ತುಳಸಿಯನ್ನು ಮನೆಯಲ್ಲಿ ಕಾಣದೇ ಪರದಾಡಿದ ದತ್ತ; ತಾತನ ಒದ್ದಾಟ ನೋಡಿ ನಕ್ಕ ಸಮರ್ಥ್

By Poorva

ಮಾಧವ ಹಾಗೂ ತುಳಸಿ ಮಳೆ ನಿಂತ ಬಳಿಕ ತಮ್ಮ ಮನೆಯತ್ತ ಹೊರಡುತ್ತಾರೆ ಈ ವೇಳೆ ದಾರಿಯಲ್ಲಿ ಮಾಧವ ಕೆಲವರಿಗೆ ಮಳೆ ಅಂದರೆ ಬಹಳ ಇಷ್ಟ ಇನ್ನೂ ಕೆಲಸವರಿಗೆ ಕಷ್ಟ ನಿಮಗೂ ಹಾಗೆನಾ ಎಂದು ಕೇಳುತ್ತಾನೆ. ಇದನ್ನು ಕೇಳಿದ ತುಳಸಿ ನನ್ನ ಮಾವನಿಗೆ ಮಳೆಯಲ್ಲಿ ಬಜ್ಜಿ ಬೋಂಡಾ ಮಾಡುವುದು ಇಷ್ಟ . ಪಾಪುಗೆ ಕೂಡ ಇಷ್ಟ, ಅವನಿಗೆ ಕೂಡ ಬಜ್ಜಿ ಬೋಂಡಾ ಮಾಡುತ್ತೇನೆ ಎನ್ನುತ್ತಾಳೆ. ಹೀಗೆ ಮಾತನಾಡಿಕೊಂಡು ಮನೆಯತ್ತ ಹೋಗುತ್ತಾರೆ..

ಇನ್ನು ದತ್ತ ತಾತ ತುಳಸಿ ಯಾಕೆ ಬರಲಿಲ್ಲ ಎಂದು ಆ ಕಡೆ ಈ ಕಡೆ ಓಡಾಡುತ್ತಾ ಇರುತ್ತಾರೆ. ಬಳಿಕ ಸಮರ್ಥ್ ಬಳಿ ಈ ಮನೆಯಲ್ಲಿ ಒಬ್ಬರಿಗಾದರು ಟೈಮ್ ಸೆನ್ಸ್ ಇದೆಯಾ ಹೇಳು, ಎಷ್ಟು ಸಮಯ ಆಯಿತು, ನಮ್ಮ ಮನೆಯ ಸೊಸೆಯ ಪತ್ತೆನೇ ಇಲ್ಲ ಎಂದು ಹೇಳುತ್ತಾರೆ. ಆಗ ಸಮರ್ಥ್ ಯಾಕೆ ಕೋಪ ಮಾಡಿಕೊಂಡಿದ್ದೀರಾ, ಫುಟ್ ಬಾಲ್ ಮ್ಯಾಚ್ ಇದೆ ಅದನ್ನು ನೋಡೋಣ ಎಂದು ಹೇಳುತ್ತಾನೆ. ಇದನ್ನು ಕೇಳಿ ದತ್ತಗೆ ಬಹಳ ಕೋಪ ಬರುತ್ತದೆ. ನಿನ್ನ ಫುಟ್ ಬಾಲ್ ಇರಲಿ ನಾನೇ ಇಲ್ಲಿ ಫುಡ್ ಇಲ್ಲದೆ ಒದ್ದಾಟ ಮಾಡುತ್ತಾ ಇದ್ದೇನೆ ಎಂದಾಗ ಸಮರ್ಥ್ ಅಮ್ಮ ಅಲ್ಲಿ ಊಟ ರೆಡಿ ಮಾಡಿಟ್ಟು ಹೋಗಿದ್ದಾರೆ ಎನ್ನುತ್ತಾನೆ.

ಇದರಿಂದ ಇನ್ನೂ ಕೋಪ ಮಾಡಿಕೊಂಡ ದತ್ತ ಆಗ ಮಾಡಿ ಇಟ್ಟದ್ದು ಈಗ ತಣ್ಣಗೆ ಇರುತ್ತದೆ ಅದನ್ನು ಬಿಸಿ ಮಾಡುವವರು ಯಾರು ಎಂದಾಗ ಸಮರ್ಥ್ ಮೆತ್ತಗೆ ಮಾಡಿ ಇಟ್ಟಿರುವುದನ್ನು ಬಿಸಿ ಮಾಡಲು ಆಗುವುದಿಲ್ಲ ಅಲ್ವಾ ಎಂದು ಹೇಳುತ್ತಾನೆ. ಬಳಿಕ ಸಮರ್ಥ್ ಎದ್ದು ನಾನೇ ಬಿಸಿ ಮಾಡುತ್ತೇನೆ ಎಂದು ಹೇಳಿ ಅಲ್ಲಿಂದ ಹೋಗುತ್ತಾನೆ. ಅದನ್ನು ನೋಡಿದ ದತ್ತ ಕಿಡಿಕಾರುತ್ತಲೇ ಇರುತ್ತಾರೆ.

