ಅಮ್ಮ ತುಳಸಿಯನ್ನು ಅರ್ಥ ಮಾಡಿಕೊಳ್ಳದ ಮಗ!
'ಶ್ರೀ ರಸ್ತು ಶುಭ ಮಸ್ತು' ಧಾರವಾಹಿ ಶುರುವಾಗಿ ಬಿಟ್ಟಿದೆ. ಸುಧಾರಾಣಿ ನಟಿಸಿರುವ ಧಾರಾವಾಹಿ ತುಸು ಭಿನ್ನವಾಗಿಯೂ ರಿಚ್ ಆಗಿಯೂ ಮೂಡಿ ಬರುತ್ತಿದೆ. ತಾಯಿ ತನ್ನ ಮಗನಿಗಾಗಿ ಏನು ಮಾಡಲು ತಯಾರಿರುತ್ತಾಳೆ ಎಂಬುವುದಕ್ಕೆ ಈ ಧಾರವಾಹಿ ಸಾಕ್ಷಿ. ಮಗ ಆಫೀಸ್‌ಗೆ ಹೋಗುವಷ್ಟು ದೊಡ್ಡವನಾಗಿದ್ದರೂ ಮಹಾ ತಾಯಿ ಅವನ ಸೇವೆ ಮಾಡುತ್ತಿರುತ್ತಾಳೆ. ಆತ ಕೇಳುವ ಎಲ್ಲವನ್ನೂ ಎತ್ತಿಟ್ಟು ಆತ ಒಂದೊಂದು ವಸ್ತು ಕೇಳುತ್ತಿರುವ ವೇಳೆ ಕೊಡುತ್ತಾ ಇರುತ್ತಾಳೆ.
ಆದರೆ ಆಕೆ ಮನೆ ಒಳಗೆ ಅಷ್ಟೆಲ್ಲ ಕೆಲಸ ಮಾಡಿದ ಬಳಿಕ ಮಗ ಆಫೀಸ್‌ಗೆ ಹೊರಡಲು ಬೈಕ್ ಏರಿ ಕುಳಿತುಕೊಳ್ಳುವ ವೇಳೆ ಬೈಕ್ ಟಯರ್ ಪಂಚರ್ ಆಗಿ ಹೋಗಿರುತ್ತದೆ. ಇದನ್ನು ನೋಡಿದ ಮಗ ತಾಯಿ ಬಳಿಯಲ್ಲಿ ಏನಮ್ಮ ಇದನ್ನು ಹೇಳಲೇ ಇಲ್ಲ ಅಲ್ವಾ ಎಂದು ಬೇಸರಿಸಿಕೊಂಡು ಆಟೋ ರಿಕ್ಷಾ ಎಷ್ಟು ನಿಲ್ಲಿಸಲು ನೋಡಿದರೂ ಪ್ರಯೋಜನ ಆಗಲಿಲ್ಲ. ಬಳಿಕ ಪುನಃ ರಿಕ್ಷಾ ಕ್ಕೆ ಕೈ ಹಿಡಿದಾಗ ರಿಕ್ಷಾ ನಿಲ್ಲುತ್ತದೆ. ರಿಕ್ಷಾದಲ್ಲಿ ಮಗ ಕೂತ ವೇಳೆ ಅಮ್ಮ ಮಗನನ್ನು ಜೋರಾಗಿ ಕರೆಯುತ್ತಾ ಬರುತ್ತಾರೆ. ಇದನ್ನು ನೋಡಿದ ರಿಕ್ಷಾ ಚಾಲಕ ನಿಮಗೆ ಊಟ ತಿಂಡಿ ಮಾಡಿದೆಯ ಎಂದು ಕೇಳುವವರು ಇದ್ದಾರೆ ಆದರೆ ನನಗೆ ಯಾರು ಇಲ್ಲ ಎಂದು ಹೇಳುತ್ತಾನೆ.
