Don't Miss!
- News
ಮಾಧುಸ್ವಾಮಿ ವಿರುದ್ಧ ಚಿಕ್ಕನಾಯಕನಹಳ್ಳಿಯಿಂದ ಸ್ಪರ್ಧಿಸುವಂತೆ ಸಿದ್ದರಾಮಯ್ಯಗೆ ಕೆಎನ್ ರಾಜಣ್ಣ ಆಹ್ವಾನ
- Finance
Economic Survey: ನವೆಂಬರ್ವರೆಗೆ 135.2 ಕೋಟಿ ಆಧಾರ್ ಸಂಖ್ಯೆ ಜನರೇಟ್, 12-ಡಿಜಿಟ್ ಪ್ರಾಮುಖ್ಯತೆ ತಿಳಿಯಿರಿ
- Sports
IND vs NZ 3rd T20: ಪ್ರಮುಖ ವೇಗಿಯನ್ನು ತಂಡದಿಂದ ಬಿಡುಗಡೆ ಮಾಡಿದ ಟೀಂ ಇಂಡಿಯಾ
- Automobiles
ಜನಪ್ರಿಯ ನಟನ ಮನೆಗೆ ಕಥೆ ಹೇಳಲು ಹೋಗಿ ಆತನ ದುಬಾರಿ ಕಾರ್ ಓಡಿಸಿಬಂದ ನಿರ್ದೇಶಕ...
- Technology
ಭಾರತದಲ್ಲಿ ಇನ್ಫಿನಿಕ್ಸ್ ಝೀರೋ ಬುಕ್ ಅಲ್ಟ್ರಾ ಲ್ಯಾಪ್ಟಾಪ್ ಲಾಂಚ್; ಏನೆಲ್ಲಾ ಫೀಚರ್ಸ್ ಇವೆ ಗೊತ್ತಾ!?
- Lifestyle
ಫೆ.1ಕ್ಕೆ ಜಯ ಏಕಾದಶಿ: ಈ ರೀತಿ ಮಾಡಿದರೆ ದಾರಿದ್ರ್ಯ ಹೋಗಿ ಸಂಪತ್ತು ವೃದ್ಧಿಸುವುದು
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Srirasthu Shubhamasthu Serial: ಸಿರಿ ಜಾಣ್ಮೆಗೆ ಮೆಚ್ಚಿದ ದತ್ತ
ಸಿರಿ ಜಾಣ್ಮೆಯಿಂದ ಕ್ಯಾಮರಾ ಮಾಧವನ ಪಾಲಾಗುವ ಎಲ್ಲಾ ಸಾಧ್ಯತೆ ಕಂಡು ಬರುತ್ತಿದೆ. ಸಿರಿ ತನ್ನ ತಾತನ ಬಳಿಗೆ ಬಂದು ತಾತ ಚಿನ್ನದ ಸರ ಹೇಗಿದೆ ಚೆನ್ನಾಗಿ ಇದೆಯಾ ಎಂದು ಕೇಳಿದಾಗ ಬಂಗಾರದ ಸರ ನೋಡಿ ದತ್ತಾಗೆ ಬಹಳ ಖುಷಿ ಆಗುತ್ತದೆ ದತ್ತ ಎಷ್ಟು ಹಣ ಕೊಟ್ಟೆ ಎಂದು ಕೇಳಿದಾಗ ಸಿರಿ ಒಂದು ರೂಪಾಯಿ ಕೂಡ ಖರ್ಚು ಮಾಡಲೇ ಇಲ್ಲ. ಅಜ್ಜಿ ಒಡವೆ ನನಗೆ ಕೊಟ್ಟಿದ್ದೀರಿ ಅಲ್ವಾ ನಾನು ಅದನ್ನು ಕರಗಿಸಿ ಈ ಸರ ಮಾಡಿಸಿಕೊಂಡೆ ಎಂದು ಹೇಳಿದಾಗ ದತ್ತಗೆ ಶಾಕ್ ಆಗುತ್ತದೆ. ಮದುವೆ ಮೊದಲಿಗೆ ದತ್ತ ಸಿರಿಗೆ ಚಿನ್ನದ ಒಡವೆಯನ್ನು ಕೊಡುತ್ತಾನೆ..
