Srirastu Subhamastu Serial : ತುಳಸಿ ಮನೆ ಮುಂದೆ ಸಿರಿ ಪ್ರತ್ಯಕ್ಷ: ಸಿರಿ ಕಂಡು ತುಳಸಿಗೆ ಶಾಕ್‌?

By ಪೂರ್ವ

'ಶ್ರೀ ರಸ್ತು ಶುಭ ಮಸ್ತು' ಧಾರವಾಹಿ ಚೆನ್ನಾಗಿ ಮೂಡಿ ಬರುತ್ತಿದ್ದು ನೋಡುಗರ ಗಮನ ಸೆಳೆಯುತ್ತಿದೆ. ಇದೀಗ ಸಮರ್ಥ್, ಸಿರಿಯನ್ನು ನೋಯಿಸಿ ಬಿಟ್ಟೆನಲ್ಲ ಎಂದು ಬೇಸರ ಮಾಡಿಕೊಳ್ಳುತ್ತಾ ಇರುತ್ತಾನೆ. ಆ ವೇಳೆ ಸಿರಿಗೆ ಬೇರೆಯವರ ಬಳಿ ಕರೆ ಮಾಡಿ ಸಮರ್ಥ್ ಗೆ ಆಪಘಾತ ಆಗಿದೆ ಎಂದಾಗ ಸಿರಿ ಓಡೋಡಿ ಆಫೀಸ್ ಬಳಿ ಬಂದಾಗ ಸಮರ್ಥ್ ಆಕೆಗಾಗಿ ಸರ್ಪ್ರೈಸ್ ಕೊಡ್ತಾನೆ. ಇದನ್ನು ನೋಡಿದ ಸಿರಿಗೆ ಕೊಂಚ ಸಮಾಧಾನ ಆದರೂ ಸಮರ್ಥ್ ಮೇಲೆ ಕೊಂಚ ಬೇಸರ ಮಾಡಿಕೊಳ್ಳುತ್ತಾಳೆ.

ಬಳಿಕ ಸಮರ್ಥ್ ಮಾಡಿದ ಸಣ್ಣ ತಪ್ಪನ್ನು ಮನ್ನಿಸಿ ಆತನನ್ನು ಆಲಿಂಗಿಸುತ್ತಾಳೆ. ಇನ್ನು ಈ ವೇಳೆ ತಾನೇ ನಿನ್ನ ಮನೆಗೆ ಬಂದು ಮದುವೆ ಮಾತುಕತೆ ಆಡಿ ಬಿಡುತ್ತೇನೆ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಸಮರ್ಥ್ ಕೊಂಚ ಶಾಕ್ ಆದರೂ ಬಳಿಕ ಸಮಾಧಾನ ಮಾಡಿಕೊಂಡು ಆಯಿತು ಎಂದು ಒಪ್ಪಿಗೆ ನೀಡುತ್ತಾನೆ. ಇನ್ನು ಮನೆಗೆ ಬಂದ ತುಳಸಿ, ಮಾವನ ಬಳಿ ಅದೆಷ್ಟು ಬಾರಿ ಕ್ಷಮೆ ಕೇಳಿದರು ಆತ ಮಾತ್ರ ತುಳಸಿ ಮಾಡಿದ್ದು ತಪ್ಪು ಅನ್ನುವ ಹಾಗೆಯೇ ನಡೆದುಕೊಳ್ಳುತ್ತಾರೆ.

ಇತ್ತ ಸಂಧ್ಯಾ ಮನೆಗೆ ಬಂದಿರುವುದು ನನಗೆ ತುಳಸಿ ಹೇಳೆ ಇಲ್ಲ ಅಲ್ವಾ ಎಂದು ಯೋಚನೆ ಮಾಡುತ್ತಾನೆ. ಆದರೂ ಸ್ನಾನ ಮಾಡಿ ದೇವರ ಬಳಿ ಆರತಿ ಮಾಡುವಾಗ, ಸಮರ್ಥ್‌ನ ಮದುವೆ ವಿಚಾರದಲ್ಲಿ ನೀನು ಮೂಗು ತೂರಿಸಬೇಡ ನಾನೇ ಮಾತನಾಡುತ್ತೇನೆ. ನಾನೇ ಹುಡುಗಿ ಹುಡುಕುತ್ತೇನೆ ಎಂದು ಹೇಳುತ್ತಾನೆ ಇದನ್ನು ಕೇಳಿದ ತುಳಸಿ ಆಯಿತು ಎಂದು ಒಪ್ಪಿಗೆ ಸೂಚಿಸುತ್ತಾಳೆ.

