Don't Miss!
- News
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪತ್ರ ನಕಲಿ ಎಂದ ಸಿದ್ದರಾಮಯ್ಯ.! ಆ ಪತ್ರದಲ್ಲಿ ಏನಿದೆ.?
- Sports
IND-W vs SA-W T20 Tri-series Final: ಭಾರತ ವನಿತೆಯರ ವಿರುದ್ಧ ದಕ್ಷಿಣ ಆಫ್ರಿಕಾಗೆ ಜಯ
- Lifestyle
ಮಗುವಿಗೆ ತುಂಬಾ ಜ್ವರ ಇದ್ದಾಗ ಏನು ಮಾಡಬೇಕು?
- Finance
6 ತಿಂಗಳಲ್ಲಿ 2ನೇ ಬಾರಿಗೆ ಉದ್ಯೋಗಿಗಳನ್ನು ವಜಾಗೊಳಿಸಿದ Byju's: ಈ ಬಾರಿ ಎಷ್ಟು ನೌಕರರು?
- Automobiles
ಭಾರತದಲ್ಲಿ ಮಾರುತಿ ಜಿಮ್ನಿ ಎಸ್ಯುವಿಗೆ ಭಾರೀ ಡಿಮ್ಯಾಂಡ್: ಪ್ರತಿಸ್ಪರ್ಧಿಗಳಿಗೆ ಹೆಚ್ಚಿದ ಆತಂಕ
- Technology
ಮಾರುಕಟ್ಟೆಗೆ ಎಂಟ್ರಿ ಕೊಟ್ಟ ವಾಯರ್ಲೆಸ್ ಚಾರ್ಜಿಂಗ್ ಬೆಂಬಲಿಸುವ ಸ್ಮಾರ್ಟ್ವಾಚ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ತುಳಸಿ ಮನಬಾಗಿಲಿಗೆ ಬಂದ ಮಾಧವ: ಮುಂದೇನು?
'ಶ್ರೀ ರಸ್ತು ಶುಭ ಮಸ್ತು' ಧಾರಾವಾಹಿ ಚೆನ್ನಾಗಿ ಮೂಡಿ ಬರುತ್ತಿದ್ದು ನೋಡುಗರ ಮನ ಸೆಳೆಯುತ್ತಿವೆ. ಇದೀಗ ತುಳಸಿ ಮನೆಗೆ ಮಾಧವನ ಆಗಮಿಸಿದ್ದಾನೆ. ತುಳಸಿ ಮನೆಗೆ ಮೆತ್ತಗೆ ನಂದಿನಿ ಕೂಡ ಬರುತ್ತಾಳೆ ಈ ವೇಳೆ ತುಳಸಿಯನ್ನು ನೋಡಿ ಆಂಟಿ ನನಗೂ ಪುಳಿಯೋಗರೆ ಹೇಳಿ ಕೊಡುತ್ತಿರಾ ನನಗೆ ನಿಮ್ಮ ಹಾಗೆಯೆ ಪುಳಿಯೋಗರೆ ಮಾಡಬೇಕು ಎಂದು ಆಸೆ ಆದರೆ ನಿಮ್ಮ ಹಾಗೆ ಮಾಡಲು ನನ್ನಿಂದ ಸಾಧ್ಯ ಇಲ್ಲ ಎಂದು ಹೇಳುತ್ತಾಳೆ ಇದನ್ನು ಕೇಳಿದ ತುಳಸಿ ಇಲ್ಲ ಮಾಡಬಹುದು ಅಮ್ಮ ಎಂದು ಹೇಳುತ್ತಾಳೆ.
ಇನ್ನು ನಂದಿನಿ, ತುಳಸಿ ಬಳಿ ಇನ್ನೊಮ್ಮೆ ಪುಳಿಯೋಗರೆ ಗೊಜ್ಜು ಮಾಡಿ ಅಮ್ಮ ನಾನು ಅದನ್ನು ವಿಡಿಯೋ ಮಾಡಿಕೊಳ್ಳುತ್ತೇನೆ ಎಂದು ಹೇಳುತ್ತಾಳೆ. ಆ ವೇಳೆ ಕಾಲಿಂಗ್ ಬೆಲ್ ಆಗುತ್ತದೆ. ಇದನ್ನು ನೋಡಿದ ತುಳಸಿ ಬಾಗಿಲು ತೆಗೆಯಲು ಹೋಗುತ್ತಾಳೆ, ಆದರೆ ತುಳಸಿಯನ್ನು ತಡೆದ ನಂದಿನಿ ತಾನೇ ಬಾಗಿಲು ತೆಗೆದು ನೋಡುವಾಗ ಮಾಧವ ಹೊರಗೆ ನಿಂತಿರುತ್ತಾನೆ. ಇದನ್ನು ಕಂಡು ನಂದಿನಿ ವಿಚಾರಣೆ ಮಾಡಿದಾಗ ಕ್ಯಾಮೆರಾದ ಬಗ್ಗೆ ವಿಚಾರಣೆ ಮಾಡುತ್ತಾನೆ. ಇದನ್ನು ನೋಡಿದ ನಂದಿನಿ ಹಾಗೇನೂ ಇಲ್ಲ ಎಂದು ಹೇಳುತ್ತಾಳೆ ಈ ವೇಳೆ ಪುಳಿಯೋಗರೆ ಘಮ ಮಾಧವನ ಮೂಗಿಗೆ ಬಡಿಯುತ್ತದೆ.

