For Quick Alerts
  ALLOW NOTIFICATIONS  
  For Daily Alerts

  ಸಿರಿ ಜಾಣ್ಮೆಗೆ ಮೆಚ್ಚಿದ ದತ್ತ! ಸಿರಿಯ ತಲೆಕೆಡಿಸಿದ ದತ್ತನ ವಿಚಿತ್ರ ವರ್ತನೆ

  By ಪೂರ್ವ
  |

  ಊಟದ ಟೇಬಲ್‌ನಲ್ಲಿ ಊಟ ಮಾತ್ರ ಮಾಡಬೇಕು ಎಂದು ಮನೆಯ ಹಿರಿಯ ಕೆಲಸದಾಕೆ ನಿಧಿ ಬಳಿ ಹೇಳಿದ್ದೆ ದೊಡ್ಡ ತಪ್ಪು ಅನ್ನೋ ಹಾಗೆ ನಿಧಿ ರಾದ್ದಾಂತ ಮಾಡುತ್ತಾ ಇದ್ದಾಳೆ. ನಿಧಿ ಡೈನಿಂಗ್ ಟೇಬಲ್‌ನಲ್ಲಿ ಕುಳಿತು ಕೈ ಬೆರಳಿನ ಉಗುರುಗಳಿಗೆ ಶೇಪ್ ನೀಡುತ್ತಾ ಇರುತ್ತಾಳೆ. ಆ ವೇಳೆ ಅಲ್ಲಿಗೆ ಬಂದ ಕೆಲಸದಾಕೆ ಚಿಕ್ಕ ಅಮ್ಮನವರೆ ಇದು ಊಟ ಮಾಡುವ ಜಾಗ ಎಂದಾಗ ಕೆರಳಿದ ನಿಧಿ, ಅದಿಕ್ಕೆ ನಾನು ಇಲ್ಲಿ ಕುಳಿತು ನೈಲ್ ಶೇಪ್ ಮಾಡಬಾರದಾ, ಇದು ನನ್ನ ಮನೆ, ನಾನು ಹೇಗೆ ಬೇಕಾದರೂ ಹಾಗೆ ಇರುತ್ತೇನೆ. ನಿನ್ಯಾರು ಅದು ಕೇಳಕ್ಕೆ ಎನ್ನುತ್ತಾಳೆ.

  ಅದಕ್ಕೆ ಮನೆಗೆಲಸದಾಕೆ, ಅಮ್ಮಾವರೇ ಅದು ಅದು ಎಂದು ತೊದಲಿದಾಗ ನಿಧಿ ಕೋಪದಿಂದ, ಅದಕ್ಕೆ ಹೇಳೋದು ಕೆಲಸದವರನ್ನ ತಲೆ ಮೇಲೆ ಕೂರಿಸಿಕೊಳ್ಳಬಾರದೆಂದು ಎಂದು ಹೇಳುತ್ತಿರುವಾಗ ಅಲ್ಲಿಗೆ ಬಂದ ಪೂರ್ಣಿಮಾ, ನಿಧಿಗೆ ಬುದ್ದಿ ಹೇಳುತ್ತಾಳೆ. ನಿಧಿ ಆ ರೀತಿ ಎಲ್ಲಾ ಮಾತನಾಡಬಾರದು, ಅವರು ಈ ಮನೆಗೆ ದೊಡ್ಡವರು. ನಿನಗಿಂತ ಎರಡರಷ್ಟು ವಯಸ್ಸಾಗಿದೆ. ಮರ್ಯಾದೆ ಕೊಟ್ಟು ಮಾತನಾಡಬೇಕು ಎಂದು ಹೇಳುತ್ತಾಳೆ. ಇದನ್ನು ಕೇಳಿದ ನಿಧಿ ಕೆರಳಿ ಕೆಂಡಾಮಂಡಲ ವಾಗುತ್ತಾಳೆ. ಆ ವೇಳೆ ನಿಧಿ, ಪೂರ್ಣಿಮಾ ಬಳಿ, ನಾನು ಯಾಕೆ ಮರ್ಯಾದೆ ಕೊಡಬೇಕು. ಕೆಲಸದವರಿಗೆ ಬಕೆಟ್ ಹಿಡಿದುಕೊಂಡು ಕೂರಲು ನನಗೆ ಮಾಡಲು ಕೆಲಸ ಇಲ್ಲ ಅಂದುಕೊಂಡು ಇದ್ದೀರಾ ಎನ್ನುತ್ತಾಳೆ.