ಇದು ನಿಮ್ಮ ಅಜ್ಜಿಯ ಒಡವೆ ಆಕೆಯಿಂದ ನನ್ನ ಸೊಸೆ ತುಳಸಿಗೆ ಕೊಟ್ಟೆ ಇದೀಗ ತುಳಸಿ ನಿನಗೆ ಕೊಡುತ್ತಾ ಇದ್ದಾಳೆ.. ತಲಾ ತಲಾಂತರದಿಂದ ಬಂದ ಈ ಒಡವೆಯನ್ನು ನಿನಗೆ ಕೊಡುತ್ತಾ ಇದ್ದೇನೆ ಜೋಪಾನವಾಗಿ ಎತ್ತಿ ಇಡು ಎಂದು ಹೇಳುತ್ತಾರೆ.. ಇದನ್ನೆಲ್ಲ ಒಂದು ಬಾರಿ ನೆನಪಿಸಿಕೊಂಡ ದತ್ತಾನಿಗೆ ಮಾತೇ ಹೊರಡದೆ ಹಾಗೆ ಆಗುತ್ತದೆ. ದತ್ತನಿಗೆ ಕೋಪ ಬರುತ್ತದೆ... ನೀನು ಆ ಸರ ಕರಗಿಸಿದೆಯ ಎಂದು ದತ್ತ ಹೇಳಿದಾಗ ಸಿರಿ ಎದ್ದು ನಿಂತು ಹೇಳುತ್ತಾಳೆ.
ನೀವು ಅತ್ತೆಯ ನೆನಪಿನ ಬುತ್ತಿ ಹೊತ್ತಿರುವ ಕ್ಯಾಮರಾವನ್ನು ಮಾಧವ ಸರ್ ಗೆ ಕೊಟ್ಟಿದಿರಿ ಆದರೆ ಅವರು ಅತ್ತೆಯ ಮನಸ್ಸನ್ನು ಅರಿತು ಚೆಕ್, ಕ್ಯಾಮರಾ ಎರಡು ಬಿಟ್ಟು ಹೋಗಿದ್ದಾರೆ. ನೀವು ಮಾಧವ ಸರ್ ಚೆಕ್ ಅನ್ನು ಯಾಕೆ ತೆಗೆದುಕೊಂಡಿದ್ದು ಇದು ಸರಿಯ? ಎಂದು ಪ್ರಶ್ನೆ ಮಾಡಿದಾಗ ದತ್ತನಿಗೆ ತಾನು ಮಾಡಿದ ತಪ್ಪು ಅರ್ಥ ಆಗುತ್ತದೆ ಬಳಿಕ ದತ್ತ ಸರಿ ನಾನು ಚಪ್ಪಲಿ ಕಳ್ಳನಿಂದ ತೆಗೆದುಕೊಂಡ ಹಣವನ್ನು ಬ್ಯಾಂಕ್ ಗೆ ಹಾಕಲು ಹೇಳಿದ್ದೇನೆ.. ಬೇರೆ ಚೆಕ್ ಕೊಡುತ್ತೇನೆ ಅದನ್ನು ಆತನಿಗೆ ಕೊಡು ಎಂದು ಹೇಳಿ ಅಲ್ಲಿಂದ ಹೋಗುತ್ತಾರೆ. ಇದನ್ನು ನೋಡಿದ ಸಿರಿ ಗಂಡ ಬಹಳ ಖುಷಿ ಪಡುತ್ತಾರೆ. ಅಮ್ಮನ ಬಳಿ ಬಂದು ಸಿರಿ ಮಾಧವ ಸರ್ ಅನ್ನು ಮೀಟ್ ಆಗಿ ಮನ ಬಿಚ್ಚಿ ಮಾತನಾಡಿ ಹಾಗೆಯೇ ಕ್ಯಾಮರಾ ಕೊಟ್ಟು ಬನ್ನಿ.. ಇಲ್ಲ ಚೆಕ್ ಕೊಟ್ಟು ಬನ್ನಿ ಎಂದು ಹೇಳಿ ಅಲ್ಲಿಂದ ಹೋಗುತ್ತಾಳೆ.

ಮಾಧವಾನನ್ನು ಮೀಟ್ ಮಾಡಲು ಹೊರಟ ತುಳಸಿ
ಮರುದಿನ ತುಳಸಿ ಮಾಧವ ಸರ್ ನ ಮೀಟ್ ಆಗಲು ಕೆಫೆಗೆ ಹೋಗುತ್ತಾಳೆ. ಆ ವೇಳೆ ತುಳಸಿಯನ್ನು ನೋಡಿದ ಮಾಧವ ಒಂದು ಟೇಬಲ್ ಬಳಿ ಕುಳಿತು ಇರುತ್ತಾನೆ. ಇನ್ನು ತುಳಸಿ ಮಾಧವ ಬಳಿ ನೀವು ಚೆಕ್ ಬಿಟ್ಟು ಹೋದಿರಿ ಹಾಗೆಯೇ ಕ್ಯಾಮರಾನು ಬಿಟ್ಟು ಹೋದಿರಿ. ಆದರೆ ಚೆಕ್ ಅನ್ನು ವಾಪಸ್ ಕೊಡೋಣ ಅಂತ ಬಂದೆ ಎಂದು ಹೇಳಿದಾಗ ಮಾಧವ ಆ ಚೆಕ್ ನೋಡಿ ಈ ಚೆಕ್ ಬೇಡ ನನಗೆ ನೀವೇ ಇಟ್ಟುಕೊಳ್ಳಿ, ಚೆಕ್ ನಲ್ಲಿ ನನ್ನ ಹೆಸರು ಕೂಡ ಸರಿಯಾಗಿ ಬರೆದಿಲ್ಲ ಎಂದು ವಾಪಸ್ ಕೊಡುವಾಗ ತುಳಸಿಗೆ ಎನು ಮಾಡಬೇಕು ತಿಳಿಯದೇ ಸುಮ್ಮನೆ ಆಗುತ್ತಾಳೆ.

