ಮನೆಗೆ ಬಂದ ಸಿರಿ, ದತ್ತಗೆ ಶುರುವಾಯ್ತು ಅನುಮಾನ! ಹೇಗೆ ನಿಭಾಯಿಸುತ್ತಾಳೆ ತುಳಸಿ

By ಪೂರ್ವ

'ಶ್ರೀ ರಸ್ತು ಶುಭ ಮಸ್ತು' ಧಾರವಾಹಿ ಬಹಳ ಕುತೂಹಲಕಾರಿ ಕತೆಯಿಂದ ಸೆಳೆಯುತ್ತಿದೆ. ಸಿರಿ ಹಾಗೂ ಸಮರ್ಥ್ ತನ್ನ ಪ್ರೀತಿಯನ್ನು ಹೇಗಾದರೂ ಮನೆಯವರಿಗೆ ತಿಳಿಸಲೇ ಬೇಕು ಎಂದುಕೊಂಡು ಸಮರ್ಥ್ ಮನೆಗೆ ಬರುತ್ತಾರೆ. ಈ ವೇಳೆ ಸಿರಿ ಕಾಲಿಂಗ್ ಬೆಲ್ ಒತ್ತುತ್ತಾಳೆ. ಮನೆಯ ಒಳಗೆ ಅಡುಗೆ ಮಾಡುತ್ತಿದ್ದ ತುಳಸಿ ಯಾರೆಂದು ಹೊರಗಡೆ ಬಂದು ನೋಡಿದಾಗ ಆಶ್ಚರ್ಯ. ಸಿರಿ ನಿಂತಿರುವುದನ್ನು ನೋಡಿ ತುಳಸಿಗೆ ಬಹಳ ಆಶ್ಚರ್ಯ ಆಗುತ್ತದೆ.

ನೀನೇನಾ ಸಮರ್ಥ್‌ನ ಪ್ರೀತಿ ಮಾಡುತ್ತಿರುವುದು ಎಂದು ಹೇಳಿದಾಗ ಅತ್ತ ಕಡೆಯಿಂದ ನೀವು ಸಮರ್ಥ್‌ನ ತಾಯಿಯಾ ಎಂದು ಖುಷಿಯಿಂದ ಕೇಳುತ್ತಾಳೆ. ಇದನ್ನು ಕೇಳಿದ ಇಬ್ಬರು ಬಹಳ ಖುಷಿ ಪಡುತ್ತಾರೆ. ಅದೆಷ್ಟು ಬಾರಿ ತುಳಸಿ ತನ್ನ ಸೊಸೆ ಸಿರಿ ಹಾಗೆಯೇ ಇರಲಿ ಎಂದು ಆಸೆ ಪಟ್ಟಿದ್ದೇನೋ ಎಂದು ಹೇಳಿ ಖುಷಿ ಪಡುತ್ತಾಳೆ. ಇನ್ನು ಇದನ್ನೆಲ್ಲ ನೋಡಿದ ಸಮರ್ಥ್‌ಗೆ ಮಾತ್ರ ಏನು ಅರ್ಥ ಆಗದೆ ನಿಂತು ನೋಡುತ್ತಾನೆ. ಇನ್ನು ಸಮರ್ಥ್‌ನನ್ನು ಜೋರಾಗಿ ಕರೆಯುತ್ತಾಳೆ ತುಳಸಿ. ಪಾಪು ಎಂದು ಕರೆದಾಗ ಸಿರಿ ಮನದಲ್ಲಿ ಏನು ಪಾಪುನಾ ಎಂದುಕೊಳ್ಳುತ್ತಾ ಮೆತ್ತಗೆ ನಗುತ್ತಾಳೆ.

ಇದನ್ನೆಲ್ಲ ನೋಡಿದ ಸಮರ್ಥ್, ಅಮ್ಮನ ಬಳಿ ಬಂದು ತಾತಾ ಎಂದು ಬೇಸರದಿಂದ ಪ್ರಶ್ನೆ ಮಾಡುತ್ತಾನೆ. ಅದಕ್ಕೆ ತುಳಸಿ, ತಾತಾ ಮನೆಯಲ್ಲಿ ಇಲ್ಲ ಹೊರಗೆ ಹೋಗಿದ್ದಾರೆ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಸಮರ್ಥ್ ಗೆ ಕೊಂಚ ಸಮಾಧಾನ ಆಗುತ್ತದೆ. ಮನೆಯ ಒಳಗೆ ಬಲ ಗಾಲಿಟ್ಟು ಒಳಗೆ ಬರಲು ಹೇಳುತ್ತಾಳೆ. ಮನೆಗೆ ಬಂದ ಸಿರಿಯನ್ನು ಕಂಡು ಖುಷಿ ಪಡುತ್ತಾಳೆ ತುಳಸಿ. ಬಳಿಕ ಸಮರ್ಥ್, ಅಮ್ಮ ಇವಳನ್ನೇ ನಿಮಗೆ ಮೀಟ್ ಮಾಡಲು ಕರೆದುಕೊಂಡು ಮಾಲ್‌ಗೆ ಹೋಗಿದ್ದು ಎಂದು ಹೇಳುತ್ತಾನೆ. ಆಗ ಸಿರಿ ಹೇಳುತ್ತಾಳೆ ನಗುತ್ತಾ, ನನಗೆ ಮಾಲ್ ನಲ್ಲಿ ಸಿಕ್ಕ ಗೆಳತಿ ಇವರೇ ಎಂದು ಹೇಳುತ್ತಾಳೆ.t

