Don't Miss!
- Sports
Ind vs NZ 3rd T20: ಸರಣಿ ಗೆಲ್ಲುವ ಉತ್ಸಾಹದಲ್ಲಿ ಟೀಂ ಇಂಡಿಯಾ: ಪಿಚ್ ವರದಿ ನೋಡಿ ತಂಡದಲ್ಲಿ ಬದಲಾವಣೆ
- News
ತ್ರಿಪುರಾ ಚುನಾವಣೆ: ಟಿಎಂಸಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ
- Technology
ಸ್ಯಾಮ್ಸಂಗ್ನ ಈ ಹೊಸ ಡಿವೈಸ್ ನೋಡಿದ್ರೆ ನಿಮಗೆ ಏನನ್ನಿಸುತ್ತೆ? ಇದೇನು ಸಾಬೂನಾ?
- Lifestyle
ಒಂಟಿಯಾಗಿ ಅಂಟಾರ್ಟಿಕಾ ಯಾತ್ರೆ ಮಾಡಿದ ಮೊದಲ ಮಹಿಳೆ: ಕ್ಯಾ. ಪ್ರೀತಿ ಚಾಂದಿ, ಇವರ ಸ್ಟೋರಿಯೇ ಸ್ಪೂರ್ತಿದಾಯಕ
- Finance
Budget 2023 Expectations: ಸಾಮಾನ್ಯ ಜನರ ಬಜೆಟ್ ನಿರೀಕ್ಷೆಗಳೇನು?
- Automobiles
ಶೀಘ್ರವೇ ಕಡಿಮೆ ಬೆಲೆಯಲ್ಲಿ ಸಿಗಲಿದೆ ಮಾರುತಿ ಸುಜುಕಿ ಆಲ್ಟೊ ಕೆ10 ಎಕ್ಸ್ಟ್ರಾ ಎಡಿಷನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಮೊದಲನೇ ರಾತ್ರಿ ಸಂಭ್ರಮದಲ್ಲಿರುವ ಸಮರ್ಥ್ ಸಿರಿ!
ಸಮರ್ಥ್ ಹಾಗೂ ಸಿರಿ ಮೊದಲನೆಯ ರಾತ್ರಿ ಸಂಭ್ರಮದಲ್ಲಿದ್ದಾರೆ. ಮೊಮ್ಮಗನ ಪ್ರಸ್ತಕ್ಕೆ ದತ್ತನೆ ಕೋಣೆಯ ಅಲಂಕಾರ ಮಾಡಿದ್ದಾನೆ. ಬೆಡ್ ಡೆಕೋರೆಟ್ ಮಾಡುವುದರಿಂದ ಹಿಡಿದು ಎಲ್ಲಾ ರೀತಿಯ ಕೆಲಸವನ್ನು ಮಾಡಿ ಮುಗಿಸಿದ್ದಾನೆ ದತ್ತ. ಇನ್ನೂ ಕೆಲವು ರೀತಿ ರಿವಾಜುಗಳನ್ನು ಮೊಮ್ಮಕ್ಕಳ ಕೈಯಿಂದ ಮಾಡಿಸುತ್ತಿದ್ದಾನೆ. ಇತ್ತ ಸಿರಿಗೆ ತುಳಸಿ ಅಲಂಕಾರ ಮಾಡಿದ್ದೆ ಮಾಡಿದ್ದು. ಕೊನೆಗೆ ಸಿರಿಯನ್ನು ನೋಡಿ ದೃಷ್ಟಿ ತೆಗೆಯುತ್ತಾಳೆ.
ಈ ವೇಳೆ ದತ್ತ ಹಾಗೂ ಆತನ ಗೆಳೆಯ ಸಮರ್ಥ್ ಬಳಿ ಬಂದು ಸಮರ್ಥ್ ನೀನು ಈಗ ಪಕ್ಕಾ ಮದುವೆ ಗಂಡಿನ ಹಾಗೆ ಕಾಣುತ್ತಾ ಇದ್ದೀಯಾ ಎನ್ನುತ್ತಾರೆ. ಇದನ್ನು ಕೇಳಿದ ದತ್ತ, ಈ ದತ್ತ ರೆಡಿ ಮಾಡಿದರೆ ಹೀಗೆ ಕಾಣುವುದು. ಮದುವೆಗೆ ಕರೆದಿದ್ದರೆ ಸಮರ್ಥ್ ಇನ್ನೂ ಚೆನ್ನಾಗಿ ಕಾಣುತ್ತಾ ಇದ್ದ ಎಂದು ಮೆತ್ತಗೆ ಹೇಳುತ್ತಾರೆ.