ಹಳೆಯ ದಿನಗಳ ಮೆಲುಕು ಹಾಕಿದ ಮಾಧವ

ಹಳೆಯ ದಿನಗಳ ಮೆಲುಕು ಹಾಕಿದ ಮಾಧವ

ತುಳಸಿ ತಂದುಕೊಟ್ಟ ಪುಳಿಯೋಗರೆ ಸವಿದ ಮಾಧವ ಈ ಅದ್ಭುತ ಪುಳಿಯೋಗರೆಗಾಗಿ ನಾನು ಎಷ್ಟು ಪರದಾಟ ಮಾಡಿದ್ದೇನೆ ಎಂದೆಲ್ಲ ನಡೆದ ಘಟನೆಗಳನ್ನು ತುಳಸಿ.ಬಳಿ ಹೇಳುತ್ತಾನೆ. ಆಗ ತುಳಸಿ ನಿಮಗೆ ಪುಳಿಯೋಗರೆ ಇಷ್ಟ ಎಂದು ಗೊತ್ತಿದ್ದರೆ ನಾನು ಯಾವತ್ತೋ ಮಾಡಿಕೊಡುತ್ತಾ ಇದ್ದೆ ಎಂದು ಹೇಳುತ್ತಾಳೆ. ಅದಕ್ಕೆ ಮಾಧವ ನನಗೆ ಎಲ್ಲಾ ಪುಳಿಯೋಗರೆ ಇಷ್ಟ ಇಲ್ಲ ನೀವು ಮಾಡಿದ್ದು ಇಷ್ಟ ಎಂದು ಹೇಳುತ್ತಾನೆ. ಅದನ್ನು ಕೇಳಿದ ತುಳಸಿಗೆ ಬಹಳ ಖುಷಿ ಆಗುತ್ತದೆ. ಇನ್ನು ಮಾಧವ ಸರ್ ಖುಷಿ ಆಗಿರುವುದನ್ನು ನೋಡಿದ ಮ್ಯಾಗಿ ಬಹಳ ಖುಷಿ ಪಡುತ್ತಾ ಇರುತ್ತಾಳೆ.

ಸಮರ್ಥ್‌ಗೆ ಚಹಾ ಮಾಡಿಕೊಟ್ಟ ದತ್ತ

ಸಮರ್ಥ್‌ಗೆ ಚಹಾ ಮಾಡಿಕೊಟ್ಟ ದತ್ತ

ಇನ್ನು ದತ್ತ ಸಮರ್ಥ್ ಬಳಿ ಮಾತನಾಡಿಕೊಂಡು ಚಹಾ ಮಾಡುತ್ತಾರೆ. ಇದನ್ನು ನೋಡಿದ ಸಮರ್ಥ್ ಬಹಳ ಖುಷಿ ಪಡುತ್ತಾನೆ. ತಾತನಿಗೆ ಎಲ್ಲಾ ಮಾಡಲು ಬರುತ್ತದೆ, ಆದರೆ ಏನು ತಿಳಿಯದ ಹಾಗೆ ಇರುತ್ತಾರೆ ಎಂದುಕೊಳ್ತಾನೆ. ಬಳಿಕ ಸಮರ್ಥ್ ಗೆ ಟೀ ಸವಿಯಲು ಕೊಡುತ್ತಾನೆ. ತಾತ ಚೆನ್ನಾಗಿ ಮಾಡಿರಬಹುದು ಎಂದು ಹೇಳಿ ಅದನ್ನು ಕುಡಿಯುತ್ತ ಇರುತ್ತಾನೆ. ಆದರೆ ಆ ಟೀ ಕುಡಿದ ಬಳಿಕ ಏನು ತಾತ ಇದೆಲ್ಲ, ಇದು ಟೀನಾ ಅಥವಾ ಏನಿದು ಎಂದು ಹೇಳುತ್ತಾನೆ. ಆದರೆ ದತ್ತ ಬಹಳ ಚೆನ್ನಾಗಿದೆ ಎಂದು ಹೇಳಿ ಕುಡಿಯುತ್ತಾನೆ. ಬಳಿಕ ಸಮರ್ಥ್ ತಾತನ ಬಳಿ ತಾತ ಕಳಗಚ್ಚಿಗಿಂತ ಕೆಟ್ಟದಾಗಿ ಇದೆ ನೀವು ಮಾಡಿದ ಕಾಫಿ ಎಂದಾಗ ದತ್ತ ಹಾಗಾ ಇನ್ನೂ ಮೇಲೆ ನೀನು ಕಲಗಚ್ಚೆ ಕುಡಿ ಎಂದು ಹೇಳುತ್ತಾರೆ.