ತುಳಸಿ ಮನೆಗೆ ಬಂದ ನಂದಿನಿ
ನಂದಿನಿ ನನಗೆ ಪುಳಿಯೋಗರೆ ಮಾಡಿಕೊಡುತ್ತಿರಾ ನನ್ನ ಸೊಸೆಗೆ ಪುಳಿಯೋಗರೆ ತಿನ್ನಬೇಕು ಅನ್ನಿಸಿದೆ ನನಗೆ ಪುಳಿಯೋಗರೆ ಕೊಡುತ್ತೀರಾ ನಾನು ಇಲ್ಲಿಯೇ ಕಾಯುತ್ತೇನೆ ಎಂದು ಹೇಳುತ್ತಾನೆ. ಇದನ್ನು ಕೇಳಿದ ನಂದಿನಿಗೆ ಗಾಬರಿ ಆಗುತ್ತದೆ. ಬಳಿಕ, ಈಗ ಬೇಡ ಸರ್ ನಾನು ನಿಮ್ಮ ಹೋಟೆಲ್‌ಗೆ ಬರುತ್ತೇನೆ ಅಲ್ಲಿಯೇ ಮಾಡಿಕೊಡುತ್ತೇನೆ ಎಂದು ಹೇಳಿದಾಗ ಮಾಧವ ಅದಕ್ಕೆ ಒಪ್ಪಿಕೊಳ್ಳುತ್ತಾನೆ. ಮಾಧವ ಹೋದ ಬಳಿಕ ಬಂದ ತುಳಸಿ ಯಾರು ನಂದಿನಿ ಬಂದಿದ್ದು ಎಂದು ಕೇಳಿದಾಗ ಗೊತ್ತಿಲ್ಲ ಆಂಟಿ ಯಾರೋ ಬಂದಿದ್ದರು ಎಂದು ಮಾತು ಮರೆಸುತ್ತಾಳೆ.

ಮಾಧವನ ಹೋಟೆಲ್‌ಗೆ ಬಂದ ಸಿರಿ
ಇನ್ನು ಸಿರಿ ಮಾತ್ರ ತಂದೆಯ ಬಳಿ ಹೇಳುತ್ತಾಳೆ ಅಪ್ಪ ನಾನು ಇವತ್ತು ಹೊರಗೆ ಊಟಕ್ಕೆ ಹೋಗುತ್ತಾ ಇದ್ದೇನೆ ನನ್ನ ಬ್ಯಾಗ್‌ನಲ್ಲಿ ಪುಳಿಯೋಗರೆ ಇದೆ ಅದನ್ನು ನೀವೇ ತಿನ್ನಿ ಎಂದು ಹೇಳಿ ಅಲ್ಲಿಂದ ಹೋಗುತ್ತಾಳೆ. ಬಳಿಕ ಮಾಧವನ ಹೋಟೆಲ್‌ಗೆ ಬಂದ ಸಿರಿ ಸಮರ್ಥ್ ಬರುವಿಕೆಗೆ ಕಾಯುತ್ತಾ ಇರುತ್ತಾಳೆ.