ಇನ್ನು ಮಗನಿಗೆ ಟಿಫನ್ ಬಾಕ್ಸ್ ಕೊಡುತ್ತಾಳೆ. ಬಳಿಕ ಆಟೋ ಅಲ್ಲಿಂದ ತೆರಳುತ್ತದೆ. ರೋಡಲ್ಲಿ ಎಲ್ಲಾ ಆಟೋ ಡ್ರೈವರ್ ಮಾತನಾಡುತ್ತಾ ಹೋಗುತ್ತಾರೆ. ಇನ್ನು ವೇಗವಾಗಿ ಆಟೋ ಹೋಗುತ್ತಿದ್ದ ವೇಳೆ ಟಿಫನ್ ಬಾಕ್ಸ್ ಕೆಳಗೆ ಬೀಳುತ್ತದೆ. ಇದನ್ನು ನೋಡಿದ ಒಬ್ಬಾತ ಆಟೋ ಕರೆಯುತ್ತಾನೆ ಆದರೆ ಆಟೋ ಮಾತ್ರ ಬಹಳ ವೇಗವಾಗಿ ಹೋಗುತ್ತದೆ. ಎಷ್ಟೇ ಕೊಂಕಾಡಿದರು ಇತ್ತ ತುಳಸಿಗೆ ದತ್ತನನ್ನೂ ನೋಡಿಕೊಳ್ಳುವುದು ಒಂದು ದೊಡ್ಡ ಟಾಸ್ಕ್. ಇನ್ನೂ ಟಿವಿ ನೋಡುತ್ತಾ ಇರಬೇಕಾದರೆ ದತ್ತ ರಾಶಿ ಫಲವನ್ನು ನೋಡುತ್ತಾರೆ.

ದತ್ತನನ್ನು ಸಮಾಧಾನಿಸಿದ ತುಳಸಿ
ಸ್ವಾಮೀಜಿ ಹೇಳುತ್ತಿರುವ ಪ್ರಕಾರ ಏನೇ ತಿಂದರೂ ಯಮ ಪಾಶ ಗ್ಯಾರಂಟಿ ಅನ್ನುವ ಹಾಗೆ ಸ್ವಾಮೀಜಿ ಹೇಳುತ್ತಿದ್ದರು. ಈ ವೇಳೆ ದತ್ತನಿಗೆ ಭಯವಾಗಿ ನೀರು ಕುಡಿಯುತ್ತಾರೆ ಈ ವೇಳೆ ಅವರಿಗೆ ಕೊಂಚ ನೆತ್ತಿಗೆ ಏರುತ್ತದೆ. ದತ್ತ ಕೆಮ್ಮುತ್ತಿರುವುದನ್ನು ನೋಡಿದ ತುಳಸಿ ನೀರನ್ನು ತರುತ್ತಾರೆ. ಬಳಿಕ ನೀರು ಕುಡಿಯುತ್ತಾರೆ. ತುಳಸಿಗೆ ಆಕೆಯ ಮಾವ ಕೆಮ್ಮುತ್ತಿರುವುದನ್ನು ನೋಡಿ ಬಹಳ ಭಯ ಆಗುತ್ತದೆ. ಮಾವ ಏನಾಯ್ತು ಮಾವ ಎಂದು ಕೇಳಿದಾಗ ದತ್ತ ಹೇಳುತ್ತಾನೆ ಇದೇನಾ ಪುಳಿಯೋಗರೆ ಯಾವತ್ತೂ ಇದರಲ್ಲಿ ಒಂದು ರಾಶಿ ಕಡಲೆ ಕಾಯಿ ಬೀಜ ಹಾಕುತ್ತಿಯಾ. ಗಂಟಲಲ್ಲಿ ಸಿಕ್ಕಿ ಹಾಕಿಕೊಂಡು ಗೋಟಕ್ ಆಗಲಿ ಎಂದು ಈ ರೀತಿ ಮಾಡುತ್ತಾ ಇದ್ದೀರಾ? ಎಂದು ಕೇಳುತ್ತಾನೆ ಅದಕ್ಕೆ ತುಳಸಿ ಕೊಡಿ ಮಾವ ಕಡಲೆ ಕಾಯಿ ಬೀಜ ತೆಗೆದುಕೊಡುತ್ತೇನೆ ಎಂದು ಹೇಳಿ ಅದರಲ್ಲಿದ್ದ ಕಡಲೆ ಕಾಯಿ ಬೀಜ ತೆಗೆಯುತ್ತಾಳೆ.