ಸಮರ್ಥ್ ಮದುವೆ ನಿರ್ಧಾರ ದತ್ತನ ಕೈಲಿ

ಸಮರ್ಥ್ ಮದುವೆ ನಿರ್ಧಾರ ದತ್ತನ ಕೈಲಿ

ಮನೆಗೆ ಬಂದ ಸಮರ್ಥ್ ಅಮ್ಮನ ಬಳಿ, ಅಮ್ಮ ನಿನ್ನ ಬಳಿ ನಾನು ಹೇಳಿದೆ ತಾನೇ ನಾನು ಕರೆದುಕೊಂಡು ಬಂದ ಹುಡುಗಿ ಈ ಮನೆ ಸೊಸೆ ಎಂದು ಹೇಳುತ್ತೇನೆ ಎಂದು, ಅದಕ್ಕೆ ತುಳಸಿ ಹೇಳುತ್ತಾಳೆ ಹೌದು ಆದರೆ ನಿನ್ನ ತಾತ ಅವರು ತೋರಿಸಿದ ಹುಡುಗಿನ ಮದುವೆ ಆಗಬೇಕು ಎಂದು ಹೇಳುತ್ತಾ ಇದ್ದಾರೆ ಅಂದ ಕೂಡಲೇ ಸಮರ್ಥ್‌ಗೆ ಕೋಪ ಬರುತ್ತದೆ. ಬಳಿಕ ಅಮ್ಮನ ಬಳಿ ಹೇಳುತ್ತಾನೆ, ನೀವು ಹೀಗೆ ಆಡಿದಕ್ಕೆ ನನಗೆ ಒಂದೊಂದು ಸಲ ಆ ಸಂಧ್ಯಾ ಮಾಡಿದ್ದೆ ಸರಿ ಅನ್ನಿಸುತ್ತದೆ ಎಂದು ಹೇಳುತ್ತಾನೆ. ಇದನ್ನು ಕೇಳಿದ ತುಳಸಿಗೆ ಕೊಂಚ ನೋವಾಗುತ್ತದೆ.

ತುಳಸಿ ವಿರುದ್ಧ ಮಗಳನ್ನು ಎತ್ತಿಕಟ್ಟಿದ ಜುಗ್ಗ

ತುಳಸಿ ವಿರುದ್ಧ ಮಗಳನ್ನು ಎತ್ತಿಕಟ್ಟಿದ ಜುಗ್ಗ

ಇನ್ನು ಜುಗ್ಗಗೆ ತಿಳಿಯುತ್ತೆ ತನ್ನ ಮಗಳನ್ನು ತಪ್ಪಿಯೂ ದತ್ತ ಮನೆ ಸೊಸೆ ಮಾಡಿಕೊಳ್ಳಲ್ಲ. ನಮಗೆ ಆ ಜಾಗಾನು ಸಿಗಲ್ಲ ಎಂದು ಯೋಚನೆ ಮಾಡುತ್ತಾ ಇರುತ್ತಾನೆ. ಇನ್ನು ಸೊಸೆಯನ್ನು ಆ ಮನೆ ವಿರುದ್ದ ಚೂ ಬಿಟ್ಟರೆ ಹೇಗೆ ಎಂದು ಯೋಚನೆ ಮಾಡುತ್ತಾ ಇರುತ್ತಾನೆ. ಬಳಿಕ ಜುಗ್ಗ ಸೊಸೆ ಸಂಧ್ಯಾಳನ್ನು ಕರೆದು,