ಪೂರ್ಣಿಮಾಗೆ ಸಿರಿ ಸಹಾಯ
ಈ ವೇಳೆ ಅಲ್ಲಿಗೆ ಪೂರ್ಣಿಮಾ ಬರುತ್ತಾಳೆ ಸ್ಟೆಪ್ ಇಳಿದು ಮೆತ್ತಗೆ ಬರುವಾಗ ಪೂರ್ಣಿಮಾಗೆ ಸಿರಿ ಸಹಾಯ ಮಾಡುತ್ತಾಳೆ. ಬಳಿಕ ಒಂದು ಖುರ್ಚಿಯಲ್ಲಿ ಕುಳ್ಳಿರಿಸಿದ ಸಿರಿ ಹೇಳುತ್ತಾಳೆ. ಇದೂ ನನಗೆ ಬಹಳ ಫೇವರೆಟ್ ಜಾಗ ನನಗೆ ಬಹಳ ಇಷ್ಟ ಆದ ಜಾಗ ಕೂಡ. ನಿಮಗೂ ಕೂಡ ಇಷ್ಟಾನಾ ಈ ಜಾಗ ಎಂದೆಲ್ಲ ಹೇಳಿ ಒಂದೇ ಸಮನೆ ಮಾತನಾಡುತ್ತಾಳೆ. ಇದನ್ನು ಕೇಳಿದ ಪೂರ್ಣಿಮಾಗೆ ಬಹಳ ಖುಷಿ ಆಗುತ್ತದೆ. ಅಲ್ಲಿಗೆ ಬಂದ ಮಾಧವ ಅರೆ ಪೂರ್ಣಿಮಾ ನೀನು ಯಾವಾಗ ಬಂದೆ ಎಂದೆಲ್ಲ ಹೇಳಿ ಸಿರಿಗೆ ಪರಿಚಯ ಮಾಡಿಸುತ್ತಾನೆ ಮಾಧವ. ಪೂರ್ಣಿಮಾ ನನ್ನ ಸೊಸೆ ಎಂದು ಹೇಳಿದಾಗ ಸಿರಿ ಗೆ ಶಾಕ್ ಆಗುತ್ತದೆ. ಬಳಿಕ ಅವರ ಬಳಿ ಪ್ರೀತಿ ಯಿಂದ ಮಾತನಾಡುತ್ತಾಳೆ. ಸಮರ್ಥ್ ಏನು ಇನ್ನೂ ಬಂದಿಲ್ಲ ಎಂದು ಯೋಚನೆ ಮಾಡುತ್ತಾ ಇರುತ್ತಾಳೆ.

ಸಿರಿಗಾಗಿ ಕಾಯುತ್ತಾ ಕುಳಿತ ಸಮರ್ಥ್
ಇತ್ತ ಸಮರ್ಥ್ ಬೇರೆಯೇ ಜಾಗದಲ್ಲಿ ನಿಂತುಕೊಂಡು ಸಿರಿಗಾಗಿ ಕಾಯುತ್ತಾ ಕುಳಿತು ಇರುತ್ತಾನೆ ಆದರೆ ಸಿರಿ ಬಾರದೆ ಇದ್ದಿದ್ದನ್ನು ಕಂಡು ಸೀದಾ ಮನೆಗೆ ಬರುತ್ತಾನೆ ಇದನ್ನು ನೋಡಿದ ತುಳಸಿ ಸಿರಿ ಎಂದು ಹೇಳಿದಾಗ ಸಿಟ್ಟಿನಿಂದ ಕುಳಿತ ಸಮರ್ಥ್ ಹೇಳುತ್ತಾನೆ ಅವಳು ಎಲ್ಲಿ ಊಟಕ್ಕೆ ಬರುತ್ತಾಳೆ ಆಕೆ ನಿನ್ನ ಸೊಸೆ ಅಲ್ವಾ ಆಕೆ ನನ್ನ ಮದುವೆ ಆಗಲು ಬಂದದ್ದು ಅಲ್ಲ ಅವಳು ನಿನಗಾಗಿ ನನ್ನ ಮದುವೆ ಆಗಿದ್ದು ಎಂದು ಹೇಳುತ್ತಾಳೆ. ಇದನ್ನು ಕೇಳಿದ ತುಳಸಿಗೆ ಅರ್ಥ ಆಗುತ್ತದೆ. ಇನ್ನು ಮಾಧವ ನಂದಿನಿಯನ್ನು ಎಲ್ಲರಿಗೂ ಪರಿಚಯಿಸಿ ಪುಳಿಯೋಗರೆ ಟೇಸ್ಟ್ ಮಾಡಲು ಪೂರ್ಣಿಮಾಗೆ ಕೊಡುತ್ತಾರೆ ಪುಳಿಯೋಗರೆ ಟೇಸ್ಟ್ ಮಾಡಿದ ಪೂರ್ಣಿಮಾ, ನೀವು ಮಾಡಿದ ಪುಳಿಯೋಗರೆ ನನಗೆ ಇಷ್ಟ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಮಾಧವ ಸುಮ್ಮನಾಗುತ್ತಾರೆ. ಆದರೆ ಸಿರಿ ಮನದಲ್ಲಿ ಜೋರಾಗಿ ನಗುತ್ತಾಳೆ. ಸಮರ್ಥ್ ಬಾರದೆ ಇರುವುದನ್ನು ಕಂಡು ಸಿರಿ ಇನ್ನೇನು ಮಾಡುತ್ತಾಳೆ ಕಾದು ನೋಡಬೇಕಿದೆ.