  ಇದರಿಂದ ಕೋಪಗೊಂಡ ಪೂರ್ಣಿಮಾ, ನಿಧಿ ಮಾತಿನ ಎದುರೇಟು ಕೊಡುತ್ತಾಳೆ, ಈಗ ನಿನಗೆ ಏನು ಕೆಲಸ ಇದೆ ನಿಧಿ. ನಿನ್ನ ಅಣ್ಣನ ಥರ ಒಳ್ಳೆಯ ಕರಿಯರ್ ನೋಡಿಕೋ, ಅದು ಬಿಟ್ಟು ಟೈಮ್ ವೇಸ್ಟ್ ಮಾದೋಡು ಬಿಟ್ಟು ದೊಡ್ಡವರಿಗೆ ಮರ್ಯಾದೆ ಕೊಡದೇ ಮಾತನಾಡಬೇಡ ಎಂದಾಗ ನಿಧಿ ಜೋರಾಗಿ ಅಮ್ಮನನ್ನು ಕರೆಯುತ್ತಾಳೆ. ಆ ವೇಳೆ ಅಲ್ಲಿಗೆ ಬಂದ ನಿಧಿಯ ಅಮ್ಮ ಏನಾಯಿತು ಎಂದಾಗ ನಿಧಿ, ನನಗೆ ಇಲ್ಲಿ ಎಲ್ಲರೂ ಸೇರಿ ಅವಮಾನ ಮಾಡುತ್ತಾ ಇದ್ದಾರೆ ಎಂದಾಗ ಪೂರ್ಣಿಮಾ, ಇಲ್ಲಿ ಯಾರೂ ಯಾರಿಗೂ ಅವಮಾನ ಮಾಡಿಲ್ಲ. ಸುಮ್ಮನೆ ಈ ವಿಚಾರನಾ ದೊಡ್ಡದು ಮಾಡುತ್ತಾ ಇದ್ದೀಯಾ. ಪಾಪಮ್ಮ ಈ ಮನೆಗೆ ಹಿರಿ ಅಮ್ಮ ಇದ್ದ ಹಾಗೆ ಅವರು ಏನಾದರು ಹೇಳಿದರೆ ಅದು ನಮ್ಮ ಒಳ್ಳೆಯದಕ್ಕೆ ಎಂದು ಹೇಳುತ್ತಾರೆ.