ಇದನ್ನು ಕೇಳಿದ ಸಮರ್ಥ್ ಸುಮ್ಮನಾಗುತ್ತಾರೆ. ಆ ವೇಳೆ ಅಲ್ಲಿಗೆ ತುಳಸಿ ಸಿರಿಯನ್ನು ಕರೆದುಕೊಂಡು ಬರುತ್ತಾಳೆ. ಸಿರಿಯನ್ನು ಕರೆದು ದೇವರಿಗೆ ಇಬ್ಬರು ನಮಸ್ಕಾರ ಮಾಡಿ. ಬೇಡಿಕೊಳ್ಳಿ ಎಂದು ಹೇಳುತ್ತಾರೆ. ಇದನ್ನು ಕೇಳಿದ ಸಮರ್ಥ್ ಹಾಗೂ ಸಿರಿ ದೇವರಿಗೆ ಕೈ ಮುಗಿಯುತ್ತಾರೆ. ಬಳಿಕ ತಾತನ ಆಶಿರ್ವಾದ ಪಡೆದುಕೊಳ್ಳುತ್ತಾರೆ.

ದತ್ತನ ಆಶೀರ್ವಾದ ಪಡೆದುಕೊಂಡ ಸಿರಿ ಸಮರ್ಥ್
ಈ ವೇಳೆ ದತ್ತ ಇಬ್ಬರ ಬಳಿಯೂ, ಮುಂದಿನ ವರುಷದ ಒಳಗೆ ಈ ಮನೆಯಲ್ಲಿ ತೊಟ್ಟಿಲು ತೂಗಬೇಕು. ಎಂದಾಗ ಸಮರ್ಥ್-ಸಿರಿ ನಾಚಿ ನಿರಾಗುತ್ತಾರೆ. ಬಳಿಕ ಸಮರ್ಥ್ ತನ್ನ ತಾಯಿ ಬಳಿ ಬಂದು ಇಬ್ಬರು ಆಶೀರ್ವಾದ ಪಡೆದುಕೊಳ್ಳುತ್ತಾರೆ. ಈ ವೇಳೆ ದತ್ತನ ಗೆಳೆಯ ಆತನ ಹೆಂಡತಿಯೊಂದಿಗೆ ಎಲ್ಲಾ ಸರಿ ಇದೆಯಾ ನಾನು ಸಮರ್ಥ್ ಅನ್ನು ಕರೆದುಕೊಂಡು ಹೋಗುತ್ತೇವೆ. ನೀನು ಸಿರಿಯನ್ನು ಕಳುಹಿಸು ಎಂದು ಹೇಳುತ್ತಾರೆ.

ಹೂವಿನ ಚೆಂಡಿನಲ್ಲಿ ಆಟ ಆಡುತ್ತಿರುವ ದಂಪತಿ
ಇದನ್ನು ಕೇಳಿದ ದತ್ತ ಎಲ್ಲಿಗೋ ಎಂದು ಕೇಳುತ್ತಾರೆ ಆ ವೇಳೆ ದತ್ತನ ಗೆಳೆಯ ಹೇಳುತ್ತಾರೆ ರೂಮಿಗೆ ಎಂದು ಅದನ್ನು ಕೇಳಿದ ದತ್ತ, ಅದಕ್ಕೆ ಇನ್ನೂ ಮುಹೂರ್ತ ಬಂದಿಲ್ಲ. ಮುಹೂರ್ತ ಬಂದ ಬಳಿಕ ನಾವೇ ಕಳುಹಿಸಿಕೊಡುವ ಎಂದು ಹೇಳುತ್ತಾನೆ. ಈ ವೇಳೆ ದತ್ತ ಹೂವಿನ ಚೆಂಡನ್ನು ಎಸೆಯುವ ಕಾರ್ಯಕ್ರಮವನ್ನು ಆಯೋಜನೆ ಮಾಡುತ್ತಾನೆ. ನೋಡಪ್ಪ ಈ ಹೂವಿನ ಚೆಂಡನ್ನು ಗಂಡು ಹೆಣ್ಣಿಗೆ ಹೆಣ್ಣು ಗಂಡಿಗೆ ಎಸೆಯಬೇಕು. ಯಾರು ಬಿಡುತ್ತಾರೆ ಅವರು ಸೋತ ಹಾಗೆ. ಗೆದ್ದವರು ಸೋತವರಿಗೆ ಏನು ಹೇಳುತ್ತಾರೆ ಅವರು ಆ ಕೆಲಸ ಮಾಡಬೇಕು ಎಂದು ಹೇಳುತ್ತಾನೆ.

