Don't Miss!
- Technology
ಸ್ಯಾಮ್ಸಂಗ್ನ ಈ ಹೊಸ ಡಿವೈಸ್ ನೋಡಿದ್ರೆ ನಿಮಗೆ ಏನನ್ನಿಸುತ್ತೆ? ಇದೇನು ಸಾಬೂನಾ?
- News
ಬೊಮ್ಮಾಯಿ ಎಂದರೆ ಖಾಲಿ ಕುರ್ಚಿಗಳಿಗೆ ಭಾಷಣ ಮಾಡುವ ಸಿಎಂ!
- Lifestyle
ದಕ್ಷಿಣ ಧ್ರುವಕ್ಕೆ ಯಾತ್ರೆ ಮಾಡಿ ಸಾಧನೆ ಮೊದಲ ಮಹಿಳೆ: ಕ್ಯಾ. ಪ್ರೀತಿ ಚಾಂದಿ, ಇವರ ಸ್ಟೋರಿಯೇ ಸ್ಪೂರ್ತಿದಾಯಕ
- Finance
Budget 2023 Expectations: ಸಾಮಾನ್ಯ ಜನರ ಬಜೆಟ್ ನಿರೀಕ್ಷೆಗಳೇನು?
- Sports
BGT 2023: ಭಾರತದ ಸ್ಪಿನ್ ದಾಳಿ ಭಯ: ಆಸ್ಟ್ರೇಲಿಯಾ ಆಟಗಾರರು ಮಾಡ್ತಿರೋದೇನು?
- Automobiles
ಶೀಘ್ರವೇ ಕಡಿಮೆ ಬೆಲೆಯಲ್ಲಿ ಸಿಗಲಿದೆ ಮಾರುತಿ ಸುಜುಕಿ ಆಲ್ಟೊ ಕೆ10 ಎಕ್ಸ್ಟ್ರಾ ಎಡಿಷನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಸಿರಿಯನ್ನು ಒಪ್ಪಿಕೊಂಡ ದತ್ತ? ಸಮರ್ಥ್-ಸಿರಿ ಮೊದಲ ರಾತ್ರಿಗೆ ಕೋಣೆ ಅಲಂಕಾರ!
ಮದುವೆ ವಿಚಾರವಾಗಿ ಮುನಿಸಿಕೊಂಡಿದ್ದ ದತ್ತ, ಸಿರಿಯನ್ನು ತನ್ನ ಮೊಮ್ಮಗನ ಹೆಂಡತಿ ಎಂದು ಒಪ್ಪಿಕೊಳ್ಳಲು ಕೊಂಚ ಸಮಯ ಬೇಕು ಎನಿಸುತ್ತದೆ. ಇದೀಗ ಸಿರಿ, ತುಳಸಿ ಬಳಿ ಬೆಟ್ಟು ಕಟ್ಟಿ ಅಡುಗೆ ಮಾಡಲು ಹೋಗುತ್ತಾಳೆ. ಆದರೆ ತುಳಸಿ ಮಾತ್ರ ಇದಕ್ಕೆ ಒಪ್ಪದೇ ನಾಳೆಯಿಂದಲೇ ನೀನು ಅಡುಗೆ ಮಾಡು ಇವತ್ತು ಬೇಡ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಸಿರಿ, ಅಮ್ಮಾ ಪ್ಲೀಸ್ ಇವತ್ತು ಅಡುಗೆ ನಾನೇ ಮಾಡುತ್ತೇನೆ ಎಂದು ಹೇಳುತ್ತಾಳೆ. ಇದನ್ನು ಕೇಳಿದ ತುಳಸಿ ಬಿಡಲ್ಲ ಅಲ್ಲ ನೀನು ಎಂದು ಹೇಳುತ್ತಾ ಸೌಟ್ ಅನ್ನು ಸಿರಿ ಕೈಗೆ ಇಡುತ್ತಾ ಹೇಳುತ್ತಾಳೆ ಇನ್ನೂ ಮೇಲೆ ಅಡುಗೆ ಕೋಣೆಯನ್ನು ನಿನಗೆ ಹಸ್ತಾಂತರ ಮಾಡುತ್ತಾ ಇದ್ದೇನೆ ಎಂದು ಹೇಳುತ್ತಾಳೆ ಇನ್ನೂ ಅಡುಗೆ ಆದ ಬಳಿಕ ಸಿರಿ ತಾತನನ್ನು ಊಟಕ್ಕೆ ಕರೆಯುತ್ತಾಳೆ.
