇ ಆದರೂ ಮನೆಯವರನ್ನು ಬಿಟ್ಟು ಕೊಡದೆ ಸಂಧ್ಯಾ ಎದುರು ಮಾತನಾಡುತ್ತಾರೆ. ಮುಂದೇನು ಕಾದು ನೋಡಬೇಕಿದೆ.