ತುಳಸಿ ಸಿರಿ ಸ್ನೇಹದ ಬಗ್ಗೆ ತಿಳಿದ ಸಮರ್ಥ್

ತುಳಸಿ ಸಿರಿ ಸ್ನೇಹದ ಬಗ್ಗೆ ತಿಳಿದ ಸಮರ್ಥ್

ಇದನ್ನು ಕೇಳಿದ ತುಳಸಿ, ನಾನು ಗಂಟೆ ಗಟ್ಟಲೆ ಮಾತನಾಡುವ ಗೆಳತಿ ಈಕೆ ಎಂದು ಸಿರಿಯತ್ತ ತೋರಿಸುತ್ತಾರೆ. ಇದನ್ನು ಕೇಳಿದ ಸಮರ್ಥ್ ಗೆ ಬಹಳ ಆಶ್ಚರ್ಯ ಆಗುತ್ತದೆ. ಈ ವೇಳೆ ದತ್ತ ಆತನ ಗೆಳೆಯನ ಜೊತೆ ವಾಕಿಂಗ್ ಮಾಡುತ್ತಾ ಇರಬೇಕಾದರೆ ಆತನ ಗೆಳೆಯ ಎಡವುತ್ತಾನೆ. ಇದನ್ನು ಕಂಡ ದತ್ತ ಹೇಳುತ್ತಾನೆ ಬಹಳ ಹುಷಾರಾಗಿ ಇರು. ಆ ಒಡೆದ ಕನ್ನಡಕವನ್ನು ಹಾಕಬೇಡ ಎಂದು ಎಷ್ಟು ಹೇಳಿದರೂ ಕೇಳುತ್ತಿಲ್ಲ ನೀನು. ತಗೋ ಹಣ ಸರಿ ಮಾಡು ಎಂದು ಹೇಳಿದಾಗ ದತ್ತನ ಗೆಳೆಯ ಹೇಳುತ್ತಾನೆ.

ಸೊಸೆ ಬಗ್ಗೆ ದತ್ತನದ್ದು ನಿಕೃಷ್ಟ ನಿಲುವು

ಸೊಸೆ ಬಗ್ಗೆ ದತ್ತನದ್ದು ನಿಕೃಷ್ಟ ನಿಲುವು

ಹಣ ಬೇಡ ನನ್ನ ಸೊಸೆ ಸರಿ ಮಾಡಿಸುತ್ತೇನೆ ಎಂದು ಹೇಳಿದ್ದಾಳೆ ಸರಿ ಪಡಿಸುತ್ತಾಳೆ ಬಿಡು ಎಂದು ಹೇಳುತ್ತಾನೆ ಇದನ್ನು ಕೇಳಿದ ದತ್ತ ಹೇಳುತ್ತಾನೆ ಯಾರು ನಿನ್ನ ಆ ಮಿಟಿಕ್ ಲಾಡಿ ಸೊಸೆನಾ ನಾನು ನೋಡಿದ್ದೇನೆ ಸುಮ್ಮನಿರಿ ಎಂದು ಹೇಳುತ್ತಾನೆ. ಬಳಿಕ ಹಣ ಕೊಟ್ಟು ಕನ್ನಡಕ ಸರಿ ಮಾಡಲು ಹೇಳುತ್ತಾನೆ. ಇತ್ತ ಕಡೆ ಸಿರಿ ತಡಮಾಡದೆ ಕೈ ಯಲ್ಲಿ ಇದ್ದ ತಾಂಬೂಲವನ್ನು ಕೊಡುತ್ತಾಳೆ ಅದರಲ್ಲಿ ಅರಶಿನ ಕೊಂಕುಮ ಇದ್ದಿದ್ದನ್ನು ನೋಡಿ ತುಳಸಿ ಖುಷಿ ಪಡುತ್ತಾಳೆ.