ಸಂಧ್ಯಾ ಸಂಬಂಧಗಳು ಮುರಿದು ಹೋದರು ಕಾನೂನು ಮುರಿಯಲು ಆಗುತ್ತಾ ನಿಮ್ಮ ಅಮ್ಮನ ಮನೆ ಜಾಗ ಇದೆಯಲ್ಲ. ಆ ಜಾಗದ ಮಾರ್ಕೆಟ್ ವ್ಯಾಲ್ಯೂ ಎರಡು ಕೋಟಿ. ನಿನಗೂ ಆ ಆಸ್ತಿಯಲ್ಲಿ ಅರ್ಧ ಪಾಲಿದೆ. ಆದರೆ ಈ ಬಗ್ಗೆ ಯಾರಾದರೂ ಮಾತನಾಡುತ್ತಿಲ್ಲ. ಅದು ಅಲ್ಲದೆ ನಿಮ್ಮ ಅಮ್ಮ ಕೂಡ ಮಾತನಾಡಿದ್ದಾರಾ ಎಂದು ಜುಗ್ಗ ಹೇಳುತ್ತಾನೆ. ಇದನ್ನು ಕೇಳಿದ ಸಂಧ್ಯಾ ಇಲ್ಲ ಎಂದು ಹೇಳುತ್ತಾರೆ. ಅದಕ್ಕೆ ಚೆನ್ನಾಗಿ ಹೇಳಿದೆ ನೀನು ಮನೆಯ ಒಳಗೆ ಸೇರಿಸೋದಿಲ್ಲ. ಇನ್ನೂ ಇದನ್ನು ಹೇಳುತ್ತಾರ? ಎಂದು ಜುಗ್ಗ ಸಂಧ್ಯಾ ತಲೆಯಲ್ಲಿ ಇಲ್ಲದ ಕೆಟ್ಟ ಯೋಚನೆ ತುಂಬುತ್ತಾರೆ.

ತುಳಸಿ ಮನೆಗೆ ಬಂದ ಸಿರಿ

ತುಳಸಿ ಮನೆಗೆ ಬಂದ ಸಿರಿ

ಇನ್ನು ತುಳಸಿಗೆ ವಿಡಿಯೋ ಕಾಲ್ ಮಾಡಿದ ಸಿರಿ ನಾನಿವತ್ತು ಹುಡುಗನ ಮನೆಗೆ ಹೋಗುತ್ತಾ ಇದ್ದೇನೆ. ಹೇಗೆ ರೆಡಿ ಆಗಲಿ ಎಂದೆಲ್ಲ ಕೇಳಿದಾಗ ತುಳಸಿ ಹೇಳುತ್ತಾಳೆ, ಸಿಂಪಲ್ ಆಗಿ ರೆಡಿ ಆಗು ಸಾಕು ಎಂದೆಲ್ಲ ಹೇಳುತ್ತಾಳೆ. ಇದನ್ನು ಕೇಳಿದ ಸಿರಿ, ತುಳಸಿ ಹೇಳಿದ ಹಾಗೆಯೇ ರೆಡಿ ಆಗಿ ಸಮರ್ಥ್ ಬೈಕ್ ಏರುತ್ತಾಳೆ. ಇನ್ನು ತುಳಸಿಗೆ ಪುನಃ ನಾರ್ಮಲ್ ಕಾಲ್ ಮಾಡಿ ಮಾತನಾಡುತ್ತಾ ಇರುತ್ತಾಳೆ. ಹೂ ಹಣ್ಣು ಇದೆಲ್ಲವನ್ನೂ ತೆಗೆದುಕೊಂಡು ಬರುತ್ತಾಳೆ. ಇನ್ನು ಸಮರ್ಥ್ ಗೆ ಮಾತ್ರ ಮನದಲ್ಲಿ ಭಯ ಶುರು ಆಗುತ್ತದೆ. ಅಡುಗೆ ಕೆಲಸದಲ್ಲಿ ಮಗ್ನ ಆಗಿದ್ದ ತುಳಸಿಗೆ ಬಾಗಿಲು ಬಡಿದ ಶಬ್ದ ಆಗುತ್ತದೆ. ಬಾಗಿಲು ತೆರೆದು ನೋಡಿದಾಗ ತುಳಸಿಗೆ ಶಾಕ್ ಆಗುತ್ತದೆ ಏಕೆಂದರೆ ಮನೆಗೆ ಬಂದಿರುವುದು ಬೇರೆ ಯಾರೂ ಅಲ್ಲ ಸಿರಿ. ಇನ್ನೂ ಸಿರಿ ಮತ್ತು ಸಮರ್ಥ್ ಮದುವೆಗೆ ಗ್ರೀನ್ ಸಿಗ್ನಲ್ ನೀಡುತ್ತಾಳ ತುಳಸಿ ಎಂಬುವುದನ್ನು ಕಾದು ನೋಡಬೇಕಿದೆ.

More from Filmibeat

English summary
Kannada serial Sri Rastu Shubha Mastu written updated on 16th November episode. Know more about it.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X