ದತ್ತ ಕೊನೆಗೆ ರೂಮಿನ ಹೊರಗೆ ಬಂದು ಊಟ ಮಾಡಲು ತೊಡಗುತ್ತಾನೆ. ಈ ವೇಳೆ ಸಿರಿ ತಾತಾ ಊಟ ಹೇಗಿದೆ ಎಂದು ಕೇಳುತ್ತಾಳೆ. ಇದಕ್ಕೆ ಉತ್ತರವಾಗಿ ದತ್ತ ಬಿಸಿ ನೀರಿಗೆ ಅರಶಿನ ಉಪ್ಪು ಖಾರದ ಪುಡಿ ಸುರಿದರೆ ಅದನ್ನು ಸಾಂಬಾರ್ ಎಂದುಕೊಂಡ ತಿನ್ನಬೇಕು. ಏನಾದರು ಪಲ್ಯ ಮಾಡಿದರೆ ಅದನ್ನು ಹಾಗೆಯೇ ತಿನ್ನಬೇಕು. ಹಸಿವು ಆದರೆ ಎಲ್ಲರಿಗು ಕಸವೂ ರುಚಿ ಆಗಿರುತ್ತದೆ. ಇದು ಅನ್ನ ಅಂತೆ ಬಹಳ ಗಟ್ಟಿ ಇದೆ ಎಂದು ಹೇಳುತ್ತಾ ರವೀಂದ್ರ ಅವರೆ ನಿಮ್ಮಂತವರು ಇದನ್ನು ತಿನ್ನಲು ಆಗುತ್ತದ ಎಂದು ಕೇಳುತ್ತಾರೆ.
ಇದನ್ನು ಕೇಳಿದ ರವೀಂದ್ರಗೆ ಏನು ಹೇಳಬೇಕು ಎಂದು ತಿಳಿಯದೇ ಸುಮ್ಮನಿರುತ್ತಾರೆ. ಬಳಿಕ ತುಳಸಿಯನ್ನು ನೋಡಿ ಇಷ್ಟು ವರುಷ ಆಯಿತು ಇನ್ನೂ ಅಡುಗೆ ಮಾಡುವುದನ್ನು ಕಲಿತಿಲ್ಲ ಎಂದು ಹೇಳುತ್ತಾನೆ. ಇದನ್ನು ಕೇಳಿದ ಸಿರಿಗೆ ಬೇಸರ ಆಗುತ್ತದೆ. ಸಿರಿ ಹೇಳುತ್ತಾಳೆ ಇವತ್ತು ಅಡುಗೆ ಮಾಡಿದ್ದು ನಾನು ಅಮ್ಮ ಅಲ್ಲ ಎಂದು ಹೇಳುತ್ತಾಳೆ.

ಊಟದ ವಿಚಾರದಲ್ಲಿ ಸೊಸೆಯನ್ನು ಹೊಗಳಿದ ದತ್ತ
ಇದನ್ನು ಕೇಳಿದ ದತ್ತ, ಇನ್ನೂ ನಾಲಕ್ಕು ಜನುಮ ಎತ್ತಿ ಬಂದರೆ ತುಳಸಿ ಥರ ಅಡುಗೆ ಮಾಡುವುದನ್ನು ಕಲಿತೀಯ ಎಂದು ಅನ್ನಿಸುತ್ತದೆ. ಹೋ ಪರವಾಗಿಲ್ಲ ಸ್ವಲ್ಪ ಸಾಂಬಾರ್ ಹಾಕು ಎಂದು ತುಳಸಿಗೆ ಹೇಳುತ್ತಾರೆ. ಬಳಿಕ ತುಳಸಿ ಬಳಿ ಸ್ವೀಟ್ ಹಾಕಲು ಹೇಳುತ್ತಾರೆ. ಬಳಿಕ ತನ್ನ ಮೊಮ್ಮಗನ ಬಳಿ ಆತನ ಹೆಂಡತಿಗೆ ಸ್ವೀಟ್ ತಿನ್ನಿಸಲು ಹೇಳುತ್ತಾರೆ ಇದನ್ನು ಕೇಳಿದ ಸಮರ್ಥ್ ಸಿರಿಗೆ ಸಿರಿ ಸಮರ್ಥ್ ಗೆ ಸ್ವೀಟ್ ತಿನ್ನಿಸುತ್ತಾರೆ. ಇದನ್ನು ನೋಡಿದ ರವೀಂದ್ರ ಅವರಿಗೆ ಹೃದಯ ತುಂಬಿ ಬರುತ್ತದೆ. ತುಳಸಿಯವರ ಮುಂಚೆ ಹೇಳಿದ್ದು ನಿಜ. ದತ್ತನ ಮಾತು ಒರಟು ನಿಜ. ಆದರೆ ಮನಸ್ಸು ಬಂಗಾರ. ಸೊಸೆ ಮೊಮ್ಮಕ್ಕಳ ಬಾರ ಹೊತ್ತು ಕೊಂಡು ಅವರ ಜೀವನಕ್ಕೆ ಧಿಕ್ಕಾಗಿದ್ದಾರೆ ಇನ್ನೂ ಮೇಲೆ ನನ್ನ ಮಗಳು ನಿಮ್ಮ ಕುಟುಂಬಕ್ಕೆ ಸೇರುತ್ತಾಳೆ.