ತುಳಸಿಗೆ ಅರಿಶಿಣ ಕುಂಕುಮ ನೀಡಿದ ಸಿರಿ

ತುಳಸಿಗೆ ಅರಿಶಿಣ ಕುಂಕುಮ ನೀಡಿದ ಸಿರಿ

ಅದನ್ನು ದೇವರ ಮುಂದೆ ಇಡು ಎಂದು ತುಳಸಿ ಹೇಳುತ್ತಾಳೆ. ಹಾಗೆಯೇ ದೇವರ ಬಳಿ ಇಡುತ್ತಾಳೆ ಸಿರಿ. ಬಳಿಕ ತುಳಸಿ ಬಳಿ ಬಂದ ಸಿರಿ ಮೈಸೂರು ಪಾಕ್ ಅನ್ನು ಕೊಡುತ್ತಾಳೆ ಬಳಿಕ ಸೀರೆಯನ್ನು ಕೊಡುತ್ತಾಳೆ. ಬಹಳ ಆದರದಿಂದ ಆಕೆಗೆ ಆತಿಥ್ಯವನ್ನು ನೀಡುತ್ತಾಳೆ ತುಳಸಿ. ಬಳಿಕ ಸಮರ್ಥ್‌ನ ಜೊತೆ ಸಿರಿಯನ್ನು ಕಳುಹಿಸಿ ಕೊಡುತ್ತಾನೆ. ಸ್ವಲ್ಪ ಹೊತ್ತಿನ ಬಳಿಕ ಮನೆಗೆ ಬಂದ ದತ್ತ ತುಳಸಿ ಬಳಿ ಯಾರಾದರೂ ಮನೆಗೆ ಬಂದಿದ್ದರಾ ಎಂದು ಕೇಳುತ್ತಾನೆ. ಆ ವೇಳೆ ತುಳಸಿ ಯಾರು ಬಂದಿಲ್ಲ ಎಂದು ಹೇಳುತ್ತಾಳೆ.

ದತ್ತನಿಗೆ ಬಂತು ಅನುಮಾನ

ದತ್ತನಿಗೆ ಬಂತು ಅನುಮಾನ

ಆದರೆ ಮೈಸೂರು ಪಾಕ್‌ನ ಘಮ ಬಂತು ಯಾರೋ ಬಂದಿದ್ದಾರೆ ಅನ್ನಿಸುತ್ತಿದೆ. ಆ ಜುಗ್ಗ ಏನಾದರು ವಾಪಸ್ ಬಂದ್ನಾ ಎಂದು ಕೇಳುತ್ತಾನೆ. ಇದನ್ನು ಕೇಳಿದ ತುಳಸಿ ಇಲ್ಲ ಎಂದು ಹೇಳಿ ತಿಂಡಿ ಮಾಡಿಕೊಂಡು ಬರುತ್ತೇನೆ ಎಂದು ಹೇಳಿ ಅಲ್ಲಿಂದ ತೆರಳುತ್ತಾಳೆ. ಬಳಿಕ ಮನದಲ್ಲಿ ವಿಧಿ ಇಲ್ಲದೆ ಮಾವನಿಗೆ ಸುಳ್ಳು ಹೇಳಿದೆ ಎಂದು ಮನದಲ್ಲಿ ಬೇಸರ ಮಾಡಿಕೊಳ್ಳುತ್ತಾ ಇರುತ್ತಾಳೆ. ಬಳಿಕ ಸಿರಿ ಬಳಿ ಮಾತನಾಡುತ್ತಾ, ಅಮ್ಮ ಸಿರಿ ಮನೆಗೆ ತಲುಪಿದೆಯ, ನೀನು ಇವತ್ತು ಬಂದಿದ್ದು ನನಗೆ ಬಹಳ ಖುಷಿ ಆಯಿತು ಎನ್ನುತ್ತಾಳೆ. ಪುಟ್ಟ ನಿನ್ನನ್ನು ನೋಡಿದಾಗಲೆಲ್ಲಾ ನಿನ್ನಂತ ಸೊಸೆ ಸಿಕ್ಕಿದರೆ ಎಷ್ಟು ಚೆನ್ನಾಗಿ ಇರುತ್ತಿತ್ತು ಎಂದು ಅಂದುಕೊಳ್ಳುತ್ತಿದ್ದೆ ಇವತ್ತು ನೀನಾಗಿ ನೀನೇ ಮನೆಗೆ ಬಂದು ಬಿಟ್ಟೆ. ಎಂದು ಹೇಳಿ ಖುಷಿ ಪಡುತ್ತಾಳೆ. ಮುಂದೇನು ಕಾದು ನೋಡಬೇಕಿದೆ.

More from Filmibeat

English summary
Kannada serial Sri Rastu Shubha Mastu written updated on 17th November episode. Know more about it.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X