Don't Miss!
- News
Jio, Airtel 5G: ಕೇವಲ 4 ತಿಂಗಳಲ್ಲಿ ಎಷ್ಟು ಕೋಟಿ ಗ್ರಾಹಕರು ಗೊತ್ತೇ? ದಾಖಲೆ ಅಂಕಿಅಂಶ- ಮಾಹಿತಿ ಇಲ್ಲಿದೆ
- Sports
KCC Cup 2023: ಯಾವ ತಂಡಕ್ಕೆ ಯಾರು ನಾಯಕ?; ಸುದೀಪ್ ತಂಡದಲ್ಲಿ ಯೂನಿವರ್ಸಲ್ ಬಾಸ್!
- Finance
LIC plan: ದಿನಕ್ಕೆ 83 ರೂ ಹೂಡಿಕೆ ಮಾಡಿ, ಮೆಚ್ಯೂರಿಟಿ ವೇಳೆ 10 ಲಕ್ಷ ರೂ ಪಡೆಯಿರಿ!
- Technology
ವಾಟ್ಸಾಪ್ನ ಈ ಹೊಸ ಫೀಚರ್ಸ್ನಲ್ಲಿ ಏನೆಲ್ಲಾ ಅನುಕೂಲ ಇದೆ ಗೊತ್ತಾ!?
- Automobiles
ಭಾರತದಲ್ಲಿ ದಾಖಲೆ ಮಟ್ಟದ ಬುಕ್ಕಿಂಗ್ ಪಡೆದುಕೊಳ್ಳುತ್ತಿವೆ ಮಾರುತಿ ಜಿಮ್ನಿ, ಫ್ರಾಂಕ್ಸ್
- Lifestyle
ಸಂಗಾತಿ ಸುಮ್-ಸಮ್ಮನೇ ಸಂಶಯ ಪಡುತ್ತಾರಾ? ಅವರ ಸಂಶಯ ಹೋಗಲಾಡಿಸಲು ಏನು ಮಾಡಬೇಕು?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಸಮರ್ಥ್ ಮದುವೆಗೆ ತಾತನೇ ಅಡ್ಡಿ? ಅಯ್ಯೋ ಪಾಪ ತುಳಸಿ!
ಸಮರ್ಥ್ ಇದೀಗ ಆತನ ಬಾಳಿನಲ್ಲಿ ಬಹು ದೊಡ್ಡ ಹೆಜ್ಜೆ ಇಡುತ್ತಿದ್ದಾನೆ ಅದು ಯಾರಿಗೂ ತಿಳಿಸದೆ! ಅಜ್ಜನ ಮಾತು ಕೇಳಿದರೆ ಎಲ್ಲಿ ಸಿರಿಯನ್ನು ಕಳೆದುಕೊಂಡು ಬಿಡುತ್ತೆನೋ ಎಂಬ ಭಯ ಆವರಿಸಿಕೊಂಡಿದೆ. ತಾತನಿಗೆ ಮದುವೆ ವಿಚಾರ ತಿಳಿಸಿದರೆ ನೇಣು ಕುಣಿಕೆಯನ್ನು ತೋರಿಸಿ ಬೇದರಿಸುತ್ತಾರೆ. ನಾನು ಸುಮ್ಮನೆ ಶೋಗೆ ಅದನ್ನು ಇಟ್ಟಿಲ್ಲ ಬದಲಾಗಿ ಸಮರ್ಥ್ ಕೂಡ ನನ್ನ ಮಾತು ಕೇಳದೇ ಇದ್ದರೆ ಈ ನಿರ್ಧಾರ ಖಂಡಿತ ತೆಗೆದುಕೊಳ್ಳುತ್ತೇನೆ ಎಂದು ಹೆದರಿಸಿದ್ದಾರೆ.
ಇದನ್ನು ಕೇಳಿದ ತುಳಸಿಗೆ ಏನು ಮಾಡಬೇಕು ತೋಚುವುದಿಲ್ಲ ಆದರೂ ಮಾವನನ್ನು ಹೇಗಾದರೂ ಮದುವೆಗೆ ಒಪ್ಪಿಗೆ ಸೂಚಿಸುವ ರೀತಿ ಮಾಡಬೇಕು ಎಂದು ತುಳಸಿ ಮನದಲ್ಲಿ ಅಂದುಕೊಳ್ಳುತ್ತಾ ಇರುತ್ತಾಳೆ. ಆದರೆ ಸಮರ್ಥ್ ಆತುರದ ನಿರ್ಧಾರದಿಂದ ತುಳಸಿಗೆ ಕೊಂಚ ನೋವು ಆಗುತ್ತದೆ. ತಾತನಿಗೆ ತನ್ನ ಪ್ರೀತಿ ವಿಚಾರ ತಿಳಿಸಿದ ಸಮರ್ಥ್ ಗೆ ಈ ಮದುವೆ ನಡೆಯೊಲ್ಲ ಎಂಬ ಉತ್ತರ ತಾತನಿಂದ ಬಂದಿದೆ. ಆದರೆ ಇದನ್ನೆಲ್ಲ ಮನದಲ್ಲಿ ನೆನೆದುಕೊಂಡು ಸಮರ್ಥ್ ಮನೆ ಬಿಟ್ಟು ಹೋಗಿ ಸಿರಿಯನ್ನು ಮದುವೆ ಆಗುವ ಯೋಚನೆ ಮಾಡುತ್ತಾನೆ.