ಸಿರಿ ಮೊಗದಲ್ಲಿ ಮೂಡಿದ ಮಂದಹಾಸ
ಕೊನೆಗೆ ಅವರಿಬ್ಬರನ್ನು ಕೋಣೆಯೊಳಗೆ ಬಿಡಲಾಗುತ್ತದೆ. ಇನ್ನು ಮಾಧವನ ಹಾಗೂ ಆತನ ಮಗನ ಹೊಸ ಪ್ರಾಜೆಕ್ಟ್ ಷೂಟ್ ಒಂದೇ ದಿನ ಬಂದಿದೆ. ಇದಕ್ಕಾಗಿ ಮಾಧವನ ತಮ್ಮನ ಹೆಂಡತಿ ಪೂಜೆ ಮಾಡಿ ಆರತಿ ಹಿಡಿದುಕೊಂಡು ಬರುತ್ತಾಳೆ. ಬಳಿಕ ಹೇಳುತ್ತಾಳೆ ಹೊಸ ಪ್ರಾಜೆಕ್ಟ್ ಚೆನ್ನಾಗಿ ಆಗಲಿ ಎಂದು ಹೇಳುವಾಗ ಮಾಧವನ ಮಗ ಆರತಿ ತೆಗೆದುಕೊಂಡು ನಿಲ್ಲುತ್ತಾನೆ. ಬಳಿಕ ಮಾಧವನ ಬಳಿಗೆ ಬಂದ ಆಕೆ ಭಾವ ನಿಮ್ಮ ಪ್ರಾಡಕ್ಟ್ ಷೂಟ್ ಇವತ್ತೇ ಅಲ್ವಾ. ಆಲ್ ದಿ ಬೆಸ್ಟ್ ಎಂದು ಹೇಳುತ್ತಾಳೆ.

ಸ್ಟಾರ್ ನಟಿ ಮೋನಿಕಾ ಆಗಮನ
ಇದನ್ನು ಕೇಳಿದ ಮಾಧವನ ಮಗನಿಗೆ ಕೆಂಡದಷ್ಟು ಕೋಪ ಬರುತ್ತದೆ. ಇದನ್ನು ನೋಡಿ ಮಾಧವ ಅಲ್ಲಿಂದ ಹೊರಡುತ್ತಾನೆ. ಮಾಧವನ ಸೊಸೆ ಮಾತ್ರ ಬಹಳ ಪ್ರೀತಿಯಿಂದ ವಿಶ್ ಮಾಡುತ್ತಾರೆ. ಇನ್ನು ಬಹು ದೊಡ್ಡ ಸ್ಟಾರ್ ನಟಿ ಮೋನಿಕಾಗೆ ಮಾಧವನ ಮಗ ವೈಟ್ ಮಾಡುತ್ತಾ ಇರುತ್ತಾರೆ ಈ ವೇಳೆ ಅಲ್ಲಿಗೆ ಬಂದ ಮೋನಿಕಾ, ಮಾಧವನ ಮಗನಿಗೆ ಶೇಕ್ ಹ್ಯಾಂಡ್ ಕೊಡುತ್ತಾರೆ. ಈ ವೇಳೆ ಮಾಧವನನ್ನು ಕಂಡ ಮೋನಿಕಾ ಮಾಧವ ಸರ್ ಎಂದು ಕರೆಯುತ್ತಾಳೆ ಇದನ್ನೂ ನೋಡಿದ ಮಾಧವನ ಮಗನಿಗೆ ಬಹಳ ಕೋಪ ಬರುತ್ತದೆ. ಆದರೂ ತಡೆದುಕೊಂಡು ಸುಮ್ಮನೆ ಇರುತ್ತಾನೆ. ಮೋನಿಕಾ ಮಾಧವನ ಬಳಿ ಸರ್ ನನ್ನ ತಾಯಿ ನಿಮ್ಮ ಅಭಿಮಾನಿ .. ನಾನು ಷೂಟ್ ಗೆ ಬಂದಿದ್ದೇನೆ ಅದು ಮುಗಿದ ಬಳಿಕ ನಿಮ್ಮ ಬಳಿ ಮಾತನಾಡುತ್ತೇನೆ ಎಂದು ಹೇಳಿ ಅಲ್ಲಿಂದ ತೆರಳುತ್ತಾಳೆ ಮುಂದೇನು ಕಾದು ನೋಡಬೇಕಿದೆ .