ರವೀಂದ್ರಗೆ ಧೈರ್ಯ ತುಂಬಿದ ದತ್ತ
ನಿಮ್ಮ ಮೊಮ್ಮಗ ತಂದೆ ಇಲ್ಲದ ಹಾಗೆ ಬೆಳೆದರೆ ನನ್ನ ಮಗಳು ತಾಯಿ ಇಲ್ಲದೆ ಬೆಳೆದಿದ್ದಾಳೆ. ಸ್ವಲ್ಪ ಹುಡುಗು ಬುದ್ದಿ ಆದರೆ ಚಿನ್ನದಂತವಳು. ಏನಾದರು ತಪ್ಪು ಮಾಡಿದರೆ ಮನಸಿನಲ್ಲಿ ಇಟ್ಟುಕೊಳ್ಳಬೇಡಿ ಎಂದು ಹೇಳುತ್ತಾರೆ. ಇದನ್ನು ಕೇಳಿದ ದತ್ತ, ನಮ್ಮ ಮನೆಗೆ ಸೇರಿಸಿದ ಮೇಲೆ ನೀವು ಯೋಚನೆ ಮಾಡಬೇಡಿ. ಧೈರ್ಯವಾಗಿ ಇರಿ. ಜಾಸ್ತಿ ಬಾಲ ಅಲ್ಲಾಡಿಸಿದರೆ ಅದನ್ನು ಹೇಗೆ ಕಟ್ ಮಾಡಬೇಕು ಎಂದು ನನಗೆ ಚೆನ್ನಾಗಿ ಗೊತ್ತು. ಎಂದು ಹೇಳುತ್ತ ಬೀಗರನ್ನು ಊಟ ಮಾಡಲು ಹೇಳುತ್ತಾರೆ.

ಮೊದಲ ರಾತ್ರಿಯ ಕೋಣೆ ರೆಡಿ ಮಾಡುತ್ತಿರುವ ದತ್ತ
ಇನ್ನು ಊಟ ಮಾಡಿ ರವೀಂದ್ರ ಹೊರಟು ಹೋಗುವಾಗ ದತ್ತ ಅವರನ್ನು ಕರೆದು ಫಲವನ್ನು ಕೊಡುತ್ತಾರೆ ಇದನ್ನು ನೋಡಿದ ರವೀಂದ್ರ, ಇದೆಲ್ಲ ನಮಗೆ ಯಾಕೆ ಎಂದಾಗ ದತ್ತ ಹೇಳುತ್ತಾರೆ. ನಿಮ್ಮ ಜೀವವನ್ನೇ ಇಲ್ಲಿ ಬಿಟ್ಟು ಹೋಗುವಾಗ ನಾನು ಹೇಗೆ ಬರಿಗೈಯಲ್ಲಿ ನಿಮ್ಮನ್ನು ಕಳುಹಿಸಲಿ ಎಂದು ಹೇಳುತ್ತಾರೆ ಇದನ್ನು ಕೇಳಿದ ಸಿರಿ ಗೆ ಬಹಳ ಬೇಸರ ಆಗುತ್ತದೆ. ಇನ್ನು ಸಿರಿ ಸಮರ್ಥ್ ತಬ್ಬಿಕೊಂಡು ಇರುವ ವೇಳೆ ಅಲ್ಲಿಗೆ ಬಂದ ತುಳಸಿ ಪಾಪು ಎಂದು ಕರೆದು ಜ್ಯೂಸ್ ಕೊಡಲು ಹೋಗುತ್ತಾಳೆ ಆದರೆ ಇದನ್ನೆಲ್ಲ ನೋಡಿ ಸಮರ್ಥ್ ಹಾಗೂ ಸಿರಿ ಗೆ ಪ್ರಸ್ತಕ್ಕೆ ತಯಾರು ಮಾಡಬೇಕು ಇದನ್ನು ಮಾವನ ಬಳಿ ಹೇಗೆ ಹೇಳಲಿ ಎಂದು ಯೋಚನೆ ಮಾಡುತ್ತಾ ಇದ್ದಾಳೆ. ಇನ್ನು ದತ್ತ ಫಸ್ಟ್ ನೈಟ್ ಡೇಕೊರೇಷನ್ ಮಾಡುತ್ತಾ ಇದ್ದಾರೆ ಇದನ್ನು ನೋಡಿದ ಸಮರ್ಥ್ ಸಿರಿ ಜೋರಾಗಿ ನಗುತ್ತಾ ಹೋಗುತ್ತಾರೆ. ಮುಂದೇನು ಕಾದು ನೋಡಬೇಕಿದೆ.