ದತ್ತನ ರೂಮ್ ಗೆ ಬಂದ ಸಮರ್ಥ್
ತಾತ ದತ್ತ ಮಲಗಿರುವ ವೇಳೆ ದತ್ತ ರೂಮ್‌ಗೆ ಮೆತ್ತಗೆ ಬಂದ ಸಮರ್ಥ್, ಬಳಿಕ ನೇಣು ಕುಣಿಕೆಯನ್ನು ನೋಡುತ್ತಾನೆ ಬಳಿಕ ಹೇಳುತ್ತಾನೆ ನಾನು ಆ ನೇಣು ಕುಣಿಕೆಯನ್ನೂ ಸುಮ್ಮನೆ ಶೋ ಗೆ ಇಟ್ಟದ್ದು ಎಂದು ಅಂದುಕೊಳ್ಳುತ್ತ ಇದ್ದೀಯಾ.. ಎಂದು ತಾತಾ ಹೇಳಿರುವ ವಿಚಾರ ನೆನಪಾಗುತ್ತದೆ ಬಳಿಕ ಮೆತ್ತಗೆ ಮನದೊಳಗೆ ಸಮರ್ಥ್ 'ತಾತಾ ನಿನಗೆ ನಿನ್ನ ಹಠ ದೊಡ್ಡದು. ನನಗೆ ನನ್ನ ಪ್ರೀತಿ ದೊಡ್ಡದು ಅದು ನಿನಗೆ ಅರ್ಥ ಆಗುತ್ತಿಲ್ಲ. ಏನು ಮಾಡಲಿ ಹೇಳು ನೀನು ಹೇಳಿದ ಹುಡುಗಿಯನ್ನು ನನ್ನ ಕೈಯಿಂದ ಮದುವೆಯಾಗಲು ಸಾಧ್ಯ ಇಲ್ಲ. ಆದ ಕಾರಣ ನಾನು ಮನೆ ಬಿಟ್ಟು ಹೋಗಿ ಮದುವೆ ಆಗಬೇಕೆಂದು ನಿರ್ಧಾರ ಮಾಡಿದ್ದೇನೆ. ನನ್ನ ಕ್ಷಮಿಸಿ ಬಿಡು' ಎಂದು ಹೇಳಿ ಅಲ್ಲಿಂದ ಹೋಗುತ್ತಾನೆ.

ಅಮ್ಮನ ಕ್ಷಮೆ ಕೇಳಿ ಹೊರಟ ಸಮರ್ಥ್
ಇನ್ನು ತುಳಸಿ ಮುಖ ನೋಡಿದ ಸಮರ್ಥ್ ಹೇಳುತ್ತಾನೆ ಏನು ಹೇಳುವುದು ಹೇಳು ನಾನೇನು ತಪ್ಪು ಮಾಡಿದರೂ ನೀನು ಕ್ಷಮಿಸಿಯೆ ಕ್ಷಮಿಸುತ್ತಿಯಾ ಯಾಕೆ ಹೇಳು ನೀನು ನನ್ನ ತಾಯಿ ಅಲ್ವಾ ಎಂದೆಲ್ಲ ಹೇಳಿ ಅಲ್ಲಿಂದ ಸಿರಿ ಮನೆಗೆ ಹೋಗಿ ಅಲ್ಲಿ ಏನೇನೋ ಸುಳ್ಳು ಹೇಳಿ ನಾಳೇನೆ ಮದುವೆ ಇಟ್ಟುಕೊಳ್ಳೋಣ ಎಂದೆಲ್ಲ ಹೇಳುತ್ತಾನೆ ಇದನ್ನೆಲ್ಲ ಕೇಳಿದ ಸಿರಿಗೆ ಆಶ್ಚರ್ಯ ಆಗುತ್ತದೆ. ಬಳಿಕ ಸಿರಿ ಅಮ್ಮ ತಾತಾ ಒಪ್ಪಿದ್ರ ಅವರೆಲ್ಲಿ ಇದ್ದಾರೆ ಎಂದು ಕೇಳುತ್ತಾನೆ. ಇದನ್ನು ಕೇಳಿದ ಸಮರ್ಥ್ ಅವರೆಲ್ಲ ನಾಳೆ ಬರುತ್ತಾರೆ ಎಂದು ಹೇಳಿ ಮ್ಯಾನೇಜ್ ಮಾಡುತ್ತಾನೆ ಆದರೂ ತುಳಸಿಗೆ ತನ್ನ ಮಗನ ಮದುವೆ ಇದೆ ಎಂದು ಹೇಗೋ ತಿಳಿಯುತ್ತದೆ.