ತುಳಸಿ ನೋಡಿ ಆಶ್ಚರ್ಯ ಪಟ್ಟ ಮಾಧವ
ಬಳಿಕ ಕ್ಯಾಮರಾ ಆದರೂ ತೆಗೆದುಕೊಳ್ಳಿ ಎಂದು ಹೇಳಿದಾಗ ಮಾಧವಾಗೆ ಆಶ್ಚರ್ಯ ಆಗುತ್ತದೆ ಬಳಿಕ ಇದನ್ನ ನಮ್ಮ ಕಡೆ ಕ್ಯಾಮರಾ ಅನ್ನುತ್ತಾರೆ ಎಂದಾಗ ಮಾಧವ ಜೋರಾಗಿ ನಗುತ್ತಾನೆ ಹಾಗೂ ಕೆಲವೊಂದು ವಸ್ತು ನಮ್ಮ ಜೊತೆಗೆ ಇದ್ದರೇನೆ ಅದು ನೆನಪಾಗಿ ಉಳಿಯೋದು ತುಳಸಿ ಮೇಡಂ ಎನ್ನುತ್ತಾನೆ. ಈ ವೇಳೆ ತುಳಸಿ ಮೇಡಂ ಬೇಡ ತುಳಸಿ ಎಂದು ಕರೆದರೆ ಸಾಕು ಎಂದಾಗ ಮಾಧವ ಅವರೇ ಎಂದು ನನ್ನ ಕೂಡ ಕರೆದರೆ ಸಾಕು ಎಂದು ಮಾಧವ ಹೇಳುತ್ತಾನೆ.

ಮಾಧವ ತುಳಸಿ ಮಧ್ಯೆ ಹುಟ್ಟಿಕೊಂಡ ಸ್ನೇಹಾ
ಇದನ್ನು ಕೇಳಿದ ತುಳಸಿ ಆಯಿತು ಎಂದು ಒಪ್ಪಿಗೆ ಸೂಚಿಸುತ್ತಾ ಇರುತ್ತಾಳೆ ಸರಿ ಆಯ್ತು ಎಂದು ಹೊರಡಲು ಅನುವಾಗುತ್ತಾಳೆ. ಸರಿ ಮಾಧವ ಅವರೇ ನಾನಿನ್ನು ಬರುತ್ತೇನೆ ಎಂದು ಹೇಳಿ ಅರ್ಧ ಹೋಗಿ ವಾಪಸ್ ಬರುತ್ತಾಳೆ ನೀವು ಒಬ್ಬರೆ ತಿಂಡಿ ತಿನ್ನುವುದ ಎಂದು ಹೇಳಿದಾಗ ಮಾಧವ ಇಲ್ಲ ಮನೆಯಲ್ಲಿ ಆದರೆ ಸೊಸೆ ಇರುತ್ತಾಳೆ ಇಲ್ಲಿ ಯಾರೂ ಇಲ್ಲ ಎಂದು ಹೇಳುತ್ತಾನೆ. ಇದನ್ನು ಕೇಳಿದ ತುಳಸಿ ನಿಮ್ಮ ತಿಂಡಿ ಆಗುವವರೆಗೆ ನಾನು ಇಲ್ಲಿಯೇ ಇರುತ್ತೇನೆ ಎಂದು ಹೇಳಿ ಟೇಬಲ್ ಬಳಿ ಕೂರುತ್ತಾಳೆ. ಇದನ್ನು ನೋಡಿ ಮಾಧವಾಗೇ ಖುಷಿ ಆಗುತ್ತದೆ. ಇನ್ನು ತುಳಸಿ ಬಳಿ ಏನಾದರು ತಿನ್ನುವಂತೆ ಹೇಳುತ್ತಾನೆ ಆದರೆ ತುಳಸಿ ಮಾತ್ರ ನಾನು ಮನೆಯಲ್ಲಿ ತಿಂದು ಬಂದಿದ್ದೇನೆ ನನಗೆ ಎನು ಬೇಡ ನಾನು ಕುಳಿತಿರುತ್ತೇನೆಎಂದು ಹೇಳುತ್ತಾಳೆ.