  ಮಾಧವನ ಮನೆಯಲ್ಲಿ ಜಗಳ

  ಮಾಧವನ ಮನೆಯಲ್ಲಿ ಜಗಳ

  ಆ ವೇಳೆ ನಿಧಿ ಅಮ್ಮನ ಬಳಿ ಹೇಳುತ್ತಾಳೆ ನೋಡು ಅಮ್ಮ ನನಗೆ ಹೇಳಲು ಬರುತ್ತಾರೆ ಎಂದಾಗ ನಿಧಿ ತಾಯಿ ಮಾಧವನನ್ನು ನೋಡಿ ತೆಪ್ಪಗಾಗುತ್ತಾರೆ. ಮಾಧವನ ಎದುರು ಕೂಡ ಪೂರ್ಣಿಮಾ ನ ವಿರುದ್ದ ಜೋರಾಗಿ ಮಾತನಾಡುವುದನ್ನು ಕಂಡು ಮಾಧವ, ನಿಧಿ ಸುಮ್ಮನಿರು ಇಲ್ಲಿ ಏನಾಗಿದೆ ಎಂದು ನನಗೆ ಗೊತ್ತಿಲ್ಲ ಆದರೆ ನೀನು ಮಾಡುತ್ತಾ ಇರುವುದು ತಪ್ಪು ಎಂದು ಹೇಳುತ್ತಾನೆ. ಈ ವೇಳೆ ಅಲ್ಲಿಗೆ ಮಾಧವನ ಮಗ ಬರುತ್ತಾರೆ. ಚಿಕ್ಕಮ್ಮ ಮಾಧವನ ಮಗ ಬಂದ ಕೂಡಲೇ ಅಳು ಮುಖ ಹಾಕಿಕೊಂಡು ಇರುತ್ತಾಳೆ. ಬಳಿಕ ಚಿಕ್ಕಮ್ಮ ಅಳುತ್ತಾ ಇರುವುದನ್ನು ನೋಡಿದ ಮಾಧವನ ಮಗ ಅಲ್ಲಿಗೆ ಬರುತ್ತಾನೆ ಈ ವೇಳೆ ಮಾಧವ ನಿಧಿ ಬಳಿ ಪಾಪಾಮ್ಮ ಹಾಗೂ ಪೂರ್ಣಿಮಾ ಬಳಿ ಸಾರಿ ಹೇಳುವಂತೆ ಹೇಳುತ್ತಾನೆ. ಆಗ ಅಲ್ಲಿಗೆ ಬಂದ ಮಾಧವನ ಮಗ ಹೇಳುತ್ತಾನೆ ಯಾರು ಯಾರಿಗೂ ಸಾರಿ ಹೇಳುವ ಅಗತ್ಯ ಇಲ್ಲ ಎಂದು ಹೇಳುತ್ತಾನೆ

  ವರದಕ್ಷಿಣೆ ಕಿರುಕುಳದ ನಾಟಕವಾಡಿದ ಸಂಧ್ಯಾ

  ವರದಕ್ಷಿಣೆ ಕಿರುಕುಳದ ನಾಟಕವಾಡಿದ ಸಂಧ್ಯಾ

  ಇನ್ನು ಸಂಧ್ಯಾ ತವರು ಮನೆಗೆ ಓಡಿ ಬರುತ್ತಾಳೆ ನನಗೆ ವರದಕ್ಷಿಣೆ ಕಾಟ ಕೊಡುತ್ತಾ ಇದ್ದಾರೆ ನನ್ನನ್ನು ಮನೆಯಿಂದ ಹೊರಗೂ ಹಾಕಿದ್ದಾರೆ ದಯಮಾಡಿ ನನ್ನನ್ನು ಮನೆಗೆ ಕರೆದುಕೋ ಎಂದು ತಾಯಿ ಬಳಿ ಹೇಳುತ್ತಾಳೆ ಇದನ್ನು ಕೇಳಿದ ತುಳಸಿ, ಇವತ್ತು ತಾತಾ ಬೇರೆ ಮನೆಯಲ್ಲಿ ಇದ್ದಾರೆ ಏನು ಮಾಡಲಿ ನಾನು ಎಂದು ಯೋಚನೆ ಮಾಡುತ್ತಾ ಇರುತ್ತಾಳೆ.