ಮದುವೆಗೆ ಬಂದ ತುಳಸಿ
ಸಿರಿ ಸಮರ್ಥ್ ಬಳಿ ಅರಶಿನ ಶಾಸ್ತ್ರ ಆಗುತ್ತಿರುವ ವೇಳೆ ಕೂಡ ಕೇಳುತ್ತಾಳೆ ಎಲ್ಲಿ ಇನ್ನೂ ನಿನ್ನ ಅಮ್ಮ ಮತ್ತೆ ತಾತಾ ಬರಲಿಲ್ಲ ಎಂದು ಅನುಮಾನದಿಂದ ಕೇಳುತ್ತಾಳೆ ಆದರೆ ಸಮರ್ಥ್ ಹೇಳುತ್ತಾನೆ ಮುಹೂರ್ತ ಟೈಮ್ ಗೆ ಬಂದೆ ಬರುತ್ತಾರೆ ಎಂದು ಹೇಳಿ ಅಲ್ಲಿಂದ ಹೋಗುತ್ತಾನೆ ಇನ್ನೂ ಸ್ವಲ್ಪ ಹೊತ್ತಿನ ಬಳಿಕ ಸಮರ್ಥ್ ಬಳಿಗೆ ಆತನ ತಾಯಿ ತುಳಸಿ ಬಂದು ನಿಲ್ಲುತ್ತಾರೆ ಇದನ್ನು ನೋಡಿದ ಸಮರ್ಥ್‌ಗೆ ಶಾಕ್ ಆಗುತ್ತದೆ. ಮಗ ಮಾಡಿದ ಕೆಲಸದಿಂದ ನೋವಾಗಿದ್ದರು ಅದನ್ನು ಸಹಿಸಿಕೊಂಡು ಸುಮ್ಮನಿರುತ್ತಾರೆ.

ತುಳಸಿ ಕರೆ ಸ್ವೀಕರಿಸದ ದತ್ತ
ಬಳಿಕ ಸಮರ್ಥ್ ಬಳಿ ತಾತಾನಿಗೆ ನಿನ್ನ ಮದುವೆ ಎಂದು ನಿಜ ತಿಳಿಯಲಿ ಇಲ್ಲವಾದರೆ ಬಹಳ ಬೇಸರ ಮಾಡಿಕೊಂಡು ಇರುತ್ತಾರೆ. ಅವರು ಮದುವೆಗೆ ಬರಲಿ ನಾನು ಮಾವನಿಗೆ ವಿಚಾರ ಹೇಳಿಯೇ ಹೇಳುತ್ತೇನೆ ಎಂದು ಹೇಳಿ ಕರೆ ಮಾಡುತ್ತಾಳೆ ಆದರೆ ದತ್ತ ಮಾತ್ರ ಕರೆ ಸ್ವೀಕರಿಸದ್ದನ್ನು ಕಂಡು ಬೇಸರ ಮಾಡಿಕೊಳ್ಳುತ್ತಾಳೆ. ಇದನ್ನು ನೋಡಿದ ಸಮರ್ಥ್ ಸಮಾಧಾನ ಪಟ್ಟುಕೊಳ್ಳುತ್ತಾರೆ.

ಸಮರ್ಥ್ ಮದುವೆ ತಡೆಯಲು ಓಡಿ ಬಂದ ದತ್ತ
ಜುಗ್ಗನಿಗೆ ಸಮರ್ಥ್ ಮದುವೆ ಎಂದು ತಿಳಿದು ದತ್ತನ ಬಳಿ ಓಡೋಡಿ ಬರುತ್ತಾನೆ. ಬಂದು ಸಮರ್ಥ್‌ಗೆ ಮದುವೆ ನಡೆಯುತ್ತಿರುವ ವಿಚಾರ ಹೇಳುತ್ತಾನೆ. ಇದನ್ನು ತಿಳಿದ ದತ್ತ ಮದುವೆ ಮನೆಗೆ ಓಡೋಡಿ ಬರುತ್ತಾನೆ. ಇತ್ತ ಸಮರ್ಥ್ ತಾಳಿ ಕಟ್ಟುವ ವೇಳೆ ದತ್ತ ಎಂಟ್ರಿ ಆಗುತ್ತಾರೆ. ಮುಂದೆ ದತ್ತ ಈ ಮದುವೆ ತಡೆಯುತ್ತಾರೆ ಅಥವಾ ಇಲ್ಲವೋ ಎಂದು ಕಾದು ನೋಡಬೇಕಿದೆ.