ಪುಳಿಯೋಗರೆ ಮಾಡಿದಕ್ಕೆ ದತ್ತ ಕ್ಲಾಸ್
ಇದನ್ನು ನೋಡಿದ ದತ್ತ ವಾಪಸ್ ಹೊಸ ಖ್ಯಾತೆ ತೆಗೆಯುತ್ತಾನೆ. ಏನು ಎಲ್ಲಾ ಕಡಲೆ ಕಾಯಿ ಬೀಜ ತೆಗೆದುಬಿಟ್ಟರೆ ಅದರಲ್ಲಿ ಏನಿದೆ ಎಂದು ವಾಪಸ್ ತಟ್ಟೆಯನ್ನು ತೆಗೆದುಕೊಂಡು ಪುಳಿಯೋಗರೆ ತಿನ್ನಲು ಶುರು ಮಾಡುತ್ತಾನೆ. ಬಳಿಕ ಗೊಣಗುತ್ತಾ ಇರುತ್ತಾರೆ ಇಷ್ಟು ವಯಸ್ಸಾಯಿತು ಪುಳಿಯೋಗರೆ ಹೇಗೆ ಮಾಡುವುದು ಎಂದು ಕಲಿತಿಲ್ಲ. ಎಂದು ಬಯ್ಯುತ್ತಾ ಇರುತ್ತಾನೆ. ಮಾಧವ ಮಾತ್ರ ತನ್ನ ಮಗನ ಪ್ರೀತಿ ಪಡೆಯಲು ಪರದಾಟ ನಡೆಸುತ್ತಾ ಇದ್ದಾರೆ.

ಮಗನಿಗಾಗಿ ಇಷ್ಟವಾದ ತಿಂಡಿ ಮಾಡಿದ ಮಾಧವ
ಮಗ ಅವಿನಾಶ್ ಗಾಗಿ ಆತನ ಇಷ್ಟವಾದ ಎಲ್ಲಾ ಅಡುಗೆ ಮಾಡಿ ಅವಿನಾಶ್ ರೂಮ್ ಬಳಿ ಹೋಗುವಾಗ ಆತನ ಹೆಂಡತಿ ಬರುತ್ತಾರೆ. ಸೊಸೆಯನ್ನು ನೋಡಿದ ಮಾಧವ ಹೇಳುತ್ತಾನೆ. ನಾನು ಸಕ್ಕರೆ ಪೊಂಗಲ್ ಮಾಡಿದ್ದೇನೆ ನೀನು ತಿನ್ನು ಅವಿನಾಶ್‌ಗೂ ಕೊಡು ಎಂದಾಗ ಮಾಧವನ ಸೊಸೆ ಹೇಳುತ್ತಾಳೆ ಮಾವ ನೀವು ಮಾಡಿರುವ ಅಡುಗೆ ಅವರು ತಿನ್ನುತ್ತಾರ ಎಂದು ಕೇಳುತ್ತಾಳೆ. ಆದರೂ ಮಾಧವ ತನ್ನ ಮಗ ಇಂದು ಸರಿ ಹೋಗುತ್ತಾನೆ ನಾಳೆ ಸರಿ ಹೋಗುತ್ತಾನೆ ಎಂದು ಕಾಯುತ್ತಾ ಇರುತ್ತಾನೆ. ಆದರೆ ಅವಿನಾಶ್ ನ ತಲೆಯಲ್ಲಿ ನನ್ನ ಅಮ್ಮನ ಕೊಲೆ ಮಾಡಿದ್ದು ನನ್ನ ತಾಯಿಯೇ ಎಂದು ಹಚ್ಚೆ ಹಾಕಿದ ಹಾಗೆ ಇದೆ ತಂದೆಯ ಪ್ರೀತಿಯನ್ನು ಅರ್ಥ ಮಾಡಿಕೊಳ್ಳುತ್ತಾನ ಎಂಬುವುದನ್ನು ಕಾದು ನೋಡಬೇಕಿದೆ.


Click it and Unblock the Notifications