  ಜುಗ್ಗನಿಗೆ ಕರೆ ಮಾಡಿ ಹೆಸರಿಸಿದ ಸಿರಿ

  ಜುಗ್ಗನಿಗೆ ಕರೆ ಮಾಡಿ ಹೆಸರಿಸಿದ ಸಿರಿ

  ಈ ವೇಳೆ ಅಲ್ಲಿಗೆ ಸಿರಿ ಬರುತ್ತಾಳೆ ಆಕೆ ನೇರವಾಗಿ ಮನೆಯ ಒಳಗೆ ಹೋಗಿ ಜುಗ್ಗನಿಗೆ ಕರೆ ಮಾಡುತ್ತಾಳೆ, ನಾವು ಮಹಿಳಾ ರಕ್ಷಣೆ ಕಡೆಯಿಂದ ಫೋನ್ ಮಾಡುತ್ತಾ ಇದ್ದೇವೆ. ಮಹಿಳಾ ದೌರ್ಜನ್ಯಕ್ಕೆ ಶಿಕ್ಷೆ ಏನು ಗೊತ್ತಾ ಮೂರು ವರ್ಷ ಜೈಲಿನಲ್ಲಿ ರಾಗಿ ಬೀಸಬೇಕು ಎಂದು ಹೇಳಿದಾಗ ಭಯಗೊಂಡ ಜುಗ್ಗ ಇಲ್ಲ ಮೇಡಂ ನಾವು ಏನೂ ಮಾಡಿಲ್ಲ, ಹಣೆಗೆ ಸುಮ್ಮನೆ ಪ್ಲಾಸ್ಟರ್ ಅಂಟಿಸಿದ್ದಾರೆ ನಾನು ಈಗಿನಿಂದ ಈಗಲೇ ಅವಳನ್ನು ಕರೆದುಕೊಂಡು ಹೋಗಲು ಬರುತ್ತೇನೆ ಎಂದು ಹೇಳಿ ದತ್ತನ ಮನೆಗೆ ಓಡಿ ಬರುತ್ತಾನೆ ಜುಗ್ಗ.

  ಸಿರಿಯ ಜಾಣತನ ನೋಡಿ ಖುಷಿಯಾದ ದತ್ತ

  ಸಿರಿಯ ಜಾಣತನ ನೋಡಿ ಖುಷಿಯಾದ ದತ್ತ

  ಅಷ್ಟರಲ್ಲಿ ಆಗಲೇ ಸಂಧ್ಯಾ ತಾತಾ ನ ಕಾಲಿಗೂ ಬಿದ್ದಿರುತ್ತಾರೆ. ಇನ್ನೂ ಅಲ್ಲಿಗೆ ಬಂದ ಜುಗ್ಗ ಸಂಧ್ಯಾಳನ್ನು ಮನೆಗೆ ಕರೆದುಕೊಂಡು ಹೋಗುತ್ತಾಳೆ. ಮಾವ ಏನಾಯಿತು ಎಂದು ದಾರಿ ಉದ್ದಕ್ಕೂ ಕೇಳುತ್ತಾ ಬರುತ್ತಾಳೆ ಸಂಧ್ಯಾ ಆದರೆ ಜುಗ್ಗ ಮಾತ್ರ ಅದಾವುದಕ್ಕೂ ಉತ್ತರ ಕೊಡದೆ ಬಾ ಅಮ್ಮ ಮನೆಗೆ ಎಂದು ಹೇಳಿ ಕರೆದುಕೊಂಡು ಹೋಗುತ್ತಾನೆ. ಸಂಧ್ಯಾ, ಜುಗ್ಗ ಹೋದ್ದ ಬಳಿಕ ಸಮರ್ಥ್ ಮನೆಯ ಒಳಗೆ ಹೋಗುತ್ತಾನೆ. ಇನ್ನು ದತ್ತ ಮಾತ್ರ ಸಿರಿಯನ್ನು ನೋಡಿ ಬಾರಿ ಚಾಲಾಕಿ ಇದ್ದಾಳೆ. ನಾನು ಹುಷಾರಾಗಿ ಇರಬೇಕು ಎಂದು ಮನದಲ್ಲಿ ಯೋಚನೆ ಮಾಡುತ್ತಾ ಇರುತ್ತಾನೆ.

  English summary
  Kannada serial Sri Rastu Shubha mastu written updated on 15th December episode. Know more about it.
  Friday, December 16, 2022, 16:37
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X