ಅತ್ತೆಯ ನೆನಪಾಗಿ ಸಿರಿ ಕಂಗಾಲು

ಅತ್ತೆಯ ನೆನಪಾಗಿ ಸಿರಿ ಕಂಗಾಲು

ಬಳಿಕ ದತ್ತ ಆ ಕಡೆ ಮುಖ ಮಾಡಿ ತಾನು ಟೀಯನ್ನು ಕುಡಿದು ವಾಕರಿಕೆ ಬರುವ ಹಾಗೆ ಮಾಡುತ್ತಾನೆ ಹಾಗೂ ಏನು ಆಗಿಯೇ ಇಲ್ಲ ಎಂಬಂತೆ ಇರುತ್ತಾನೆ ಇನ್ನು ಮಳೆ ಮತ್ತಷ್ಟು ಬರುತ್ತದೆ. ಸಿರಿ ಸ್ಕೂಟರ್ ನಲ್ಲಿ ಇರುತ್ತಾಳೆ. ಅಯ್ಯೋ ಅಮ್ಮನನ್ನು ಪಿಕ್ ಮಾಡುತ್ತೇನೆ ಎಂದು ಹೇಳಿದ್ದೆ ಆದರೆ ಮರತೇ ಬಿಟ್ಟೇನಲ್ಲ ಎಂದು ಹೇಳುತ್ತ ಇರುತ್ತಾಳೆ. ಬಳಿಕ ಸಿರಿ ಆಕೆಯ ಫೋನ್ ನೋಡುತ್ತಾ ಅಮ್ಮನಿಗೆ ಕರೆ ಮಾಡಬೇಕು ಎಂದುಕೊಳ್ಳುತ್ತಾ ಇರುವಾಗ ಹೊ ಅಮ್ಮ ಫೋನ್ ಮನೆಯಲ್ಲಿಯೇ ಬಿಟ್ಟಿದ್ದಾರೆ, ನಾನು ಅವರಿಗೆ ಹೇಗೆ ಕರೆ ಮಾಡಲಿ ಎಂದುಕೊಳ್ಳುತ್ತಾಳೆ ಹಾಗೂ ಅತ್ತೆ ಜತೆ ಇದ್ದ ಮಾಧವ ಸರ್ ಗೆ ಕರೆ ಮಾಡುತ್ತಾಳೆ.

ಮಾಧವನಿಗೆ ಕರೆ ಮಾಡಿದ ಸಿರಿ

ಮಾಧವನಿಗೆ ಕರೆ ಮಾಡಿದ ಸಿರಿ

ಆದರೆ ಮಾಧವ ಕರೆಯನ್ನು ಸ್ವೀಕಾರ ಮಾಡಲೇ ಇಲ್ಲ. ಇನ್ನು ಮಳೆಯಲ್ಲಿ ಮಾಧವ ಹಾಗೂ ತುಳಸಿ ಕಾಫಿ ಕುಡಿಯುತ್ತಾ ಇರುತ್ತಾರೆ. ತುಳಸಿ ಮಾಧವನ ಬಳಿ ನಿಮ್ಮ ಮಗ ನಿಮ್ಮ ಬಳಿ ಈ ರೀತಿ ಮಾತನಾಡಿರುವುದು ತಪ್ಪು, ಆದರೆ ಪೂರ್ವಿಗೆ ಗಂಡನೂ ಬೇಕು ತಂದೆಯ ಸ್ಥಾನದಲ್ಲಿ ಇರುವ ನೀವು ಬೇಕು, ಸದ್ಯಕ್ಕೆ ಬೇರೆ ಎಲ್ಲಾ ಯೋಚನೆ ಬಿಟ್ಟು ಬರೀ ಅವಳ ಬಗ್ಗೆ ಮಾತ್ರ ಯೋಚನೆ ಮಾಡಿ, ಅವಳು ಎಲ್ಲವನ್ನೂ ಎದುರಿಸಿ ಮೊದಲಿನ ತರ ಆಗಬೇಕಾದರೆ ಅವಳ ಜೊತೆ ನೀವು ಇರಬೇಕು ಅಂತ ನೀವು ಯೋಚನೆ ಮಾಡಿಲ್ವ ಎನ್ನುತ್ತಾಳೆ. ಈ ಸಮಯದಲ್ಲಿ ಮಾಧವ ನಸು ನಗುತ್ತಾನೆ. ಬಳಿಕ ತುಳಸಿ ಏನಾಯಿತು ಮಾಧವ ಅವರೇ ಎಂದಾಗ ಮಾಧವ ಸಿರಿ ನೀವು ನನ್ನ ಫ್ಯಾನ್ ಅಂತ ಹೇಳಿದಳು, ಆದರೆ ನನಗೆ ಒಂದು ಡೌಟ್ ಆಗುತ್ತಿದೆ, ನೀವು ನನ್ನ ಫ್ಯಾನಾ ಅಥವಾ ನಾನೇ ನಿಮ್ಮ ಫ್ಯಾನಾ ಅಂತ ಎಂದಾಗ ತುಳಸಿಗೆ ಸಂತೋಷ ಆಗುತ್ತದೆ.

More from Filmibeat

English summary
Kannada serial Sri rastu subha mastu written updated on 23th December
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X